Home
ಮೊಬೈಲ್

Xiaomi 17 Ultra ಕ್ಯಾಮೆರಾ ವಿವರ ಬಹಿರಂಗ: ಮೊಬೈಲ್ ಫೋಟೋಗ್ರಫಿಯಲ್ಲಿ ಕ್ರಾಂತಿ?

ಮೊಬೈಲ್ ಫೋಟೋಗ್ರಫಿಯನ್ನು ಮತ್ತೊಂದು ಹಂತದ ಪ್ರೀಮಿಯಂ ವಿಭಾಗಕ್ಕೆ ಕರೆದೊಯ್ಯುವ ನಿರೀಕ್ಷೆ ಮೂಡಿಸಿರುವ Xiaomi 17 Ultra ಫೋನ್ ಇದೇ ಡಿಸೆಂಬರ್ 25ರಂದು ಚೀನಾದಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ. ಈ Xiaomi 17 Ultra ಸ್ಮಾರ್ಟ್‌ಫೋನ್ ತನ್ನ ಅಧಿಕೃತ ಬಿಡುಗಡೆಯಿಗೂ ಮುನ್ನವೇ ಟೆಕ್ ಲೋಕದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಏಕೆಂದರೆ, Xiaomi CEO ಲೀ ಜುನ್ ಮುಂಬರುವ Xiaomi 17 ಅಲ್ಟ್ರಾದ ಕ್ಯಾಮೆರಾ ವ್ಯವಸ್ಥೆಯ ಕುರಿತು ಹೊಸ ವಿವರಗಳನ್ನು Weibo ನಲ್ಲಿನ ಸರಣಿ ಪೋಸ್ಟ್‌ಗಳಲ್ಲಿ ಹಂಚಿಕೊಂಡಿದ್ದಾರೆ.!

ಹೌದು, Xiaomi CEO ಲೀ ಜುನ್ ಅವರು Weibo ಮೂಲಕ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, Xiaomi 17 Ultraನಲ್ಲಿ Leica 1-ಇಂಚಿನ Light and Shadow Master ಮುಖ್ಯ ಕ್ಯಾಮೆರಾ ಇರಲಿದೆ ಎಂಬುದನ್ನು ಖಚಿತವಾಗಿದೆ. ಈ ಕ್ಯಾಮೆರಾ ಹೊಸ Light and Shadow Hunter 1050L ಇಮೇಜ್ ಸೆನ್ಸರ್ ಆಧಾರಿತವಾಗಿದ್ದು, LOFIC (Lateral Overflow Integration Capacitor) ಅಲ್ಟ್ರಾ ಹೈ ಡೈನಾಮಿಕ್ ರೇಂಜ್ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ತಂತ್ರಜ್ಞಾನದಿಂದ ಹಾರ್ಡ್‌ವೇರ್ ಮಟ್ಟದಲ್ಲೇ ಲೈಟ್ ಮತ್ತು ಶ್ಯಾಡೋ ವಿವರಗಳನ್ನು ಉತ್ತಮವಾಗಿ ನಿರ್ವಹಿಸಬಹುದು.

Leica ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಲಾದ ಹೊಸ ಇಮೇಜಿಂಗ್ ತಂತ್ರಜ್ಞಾನಗಳು, ವಿಶೇಷವಾಗಿ ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿ ಉತ್ತಮ ಚಿತ್ರ ಗುಣಮಟ್ಟ ಮತ್ತು ನೈಜ ಆಪ್ಟಿಕಲ್ ಜೂಮ್ ಅನುಭವ ನೀಡಲು ವಿನ್ಯಾಸಗೊಳಿಸಲಾಗಿದೆ. ಹೊಸ Light and Shadow Hunter 1050L ಇಮೇಜ್ ಸೆನ್ಸರ್ಬಳಕೆಯಿಂದ, ಹೆಚ್ಚು ಕಾಂಟ್ರಾಸ್ಟ್ ಇರುವ ದೃಶ್ಯಗಳು ಮತ್ತು ಕಡಿಮೆ ಬೆಳಕಿನ ಫೋಟೋಗಳಲ್ಲಿ ಹೈಲೈಟ್‌ಗಳ ಕಳೆದುಕೊಳ್ಳದೆ ನಿಖರವಾಗಿ ಸೆರೆಹಿಡಿಯಲು ಸಾಧ್ಯವಾಗುತ್ತದೆ. ಓವರ್‌ಎಕ್ಸ್‌ಪೋಝರ್ ಸಮಸ್ಯೆ ಕಡಿಮೆಯಾಗುವುದರಿಂದ, ನೈಟ್ ಫೋಟೋಗ್ರಫಿ ಅನುಭವವು ಇನ್ನಷ್ಟು ನೈಸರ್ಗಿಕವಾಗಿ ಕಾಣಲಿದೆ.

ವೀಡಿಯೋ ಪ್ರಿಯರಿಗೂ Xiaomi 17 Ultra ಉತ್ತಮ ಅಪ್‌ಗ್ರೇಡ್‌ಗಳನ್ನು ನೀಡಲಿದೆ. LOFIC ತಂತ್ರಜ್ಞಾನವು ಪ್ರತಿಯೊಂದು ಫ್ರೇಮ್‌ಗೆ ಪ್ರತ್ಯೇಕವಾಗಿ ಎಕ್ಸ್‌ಪೋಝರ್ ನಿಯಂತ್ರಿಸುವ ಸಾಮರ್ಥ್ಯ ಹೊಂದಿರುವುದರಿಂದ, ರಾತ್ರಿ ಸಮಯದ HDR ವೀಡಿಯೋಗಳು ಹೆಚ್ಚು ಕ್ಲೀನ್ ಮತ್ತು ಸ್ಟೇಬಲ್ ಆಗಿ ರೆಕಾರ್ಡ್ ಆಗುತ್ತವೆ. ಇದು ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ವ್ಲಾಗರ್‌ಗಳಿಗೆ ವಿಶೇಷವಾಗಿ ಉಪಯುಕ್ತವಾಗಲಿದೆ.

ಇದರ ಜೊತೆಗೆ, Xiaomi 17 Ultraನಲ್ಲಿ ಹೊಸ Leica ಬೆಂಬಲಿತ 200 ಮೆಗಾಪಿಕ್ಸೆಲ್ ಆಪ್ಟಿಕಲ್ ಜೂಮ್ ಟೆಲಿಫೋಟೋ ಕ್ಯಾಮೆರಾ ಇರಲಿದೆ. ಈ ಟೆಲಿಫೋಟೋ ಲೆನ್ಸ್ 75mm ರಿಂದ 100mm ವರೆಗೆ ನಿರಂತರ ಆಪ್ಟಿಕಲ್ ಜೂಮ್ ಬೆಂಬಲಿಸುವುದಾಗಿ ಕಂಪನಿ ಹೇಳಿದೆ. ವಿಶೇಷವೆಂದರೆ, ಈ ಜೂಮ್ ಶ್ರೇಣಿಯಲ್ಲೆಲ್ಲಾ ಡಿಜಿಟಲ್ ಕ್ರಾಪಿಂಗ್ ಇಲ್ಲದೆ ಪೂರ್ಣ 200MP ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ.

Xiaomi 17 Ultra ಕ್ಯಾಮೆರಾ ವಿವರ ಬಹಿರಂಗ: ಮೊಬೈಲ್ ಫೋಟೋಗ್ರಫಿಯಲ್ಲಿ ಕ್ರಾಂತಿ?

ಟೆಲಿಫೋಟೋ ಕ್ಯಾಮೆರಾದಲ್ಲಿ Leica APO ಪ್ರಮಾಣೀಕೃತ ಲೆನ್ಸ್ ಬಳಸಲಾಗಿದ್ದು, 3G+5P ಡ್ಯುಯಲ್ ಫ್ಲೋಟಿಂಗ್ ಲೆನ್ಸ್ ಗ್ರೂಪ್ ಒಳಗೊಂಡಿದೆ. ಇದು ಕ್ಯಾಮೆರಾ ಜೂಮ್ ಲೆನ್ಸ್‌ಗಳ ವಿನ್ಯಾಸ ತತ್ವಗಳನ್ನು ಅನುಸರಿಸುವುದರಿಂದ, ಸ್ಮಾರ್ಟ್‌ಫೋನ್ ಫೋಟೋಗ್ರಫಿಯಲ್ಲಿ ಹೊಸ ಮಟ್ಟದ ಪೋರ್ಟ್ರೇಟ್ ಮತ್ತು ಜೂಮ್ ಅನುಭವವನ್ನು ನೀಡಲಿದೆ. ವಿಭಿನ್ನ ಫೋಕಲ್ ಲೆಂಗ್ತ್‌ಗಳ ಮೂಲಕ ಪೋರ್ಟ್ರೇಟ್ ಫೋಟೋಗ್ರಫಿಗೆ ಹೆಚ್ಚಿನ ಕ್ರಿಯೇಟಿವ್ ಆಯ್ಕೆಗಳು ಲಭ್ಯವಾಗುತ್ತವೆ.

ಡಿಸೈನ್ ವಿಚಾರದಲ್ಲಿ, Xiaomi 17 Ultra ಹಿಂದಿನ Ultra ಮಾದರಿಗಳ ಶೈಲಿಯನ್ನು ಮುಂದುವರಿಸಿಕೊಂಡಿದ್ದು, ದೊಡ್ಡ ರಿಯರ್ ಕ್ಯಾಮೆರಾ ಮಾಡ್ಯೂಲ್ ಮತ್ತು Leica ಬ್ರ್ಯಾಂಡಿಂಗ್ ಹೊಂದಿದೆ. ಈ ಫೋನ್ ಕಪ್ಪು, ಬಿಳಿ ಹಾಗೂ ಹೊಸ Starry Sky Green ಬಣ್ಣಗಳಲ್ಲಿ ಲಭ್ಯವಾಗಲಿದೆ. ಹಸಿರು ಬಣ್ಣದ ವೇರಿಯಂಟ್‌ನಲ್ಲಿ ವಿಶೇಷ ಧಾತು ಕಣಗಳನ್ನು ಬಳಸಿರುವುದರಿಂದ ಹಿಂಭಾಗದಲ್ಲಿ ನಕ್ಷತ್ರದಂತೆ ಹೊಳೆಯುವ ಎಫೆಕ್ಟ್ ಕಾಣಿಸುತ್ತದೆ.

ಕೇವಲ 8.29mm ದಪ್ಪ ಹೊಂದಿರುವ Xiaomi 17 Ultra, ಕಂಪನಿಯ ಇತಿಹಾಸದಲ್ಲೇ ಅತಿ ಸ್ಲಿಮ್ Ultra ಸ್ಮಾರ್ಟ್‌ಫೋನ್ ಆಗಿದೆ ಎಂದು Xiaomi ತಿಳಿಸಿದೆ. ದೊಡ್ಡ R-ಆಂಗಲ್ 2D ಫ್ಲಾಟ್ ಡಿಸ್ಪ್ಲೇ, ಪ್ರೀಮಿಯಂ ಫಿನಿಶ್ ಮತ್ತು ಶಕ್ತಿಶಾಲಿ ಕ್ಯಾಮೆರಾ ವ್ಯವಸ್ಥೆಯೊಂದಿಗೆ, Xiaomi 17 Ultra ಪ್ರೀಮಿಯಂ ಸ್ಮಾರ್ಟ್‌ಫೋನ್ ಸೆಗ್ಮೆಂಟ್‌ನಲ್ಲಿ ಹೊಸ ಮಾನದಂಡ ಸ್ಥಾಪಿಸುವ ನಿರೀಕ್ಷೆಯಿದೆ. ಇದೇ ಡಿಸೆಂಬರ್ 25ರಂದು ಚೀನಾದಲ್ಲಿ ಅಧಿಕೃತವಾಗಿ ಲಾಂಚ್ ಆಗುತ್ತಿರುವ ಈ ಫೋನ್ ಎಲ್ಲರ ಗಮನಸೆಳೆದಿದೆ.

Best Mobiles in India

English summary
The upcoming Xiaomi 17 Ultra is set to launch in China on December 25, aiming to elevate premium mobile photography with a 1-inch Leica-powered main camera. Confirmed by Lei Jun, the phone will feature advanced Light and Shadow imaging technology designed to deliver superior low-light performance and high dynamic range photography.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+