Home
ಮೊಬೈಲ್

Xiaomi Launch Event: ಇಂದು ಐದು ಅಚ್ಚರಿ.. 3 ಹೊಸ ಫೋನ್ ಬಿಡುಗಡೆ: ಇನ್ನೇನು?

ರೆಡ್ಮಿ ಅಭಿಮಾನಿಗಳಿಗೆ ಇಂದು ಸರ್ಪ್ರೈಸ್ ಗಿಫ್ಟ್ ಇದೆ. ಜೊತೆಗೆ, ಶಿಯೋಮಿ ಮೊಬೈಲ್‌ ಪ್ರಿಯರಿಗೂ ಭರ್ಜರಿ ಸಿಹಿ ಸುದ್ದಿ ಇದೆ. ಹೌದು, ಇಂದು ನಡೆಯುವ ಶಿಯೋಮಿ ಲಾಂಚ್‌ ಈವೆಂಟ್‌ನಲ್ಲಿ (Xiaomi Launch Event) ಐದು ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಈ ಪೈಕಿ ಶಿಯೋಮಿ ತನ್ನ ಉಪ-ಬ್ರಾಂಡ್ ರೆಡ್ಮಿ (Redmi) ಕಂಪನಿಯ Redmi K70 Ultra ಫೋನನ್ನು ಸಹ ಬಿಡುಗಡೆ ಮಾಡಲಿದೆ. ಮಾರುಕಟ್ಟೆಗೆ ಬರುವ ಮೊದಲೇ, Redmi K70 Ultra ಫೋನ್ ಭಾರೀ ಸದ್ದು ಮಾಡುತ್ತಿದೆ. ಹಾಗಿದ್ರೆ, Redmi K70 Ultra ಜೊತೆ ಇಂದು ಯಾವೆಲ್ಲಾ ಮೊಬೈಲ್‌ಗಳು ಬಿಡುಗಡೆ ಆಗಲಿವೆ? ಎನ್ನುವುದನ್ನು ತಿಳಿಯೋಣ ಬನ್ನಿ.

ಶಿಯೋಮಿ ತನ್ನ ಮೊದಲ ಫ್ಲಿಪ್ ಫೋಲ್ಡಬಲ್, ಮಿಕ್ಸ್ ಫ್ಲಿಪ್ ಅನ್ನು ಇಂದು ಚೀನಾದಲ್ಲಿ ಅನಾವರಣಗೊಳಿಸಲಿದೆ. Xiaomi Mix Fold 4 ಮತ್ತು Xioami Mix Flip ಜೊತೆಗೆ Xiaomi Smart Band 9, Xiaomi Watch S4 Sport ಮತ್ತು Redmi K70 Ultra ಫೋನನ್ನು ಬಿಡುಗಡೆ ಮಾಡಲಾಗುವುದು. ರೆಡ್ಮಿ ಕೆ 70 ಅಲ್ಟ್ರಾ ಮೊಬೈಲ್ ಉತ್ತಮ ಗುಣಮಟ್ಟದ ಫೀಚರ್ಸ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ. ಇದು 50MP ಕ್ಯಾಮೆರಾ, 5500mAh ಬ್ಯಾಟರಿ ಮತ್ತು ಹಲವು ವಿಶೇಷತೆಗಳನ್ನು ಹೊಂದಿದೆ. ಕಂಪನಿಯು ಮೊಬೈಲ್‌ನ 24GB RAM ಮಾದರಿಯನ್ನು ಪರಿಚಯಿಸಲಿದೆ.

Xiaomi Launch Event: ಇಂದು ಐದು ಅಚ್ಚರಿ.. 3 ಹೊಸ ಫೋನ್ ಲಾಂಚ್: ಇನ್ನೇನು?

ಭಾರತದಲ್ಲಿ Redmi K70 Ultra ಲಾಂಚ್ ಯಾವಾಗ?

ಶಿಯೋಮಿ ಲಾಂಚ್ ಈವೆಂಟ್‌ ಚೀನಾದಲ್ಲಿ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ. ಇದು ಭಾರತೀಯ ಕಾಲಮಾನ 4.30ಕ್ಕೆ ನಡೆಯಲಿದೆ. Redmi K70 ಅಲ್ಟ್ರಾ ಕೂಡ ಇದೇ ಸಮಯದಲ್ಲಿ ಫೋಲ್ಡಬಲ್ ಜೊತೆಗೆ ಲಾಂಚ್ ಆಗಲಿದೆ. ಫೋಲ್ಡಬಲ್‌ಗಳು ಮತ್ತು ರೆಡ್‌ಮಿ ಕೆ 70 ಅಲ್ಟ್ರಾ ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುತ್ತದೆಯೇ? ಎಂದು ಶೀಯೋಮಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಈ ಫೋನ್‌ನ ಹೊಸ ಆವೃತ್ತಿಯು ಜಾಗತಿಕವಾಗಿ Xiaomi 14T ಪ್ರೊ ಆಗಿ ಬಿಡುಗಡೆಯಾಗಬಹುದು.

Redmi K70 Ultra ಪೋನಿನ ವಿಶೇಷತೆಗಳೇನು?

ಡಿಸ್ಪ್ಲೇ: Redmi K70 Ultra ಫೋನ್ 144Hz ರಿಫ್ರೆಶ್ ದರದೊಂದಿಗೆ ಫ್ಲಾಟ್ 1.5K ರೆಸಲ್ಯೂಶನ್ OLED ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇಯ ನಿಖರವಾದ ಗಾತ್ರವನ್ನು ಖಚಿತಪಡಿಸಿಲ್ಲ. ಇದು 3840Hz PWM ಮಬ್ಬಾಗಿಸುವಿಕೆಯನ್ನು ಬಳಸುತ್ತದೆ. ಡಿಸ್ಲ್ಪೇಯು ಕಿರಿದಾದ ಬೆಜೆಲ್‌ಗಳನ್ನು ಪಡೆಯುತ್ತದೆ. ಇದು ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿ ಕಣ್ಣಿನ ರಕ್ಷಣೆಯನ್ನು ನೀಡುತ್ತದೆ.

ಪ್ರೊಸೆಸರ್: ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300+ ಚಿಪ್‌ಸೆಟ್ ಅನ್ನು ಹೊಂದಿರುವ ನಿರೀಕ್ಷೆಯಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದು ಉನ್ನತ ಮಟ್ಟದ 24GB RAM ಮತ್ತು 1TB ಸ್ಟೋರೇಜ್‌ ವೇರಿಯಂಟ್‌ ಅನ್ನು ಒಳಗೊಂಡಿರುತ್ತದೆ ಎಂದು ರೆಡ್ಮಿ ಜನರಲ್ ಮ್ಯಾನೇಜರ್ ಥಾಮಸ್ ವಾಂಗ್ ಖಚಿತಪಡಿಸಿದ್ದಾರೆ.

Xiaomi Launch Event: ಇಂದು ಐದು ಅಚ್ಚರಿ.. 3 ಹೊಸ ಫೋನ್ ಲಾಂಚ್: ಇನ್ನೇನು?

ಕ್ಯಾಮೆರಾ: ಇದು ಹಿಂಭಾಗದಲ್ಲಿ 50MP (ಸೋನಿ IMX906) ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ 8MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಇರುತ್ತದೆ. ವಿಶೇಷವೆಂದರೆ, ರೆಡ್ಮಿ ಕೆ70 ಅಲ್ಟ್ರಾಯು ಸ್ವಯಂ-ಅಭಿವೃದ್ಧಿಪಡಿಸಿದ AISP ಇಮೇಜಿಂಗ್ ಅಲ್ಗಾರಿದಮ್ ಅನ್ನು ಬಳಸಿದ ಮೊದಲ ರೆಡ್ಮಿ ಫೋನ್ ಆಗಿದೆ. ಈ ವಿಶೇಷ ಫೀಚರ್ಸ್‌ಗಳ ಮೂಲಕ, ಕಂಪನಿಯು ತನ್ನ ಕ್ಯಾಮೆರಾ ಕಾರ್ಯಕ್ಷಮತೆಯನ್ನು ಸುಧಾರಿಸಲು ಮುಂದಾಗಿದೆ.

ಬ್ಯಾಟರಿ: ರೆಡ್ಮಿ ಕೆ 70 ಅಲ್ಟ್ರಾ 5500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿರುವ ನಿರೀಕ್ಷೆಯಿದೆ. ಈ ಫೋನ್‌ 120W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡಲಿದೆ ಎಂದು ಖಚಿತಪಡಿಸಲಾಗಿದೆ. ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ಪ್ರಮಾಣೀಕರಣವನ್ನು ಸಹ ಹೊಂದಿದೆ.

ಇತರೆ ಫೀಚರ್ಸ್‌: ಈ ಫೋನಿನ ಮತ್ತೊಂದು ದೊಡ್ಡ ವಿಶೇಷತೆಯೆಂದರೆ, ಶಿಯೋಮಿನ Pengpai T1 ಸಿಗ್ನಲ್ ವರ್ಧನೆ ಚಿಪ್ ಅನ್ನು ಸೇರಿಸುವುದು. ಇದು ವೈಫೈ ಕಾರ್ಯಕ್ಷಮತೆಯಲ್ಲಿ 12% ಹೆಚ್ಚಳ, GPS ಕಾರ್ಯಕ್ಷಮತೆಯಲ್ಲಿ 20% ಸುಧಾರಣೆ ಮತ್ತು 5G ವೈಫೈ ಸಿಗ್ನಲ್ ಸಾಮರ್ಥ್ಯದಲ್ಲಿ 58% ಹೆಚ್ಚಳವನ್ನು ನೀಡುತ್ತದೆ ಎಂದು ಹೇಳಲಾಗಿದೆ.

Best Mobiles in India

English summary
Xiaomi Launch Event: Xiaomi Mix Fold 4, Mix Flip and Redmi K70 Ultra to launch in China on July 19th : what to expect.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+