12ಜಿಬಿ RAM ಹೊತ್ತು ಶಿಯೋಮಿ 'ಬ್ಲಾಕ್‌ಶಾರ್ಕ್ 2' ರಿಲೀಸ್!..ಒನ್‌ಪ್ಲಸ್ ಕಥೆ ಕ್ಲೋಸ್!
ಮೊಬೈಲ್ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಶಿಯೋಮಿ ಇದೀಗ ವಿಶ್ವದ ಅತ್ಯುತ್ತಮ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡುಹೊಡೆದಿದೆ. ಕಳೆದ ವರ್ಷ ಬ್ಲಾಕ್‌ಶಾರ್ಕ್ ಎಂಬ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದ ಶಿಯೋಮಿ, ಈ ಬಾರಿ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳ ಅಪ್ಪನಂತಹ 12 ಜಿಬಿ RAM ಮತ್ತು ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಹೊಂದಿರುವ 'ಬ್ಲಾಕ್‌ಶಾರ್ಕ್ 2' ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿ ಆಶ್ಚರ್ಯ ಮೂಡಿಸಿದೆ.
ಶಿಯೋಮಿ ತನ್ನ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳ ಪಟ್ಟಿಗೆ 'ಬ್ಲಾಕ್‌ಶಾರ್ಕ್ 2' ಸ್ಮಾರ್ಟ್‌ಫೋನ್ ಒಂದನ್ನು ಸೇರಿಸಿಕೊಂಡಿದ್ದು, ಚೀನಾದಲ್ಲಿಂದು 'ಬ್ಲಾಕ್‌ಶಾರ್ಕ್ 2' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಫ್ರಾನ್ಸನ್ ಸಿಲ್ವರ್ ಮತ್ತು ಷಾಡೋ ಬ್ಲ್ಯಾಕ್ನಲ್ಲಿ ಇಂದಿನಿಂದಲೇ ಚೀನಾದಲ್ಲಿ ಖರೀದಿಗೆ ಲಭ್ಯವಿರುವ 'ಬ್ಲಾಕ್‌ಶಾರ್ಕ್ 2' 6GB, 8GB ಮತ್ತು 12 ಜಿಬಿ RAM ಮಾದರಿಗಳಲ್ಲಿ ಮಾರಾಟಕ್ಕೆ ಬಂದಿದೆ. ವಿಶೇಷವೆಂದರೆ, ಈ ಪ್ರೀಮಿಯಮ್ ಸ್ಮಾರ್ಟ್‌ಫೋನಿನ ಬೆಲೆಗಳು ಮಧ್ಯಮವರ್ಗದ ಜನರಿಗೂ ಕೂಡ ಕೈಗೆಟುಕುವಂತಿವೆ.

ಒನ್‌ಪ್ಲಸ್, ಸ್ಯಾಮ್‌ಸಂಗ್ ಮತ್ತು ಆಪಲ್ ಕಂಪೆನಿಗಳಿಗೆ ಶಿಯೋಮಿ ಇದೀಗ ನೇರಾನೇರ ಸೆಡ್ಡುಹೊಡೆದಿದ್ದು, ಹಾಗಾದರೆ, ಚೀನಾದಲ್ಲಿ ಇಂದು ಬಿಡುಗಡೆ ಮಾಡಿರುವ 'ಬ್ಲಾಕ್‌ಶಾರ್ಕ್ 2' ಸ್ಮಾರ್ಟ್‌ಫೋನ್ ಹೇಗಿದೆ?, 12 ಜಿಬಿ RAM ಮತ್ತು ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಹೊಂದಿರುವ 'ಬ್ಲಾಕ್‌ಶಾರ್ಕ್ 2' ಹೊಂದಿರುವ ಇತರೆ ಪ್ರೀಮಿಯಮ್ ಫೀಚರ್ಸ್ ಯಾವುವು?, ಪ್ರೀಮಿಯಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 'ಬ್ಲಾಕ್‌ಶಾರ್ಕ್ 2' ಮೋಡಿ ಮಾಡುವುದೇ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

'ಬ್ಲಾಕ್‌ಶಾರ್ಕ್ 2' ವಿನ್ಯಾಸ!
ಪ್ರೀಮಿಯಮ್ ಫೋನ್‌ಗಳಿಗೆ ಸರಿಸಾಟಿಯಾಗುವ ನಿಟ್ಟಿನಲ್ಲಿ ಶಿಯೋಮಿ ಈ ಬಾರಿ ಹೊಸತನದೊಂದಿದೆ ಕಾಲಿಟ್ಟಿದೆ. ನೋಡಲು ಆಸುಸ್ ರೇಜರ್ ಫೋನ್ ವಿನ್ಯಾಸದಲ್ಲಿ ಬ್ಲಾಕ್‌ಶಾರ್ಕ್ 2 ಕಾಣುತ್ತಿದೆ. ಎಕ್ಸ್ ಸ್ಟೈಲ್ ಆಂಟೆನಾ ಡಿಸೈನ್ ಹೊಂದಿರುವ ಈ ಫೋನ್ ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದರೆ, ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿದೆ.

'ಬ್ಲಾಕ್‌ಶಾರ್ಕ್ 2' ಡಿಸ್‌ಪ್ಲೇ!
ಗೇಮಿಂಗ್ ಸ್ಮಾರ್ಟ್‌ಫೋನ್‌ಗಳ ಯೋಗ್ಯತೆಗೆ ತಕ್ಕಂತೆ ಬ್ಲಾಕ್‌ಶಾರ್ಕ್ 2 ಸ್ಮಾರ್ಟ್‌ಫೋನಿನಲ್ಲಿ 6.39 ಇಂಚಿನ ಪೂರ್ಣ ಹೆಚ್‌ಡಿ + AMOLED ಡಿಸ್‌ಪ್ಲೇಯನ್ನು ನೀಡಲಾಗಿದೆ. 19.5:9 ಆಸ್ಪೆಕ್ಟ್ ರೇಷ್ಯೂ ಮತ್ತು 1080x2340 ಪಿಕ್ಸೆಲ್ಗಳ ರೆಸಲ್ಯೂಶನ್ ಡಿಸ್‌ಪ್ಲೇ ಇದಾಗಿದ್ದು, ಗೇಮಿಂಗ್ ಪ್ರಿಯರಿಗಾಗಿ ಸೂಕ್ಷ್ಮ ಒತ್ತಡವನ್ನು ತಡೆದುಕೊಳ್ಳುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.

ಪ್ರೊಸೆಸರ್ ಮತ್ತು RAM
ಮೊದಲೇ ಹೇಳಿದಂತೆ, ಬ್ಲಾಕ್‌ಶಾರ್ಕ್ 2 ಸ್ಮಾರ್ಟ್‌ಫೋನಿನಲ್ಲಿ ಪ್ರಸ್ತುತ ಲಭ್ಯವಿರುವ ಶಕ್ತಿಶಾಲಿ ಪ್ರೊಸೆಸರ್‌ಗಳಲ್ಲಿ ಒಂದಾದ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಮತ್ತು ಅಡ್ರಿನೊ 640 ಜಿಪಿಯು ಅನ್ನು ನೀಡಲಾಗಿದೆ. 6GB, 8GB ಮತ್ತು 12GB RAM ನೊಂದಿಗೆ 128GB ಶೇಖರಣಾ ಜೊತೆಗೆ 256GB ವರೆಗಿನ ಮೂರು ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.

ಕ್ಯಾಮೆರಾ ಫೀಚರ್ಸ್
ಬ್ಲಾಕ್‌ಶಾರ್ಕ್ 2 ಸ್ಮಾರ್ಟ್‌ಫೋನಿನಲ್ಲಿ 'ರೆಡ್ ಮಿ ನೋಟ್ 7 ಪ್ರೊ'ನಂತೆಯೇ 48 ಮೆಗಾಪಿಕ್ಸೆಲ್ ಸಂವೇದಕ ಸಾಮರ್ಥ್ಯದ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಆದರೆ, ಇದರ 48 ಮೆಗಾಪಿಕ್ಸೆಲ್ ಸಂವೇದಕ 12 ಮೆಗಾಪಿಕ್ಸೆಲ್ ಸಂವೇದಕದ ಜೊತೆಗೆ ಜೋಡಣೆಯಾಗಿ ಹೆಚ್ಚು ಸಾಮರ್ಥ್ಯವನ್ನು ಹೊಂದಿದೆ.ಇನ್ನು 20 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾವನ್ನು ತರಲಾಗಿದೆ.

ಇತರೆ ವಿಶೇಷ ಫೀಚರ್ಸ್?
7W ವೇಗದ 4,000 mAh ಶಕ್ತಿಶಾಲಿ ಬ್ಯಾಟರಿ, ಟಚ್ ಲೇಟೆನ್ಸಿ ಅನ್ನು 43.5 ಎಂಎಂಗೆ ತಗ್ಗಿಸುವ ಡಿಸ್‌ಪ್ಲೇ ತಂತ್ರಜ್ಞಾನ, ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ ಮತ್ತು ಹೊಳಪನ್ನು ಹೊಂದುವಂತೆ ಸ್ಕ್ರೀನ್ ಫ್ಲಿಕರ್‌ನಂತಹ ವಿಶೇಷ ಫೀಚರ್ಸ್‌ಗಳನ್ನು ನಾವು ಫೋನಿನಲ್ಲಿ ಕಾಣಬಹುದಾಗಿದೆ. ಇನ್ನುಳಿದಂತೆ ಇತ್ತೀಚಿನ ಎಲ್ಲಾ ಮೊಬೈಲ್ ತಂತ್ರಜ್ಞಾನಗಳನ್ನು ಸ್ಮಾರ್ಟ್‌ಫೋನ್ ಹೊಂದಿದೆ.

ಫೋನ್ ಬೆಲೆಗಳು ಎಷ್ಟು?
ಬ್ಲಾಕ್‌ಶಾರ್ಕ್ 2 ಫೋನ್ ಒಟ್ಟು ಮೂರು ಮಾದರಿಗಳಲ್ಲಿ ಬಿಡುಗಡೆಯಾಗಿದ್ದು, 6 ಜಿಬಿ RAM ಮತ್ತು 128 ಜಿಬಿ ಶೇಖರಣಾ ಸಾಮರ್ಥ್ಯದ ಮೂಲ ಮಾದರಿ ಫೋನ್ ಬೆಲೆ 3,200(ರೂ.33,000 ) ಸಿಎನ್‌ವೈಗಳಾಗಿವೆ. ಇನ್ನು ಉನ್ನತ ಮಟ್ಟದ ಮಾದರಿ ಸ್ಮಾರ್ಟ್‌ಪೋನ್ ಬೆಲೆಗಳು ಕ್ರಮವಾಗಿ 3,799 (38 ಸಾವಿರ) ಮತ್ತು 4,199( 42 ಸಾವಿರ) ಸಿಎನ್‌ವೈಗಳಾಗಿವೆ.


Click it and Unblock the Notifications








