ಲಾಂಚ್ ಆಯ್ತು 'ಶಿಯೋಮಿ ಬ್ಲಾಕ್‌ಶಾರ್ಕ್' ಮೊದಲ ಗೇಮಿಂಗ್ ಫೋನ್!.ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯ ಶುರು!!

ಶಿಯೋಮಿ ಕಂಪೆನಿ ಹೆಚ್ಚು ಹೂಡಿಕೆ ಮಾಡಿರುವ ಬ್ಲಾಕ್‌ಶಾರ್ಕ್ ಕಂಪೆನಿಯ ಭಾರೀ ನಿರೀಕ್ಷಿತ ಗೇಮಿಂಗ್ ಸ್ಮಾರ್ಟ್‌ಫೋನ್ "ಶಿಯೋಮಿ ಬ್ಲಾಕ್‌ಶಾರ್ಕ್" ಚೀನಾದಲ್ಲಿಂದು ಬಿಡುಗಡೆಯಾಗಿದೆ.!

|

ಶಿಯೋಮಿ ಕಂಪೆನಿ ಹೆಚ್ಚು ಹೂಡಿಕೆ ಮಾಡಿರುವ ಬ್ಲಾಕ್‌ಶಾರ್ಕ್ ಕಂಪೆನಿಯ ಭಾರೀ ನಿರೀಕ್ಷಿತ ಗೇಮಿಂಗ್ ಸ್ಮಾರ್ಟ್‌ಫೋನ್ "ಶಿಯೋಮಿ ಬ್ಲಾಕ್‌ಶಾರ್ಕ್" ಚೀನಾದಲ್ಲಿಂದು ಬಿಡುಗಡೆಯಾಗಿದೆ.! ಪ್ರಸ್ತುತ ಮೊಬೈಲ್ ಮಾರುಕಟ್ಟೆಯನ್ನೇ ಆಳುವಂತಹ ಫೀಚರ್ಸ್ ಹೊತ್ತು ಶಿಯೋಮಿಯ ಮೊದಲ ಗೇಮಿಂಗ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ.!!

ಒನ್‌ಪ್ಲಸ್ ಕಂಪೆನಿಗೆ ಸೆಡ್ಡುಹೊಡೆಯುವಂತಹ ಮೊದಲ ಶಿಯೋಮಿ ಸ್ಮಾರ್ಟ್‌ಫೋನ್ ಇದಾಗಿದ್ದು, 18:9 ಅನುಪಾತದ 5.99 ಇಂಚ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ , ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 ಪ್ರೊಸೆಸರ್ , ಅಡ್ರಿನೋ 630 ಜಿಪಿಯು ಮತ್ತು 6 ಅಥವಾ 8 ಜಿಬಿ RAMನಂತಹ ಫೀಚರ್ಸ್ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಶುರು ಮಾಡಲು ಮುಂದಾಗಿದೆ.

ಲಾಂಚ್ ಆಯ್ತು 'ಶಿಯೋಮಿ ಬ್ಲಾಕ್‌ಶಾರ್ಕ್' ಮೊದಲ ಗೇಮಿಂಗ್ ಸ್ಮಾರ್ಟ್‌ಫೋನ್!!

ಈವರೆಗೂ ಕೇವಲ ಬಜೆಟ್ ಸ್ಮಾರ್ಟ್‌ಪೋನ್ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದ್ದ ಶಿಯೋಮಿ ಕಂಪೆನಿ ಇದೆ ಮೊದಲ ಬಾರಿಗೆ ಗೇಮಿಂಗ್ ಮಾದರಿ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಈ ಮೂಲಕ ಆಪಲ್, ಸ್ಯಾಮ್‌ಸಂಗ್ ಮತ್ತು ಒನ್‌ಪ್ಲಸ್ ಕಂಪೆನಿಗಳಿಗೆ ಶಿಯೋಮಿ ಟಾಂಗ್ ನೀಡಿದ್ದು, ಹಾಗಾದರೆ, "ಶಿಯೋಮಿ ಬ್ಲಾಕ್‌ಶಾರ್ಕ್" ಸ್ಮಾರ್ಟ್‌ಫೋನ್ ಹೇಗಿದೆ? ಸ್ಮಾರ್ಟ್‌ಪೋನಿನ ವಿಶೇಷತೆಗಳೇನು? ಸ್ಮಾರ್ಟ್‌ಫೋನಿನ ಬೆಲೆ ಎಷ್ಟು? ಎಂಬೆಲ್ಲಾ ಮಾಹಿತಿಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ!

ಡಿಸ್‌ಪ್ಲೇ ಮತ್ತು ವಿನ್ಯಾಸ!

"ಶಿಯೋಮಿ ಬ್ಲಾಕ್‌ಶಾರ್ಕ್" ಸ್ಮಾರ್ಟ್‌ಫೋನ್ 18:9 ಅನುಪಾತದ 5.99 ಇಂಚ್ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಡಿಸ್‌ಪ್ಲೇ ಮೂಲಕ ಮಾರುಕಟ್ಟೆಗೆ ಕಾಲಿಟ್ಟಿದೆ. 161.6 x 75.4 x 9.25 ಮಿಮೀ ಆಯಾಮದ ಈ ಸ್ಮಾರ್ಟ್‌ಫೋನ್ ಫಿಂಗರ್ಪ್ರಿಂಟ್ ರೀಡರ್ ಫೀಚರ್ ಮತ್ತು ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿರುವ ವಿನ್ಯಾಸವಿದೆ.

ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

ಪ್ರಸ್ತುತ ಹೈ ಎಂಡ್ ಸ್ಮಾರ್ಟ್‌ಪೋನ್‌ಗಳಲ್ಲಿ ಮಾತ್ರವೇ ಬಳಕೆಯಾಗುತ್ತಿರುವ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 ಆಕ್ಟಾ-ಕೋರ್ ಪ್ರೊಸೆಸರ್ ಹಾಗೂ ಕ್ವಾಲ್ಕಾಮ್ ಅಡ್ರಿನೋ ಜಿಪಿಯು 630 ಅನ್ನು "ಶಿಯೋಮಿ ಬ್ಲಾಕ್‌ಶಾರ್ಕ್" ಸ್ಮಾರ್ಟ್‌ಫೋನ್ ಹೊಂದಿದೆ. 6/8 GB RAM ವೆರಿಯಂಟ್ ಹಾಗೂ 128GB ಮೆಮೊರಿ ಆವೃತ್ತಿಯಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.

ಡ್ಯುಯಲ್ ರಿಯರ್ ಕ್ಯಾಮೆರಾ!!

ಡ್ಯುಯಲ್ ರಿಯರ್ ಕ್ಯಾಮೆರಾ!!

ಎಫ್ / 1.75 ಅಪಾರ್ಚರ್‌ನೊಂದಿಗೆ 12 + 20 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮರಾ ಹೊಂದಿರುವ "ಶಿಯೋಮಿ ಬ್ಲಾಕ್‌ಶಾರ್ಕ್" ಸ್ಮಾರ್ಟ್‌ಫೋನ್ ಆಟೋಫೋಕಸ್ PDAF ಮತ್ತು ಡ್ಯುಯಲ್ ಎಲ್ಇಡಿ ಫ್ಲಾಶ್‌ಗಳನ್ನು ಹೊಂದಿದೆ. ಇನ್ನು ಎಫ್ / 2.0 ಅಪಾರ್ಚರ್‌ನ 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ.

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

ಇದೇ ಮೊದಲ ಬಾರಿಗೆ ಗೇಮಿಂಗ್ ಮಾದರಿಯ ಸ್ಮಾರ್ಟ್‌ಫೋನ್ ತಯಾರಿಸಿರುವ ಶಿಯೋಮಿ ಕಂಪೆನಿ, ತನ್ನ ಮೊದಲ ಗೇಮಿಂಗ್ ಸ್ಮಾರ್ಟ್‌ಪೋನಿನಲ್ಲಿ 4000 mAh ಶಕ್ತಿಯ ಬ್ಯಾಟರಿಯನ್ನು ಅಳವಡಿಸಿದೆ. ಕ್ವಿಕ್ ಚಾರ್ಜಿಂಗ್ 3.0 ಬ್ಯಾಟರಿ ತಂತ್ರಜ್ಞಾನವನ್ನು "ಶಿಯೋಮಿ ಬ್ಲಾಕ್‌ಶಾರ್ಕ್" ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಿಸಲಾಗಿದೆ.

How to read deleted WhatsApp messages - GIZBOT KANNADA
ಇತರೆ  ಫೀಚರ್ಸ್ ಮತ್ತು ಬೆಲೆ?

ಇತರೆ ಫೀಚರ್ಸ್ ಮತ್ತು ಬೆಲೆ?

"ಶಿಯೋಮಿ ಬ್ಲಾಕ್‌ಶಾರ್ಕ್" ಸ್ಮಾರ್ಟ್‌ಫೋನ್ ಫಿಂಗರ್ಪ್ರಿಂಟ್ ರೀಡರ್ ಮತ್ತು ಫೇಸ್‌ಲಾಕ್ ಫೀಚರ್, ಎಲ್ ಟಿಇ, ವೈ-ಫೈ ಎಕ್ ಡ್ಯೂಯಲ್ ಬ್ಯಾಂಡ್, ಬ್ಲೂಟೂತ್ 5.0, ಯುಎಸ್ಬಿ ಟೈಪ್-ಸಿ ಫೀಚರ್ಸ್‌ಗನ್ನು ಹೊಂದಿದೆ. 6GB RAM ಮತ್ತು 8 GB RAM ವೆರಿಯಂಟ್ ಸ್ಮಾರ್ಟ್‌ಪೋನ್‌ಗಳ ಬೆಲೆ ಕ್ರಮವಾಗಿ 31,306 ರೂ.ಹಾಗೂ 36,525 ರೂಪಾಯಿಗಳಾಗಿವೆ.

Best Mobiles in India

English summary
A few minutes ago the company just launched what we can consider as the first Xiaomi’s gaming mobile phone in China. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X