Home
ಮೊಬೈಲ್

ಶಿಯೋಮಿ ಭಾರತದ ನಂ.1 ಮೊಬೈಲ್ ಕಂಪೆನಿ ಆಗಿದ್ದೇಗೆ!?..ಭವಿಷ್ಯದಲ್ಲಿಯೂ ಮಣಿಸಲು ಸಾಧ್ಯವಿಲ್ಲವೇ?!

ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ನೀಡಿದ ಪರಿಣಾಮವಾಗಿ ಶಿಯೋಮಿ ಕಂಪೆನಿ ಇದೀಗ ಭಾರತದ ನಂಬರ್ ಒನ್ ಮೊಬೈಲ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.!

By Bhaskar N J

ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ನೀಡಿದ ಪರಿಣಾಮವಾಗಿ ಶಿಯೋಮಿ ಕಂಪೆನಿ ಇದೀಗ ಭಾರತದ ನಂಬರ್ ಒನ್ ಮೊಬೈಲ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.! ಕಳೆದ 6 ವರ್ಷಗಳಿಂದ ದೇಶಿ ಮೊಬೈಲ್ ಮಾರುಕಟ್ಟೆಯಲ್ಲಿ ದಿಗ್ಗಜನಾಗಿದ್ದ ಸ್ಯಾಮ್‌ಸಂಗ್ ಇದೀಗ ಎರಡನೇ ಸ್ಥಾನಕ್ಕೆ ದೂಡಲ್ಪಟ್ಟಿದೆ.!!

ಮುಂಚೂಣಿ ಐದು ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳ ಪೈಕಿ ಲೆನೆವೊ, ವಿವೊ ಮತ್ತು ಒಪ್ಪೊ ಕೂಡ ಇದ್ದು, ಈ ಎಲ್ಲಾ ಕಂಪೆನಿಗಳಿಂತ ಹೆಚ್ಚು ಶಿಯೋಮಿ ಕಂಪೆನಿ ಮೇಲೆ ಭಾರತೀಯರು ಶಿಯೋಮಿ ಮತ್ತು ಸ್ಯಾಮ್‌ಸಂಗ್ ಮೇಲೆ ಒಲವನ್ನು ತೋರಿರುವುದಾಗಿ ಕ್ಯಾನಲಿಸ್ ಆಂಡ್‌ ಕೌಂಟರ್‌ಪಾಯಿಂಟ್‌ ರಿಸರ್ಚ್‌ ಸಂಸ್ಥೆ ತಿಳಿಸಿದೆ.

ಶಿಯೋಮಿ ಭಾರತದ ನಂ.1 ಮೊಬೈಲ್ ಕಂಪೆನಿ ಆಗಿದ್ದೇಗೆ!?

ಇನ್ನು ಭವಿಷ್ಯದಲ್ಲಿ ಶಿಯೋಮಿ ಭಾರತದ ಮತ್ತಷ್ಟು ಪ್ರಭಲವಾಗಲಿದೆ ಎಂಬುದಕ್ಕೆ ಹಲವು ಕಾರಣಗಳನ್ನು ಸಹ ಕೌಂಟರ್‌ಪಾಯಿಂಟ್‌ ರಿಸರ್ಚ್‌ ನೀಡಿದ್ದು, ಹಾಗಾದರೆ, ಅವುಗಳು ಯಾವುವು? ಭಾರತದಲ್ಲಿ ಶಿಯೋಮಿ ಹೆಚ್ಚು ಜನಪ್ರಿಯವಾಗಲು ಕಾರಣಗಳೆನು? ಶಿಯೋಮಿಯ ನೂನ್ಯತೆಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಶೇ 25ರಷ್ಟು ಪಾಲು ಶಿಯೋಮಿಗೆ!!

ಶೇ 25ರಷ್ಟು ಪಾಲು ಶಿಯೋಮಿಗೆ!!

ಕೌಂಟರ್‌ಪಾಯಿಂಟ್‌ ರಿಸರ್ಚ್‌ ಸಂಸ್ಥೆಯ ವರದಿ ಪ್ರಕಾರ, ಕಳೆದ ವರ್ಷ ಕೇವಲ ಶೇ 9ರಷ್ಟಿದ್ದ ಮಾರುಕಟ್ಟೆ ಪಾಲನ್ನು ಈ ವರ್ಷದ ನಾಲ್ಕನೇ ತ್ರೈಮಾಸಿಕದ ವೇಳೆಗೆ ಶೇ 25ರಷ್ಟಕ್ಕೆ ಹೆಚ್ಚಿಸಿಕೊಂಡಿದೆ. ಇದೇ ವೇಳೆ ಅಕ್ಟೋಬರ್‌ - ಡಿಸೆಂಬರ್‌ ತ್ರೈಮಾಸಿಕದಲ್ಲಿ ಸ್ಯಾಮ್ಸಂಗ್‌ನ ಮಾರುಕಟ್ಟೆ ಪಾಲು ಶೇ 24 ರಿಂದ ಶೇ 23ಕ್ಕೆ ಇಳಿಕೆಯಾಗಿದೆ.!!

ಬಜೆಟ್ ಫೋನ್‌ಗಳಿಂದ ಹೆಸರು!!

ಬಜೆಟ್ ಫೋನ್‌ಗಳಿಂದ ಹೆಸರು!!

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಶಿಯೋಮಿ ಈ ಪರಿ ಹೆಸರು ಗಳಿಸಲು ಕಾರಣವೇ ಬಜೆಟ್ ಫೋನ್‌ಗಳು. ಶಿಯೋಮಿಯ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಭಾರತದಲ್ಲಿಯೇ ಅತ್ಯಂತ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್ ಎಂಬ ಹೆಸರುಗಳಿಸಿದ್ದು ಇದಕ್ಕೊಂದು ಉದಾಹರಣೆ!!

ಆನ್‌ಲೈನ್ ಮಾರುಕಟ್ಟೆ ಪ್ರಭಾವ!!

ಆನ್‌ಲೈನ್ ಮಾರುಕಟ್ಟೆ ಪ್ರಭಾವ!!

ಶಿಯೋಮಿ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಭಾರತದಲ್ಲಿ ನಂಬರ್ ಒನ್ ಆಗಲು ಕಾರಣ ಆನ್‌ಲೈನ್ ಮಾರುಕಟ್ಟೆ ಪ್ರಭಾವ ಎನ್ನಲಾಗಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಆನ್‌ಲೈನ್ ಮಾರುಕಟ್ಟೆಯ ಮೂಲಕ ಜನರನ್ನು ತಲುಪಿದ ಶಿಯೋಮಿ ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸಿತು.!!

ಆಕ್ರಮಣಕಾರಿ ಬೆಲೆ ನೀತಿ ಕಾರಣ!!

ಆಕ್ರಮಣಕಾರಿ ಬೆಲೆ ನೀತಿ ಕಾರಣ!!

ಶಿಯೋಮಿ ತನ್ನ ಆಕ್ರಮಣಕಾರಿ ಬೆಲೆ ನೀತಿ, ಪರಿಣಾಮಕಾರಿಯಾದ ವಿಸ್ತರಣಾ ನೀತಿಯಿಂದ ತನ್ನ ವಹಿವಾಟನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡಿದೆ. ಇದರಿಂದಾಗಿಯೇ ದೀರ್ಘಕಾಲದಿಂದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದ ಸ್ಯಾಮ್ಸಂಗ್‌ ಹಿಂದಿಕ್ಕಲು ಸಾಧ್ಯವಾಗಿದೆ' ಎಂದು ಕೌಂಟರ್‌ಪಾಯಿಂಟ್‌ನ ಸಂಶೋಧನಾ ನಿರ್ದೇಶಕ ತರುಣ್ ‍ಪಾಠಕ್ ಹೇಳಿದ್ದಾರೆ.

6 ವರ್ಷದ ನಂತರ ಎರಡನೇ ಸ್ಥಾನಕ್ಕೆ!!

6 ವರ್ಷದ ನಂತರ ಎರಡನೇ ಸ್ಥಾನಕ್ಕೆ!!

ಚೀನಾದ ಮೊಬೈಲ್‌ ತಯಾರಿಕಾ ಸಂಸ್ಥೆ ಶಿಯೋಮಿ, ದಕ್ಷಿಣ ಕೊರಿಯಾದ ಸ್ಯಾಮ್ಸಂಗ್‌ ಹಿಂದಿಕ್ಕಿ ದೇಶದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮೊದಲ ಸ್ಥಾನಕ್ಕೇರಿದೆ ಎಂದು ಹಲವು ವರದಿಗಳಲ್ಲಿ ಹೇಳಲಾಗಿದೆ. ಆದರೆ, ತಾನು ಈಗಲೂ ಭಾರತದಲ್ಲಿ ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಲ್ಲಿ ಮೊದಲ ಸ್ಥಾನದಲ್ಲಿಯೇ ಇರುವುದಾಗಿ ಸ್ಯಾಮ್ಸಂಗ್‌ ಹೇಳಿಕೊಂಡಿದೆ.!!

ಯಾವುದೇ Xiaomi ಫೋನ್‌ಗಳಲ್ಲಿ Multi Window Screen ಬಳಕೆ ಹೇಗೆ?
ಭವಿಷ್ಯದ ದಿಗ್ಗಜ ಶಿಯೋಮಿ?

ಭವಿಷ್ಯದ ದಿಗ್ಗಜ ಶಿಯೋಮಿ?

ಮೊದಲೇ ಹೇಳಿದಂತೆ ಶಿಯೋಮಿ ಈಗಾಗಲೇ ಭಾರತದಲ್ಲಿ ಅತ್ಯಂತ ಜನಪ್ರಿಯ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಮೊಬೈಲ್ ಬ್ಯಾಟರಿ ಸ್ಪೋಟದಂತಹ ಕೆಲವು ಘಟನೆಗಳು ಜರುಗಿದರೂ ಸಹ ಸ್ಮಾರ್ಟ್‌ಫೋನ್ ಪ್ರಿಯರನ್ನು ಸೆಳೆಯುವಲ್ಲಿ ಕಂಪೆನಿ ಸಫಲವಾಗಿದೆ.ಹಾಗಾಗಿ, ಇನ್ನು ಸ್ವಲ್ಪ ವರ್ಷಗಳ ಕಾಲ ಶಿಯೋಮಿಯನ್ನು ಹಿಡಿಯಲು ಯಾರಿಗೂ ಸಾಧ್ಯವಿಲ್ಲ ಎನ್ನಬಹುದು.!!

Best Mobiles in India

English summary
hinese smartphone maker Xiaomi has become the No 1 smartphone brand in the Indian market in the quarter ended December 2017 . to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+