ನೋಕಿಯಾ ಎನ್ಗೇಜ್ ನಂತರ ಗೇಮಿಂಗ್‌ಗಾಗಿಯೇ ವಿನ್ಯಾಸಗೊಂಡ 'ಬ್ಲಾಕ್ ಶಾರ್ಕ್': ಕಿಚ್ಚು ಹೆಚ್ಚಿಸಿದ ಲೀಕ್ ಫೋಟೋ..!
ಗೇಮಿಂಗ್ ಸ್ಮಾರ್ಟ್‌ಫೋನ್ ಲೋಕದಲ್ಲಿ ಬಿಡುಗಡೆ ಮುನ್ನವೇ ಹೊಸ ಹವಾ ಎಬ್ಬಿಸಿರುವ ಶಿಯೋಮಿ ಒಡೆತನಕ್ಕೆ ಸೇರಿರುವ ಬ್ಲಾಕ್ ಶಾರ್ಕ್ ಗೇಮಿಂಗ್ ಸ್ಮಾರ್ಟ್‌ಫೋನ್, ಇದೇ ಏಪ್ರಿಲ್ 13ರಂದು ಚೀನಾದಲ್ಲಿ ಬಿಡಗಡೆಯಾಗಲಿದ್ದು, ಇದಕ್ಕೂ ಮುಂಚೆಯೇ ಈ ಸ್ಮಾರ್ಟ್‌ಫೋನ್ ಫೋಟೋವೊಂದು ಲೀಕ್ ಆಗಿದ್ದು, ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿದೆ.

ಈಗಾಗಲೇ ಈ ಸ್ಮಾರ್ಟ್ ಫೋನ್ ಕುರಿತಂತೆ ಸಾಕಷ್ಟು ನಿರೀಕ್ಷೆ ಗರಿಗೆದರಿದ್ದು, ಲೀಕ್ ಫೋಟೋ ಮತ್ತಷ್ಟು ಕಾತುರತೆಯನ್ನು ಹೆಚ್ಚಿಸಿದೆ. ಹೆಸರಿನಿಂದಲೇ ಗೇಮಿಂಗ್ ಅಭಿಮಾನಿಗಳನ್ನು ಸೆಳೆದಿರುವ ಬ್ಲಾಕ್ ಶಾರ್ಕ್ ಗೇಮಿಂಗ್ ಸ್ಮಾರ್ಟ್‌ಫೋನ್ ನೋಡಲು ಸಹ ವಿಭಿನ್ನವಾಗಿದ್ದು, ಸಾಮಾನ್ಯ ಸ್ಮಾರ್ಟ್‌ಫೋನ್‌ಗಿಂತಲೂ ವಿನ್ಯಾಸದಲ್ಲಿ ಭಿನ್ನತೆಯನ್ನು ಹೊಂದಿದೆ.
ಬ್ಲಾಕ್ ಶಾರ್ಕ್ ಸ್ಮಾರ್ಟ್‌ಫೋನ್ ಹೆಚ್ಚು ವೇಗದ ಮತ್ತು ದೊಡ್ಡ ಗಾಫಿಕ್ಸ್ ಇರುವ ಗೇಮ್ ಗಳನ್ನು ಆಡಲು ಸಲುವಾಗಿ ವಿನ್ಯಾಸ ಮಾಡಲಾಗಿದ್ದು, ಇದಕ್ಕಾಗಿ ಟಾಪ್ ಎಂಡ್ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಅನ್ನು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದ್ದು, ಇದಲ್ಲದೇ ಆಂಡ್ರಾಯ್ಡ್ 8.0ದಲ್ಲಿ ಕಾರ್ಯನಿರ್ವಹಿಸಲಿದೆ.

ಅಲ್ಲದೇ ಈ ಸ್ಮಾರ್ಟ್‌ಫೋನಿನಲ್ಲಿ FHD+ ಗುಣಮಟ್ಟದ 18:9 ಅನುಪಾತದ ಡಿಸ್‌ಪ್ಲೇಯನ್ನು ಇರಲಿದೆ. ವೇಗದ ಚಾರ್ಜಿಂಗ್ ಗಾಗಿ ಕ್ವಿಕ್ ಚಾರ್ಜರ್ ಆಯ್ಕೆಯನ್ನು ನೀಡುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಸದ್ದು ಮಾಡಲಿದ್ದು, ಹಿಂಭಾಗದಲ್ಲಿ ಗೇಮ್ ಆಡಲು ಸುಲಭವಾಗುವಂತೆ ಹಿಡಿದುಕೊಳ್ಳಲು ಸಹಾಯವಾಗುವಂತೆ ವಿನ್ಯಾಸ ಮಾಡಲಾಗಿದೆ.

ಬ್ಲಾಕ್ ಶಾರ್ಕ್ ಸ್ಮಾರ್ಟ್‌ಫೋನ್ ಒಟ್ಟು ಎರಡು ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿದ್ದು, 6GB RAM ಮತ್ತು 128GB ಇಂಟರ್ನಲ್ ಮೆಮೊರಿಯಲ್ಲಿ ಹಾಗೂ 8GB RAM ಮತ್ತು 256GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದೆ. ಹೆಚ್ಚುವರಿ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಕಾಣಿಸಿಕೊಳ್ಳಲಿದೆ.


Click it and Unblock the Notifications








