Home
ಮೊಬೈಲ್

ಎಂಐ ಮ್ಯಾಕ್ಸ್ 3 ಜುಲೈ ನಲ್ಲಿ ಮಾರುಕಟ್ಟೆಗೆ..!

By Sushma Charhra

ಸ್ಮಾರ್ಟ್ ಫೋನ್ ಗಳ ತಯಾರಕರಾಗಿರುವ ಶಿಯೋಮಿ ತನ್ನ ಎಂಐ ಮ್ಯಾಕ್ಸ್ 2 ಫ್ಯಾಬ್ಲೆಟ್ ನ್ನು 2017 ರ ಮೇ ನಲ್ಲಿ ಚೀನಾದಲ್ಲಿ ಬಿಡುಗಡೆಗೊಳಿಸಿತ್ತು. ಅದಾಗಿ ಈಗ ಒಂದು ವರ್ಷ ಕಳೆದಿದೆ. ಈ ಫ್ಯಾಬ್ಲೆಟ್ ನ ಗೆಲುವಿನ ನಂತರ ಮತ್ತೊಂದು ಹೊಸ ಡಿವೈಸ್ ನ್ನು ಮಾರುಕಟ್ಟೆಗೆ ತರಲು ಪ್ರಯತ್ನಿಸುತ್ತಿದೆ. ಅದರ ಪರಿಣಾಮವಾಗಿ ಎಂಐ ಮ್ಯಾಕ್ಸ್ 3 ಮಾರುಕಟ್ಟೆಗೆ ಬರುವುದು ಬಹುತೇಕ ಖಚಿತವಾಗಿದ್ದು, ಶಿಯೋಮಿ ಸಿಇಓ ಲಿ ಜುನ್ 2018 ರ ಜುಲೈ ನಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಸಮಯ ನಿಗದಿಸಿದ್ದಾರೆ ಎಂದು ಗಿಝ್ಮೋ ಚೈನಾ ವರದಿ ಪ್ರಕಟಿಸಿದೆ.

ಎಂಐ ಮ್ಯಾಕ್ಸ್ 3 ಜುಲೈ ನಲ್ಲಿ ಮಾರುಕಟ್ಟೆಗೆ..!


ಶಿಯೋಮಿ ಮ್ಯಾಕ್ಸ್ 3 ಬಗ್ಗೆ ಖಚಿತ ಮಾಹಿತಿಗಳು ಲಭ್ಯವಿಲ್ಲದೆ ಇದ್ದರೂ ಕೆಲವು ರೂಮರ್ ಗಳು ಹರಿದಾಡುತ್ತಿವೆ.6.99 ಇಂಚಿನ ಫುಡ್ ಹೆಚ್.ಡಿ+ ಡಿಸ್ಪ್ಲೇಯನ್ನು ಇದು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. 18:9 ಅನುಪಾತದ ಸ್ಕ್ರೀನ್ ನ ವೈಶಿಷ್ಟ್ಯವನ್ನು ಇದು ಒಳಗೊಂಡಿರುತ್ತೆ ಎಂಬ ಮಾಹಿತಿಯೂ ಇತ್ತೀಚೆಗೆ ಹರಿದಾಡಿದೆ. ದೊಡ್ಡ ಬ್ಯಾಟರಿ ಪವರ್ ಕೂಡ ಇರಲಿದ್ದು, ಅದರ ಸಾಮರ್ಥ್ಯ 5,500mAh ಆಗಿರಲಿದೆ. ಅಷ್ಟೇ ಅಲ್ಲ ಅತ್ಯಂತ ವೇಗವಾಗಿ ಚಾರ್ಚ್ ಆಗುವ ಕ್ವಿಕ್ ಚಾರ್ಜ್ 3.0 ಚಾರ್ಜಿಂಗ್ ಟೆಕ್ನಾಲಜಿಯನ್ನು ಇದು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ.ಅಷ್ಟೇ ಅಲ್ಲ Qi ವಯರ್ ಲೆಸ್ ಚಾರ್ಜಿಂಗ್ ಅವಕಾಶವೂ ಇದರಲ್ಲಿರಲಿದೆ, ಭದ್ರತೆಯ ದೃಷ್ಟಿಯಿಂದ ಕಣ್ಣಿನ ಸ್ಕ್ಯಾನರ್ ಕೂಡ ಅಳವಡಿಸಲಾಗಿರುತ್ತೆ ಎಂದು ಹೇಳಲಾಗುತ್ತಿದೆ.

ಆರಂಭಿಕ ಆವೃತ್ತಿಯೂ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 636 ನ್ನು ಹೊಂದಿದ್ದು 3GB RAM ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ಹಾಗೂ ಮೇಲ್ದರ್ಜೆಯ ಮಾಡೆಲ್ ಗಳು ಇದಕ್ಕಿಂತಲೂ ಹೆಚ್ಚಿನ ಅಂದರೆ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 660ನ್ನು ಹೊಂದಿದ್ದು 4GB RAM ಮತ್ತು 128GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ.

ಕ್ಯಾಮರಾ ವಿಚಾರಕ್ಕೆ ಬಂದರೆ ಡ್ಯುಯಲ್ ಕ್ಯಾಮರಾ ಫೆಸಿಲಿಟಿಯನ್ನು ಇದು ಹೊಂದಿರಲಿದೆ. ಅಷ್ಟೇ ಅಲ್ಲ,S6K4H7 ಸ್ಯಾಮ್ ಸಂಗ್ ಸ್ಕ್ಯಾನರ್ ಮತ್ತು ಓಮ್ಲಿವಿಷನ್ OV2281 iris ಸ್ಕ್ಯಾನರ್ ನ್ನು ಕೂಡ ಇದು ಹೊಂದಿರಲಿದೆ.ಇನ್ನು ಈ ಡಿವೈಸ್ ರನ್ ಆಗುವುದು ಆಂಡ್ರಾಯ್ಡ್ 8.1 ಓರಿಯೋ ಮೂಲಕ. ಇನ್ನು ವದಂತಿಗಳ ಪ್ರಕಾರ ಶಿಯೋಮಿಯಲ್ಲಿ 3.5 ಎಂಎಂ ನ ಇಯರ್ ಫೋನ್ ಜ್ಯಾಕ್ ಇರಲಿದ್ಯಂತೆ. ಜುಲೈ ನಲ್ಲಿ ಫೋನ್ ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ. ಸದ್ಯಕ್ಕೆ ಫೋನಿನ ಬೆಲೆ ಎಷ್ಟಿರಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದಕ್ಕಾಗಿ ಅಧಿಕೃತವಾಗಿ ಫೋನ್ ಮಾರುಕಟ್ಟೆಗೆ ಬಿಡುಗಡೆಗೊಳ್ಳುವವರೆಗೆ ಕಾಯಲೇಬೇಕು.

How to read deleted WhatsApp messages - GIZBOT KANNADA
Best Mobiles in India

English summary
Xiaomi CEO Lei Jun confirms Mi Max 3 will launch in July this year. to know more visit kannad.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+