Home
ಮೊಬೈಲ್

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚುಹರಿಸಿದ 'ಶಿಯೋಮಿ ಮಿ8'!..ಸೇಲ್ ಆಗಿದ್ದು ಎಷ್ಟು ಗೊತ್ತಾ?

ವಿಶ್ವ ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಯಂತೆಯೇ ಶಿಯೋಮಿ ಕಂಪೆನಿಯ ಫ್ಲಾಶ್‌ಶಿಪ್ ಸ್ಮಾರ್ಟ್‌ಫೋನ್ 'ಶಿಯೋಮಿ ಮಿ8' ಭರ್ಜರಿ ಮಾರಾಟ ಕಾಣುತ್ತಿದೆ. ಪ್ರೀಮಿಯಮ್ ಫೀಚರ್ಸ್ ಹೊತ್ತು ಮೊಬೈಲ್ ಮಾರುಕಟ್ಟೆಗೆ ಭರ್ಜರಿಯಾಗಿ ಎಂಟ್ರಿ ನೀಡಿದ್ದ 'ಶಿಯೋಮಿ ಮಿ8' ಬಿಡುಗಡೆಯಾದ ಕೇವಲ ನಾಲ್ಕು ತಿಂಗಳುಗಳಲ್ಲಿಯೇ 6 ಮಿಲಿಯನ್ ಘಟಕಗಳ ಮಾರಾಟ ಕಂಡಿದೆ ಎಂದು ಶಿಯೋಮಿ ಕಂಪೆನಿ ಸಿಇಒ ಲಿ ಜುನ್ ಅವರು ಪ್ರಕಟಿಸಿದ್ದಾರೆ.

ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 845 Soc ಪ್ರೊಸೆಸರ್, ಇನ್‌ಫ್ರಾರೆಡ್ ಫೇಸ್‌ಲಾಕ್‌ ಫೀಚರ್ , 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನಂತಹ ಹಲವು ನೂತನ ಫೀಚರ್ಸ್ ಹೊತ್ತು ಮಾರುಕಟ್ಟೆಗೆ ಕಾಲಿಟ್ಟಿದ್ದ 'ಶಿಯೋಮಿ ಮಿ8' ಸ್ಮಾರ್ಟ್‌ಪೋನ್ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆದು ಗ್ರಾಹಕರನ್ನು ಸೆಳೆಯುವಲ್ಲಿ ಸಫಲವಾಗಿದೆ. ಆದರೆ, ಭಾರತದ ಮೊಬೈಲ್ ಮಾರುಕಟ್ಟೆಗೆ 'ಶಿಯೋಮಿ ಮಿ8' ಬಿಡುಗಡೆ ಯಾವಾಗ ಎಂಬುದು ಪ್ರಶ್ನೆಯಾಗಿಯೇ ಉಳಿಸಿದೆ.

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚುಹರಿಸಿದ 'ಶಿಯೋಮಿ ಮಿ8'!

ಮೊಬೈಲ್ ಮಾರುಕಟ್ಟೆಯಲ್ಲಿನ ವದಂತಿಗಳಂತೆ, 'ಶಿಯೋಮಿ ಮಿ8' ಸ್ಮಾರ್ಟ್‌ಪೋನ್ ಭಾರತದ ಮೊಬೈಲ್ ಮಾರುಕಟ್ಟೆಗೆ ಇದೇ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಸುದ್ದಿ ಇನ್ನು ಸ್ಪಷ್ಟವಾಗಿಲ್ಲ. ಇವೆಲ್ಲವನ್ನು ಹೊರತುಪಡಿಸಿದರೆ, ಶಿಯೋಮಿ 'ಶಿಯೋಮಿ ಮಿ8' ಸ್ಮಾರ್ಟ್‌ಪೋನ್ ಬೇರೆ ಏನೆಲ್ಲಾ ಫೀಚರ್ಸ್ ಹೊಂದಿದೆ? ಬೆಲೆ ಎಷ್ಟು? ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯಿರಿ.

ಶಿಯೋಮಿ ಮಿ8 ಡಿಸ್‌ಪ್ಲೇ ಮತ್ತು ವಿನ್ಯಾಸ!

ಶಿಯೋಮಿ ಮಿ8 ಡಿಸ್‌ಪ್ಲೇ ಮತ್ತು ವಿನ್ಯಾಸ!

18.7:9 ಆಕಾರ ಅನುಪಾತದ 6.21-ಇಂಚಿನ ಫುಲ್ ಹೆಚ್‌ಡಿ ಪ್ಲಸ್ (1080x2248 ಪಿಕ್ಸೆಲ್ಸ್) ಡಿಸ್‌ಪ್ಲೇಯನ್ನು 'ಶಿಯೋಮಿ ಮಿ8' ಸ್ಮಾರ್ಟ್‌ಪೋನಿನಲ್ಲಿ ನೀಡಲಾಗಿದೆ. ಹೈ ಎಂಡ್ ಸ್ಮಾರ್ಟ್‌ಫೋನ್ ಆಗಿರುವುದರಿಂದ ಸ್ಯಾಮ್ಸಂಗ್ AMOLED ಡಿಸ್‌ಪ್ಲೇಯನ್ನು 'ಶಿಯೋಮಿ ಮಿ8' ಫೋನಿನಲ್ಲಿ ತರಲಾಗಿದೆ. ಶೇ. 88.5 ಪ್ರತಿಶತ ಸ್ಕ್ರೀನ್ ಸ್ಮಾರ್ಟ್‌ಫೋನ್ ಬೆಜೆಲ್‌ಲೆಸ್ ಆಗುವಲ್ಲಿ ಸಹಾಯಕವಾಗಿದೆ. 'ಐಫೋನ್ ಎಕ್ಸ್' ನಾಚ್ ವಿನ್ಯಾಸದ ಡಿಸ್‌ಪ್ಲೇ ಹಾಗೂ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಫೀಚರ್, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ವಿನ್ಯಾಸವನ್ನು ಫೋನ್ ಹೊಂದಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

'ಶಿಯೋಮಿ ಮಿ8' ಸ್ಮಾರ್ಟ್‌ಪೋನ್ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 845 Soc ಪ್ರೊಸೆಸರ್ ಹೊಂದಿದೆ. ಅಂಟುಂಟು ಬೆಂಚ್ ಮಾರ್ಕ್‌ನಲ್ಲಿ 301,472 ಅಂಕ ಗಳಿಸಿದೆ. 6GB ಮತ್ತು 8GB LPDDR4X RAM ನೊಂದಿಗೆ 'ಶಿಯೋಮಿ ಮಿ8' ಸ್ಮಾರ್ಟ್‌ಪೋನ್ ಬಿಡುಗಡೆಯಾಗಿದ್ದು, 8GB RAM ಎಕ್ಸ್‌ಪ್ಲೋರರ್ ಆವೃತ್ತಿಯಲ್ಲಿ ಮಾತ್ರ ಒಳಗೊಂಡಿದೆ. 6GB ಮತ್ತು 128GB ಹಾಗೂ 8GB ಮತ್ತು 256GBಯ ಎರಡು ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್!

ಡ್ಯುಯಲ್ ಕ್ಯಾಮೆರಾ ಸೆಟಪ್!

12 ಮೆಗಾಪಿಕ್ಸೆಲ್ಸ್ ಸಾಮರ್ಥ್ಯದ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು 'ಶಿಯೋಮಿ ಮಿ8' ಸ್ಮಾರ್ಟ್‌ಪೋನಿನಲ್ಲಿ ಅಳವಡಿಸಲಾಗಿದೆ. ಈ ಬಾರಿ ಸೆಲ್ಫೀ ಕ್ಯಾಮೆರಾಗೆ ಹೆಚ್ಚು ಒತ್ತು ನೀಡಿರುವ ಶಿಯೋಮಿ ಕಂಪೆನಿ 1.8 ಮೈಕ್ರಾನ್ ಪಿಕ್ಸೆಲ್, 2.0 ಅಪಾರ್ಚರ್ ಹೊಂದಿರುವ 20 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಿದೆ. ಡ್ಯುಯಲ್ ಪಿಕ್ಸೆಲ್ ಆಟೋಫೋಕಸ್, ಎಐ ಭಾವಚಿತ್ರಗಳು, ಎಐ ದೃಶ್ಯ ಪತ್ತೆ ತಂತ್ರಜ್ಞಾನವನ್ನು ಹೊಂರುವ ಸ್ಮಾರ್ಟ್‌ಫೋನಿನ DxOMark ಫೋಟೋ ಸ್ಕೋರ್ 105 ಎಂದು ಶಿಯೋಮಿ ಹೇಳಿಕೊಂಡಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಶಿಯೋಮಿ ಮಿ8' ಸ್ಮಾರ್ಟ್‌ಪೋನಿನಲ್ಲಿ 3400mAh ಬ್ಯಾಟರಿಯನ್ನು ನೀಡಲಾಗಿದೆ. ಫಾಸ್ಟ್ ಚಾರ್ಜಿಂಗ್, ಇನ್‌ಫ್ರಾರೆಡ್ ಫೇಸ್‌ಲಾಕ್‌ ಫೀಚರ್, 4 ಜಿ ವೋಲ್ಟ್, ಬ್ಲೂಟೂತ್ 5.0, ಎನ್ಎಫ್‌ಸಿ, ಡ್ಯುಯಲ್ ಫ್ರಿಕ್ವೆನ್ಸಿ ಜಿಪಿಎಸ್, ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸೆನ್ಸಾರ್, ಮತ್ತು ಟೈಪ್-ಸಿ ಯುಎಸ್‌ಬಿಯಂತಹ ಹೈ ಎಂಡ್ ಫೀಚರ್ಸ್ ಸ್ಮಾರ್ಟ್‌ಫೋನ್ ಅನ್ನು ಅಲಂಕರಿಸಿವೆ. ಆಪಲ್ ಐಫೋನ್ ಎಕ್ಸ್‌ನಲ್ಲಿ ತಂದಿರುವ ಗುಣಮಟ್ಟದ ಇನ್‌ಫ್ರಾರೆಡ್ ಫೇಸ್‌ಲಾಕ್‌ ಫೀಚರ್ ತಂದಿರುವುದು ಈ ಸ್ಮಾರ್ಟ್‌ಫೋನಿನ ವಿಶೇಷತೆಯಾಗಿದೆ.

ಶಿಯೋಮಿ ಮಿ8 ಬೆಲೆ

ಶಿಯೋಮಿ ಮಿ8 ಬೆಲೆ

ವೈಟ್, ಗೋಲ್ಡ್, ಲೈಟ್ ಬ್ಲೂ ಮತ್ತು ಬ್ಲಾಕ್ ಬಣ್ಣ ಆಯ್ಕೆಗಳಲ್ಲಿ ಬಿಡುಗಡೆಯಾಗಿರುವ ಶಿಯೋಮಿ ಮಿ8 6ಜಿಬಿ RAM / 128 ಜಿಬಿ ಶೇಖರಣಾ ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆಯನ್ನು 2,999 ಸಿಎನ್‌ವೈಗಳಿಗೆ (ಸುಮಾರು 31,600 ರೂ.) ಶಿಯೋಮಿ ಕಂಪೆನಿ ನಿಗದಿಪಡಿಸಿದೆ. ಇನ್ನು 6ಜಿಬಿ RAM / 64 ಜಿಬಿ ಶೇಖರಣಾ ವೆರಿಯಂಟ್ ಸ್ಮಾರ್ಟ್‌ಫೋನ್ 2,699 ಸಿಎನ್‌ವೈ (ಸರಿಸುಮಾರು ರೂ. 28,600)ಗಳಾಗಿವೆ.

Best Mobiles in India

English summary
Xiaomi CEO Lei Jun announced that the Mi 8 smartphone has sold over 6 million units since its launch. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+