Home
ಮೊಬೈಲ್

ಒನ್‌ಪ್ಲಸ್‌ 6 ಮಟ್ಟಹಾಕಲು ಶಿಯೋಮಿ ಹೊಸ ಅಸ್ತ್ರ: 'ಫೋಕೊ ಗೇಮಿಂಗ್ ಫೋನ್'...!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಶಿಯೋಮಿ, ಸಾಕಷ್ಟು ಹೊಸ ಹೊಸ ಪ್ರಯತ್ನಗಳಿಗೆ ಮುಂದಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಶಿಯೋಮಿ ಬಜೆಟ್ ಬೆಲೆಯ ಮತ್ತು ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿ ಯಶಸ್ಸು ಗಳಿಸಿಕೊಂಡಿದೆ. ಆದರೆ ಟಾಪ್ ಎಂಡ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಕೈ ಸುಟ್ಟುಕೊಂಡಿದೆ.

ಒನ್‌ಪ್ಲಸ್‌ 6 ಮಟ್ಟಹಾಕಲು ಶಿಯೋಮಿ ಹೊಸ ಅಸ್ತ್ರ: 'ಫೋಕೊ ಗೇಮಿಂಗ್ ಫೋನ್'...!

ಈ ಹಿನ್ನಲೆಯಲ್ಲಿ ಪ್ರೀಮಿಯಮ್ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬೇರೆ ರೀತಯಲ್ಲಿ ಬಿಡುಗಡೆ ಮಾಡಿ, ಈಗಾಗಲೇ ಬೆಸ್ಟ್ ಫೋನ್ ಎನ್ನಿಸಿಕೊಂಡಿರುವ ಒನ್‌ಪ್ಲಸ್ 6 ಗೆ ಸೆಡ್ಡು ಹೊಡೆಯುವ ಗುರಿ ಇಟ್ಟುಕೊಂಡಿದೆ. ಇದಕ್ಕಾಗಿ ಈ ಬಾರಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ತನ್ನ ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಪ್ರೀಮಿಯಮ್ ಗೇಮಿಂಗ್ ಸ್ಮಾರ್ಟ್‌ಫೋನ್‌ವೊಂದನ್ನು ಲಾಂಚ್ ಮಾಡಲು ಮಂದಾಗಿದೆ. ಈ ಕುರಿತು ಯೋಜನೆಯನ್ನು ತಯಾರಿಸುತ್ತಿದೆ ಎನ್ನಲಾಗಿದೆ.

ಪೋಕೊ ಫೋನ್:

ಶಿಯೋಮಿ ಭಾರತದಲ್ಲಿ ತನ್ನ ಸ್ಮಾರ್ಟ್‌ಫೋನ್‌ಗಳನ್ನು Mi ಬ್ರಾಂಡಿನ ಅಡಿಯಲ್ಲಿ ಲಾಂಚ್ ಮಾಡುತ್ತಿದೆ. ರೆಡ್‌ಮಿ, ಮಿ ಮತ್ತು ಮಿಕ್ಸ್ ಹೆಸರುಗಳ ಸ್ಮಾರ್ಟ್‌ಫೋನ್‌ಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ. ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಅವುಗಳ ವರ್ಗವನ್ನು ಗುರುತಿಸಲಿದ್ದು, ಇದೇ ಮಾದರಿಯಲ್ಲಿ ಗೇಮಿಂಗ್ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಜ್ನು ಪೋಕೊ ಫೋನ್ ಹೆಸರಿನಲ್ಲಿ ಲಾಂಚ್ ಮಾಡಲಿದೆ.

ಪೋಕೊ ಫೋನ್ F1:

ಪೋಕೊ ಫೋನ್ F1:

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಗೇಮಿಂಗ್ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಮೊದಲ ಭಾರಿಗೆ ಮಾರುಕಟ್ಟೆಯಲ್ಲಿ ಗೇಮಿಂಗ್ ಸ್ಮಾರ್ಟ್‌ಫೋನ್‌ ವೊಂದನ್ನು ಸಾಕಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲು ಶಿಯೋಮಿ ಪೋನ್ F1 ಅನ್ನು ಲಾಂಚ್ ಮಾಡಲು ಮುಂದಾಗಿದೆ.

ಪೋಕೊ ಫೋನ್ F1 ವಿಶೇಷತೆ:

ಪೋಕೊ ಫೋನ್ F1 ವಿಶೇಷತೆ:

ಪೋಕೊ ಫೋನ್ F1 ಕುರಿತಂತೆ ಸಾಕಷ್ಟು ರೂಮರ್‌ಗಳು ಹರಿದಾಡುತ್ತಿದೆ. ಆದರೆ ಈ ಸ್ಮಾರ್ಟ್‌ಫೋನ್ ನಿರ್ಮಾಣದ ಬಗ್ಗೆ ಮಾತ್ರವೇ ಮಾಹಿತಿ ನೀಡಿರುವ ಶಿಯೋಮಿ, ವಿಶೇಷತೆಗಳ ಕುರಿತು ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ. ಆದರೆ ಮೂಲಗಳು ನೀಡಿರುವ ಮಾಹಿತಿ ಅನ್ವಯ 18:9 ಅನುಪಾತದ 6.3 ಇಂಚಿನ ಡಿಸ್‌ಪ್ಲೇಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಪೋಕೊ ಫೋನ್ F1 ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನೀಲಾಗಿದ್ದು, ಐಫೋನ್ X ಮಾದರಿಯಲ್ಲಿ 12MP ಮತ್ತು 5MP ಡ್ಯುಯಲ್ ಕ್ಯಾಮೆರಾಗಳನ್ನು ಕಾಣಬಹುದಾಗಿದೆ. ಇದರ ವಿನ್ಯಾಸ ಉತ್ತಮವಾಗಿದ್ದು, ಪ್ರೀಮಿಯಮ್ ಫೋನ್‌ ಮಾದರಿಯಲ್ಲಿ ಇದೆ. ಅಲ್ಲದೇ ಇದಕ್ಕಾಗಿ ಬಳಕೆ ಮಾಡಿರುವ ವಸ್ತುಗಳು ಸಹ ಪ್ರೀಮಿಯಮ್ ಆಗಿವೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಪೋಕೊ ಫೋನ್ F1 ಗೇಮರ್ ಗಳಿಗಾಗಿಯೇ ಲಾಂಚ್ ಮಾಡುತ್ತಿರುವ ಫೋನ್‌ ಆಗಿರುವುದರಿಂದಾಗಿ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಪ್ರೊಸೆಸರ್ ಆಗಿರುವ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 SOC ಪ್ರೊಸೆಸರ್ ಅಳವಡಿಸಿದೆ. ಇದರೊಂದಿಗೆ 6 GB RAM ಮತ್ತು 64 GB / 128 GB ಇಂಟರ್ನಲ್ ಮೆಮೊರಿಯೊಂದಿಗೆ ಈ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ.

ಬೆಸ್ಟ್ ಕ್ಯಾಮೆರಾ:

ಬೆಸ್ಟ್ ಕ್ಯಾಮೆರಾ:

ಪೋಕೊ ಫೋನ್ F1 ಸ್ಮಾರ್ಟ್‌ಫೋನಿನಲ್ಲಿ ಸೆಲ್ಫಿ ಕ್ಯಾಮೆರಾಗೆ ಹೆಚ್ಚು ಒತ್ತನ್ನು ನೀಡಲಾಗಿದ್ದು 20MP ಕ್ಯಾಮೆರಾ ನೀಡಲಾಗಿದೆ. ಕ್ಯಾಮರಾ ತಂತ್ರಜ್ಞಾನವೆ ಹೆಚ್ಚು ವಿಶೇಷ ಎಂದು ಶಿಯೋಮಿ ಮೂಲಗಳು ತಿಳಿಸಿವೆ. ಇದಕ್ಕಾಗಿಯೇ ಹೆಚ್ಚುವರಿ ಸೆನ್ಸಾರ್ ಅನ್ನು ಇದರಲ್ಲಿ ಅಳವಡಿಸಿದೆ.

ಆಂಡ್ರಾಯ್ಡ್ ಒರಿಯೋ:

ಆಂಡ್ರಾಯ್ಡ್ ಒರಿಯೋ:

ಇದಲ್ಲದೇ ಪೋಕೊ ಫೋನ್ F1 ಸ್ಮಾರ್ಟ್‌ಫೋನಿನಲ್ಲಿ ಆಂಡ್ರಾಯ್ಡ್ ಒರಿಯೋವನ್ನು ನೀಡಲಾಗಿದ್ದು, ಇರೊಂದಿಗೆ MIUI ಅನ್ನು ಕಾಣಬಹುದು. ಇದಲ್ಲದೇ ಗೇಮರ್ ಗಳಿಗೆ ಸಹಾಯವಾಗುವ ಸಲುವಾಗಿ ಹೆಚ್ಚುವರಿ ಆಯ್ಕೆಗಳನ್ನು ಇರೊಂದಿಗೆ ನೀಡುವ ಸಾಧ್ಯತೆಯೂ ಇದೆ.

ಒನ್‌ಪ್ಲಸ್ ಗುರಿ:

ಒನ್‌ಪ್ಲಸ್ ಗುರಿ:

ಪೋಕೊ ಫೋನ್ F1 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿರುವುದು ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಹಿಡಿದುಕೊಂಡಿರುವ ಅಭಿಮಾನಿಗಳನ್ನು ತನ್ನ ಕಡೆಗೆ ಒಲಿಸಿಕೊಳ್ಳಲು ಎನ್ನಲಾಗಿದೆ. ಕೇವಲ ರೂ.30000ಕ್ಕೆ ಮಾರಾಟವಾಗುವ ಪೋಕೊ ಫೋನ್ F1 ಸ್ಮಾರ್ಟ್‌ಫೋನ್ ಅತ್ಯಂತ ವೇಗವಾಗಿ ಮತ್ತು ಸುಲಭವಾಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

Best Mobiles in India

English summary
Xiaomi to launch a new smartphone series (POCO) in India: Pocophone F1 expected. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+