ಭಾರತದಲ್ಲಿ 'ರೆಡ್‌ಮಿ ಕೆ 20 ಪ್ರೊ' ಬಿಡುಗಡೆಯಾಗುವ ಸಮಯ ಫಿಕ್ಸ್!

|

ಶಿಯೋಮಿಯ ನೂತನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ 'ರೆಡ್‌ಮಿ ಕೆ 20 ಪ್ರೊ' ಭಾರತದಲ್ಲಿ ಬಿಡುಗಡೆಯಾಗುವ ಸಮಯ ನಿಗದಿಯಾಗಿದೆ. 'ವಿಶ್ವದ ಅತಿ ವೇಗದ ಫೋನ್' ಎಂದು ಕರೆದು ಇತ್ತೀಚಿಗಷ್ಟೇ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಿದ್ದ 'ರೆಡ್‌ಮಿ', ಜುಲೈ ತಿಂಗಳ ಮಧ್ಯಂತರದಲ್ಲಿ 'ರೆಡ್‌ಮಿಕೆ 20 ಪ್ರೊ' ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಇದೀಗ ನೀಡಿದೆ.

ಭಾರತದಲ್ಲಿ 'ರೆಡ್‌ಮಿ ಕೆ 20 ಪ್ರೊ' ಬಿಡುಗಡೆಯಾಗುವ ಸಮಯ ಫಿಕ್ಸ್!

ಹೌದು, ದೇಶಕ್ಕೆ ರೆಡ್ಮಿ ಕೆ 20 ಪ್ರೊ ಆಗಮನಕ್ಕಾಗಿ ಶಿಯೋಮಿ ಇಂಡಿಯಾ ಮಿ ಎಕ್ಸ್‌ಪ್ಲೋರರ್ಸ್ ಕಾರ್ಯಕ್ರಮವನ್ನು ಸಹ ಆಯೋಜಿಸಿದ್ದು, ಇದಕ್ಕಾಗಿ 48 ಜನರನ್ನು ಆಯ್ದುಕೊಳ್ಳಲು ಮುಂದಾಗಿದೆ. ರೆಡ್ಮಿ ಕೆ 20 ಪ್ರೊ ಸ್ಮಾರ್ಟ್‌ಫೋನಿನ ಬಗ್ಗೆ ವಿಶೇಷ ಅನುಭವ ಪಡೆಯುವ ಮೊದಲಿಗರಲ್ಲಿ ಒಬ್ಬರಾಗಲು ಬಯಸುವ ಅಭಿಮಾನಿಗಳನ್ನು ಈ ಕಾರ್ಯಕ್ರಮವು ಉದ್ದೇಶಿಸಿದೆ.

ಆಕ್ಟಾ-ಕೋರ್ ರ್ಸ್ನ್ಯಾಪ್‌ಡ್ರಾಗನ್ 855 SoC ಪ್ರೊಸೆಸರ್ ಮತ್ತು 8GB RAM ಹೊಂದಿರುವ ಈ ಫೋನ್ ಒನ್‌ಪ್ಲಸ್ 7 ಪ್ರೊ ವಿರುದ್ಧ ಪಾಪ್-ಅಪ್ ಸೆಲ್ಫಿ ಕ್ಯಾಮೆರಾ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ನೊಂದಿಗೆ ಸ್ಪರ್ಧಿಸುತ್ತಿದೆ. ಹಾಗಾದರೆ, ಇತ್ತೀಚಿಗಷ್ಟೆ ಕಾಲಿಟ್ಟಿರುವ ' ಕೆ20 ಪ್ರೊ' ಫೋನ್ ಹೇಗಿದೆ?, ಫೀಚರ್ಸ್ ಯಾವುವು? ಎಂಬುದನ್ನು ಮುಂದೆ ಓದಿ ತಿಳಿಯಿರಿ.

6.39-ಇಂಚಿನ AMOLED ಡಿಸ್‌ಪ್ಲೇ

ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 19.5:9 ಆಕಾರ ಅನುಪಾತದೊಂದಿಗೆ 6.39-ಇಂಚಿನ AMOLED ಪ್ರದರ್ಶನವನ್ನು ಹೊಂದಿದೆ. 2340 x 1080 ಪಿಕ್ಸೆಲ್‌ಗಳ ಎಫ್‌ಹೆಚ್‌ಡಿ + ರೆಸೊಲ್ಯೂಷನ್ ಸಾಮರ್ಥ್ಯದಲ್ಲಿ ಬಂದಿರುವ ಡಿಸ್ಪ್ಲೇಯು ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಇನ್ನು 7ನೇ ಪೀಳಿಗೆಯ ಇನ್ ಡಿಸ್‌ಪ್ಲೇ ಫಿಂಗರ್ಪ್ರಿಂಟ್ ಸಂವೇದಕದಿಂದ ಸಂಯೋಜಿಸಲ್ಪಟ್ಟಿದೆ.

ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್

ರೆಡ್‌ಮಿ ಕೆ20 ಪ್ರೊ ರೂಪಾಂತದ ಸ್ಮಾರ್ಟ್‌ಫೋನ್ 8GB RAM ನೋಂದಿಗೆ ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್ ಅನ್ನು ಹೊಂದಿದೆ. 256GB ವರೆಗಿನ ಆಂತರಿಕ ಸಂಗ್ರಹಣೆ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಪೋನ್ ಮೆಮೊರಿ ವಿಸ್ತರಣೆಗೆ ಯಾವುದೇ ಅವಕಾಶವನ್ನು ಹೊಂದಿರುವುದಿಲ್ಲ. ಇನ್ನು ಇತ್ತೀಚಿನ MIUI 10 ಆಂಡ್ರಾಯ್ಡ್ 9 ಪೈ ರೊಂದಿಗೆ ಫೋನ್ ರನ್ ಆಗಲಿದೆ.

4,000mAh ಬ್ಯಾಟರಿ

ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 4,000mAhನಷ್ಟು ಬಲಿಷ್ಟ ಬ್ಯಾಟರಿ ಶಕ್ತಿಯನ್ನು ಇದು ಹೊಂದಿದೆ. ಡಿವೈಸ್ 27W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ. ಈ ಪೋನಿನಲ್ಲಿ ದೀರ್ಘಾವಧಿಯ 2 ದಿನದ ಬ್ಯಾಟರಿ ಅವಧಿಯನ್ನು ವಿಸ್ತರಿಸುವ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವುದಾಗಿ ಕಂಪೆನಿ ಹೇಳಿಕೊಂಡಿದ್ದು, ಪ್ರೀಮಿಯಂ ಬ್ಯಾಟರಿ ತಂತ್ರಜ್ಞಾನ ಇದಾಗಿದೆ.

ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ!

ರೆಡ್ಮಿ ಕೆ20 ಪ್ರೊನಲ್ಲಿ (ಪೊಕೊ ಫೋನ್ 2 ) 32 ಎಂಪಿ ಪಾಪ್-ಅಪ್ ಸೆಲ್ಫೀ ಕ್ಯಾಮರಾ ವ್ಯವಸ್ಥೆ ಇರುವ ವದಂತಿಗಳು ಖಚಿತವಾಗಿದೆ. ಫೋನಿನಲ್ಲಿ ಟ್ರಿಪಲ್ ಲೆನ್ಸ್ ಸೆಟಪ್ ಹಿಂಭಾಗದಲ್ಲಿದ್ದು 48ಎಂಪಿ ಪ್ರೈಮರಿ ಸೆನ್ಸರ್, 8ಎಂಪಿ ಡೆಪ್ತ್ ಸೆನ್ಸರ್ ಹಾಗೂ ವೈಡ್ ಆಂಗಲ್‌ಗೆ ಸಹಕಾರಿಯಾಗುವಂತಹ ಕ್ಯಾಮೆರಾ ಅಳವಡಿಸಲಾಗಿದೆ. ಸುಧಾರಿತ ಕ್ಯಾಮೆರಾ ತಂತ್ರಜ್ಞಾನಗಳು ಇರಲಿವೆ.

ಇತರೆ ಎಲ್ಲಾ ಫೀಚರ್ಸ್

ರೆಡ್ಮಿ ಕೆ20 ಪ್ರೊ ಫೋನಿನಲ್ಲಿ ಡ್ಯುಯಲ್-ಎಲ್ಇಡಿ ಫ್ಲ್ಯಾಷ್, AI ದೃಶ್ಯ ಗುರುತಿಸುವಿಕೆ, ಸೂಪರ್ ನೈಟ್ ಇಮೇಜ್ ಮೋಡ್ ಮತ್ತು 960fps ನಿಧಾನ-ಚಲನೆಯ ವೀಡಿಯೊ ರೆಕಾರ್ಡಿಂಗ್ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿದೆ. ಇನ್ನು ಬ್ಲೂಟೂತ್ 5.0, ಎನ್ಎಫ್ಸಿ, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಆಯ್ಕೆಗಳನ್ನು ನಾವು ನೋಡಬಹುದು.

ಬೆಲೆಗಳು ಎಷ್ಟು?

ರೆಡ್‌ಮಿ ಕೆ ಪ್ರೊ ಮೂರು ಮಾದರಿಗಳಲ್ಲಿ ಲಭ್ಯವಿದ್ದು, ಬೆಲೆಗಳು ಇಂತಿವೆ. 6 ಜಿಬಿ RAM + 128 ಜಿಬಿ ಮೆಮೊರಿ- 2,599 ಯುವಾನ್ (ಅಂದಾಜು ರೂ. 26,000), 8 ಜಿಬಿ RAM + 128 ಜಿಬಿ ಮೆಮೊರಿ- 2,799 ಯುವಾನ್ (ಅಂದಾಜು ರೂ. ರೂ. 28,000), ಹಾಗೂ 8 ಜಿಬಿ RAM + 256 ಜಿಬಿ ಮೆಮೊರಿ- 2,999 ಯುವಾನ್ (ಸುಮಾರು ರೂ 30,000) ರೂ.ಗಳಾಗಿವೆ.

Most Read Articles
Best Mobiles in India

English summary
The company is looking for 48 people to explore the upcoming flagship that will arrive mid-July. These people will complete missions and gather points, and eventually report back on the performance of the new phone.to know more visit to kannada.gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more