Subscribe to Gizbot

ಶಿಯೋಮಿ ಆದಾಯಕ್ಕೆ ಮೊಬೈಲ್ ಜಗತ್ತು ಸುಸ್ತು!..ಅಭಿಮಾನಿಗಳಿಗೆ ಕಂಪೆನಿಯಿಂದ ಭಾರಿ ಗಿಫ್ಟ್!!

Written By:

ಭಾರತದ ಮೊಬೈಲ್ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವ ಶಿಯೋಮಿ ಇಂಡಿಯಾ ಕಂಪೆನಿಯ ವಾರ್ಷಿಕ ಆದಾಯವನ್ನು ಪ್ರಕಟಿಸಿದೆ.! ಈ ವರ್ಷದ ಕ್ಯಾಲೆಂಡರ್‌ನಲ್ಲಿ ಶಿಯೋಮಿ 2(12,000 ಕೋಟಿ) ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಹಣವನ್ನು ಗಳಿಸಿದೆ ಎಂದು ಶಿಯೋಮಿ ಇಂಡಿಯಾದ ಅಧ್ಯಕ್ಷ ಮನುಕುಮಾರ್ ಜೈನ್ ಅವರು ತಿಳಿಸಿದ್ದಾರೆ.!!

ಶಿಯೋಮಿ ಆದಾಯಕ್ಕೆ ಮೊಬೈಲ್ ಜಗತ್ತು ಸುಸ್ತು!!

ಕೇವಲ ಒಂದೇ ತಿಂಗಳಿನಲ್ಲಿ 40 ಲಕ್ಷಕ್ಕೂ ಹೆಚ್ಚು ಶಿಯೋಮಿ ಸ್ಮಾರ್ಟ್‌ಫೋನ್‌ಗಳ ದಾಖಲೆ ಮಾರಾಟವಾಗಿದ್ದು, ಈ ವರ್ಷ ಆನ್ಲೈನ್ ಮಾರಾಟದಲ್ಲಿ ಶೇ 50 ರಷ್ಟು ಪಾಲು ಮತ್ತು ಒಟ್ಟಾರೆ ಮಾರುಕಟ್ಟೆಯಲ್ಲಿ 23.5% ರಷ್ಟು ಪಾಲು ಹೊಂದಿದ್ದೇವೆ. ಮೊಬೈಲ್ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿರಲು ಶಿಯೋಮಿ ಸಿದ್ದವಾಗಿದೆ ಎಂದು ಮನುಕುಮಾರ್ ಜೈನ್ ಹೇಳಿದ್ದಾರೆ.!!

ಶಿಯೋಮಿ ಆದಾಯಕ್ಕೆ ಮೊಬೈಲ್ ಜಗತ್ತು ಸುಸ್ತು!!

ಇದೇ ವೇಳೆ ಆಫ್‌ಲೈನ್ ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಶಿಯೋಮಿಯ ಭವಿಷ್ಯದ ಯೋಜನೆಗಳನ್ನು ಜೈನ್ ಅವರು ಪ್ರಕಟಿಸಿದ್ದು, ಹಾಗಾದರೆ, ಶಿಯೋಮಿ ಹೊರತರುವ ಮುಂದಿನ ಯೋಜನೆಗಳೇನು? ಭವಿಷ್ಯದಲ್ಲಿ ಶಿಯೋಮಿ ಏನೆಲ್ಲಾ ಸೇವೆಗಳನ್ನು ನೀಡಲಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ಮೊಬೈಲ್‌ಗಳ ಬೆಲೆ ಏರಿಕೆ ಇಲ್ಲ!!

ಶಿಯೋಮಿ ಮೊಬೈಲ್‌ಗಳ ಬೆಲೆ ಏರಿಕೆ ಇಲ್ಲ!!

ಕಳೆದ ವಾರ ಸರ್ಕಾರ ಆಮದು ತೆರಿಗೆಯನ್ನು 15% ಗೆ ಹೆಚ್ಚಿಸಿದ ನಂತರ ಸ್ಮಾರ್ಟ್ಫೋನ್ ಬೆಲೆಗಳು ಹೆಚ್ಚಾಗುತ್ತವೆ ಎನ್ನಲಾಗಿತ್ತು. ಆದರೆ, ನಮ್ಮ ಸ್ಮಾರ್ಟ್ಫೋನ್‌ಗಳಲ್ಲಿ ಸುಮಾರು 95% ರಷ್ಟು ಭಾರತದಲ್ಲಿ ತಯಾರಿಸಲಾಗುತ್ತದೆ. ಹಾಗಾಗಿ, ನಾವು ಅದೇ ಬೆಲೆಯಲ್ಲಿ ಫೋನ್‌ಗಳನ್ನು ಮಾರಾಟ ಮಾಡುವುದಾಗಿ ಜೈನ್ ಹೇಳಿದ್ದಾರೆ.!!

ಶಿಯೋಮಿ ಪೇಮೆಂಟ್ ಬ್ಯಾಂಕ್!!

ಶಿಯೋಮಿ ಪೇಮೆಂಟ್ ಬ್ಯಾಂಕ್!!

ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿರುವ ಶಿಯೋಮಿ ಭಾರತದಲ್ಲಿ ಪೇಮೆಂಟ್ ಬ್ಯಾಂಕ್ ತೆರೆಯುವ ಉದ್ದೇಶದಲ್ಲಿದೆ.! ಏರ್‌ಟೆಲ್ ಸೇರಿದಂತೆ ಹಲವು ಖಾಸಾಗಿ ಕಂಪೆನಿಗಳು ಈಗಾಗಲೇ ಪೇಮೆಂಟ್ ಬ್ಯಾಂಕ್ ತೆರೆದಿದ್ದು, ಶಿಯೋಮಿ ಪೇಮೆಂಟ್ ಬ್ಯಾಂಕ್ ಶೀಘ್ರದಲ್ಲಿಯೇ ಬರಲಿದೆ.!!

ಆಫ್‌ಲೈನ್ ಮಾರುಕಟ್ಟೆ ವಿಸ್ತರಣೆ!!

ಆಫ್‌ಲೈನ್ ಮಾರುಕಟ್ಟೆ ವಿಸ್ತರಣೆ!!

ಆನ್‌ಲೈನ್ ಮಾರುಕಟ್ಟೆಯಲ್ಲಿ ರಾಜಮನಾಗಿ ಮೆರೆಯುತ್ತಿರುವ ಶಿಯೋಮಿ ಈ ವರ್ಷ ಆಫ್‌ಲೈನ್ ಮಾರುಕಟ್ಟೆಗೆ ಹೆಚ್ಚು ಒತ್ತು ನೀಡಲು ಮುಂದಾಗಿದೆ. ದೇಶದಾಧ್ಯಂತ 1000 ಕ್ಕೂ ಹೆಚ್ಚು " ಮಿ ಹೋಮ್‌" ಗಳನ್ನು ಸ್ಥಾಪಿಸುವ ಗುರಿಯನ್ನು ಶಿಯೋಮಿ ಹೊಂದಿದ್ದು, ಮುಂದಿನ ವರ್ಷದ ಒಳಗಾಗಿ ಈ ಕಾರ್ಯ ಮುಗಿಯಲಿದೆ ಎಂದು ಶಿಯೋಮಿ ತಿಳಿಸಿದೆ.!!

ಶಿಯೋಮಿ ಸ್ಮಾರ್ಟ್‌ ಟಿವಿ!!

ಶಿಯೋಮಿ ಸ್ಮಾರ್ಟ್‌ ಟಿವಿ!!

ಸ್ಮಾರ್ಟ್ಫೋನ್ ಮಾರಾಟದಲ್ಲಿ ಈಗಾಗಲೇ ಉತ್ತುಂಗಕ್ಕೇರಿರುವ ಶಿಯೋಮಿ ಬಾರತದಲ್ಲಿ ಸ್ಮಾರ್ಟ್ ಟಿವಿಗಳನ್ನು ಪರಿಚಯಿಸುತ್ತಿದೆ. 2018 ರಲ್ಲಿ ಶಿಯೋಮಿಯ ಸ್ಮಾರ್ಟ್‌ಟಿವಿಗಳು ಮೊಬೈಲ್ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿವೆ ಎಂದು ಶಿಯೋಮಿ ಹೇಳಿಕೊಂಡಿದೆ.!!

ಎಲೆಕ್ಟ್ರಿಕ್ ವಾಹನಗಳು!!

ಎಲೆಕ್ಟ್ರಿಕ್ ವಾಹನಗಳು!!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಕಡಿಮೆ ಇರುವುದರಿಂದ ಶಿಯೋಮಿ ಎಲೆಕ್ಟ್ರಿಕ್ ವಾಹನಗನ್ನು ಭಾರತದಲ್ಲಿ ಮಾರಾಟ ಮಾಡಲು ಮುಂದಾಗುತ್ತಿದೆ. ಅತ್ಯಂತ ಕಡಿಮೆ ಬೆಲೆಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುವ ಗುರಿಯನ್ನು ಶಿಯೋಮಿ ಹೊಂದಿದೆ ಎಂದು ಶಿಯೋಮಿ ವಕ್ತಾರರು ಹೇಳಿದ್ದಾರೆ.!!

ಓದಿರಿ:ಒಂದು ಲೀಟರ್ ನೀರಿಗೆ 498.8 ಕಿ.ಮೀ ಓಡುವ ಬೈಕ್!!..ವಿಡಿಯೋ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi India is going to exceed the $2-billion revenue mark this calendar year and is confident of maintaining this tempo next year as well with its offline expansion
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot