1000 GB ಸ್ಟೋರೇಜ್ ಗುರು..! 50MP ಕ್ಯಾಮೆರಾ, 5500mAh ಬ್ಯಾಟರಿ.. ಯಾವ ಫೋನ್?
ಶಿಯೋಮಿಯ (Xiaomi) ಮುಂಬರುವ ಸ್ಮಾರ್ಟ್‌ಫೋನ್ Redmi K70 Ultra ಪ್ರಸ್ತುತ ಭಾರೀ ಸೌಂಡ್ ಮಾಡುತ್ತಿದೆ. Redmi K70 Ultra ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಬರುವ ನಿರೀಕ್ಷೆಯಿದೆ. ಅವುಗಳಲ್ಲಿ ಕೆಲವು ಸೋರಿಕೆಯ ಮೂಲಕ ಬಹಿರಂಗಗೊಂಡಿವೆ. ಈಗ ಅಧಿಕೃತವಾಗಿ ಕಂಪನಿಯು ಈ ಫೋನ್‌ಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಅಪ್ಡೇಟ್ ಒಂದನ್ನು ನೀಡಿದೆ. ಕಂಪನಿಯು ಮೊಬೈಲ್‌ನ 24GB RAM ರೂಪಾಂತರವನ್ನು ಸಹ ಬಿಡುಗಡೆ ಮಾಡುತ್ತದೆ. ಇದನ್ನು ಸ್ವತಃ ಶಿಯೋಮಿ ಬಹಿರಂಗಪಡಿಸಿದೆ. ಬನ್ನಿ ಈ ಕುರಿತ ಸಂಪೂರ್ಣ ಮಾಹಿತಿ ತಿಳಿಯೋಣ.
Redmi K70 Ultra ಶೀಘ್ರದಲ್ಲೇ ಚೀನಾದಲ್ಲಿ ಬಿಡುಗಡೆಯಾಗಲಿದೆ. ಈ ಫೋನ್ 24GB RAM ಮತ್ತು 1TB ಸ್ಟೋರೇಜ್ ಅನ್ನು ಪಡೆಯುತ್ತದೆ. ಅಲ್ಲದೆ, ಐಸ್ ಗ್ಲಾಸ್ ಬಣ್ಣದ ರೂಪಾಂತರದಲ್ಲಿ ಬರುವ ಫೋನ್ ಅನ್ನು 50 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಪ್ರಾರಂಭಿಸಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಬೇರೆ ಹೆಸರಿನೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಹೌದು, Redmi K70 Ultra ಬಿಡುಗಡೆಗೆ ಕೆಲವೇ ದಿನಗಳು ಉಳಿದಿವೆ. ಶಿಯೋಮಿ ಈಗಾಗಲೇ ಫೋನ್ ಅನ್ನು ಬಿಡುಗಡೆ ಮಾಡುವ ಮೊದಲು ಪ್ರಕಟಣೆಯನ್ನು ಹೊರಡಿಸಿದೆ. ಅದರ ಪ್ರಕಾರ Redmi K70 Ultraನ 24GB RAM ರೂಪಾಂತರವನ್ನು ಸಹ ಪ್ರಾರಂಭಿಸಲಾಗುವುದು. ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು ಈ ಫೋನ್‌ನಲ್ಲಿ 1TB ಸ್ಟೋರೇಜ್ ಸ್ಥಳವನ್ನು ನೀಡುತ್ತದೆ. ವೈಬೊದಲ್ಲಿ ಶಿಯೋಮಿ ಅಧಿಕೃತ ವಾಂಗ್ ಟೆಂಗ್ ಇತ್ತೀಚೆಗೆ 24GB RAM ಮತ್ತು 1TB (1024GB) ಸ್ಟೋರೇಜ್ ವೇರಿಯಂಟ್ ಫೋನ್‌ನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.
Redmi K70 Ultra ಪೋನಿನ ವಿಶೇಷತೆಗಳೇನು?
ಅಂದಹಾಗೆ, Redmi K70 Ultra ಇದೇ ತಿಂಗಳು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಬಿಡುಗಡೆಯ ಅಧಿಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300+ ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ. ಇದು ಮಾತ್ರವಲ್ಲದೆ, ಇದು ಹೊಸ ಪೀಳಿಗೆಯ 1.5K C8+ ಸ್ಟ್ರೈಟ್ ಡಿಸ್ಪ್ಲೇ ಅನ್ನು ಒಳಗೊಂಡಿರುವ ಮೊದಲ ಸ್ಮಾರ್ಟ್‌ಫೋನ್ ಆಗಿರುತ್ತದೆ. ಡಿಸ್ಲ್ಪೇಯು ಕಿರಿದಾದ ಬೆಜೆಲ್‌ಗಳನ್ನು ಪಡೆಯುತ್ತದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಗೆ ಬೆಂಬಲದೊಂದಿಗೆ ಫೋನ್ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ.
100%.. ಅತ್ಯುತ್ತಮ ಗೇಮಿಂಗ್ ಫೋನ್!
ಕಂಪನಿಯು Redmi K70 Ultraನ ಐಸ್ ಗ್ಲಾಸ್ ಬಣ್ಣದ ರೂಪಾಂತರವನ್ನು ಸಹ ಬಿಡುಗಡೆ ಮಾಡುತ್ತದೆ. ವಿಶೇಷ ಕೂಲಿಂಗ್ ವ್ಯವಸ್ಥೆಯನ್ನು ಈ ಫೋನ್ ಪಡೆದುಕೊಳ್ಳಲಿದೆ ಎನ್ನಲಾಗಿದೆ. ಕೆಲವು ವರದಿಗಳ ಪ್ರಕಾರ, ಬಳಕೆದಾರರು ಫೋನ್‌ನಲ್ಲಿ ಅತ್ಯುತ್ತಮ ಗೇಮಿಂಗ್ ಅನುಭವವನ್ನು ಪಡೆಯಬಹುದು. ಕಾರ್ಯಕ್ಷಮತೆಯ ಮಾನದಂಡಗಳು, ಫ್ರೇಮ್ ದರ ಮತ್ತು ರೆಸಲ್ಯೂಶನ್ ಮಟ್ಟದಲ್ಲಿ ಇದು ಅತ್ಯುತ್ತಮ ಗೇಮಿಂಗ್ ಫೋನ್ ಆಗಿರುತ್ತದೆ ಎಂದು ಹೇಳಲಾಗುತ್ತದೆ.

5500mAh ಬ್ಯಾಟರಿ ಬ್ಯಾಕಪ್, 120W ಸ್ಪೀಡ್ ಚಾರ್ಜಿಂಗ್
ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರವನ್ನು ಪಡೆಯಬಹುದು. ಮೊಬೈಲ್ 5500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದರಲಿದೆ. ಅಲ್ಲದೆ, ಈ ಫೋನ್‌ನಲ್ಲಿ 120W ವೇಗದ ಚಾರ್ಜಿಂಗ್ ಸಪೋರ್ಟ್ ಅನ್ನು ನೀವು ಪಡೆಯಬಹುದು. Redmi K70 Ultra ಮಾದರಿ ಸಂಖ್ಯೆ 2407FRK8EC ನೊಂದಿಗೆ ಮಾರುಕಟ್ಟೆಗೆ ಬರಬಹುದು. ಗೀಕ್‌ಬೆಂಚ್ ಪರೀಕ್ಷೆಯಲ್ಲಿ, ಫೋನ್ ಸಿಂಗಲ್-ಕೋರ್ ಪರೀಕ್ಷೆಯಲ್ಲಿ 2218 ಅಂಕಗಳನ್ನು ಮತ್ತು ಮಲ್ಟಿ-ಕೋರ್ ಪರೀಕ್ಷೆಯಲ್ಲಿ 7457 ಅಂಕಗಳನ್ನು ಗಳಿಸಿದೆ.
ಇನ್ನೂ, ಗಮನಿಸಬೇಕಾದ ಪ್ರಮುಖ ವಿಷಯವೆಂದರೆ, ರೆಡ್‌ಮಿ ಜನರಲ್ ಮ್ಯಾನೇಜರ್ ವಾಂಗ್ ಟೆಂಗ್ ಥಾಮಸ್ ಇತ್ತೀಚೆಗೆ ವೀಬೊದಲ್ಲಿ ಪೋಸ್ಟ್ ಮೂಲಕ ದೃಢಪಡಿಸಿದ್ದಾರೆ. ರೆಡ್‌ಮಿಯ ಮುಂಬರುವ ಫೋನ್ ನೀರು ಮತ್ತು ಧೂಳಿನ ರಕ್ಷಣೆಗಾಗಿ ಐಪಿ68 ರೇಟಿಂಗ್‌ನೊಂದಿಗೆ ಬರಲಿದೆ.


Click it and Unblock the Notifications








