ಭಾರತಕ್ಕೆ ಬರಲಿದೆ ಶಿಯೋಮಿಯಿಂದ ಎರಡು ಹೊಸ ಪವರ್ ಬ್ಯಾಂಕ್

By Tejaswini P G

  ಚೀನಾದ ಟೆಕ್ ದಿಗ್ಗಜರಾದ ಶಿಯೋಮಿ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದೆ ಎರಡು ನೂತನ ಪವರ್ ಬ್ಯಾಂಕ್. 10,000 mAh ಮತ್ತು 20,000 mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಎರಡು ಪವರ್ ಬ್ಯಾಂಕ್ ಗಳ ಬೆಲೆ ಕ್ರಮವಾಗಿ ರೂ 799 ಮತ್ತು ರೂ 1499 ಎಂದು ಶಿಯೋಮಿ ತಿಳಿಸಿದೆ.

  ಭಾರತಕ್ಕೆ ಬರಲಿದೆ ಶಿಯೋಮಿಯಿಂದ ಎರಡು ಹೊಸ ಪವರ್ ಬ್ಯಾಂಕ್

  ಈ ಎರಡು ಹೊಸ ಪವರ್ ಬ್ಯಾಂಕ್ ಗಳು ಶಿಯೋಮಿಯ ಅಧಿಕೃತ ವೆಬ್ಸೈಟ್ Mi.com ಮತ್ತು ಮಿ ಹೋಮ್ ಸ್ಟೋರ್ಸ್ಗಳಲ್ಲಿ ನವಂಬರ್ 23, 2017 ರಿಂದ ಖರೀದಿಗೆ ಲಭ್ಯವಾಗಲಿದೆ. ಅಲ್ಲದೆ ಶಿಯೋಮಿಯು ತನ್ನ ನೂತನ ಮಿ ಪವರ್ ಬ್ಯಾಂಕ್ಗಳನ್ನು ಮಿ ಪ್ರಿಫರ್ಡ್ ಪಾರ್ಟ್ನರ್ ಸ್ಟೋರ್ಗಳು ಮತ್ತು ಇತರ ದೊಡ್ಡ ರೀಟೈಲ್ ಮಳಿಗೆಗಳಲ್ಲಿ ಡಿಸೆಂಬರ್ 2017 ರಿಂದ ಮಾರಾಟಮಾಡಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಶಿಯೋಮಿಯ ನೂತನ ನೋಯ್ಡಾ ಘಟಕ ಪವರ್ ಬ್ಯಾಂಕ್ ತಯಾರಿಗೇ ಸೀಮಿತ

  ಶಿಯೋಮಿಯ ಹೊಸ ಪವರ್ ಬ್ಯಾಂಕ್ ಗಳನ್ನು ನೋಯ್ಡಾದಲ್ಲಿರುವ ಶಿಯೋಮಿಯ ನೂತನ ಘಟಕದಲ್ಲಿ ತಯಾರಿಸಲಾಗಿದೆ. ಈ ನೂತನ ಘಟಕಗಳನ್ನು ಹೈಪ್ಯಾಡ್ ಟೆಕ್ನಾಲಜಿಯ ಸಹಯೋಗದಲ್ಲಿ ತೆರೆಯಲಾಗಿದ್ದು, ಮಿ ಪವರ್ ಬ್ಯಾಂಕ್ ಗಳ ತಯಾರಿಗೆಂದೇ ಇದನ್ನು ತೆರೆಯಲಾಗಿದೆ.

  2.3 ಲಕ್ಷ ಚದುರಡಿ ವಿಸ್ತಾರವಿರುವ ಈ ಹೊಸ ಘಟಕದಲ್ಲಿ ವೇರ್ಹೌಸ್, ಕ್ವಾಲಿಟಿ ಡಿಪಾರ್ಟ್ಮೆಂಟ್ ಮತ್ತು ಶಿಯೋಮಿಯ ಪವರ್ ಬ್ಯಾಂಕ್ ತಯಾರಿಗೆಂದೇ ಮೀಸಲಿರುವ ತಯಾರೀ ಘಟಕವಿದ್ದು, ಈ ಘಟಕವು ನಿಮಿಷಕ್ಕೆ 7 ಪವರ್ ಬ್ಯಾಂಕ್ ತಯಾರಿಸುವ ಸಾಮರ್ಥ್ಯ ಹೊಂದಿದೆ. ಹೈಪ್ಯಾಡ್ ಚೀನಾದಲ್ಲಿಯೂ ಪವರ್ ಬ್ಯಾಂಕ್ ತಯಾರಿಗೆ ಶಿಯೋಮಿಯ ಪಾರ್ಟ್ನರ್ ಆಗಿದೆ.

  ಪವರ್ ಬ್ಯಾಂಕ್ ನ ಭಾಗಗಳನ್ನು ಆಮದು ಮಾಡಿ ನೋಯ್ಡಾದಲ್ಲಿ ಜೋಡಿಸಲಾಗುತ್ತದೆ

  ಸಧ್ಯಕ್ಕೆ ಶಿಯೋಮಿ ಪವರ್ ಬ್ಯಾಂಕ್ ನ ಭಾಗಗಳಾದ ಬ್ಯಾಟರಿ ಮತ್ತು PCB ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದು, ಕವರ್ ಮುಂತಾದ ಬಿಡಿ ಭಾಗಗಳನ್ನು ಸ್ಥಳೀಯ ಮಾರುಕಟ್ಟೆಯಿಂದ ಖರೀದಿಸುತ್ತಿದೆ.ಆದರೆ ಶಿಯೋಮಿ ಇಂಡಿಯಾ ದ ಮ್ಯಾನೇಜಿಂಗ್ ಡೈರೆಕ್ಟರ್ ಮನು ಜೈನ್ ಅವರು ಭವಿಷ್ಯದಲ್ಲಿ ಶಿಯೋಮಿ ಹೈ-ಪ್ಯಾಡ್ ನ ಘಟಕದಲ್ಲಿ ಪೂರ್ಣ ಪ್ರಮಾಣದ ತಯಾರಿಕಾ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿದ್ದು PCB ಮೊದಲಾದ ಬಿಡಿ ಭಾಗಗಳನ್ನು ಭಾರತದಲ್ಲೇ ತಯಾರಿಸಲು ಅಥವಾ ಖರೀದಿಸಲು ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ. ಆದರೆ ಮಿ ಪವರ್ ಬ್ಯಾಂಕ್ ನ ಬ್ಯಾಟರಿ ಸೆಲ್ ಗಳನ್ನು ಮಾತ್ರ ಚೀನಾದಿಂದ ಖರೀದಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

  ನೋಯ್ಡಾ ಘಟಕದಲ್ಲಿ ಪೂರ್ಣ ಪ್ರಮಾಣದ ಬ್ಯಾಟರಿ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆ

  ನಮಗೆ ತಿಳಿದೇ ಇರುವಂತೆ ಬ್ಯಾಟರಿ ಸೆಲ್ ಗಳು ಪವರ್ ಬ್ಯಾಂಕ್ ನ ಮುಖ್ಯ ಭಾಗವಾಗಿದ್ದು ಅಹಿತಕರ ಘಟನೆಗಳನ್ನು ತಡೆಯಲು ಬ್ಯಾಟರಿಯನ್ನು ಸರಿಯಾಗಿ ಪರೀಕ್ಷಿಸಬೇಕಾಗುತ್ತದೆ. ಚೀನಾದಿಂದ ಆಮದು ಮಾಡುವ ಬ್ಯಾಟರಿಗಳ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಕುರಿತು ತಿಳಿಯಲು ನಮ್ಮ ಗಿಜ್ಬಾಟ್ ತಂಡವು ಮನು ಜೈನ್ ಅವರನ್ನು ಸಂಪರ್ಕಿಸಿತು.

  ಶಿಯೋಮಿ ಯ ವೈಸ್ ಪ್ರಸಿಡೆಂಟ್ ಅವರು " ಬ್ಯಾಟರಿ ಸೆಲ್ ಗಳ ಗುಣಮಟ್ಟವನ್ನು ಪರೀಕ್ಟಿಸಲು ನಮ್ಮದೇ ಕ್ವಾಲಿಟಿ/ಟೆಸ್ಟಿಂಗ್ ತಂಡವಿದ್ದು ಅದು ಅಂತರಾಷ್ಟ್ರೀಯ ಗುಣಮಟ್ಟವನ್ನು ಪರೀಕ್ಷಿಸುವ ವಿಧಾನಗಳನ್ನು ಬಳಸಿ ಬ್ಯಾಟರಿಯ ಗುಣಮಟ್ಟವನ್ನು ಪರೀಕ್ಷಿಸುತ್ತದೆ. ಅಲ್ಲದೆ ಬ್ಯಾಟರಿ ಸೆಲ್ಗಳ ಗುಣಮಟ್ಟವನ್ನು ಪರೀಕ್ಷಿಸಲೆಂದೇ ನೋಯ್ಡಾದಲ್ಲಿ ಪೂರ್ಣ ಪ್ರಮಾಣದ ಟೆಸ್ಟಿಂಗ್ ಲ್ಯಾಬ್ ಅನ್ನು ತೆರೆಯಲಿದ್ದೇವೆ" ಎಂದು ತಿಳಿಸಿದ್ದಾರೆ.

  10000mAh ಮಿ ಪವರ್ ಬ್ಯಾಂಕ್ 2i ಮತ್ತು 20000 mAh ಮಿ ಪವರ್ ಬ್ಯಾಂಕ್ 2i

  ಇನ್ನು ಶಿಯೋಮಿಯ ಹೊಸ ಲಾಂಚ್ ಗಳ ಬಗ್ಗೆ ಹೇಳುವುದಾದರೆ ಶಿಯೋಮಿ ತರಲಿದೆ ಭಾರತದಲ್ಲಿ 2 ಹೊಸ ಪವರ್ ಬ್ಯಾಂಕ್ ಗಳನ್ನು. ಈ ಎರಡೂ ಪವರ್ ಬ್ಯಾಂಕ್ ಗಳನ್ನು ನೋಯ್ಡಾದ ಹೊಸ ಘಟಕದಲ್ಲಿ ತಯಾರಿಸಲಾಗುತ್ತದೆ. ಶಿಯೋಮಿಯ 10000 mAh ಮಿ ಪವರ್ ಬ್ಯಾಂಕ್ 2i ಸುಂದರ ಡಬಲ್ ಎನೊಡೈಜ್ಡ್ ಅಲ್ಯುಮಿನಿಯಂ ವಿನ್ಯಾಸ ಹೊಂದಿದ್ದು , ತುಂಬ ಹಗುರವಾದ ಮತ್ತು ಕೇವಲ 14.2 mm ನಷ್ಟು ತೆಳುವಾದ ವಿನ್ಯಾಸ ಇದರದ್ದು.

  85% ಕನ್ವರ್ಶನ್ ರೇಟ್ ಹೊಂದಿರುವ ಈ ಪವರ್ ಬ್ಯಾಂಕ್ ಒಂದು ಸಾಧಾರಣ ಸ್ಮಾರ್ಟ್ಫೋನ್ ಅನ್ನು ಹಲವು ಬಾರಿ ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿದೆ ಎನ್ನುತ್ತದೆ ಶಿಯೋಮಿ. ಉದಾಹರಣೆಗೆ 10000 mAh ಮಿ ಪವರ್ ಬ್ಯಾಂಕ್ 2i ಮಿ A1 ಫೋನ್ ಅನ್ನು 2.2 ಸಲ ಮತ್ತು ರೆಡ್ಮಿ ನೋಟ್ 4 ಅನ್ನು 1.5 ಬಾರಿ ಚಾರ್ಜ್ ಮಾಡಬಲ್ಲದು.

  ಇನ್ನು ಅಧಿಕ ಸಾಮರ್ಥ್ಯವುಳ್ಳ 20000 mAh ಮಿ ಪವರ್ ಬ್ಯಾಂಕ್ 2i ಪಾಲಿಕಾರ್ಬೊನೇಟ್ ಕೇಸ್ ಹೊಂದಿದ್ದು ಉತ್ತಮ ಗ್ರಿಪ್ ಕೂಡ ಹೊಂದಿದೆ. ಶಿಯೋಮಿಯು ಎರಡು 10000 mAh ಬ್ಯಾಟರಿಗಳನ್ನು ಬಳಸಿ ದೊಡ್ಡ 20000 mAh ಬ್ಯಾಟರಿ ಪವರ್ ಬ್ಯಾಂಕ್ ತಯಾರಿಸುತ್ತಿದೆ. ಅಲ್ಲದೆ ಕ್ವಿಕ್ ಚಾರ್ಜ್ 3.0 ಮತ್ತು 85% ಕನ್ವರ್ಶನ್ ರೇಟ್ ಕೂಡ ಹೊಂದಿದೆ.

  ಮೊಬೈಲ್ ಆಯಸ್ಸನ್ನು ಹೆಚ್ಚಿಸುವುದು ಹೇಗೆ?..ಇಲ್ಲಿವೆ 5 ಟಿಪ್ಸ್!!

  ಲೀಥಿಯಂ ಪಾಲಿಮರ್ ಬ್ಯಾಟರಿ ಮತ್ತು ಡ್ಯುಯಲ್ USB ಔಟ್ಪುಟ್

  10000 mAh ಮಿ ಪವರ್ ಬ್ಯಾಂಕ್ 2i ಮತ್ತು 20000 mAh ಮಿ ಪವರ್ ಬ್ಯಾಂಕ್ 2i ಗಳೆರಡೂ ಲೀಥಿಯಂ ಪಾಲಿಮರ್ ಬ್ಯಾಟರಿಗಳನ್ನು ಹೊಂದಿದೆ. ಅಲ್ಲದೆ ಈ ಹೊಸ ಪವರ್ ಬ್ಯಾಂಕ್ ಡ್ಯುಯಲ್ USB ಔಟ್ಪುಟ್ ಹೊಂದಿದ್ದು ಏಕಕಾಲಕ್ಕೆ ಎರಡು ಸಾಧನಗಳನ್ನು ಚಾರ್ಜ್ ಮಾಡಬಹುದಾಗಿದೆ.

  ಮಿ ಪವರ್ ಬ್ಯಾಂಕ್ 2i 9 ಪದರಗಳ ಉತ್ತಮ ಗುಣಮಟ್ಟದ ಸರ್ಕ್ಯೂಟ್ ಚಿಪ್ ರಕ್ಷಣೆ ಹೊಂದಿದ್ದು ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ತಯಾರಿಸಿರುವ USB ಸ್ಮಾರ್ಟ್ ಕಂಟ್ರೋಲ್ ಚಿಪ್ಸ್ ಮತ್ತು ಚಾರ್ಜಿಂಗ್/ಡಿಸ್ಚಾರ್ಜಿಂಗ್ ಚಿಪ್ಸ್ ಹೊಂದಿದೆ ಶಿಯೋಮಿಯ ಅನುಸಾರ ಈ ಹೊಸ ಪವರ್ ಬ್ಯಾಂಕ್ಗಳ ವಿನ್ಯಾಸ ಅದಕ್ಕೆ ಸೂಕ್ತ ರಕ್ಷಣೆ, ಉತ್ತಮ ಚಾರ್ಜಿಂಗ್ ಕನ್ವರ್ಶನ್ ರೇಟ್ ನೀಡುತ್ತದಲ್ಲದೆ ಡಿಸ್ಚಾರ್ಜಿಂಗ್ ವೋಲ್ಟೇಜ್ ಅನ್ನು ಸ್ಟೆಬಲೈಜ್ ಮಾಡುತ್ತದೆ.

  ನಕಲಿ ಪವರ್ ಬ್ಯಾಂಕ್ಗಳ ಮಧ್ಯೆ ಅಸಲಿ ಮಿ ಪವರ್ ಬ್ಯಾಂಕ್ ಗುರುತಿಸುವುದು ಹೇಗೆ?

  ನಕಲಿ ಪವರ್ ಬ್ಯಾಂಕ್ ಪಡೆಯುವ ಮೂಲಕ ಮೋಸಗೊಂಡಿರುವುದಾಗಿ ಅನೇಕ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀವೂ ಇಂತಹ ತೊಂದರೆಗೆ ಗುರಿಯಾಗಿದ್ದಲ್ಲಿ ಈ ಕೆಳಗಿನ ಮಾಹಿತಿ ನಿಮಗೆ ಭವಿಷ್ಯದಲ್ಲಿ ಸಹಕಾರಿಯಾಗಲಿದೆ. ಶಿಯೋಮಿ ಪವರ್ ಬ್ಯಾಂಕ್ ಗಳ ಪ್ಯಾಕೇಜಿಂಗ್ನಲ್ಲಿ ಮಿ ಲೇಬಲ್ನೊಂದಿಗೆ ವಿಶೇಷ ಸ್ಟಿಕರ್ ಒಂದು ಇರುತ್ತದೆ.

  ಈ ಸ್ಟಿಕರ್ ಅನ್ನು ಸ್ಕ್ರ್ಯಾಚ್ ಮಾಡಿದರೆ ಕಂಪೆನಿಯ ಡೇಟಾಬೇಸ್ ಗೆ ಸಂಬಂಧಿಸಿದ ಕೋಡ್ ಒಂದನ್ನು ತೋರಿಸುತ್ತದೆ. ಶಿಯೋಮಿಯ ಅಧಿಕೃತ ವೆಬ್ಸೈಟ್ ಗೆ ಹೋಗಿ ಈ ಕೋಡ್ ಅನ್ನು ಪರೀಕ್ಷಿಸುವ ಮೂಲಕ ನಿಮ್ಮ ಪವರ್ ಬ್ಯಾಂಕ್ ಅಸಲಿಯೇ ಅಥವಾ ನಕಲಿಯೇ ಎಂದು ಗುರುತಿಸಬಹುದು. ಶಿಯೋಮಿ, ಲೆನೋವೋ, ಇಂಟೆಕ್ಸ್ ಅಥವಾ ಇನ್ಯಾವುದೇ ಪವರ್ ಬ್ಯಾಂಕ್ ಆಗಿರಲಿ, ಅಸಲಿ ಪವರ್ ಬ್ಯಾಂಕ್ ಅನ್ನೇ ಖರೀದಿಸುವುದು ಉತ್ತಮ. ನಕಲಿ ಪವರ್ ಬ್ಯಾಂಕ್ ಬಳಸಿದರೆ ನಿಮ್ಮ ಫೋನ್ ಗೆ ಹಾನಿಯುಂಟಾಗಬಹುದಲ್ಲದೆ ಕೆಲವೊಮ್ಮೆ ಅದು ಸಿಡಿಯಲೂ ಬಹುದು.

  ಶಿಯೋಮಿಯ ಹೊಸ ಪವರ್ ಬ್ಯಾಂಕ್ ಅಥವಾ ಸ್ಮಾರ್ಟ್ಫೋನ್ಗಳ ಕುರಿತಾಗಿ ಯಾವುದೇ ಸಂದೇಹವಿದ್ದರೆ ನಮ್ಮ ವೆಬ್ಸೈಟ್ ಅಥವಾ ನಮ್ಮ ಟ್ವಿಟರ್, ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆಗಳಿಗೆ ಭೇಟಿ ನೀಡಿ , ನಿಮ್ಮ ಸಂದೇಹಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Xiaomi announces two new power banks in India, aims to setup a full-fledged Power bank facility in 2018
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more