Home
ಮೊಬೈಲ್

ಒನ್‌ಪ್ಲಸ್ ನಿದ್ದೆಗೆಡಿಸಿರುವ ಪೊಕೊಫೋನ್ ನಾಳೆ ಲಾಂಚ್: ಬಿಡುಗಡೆಗೆ ಮುಂಚೆಯೇ ಬೇಡಿಕೆ..!

By Srinidhi

ಭಾರತೀಯ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿರುವ ಶಿಯೋಮಿ, ಇದಕ್ಕಾಗಿ ಹೊಸದೊಂದು ಬ್ರಾಂಡ್ ಅನ್ನು ಪರಿಚಯ ಮಾಡಲಿದೆ. ಆಗಸ್ಟ್ 22 ರಂದು ಭಾರತೀಯ ಮಾರುಕಟ್ಟೆಯಲ್ಲಿ ಪೊಕೊ ಬ್ರಾಂಡ್ ಅನ್ನು ಲಾಂಚ್ ಮಾಡಲಿದ್ದು, ಅಂದೇ ಮೊದಲ ಸ್ಮಾರ್ಟ್‌ಫೋನ್ ಪೊಕೊ ಪೋನ್ F1 ಅನ್ನು ಬಿಡುಗಡೆ ಮಾಡಲಿದೆ. ಈ ಪೊಕೊ ಸ್ಮಾರ್ಟ್‌ಫೋನ್ ಲಾಂಚ್‌ ಅನ್ನು ಮಾರುಕಟ್ಟೆಯೇ ಎದುರು ನೋಡುತ್ತಿದೆ.

ಒನ್‌ಪ್ಲಸ್ ನಿದ್ದೆಗೆಡಿಸಿರುವ ಪೊಕೊಫೋನ್ ನಾಳೆ ಲಾಂಚ್..!

ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಬಜೆಟ್ ಬೆಲೆಯ ಮತ್ತು ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿ ಯಶಸ್ಸು ಗಳಿಸಿಕೊಂಡಿರುವ ಶಿಯೋಮಿಗೆ ಟಾಪ್‌ ಎಂಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯೂ ಕೈಗೆ ಸಿಗದ ಹುಳಿ ದ್ರಾಕ್ಷಿಯಾಗಿದೆ. ಅದನ್ನು ಹೇಗಾದ್ರೂ ಪಡೆಯಲೇ ಬೇಕು ಎನ್ನುವ ಕಾರಣಕ್ಕಾಗಿ ಪೊಕೊ ಪೋನ್ ಅನ್ನು ಹೊಸದಾಗಿ ಲಾಂಚ್ ಮಾಡಲಿದೆ. ಈ ಬಾರಿ ಒನ್‌ಪ್ಲಸ್ ಮಾರಾಟ ತಂತ್ರವನ್ನು ಅನುಸರಿಸಲಿದೆ ಎನ್ನಲಾಗಿದೆ.

ನಾಳೆಯ ಲಾಂಚ್:

ನಾಳೆಯ ಲಾಂಚ್:

ಭಾರತೀಯ ಮಾರುಕಟ್ಟೆಯಲ್ಲಿ ಗೇಮರ್‌ಗಳ ಬಳಕೆಗಾಗಿಯೇ ಶಿಯೋಮಿ ಪೊಕೊ ಬ್ರಾಂಡ್ ಹುಟ್ಟಿಹಾಕಿದೆ. ಸದ್ಯ ಆಗಸ್ಟ್ 22 ರಂದು ಮಾರುಕಟ್ಟೆಗೆ ಪೊಕೊಫೋನ್ F1 ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಇದರ ಆಡ್‌ಗಳು ಇನ್ನು ಹೆಚ್ಚಿನ ಸದ್ದು ಮಾಡುತ್ತಿವೆ, ನೇರವಾಗಿ ಒನ್‌ಪ್ಲಸ್‌ಗೆ ಸೆಡ್ಡು ಹೊಡೆಯುವಂತೆ ಇದೆ.

ಮೊದಲ ಗೇಮಿಂಗ್ ಫೋನ್:

ಮೊದಲ ಗೇಮಿಂಗ್ ಫೋನ್:

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಗೇಮಿಂಗ್ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಗೇಮಿಂಗ್ ಸ್ಮಾರ್ಟ್‌ಫೋನ್‌ ವೊಂದನ್ನು ಶಿಯೋಮಿ ಪೊಕೊ ಪೋನ್ F1 ಹೆಸರಿನಲ್ಲಿ ಲಾಂಚ್ ಮಾಡಲಿದೆ.

ಕೈಗೆಟುಕುವ ದರದಲ್ಲಿ:

ಕೈಗೆಟುಕುವ ದರದಲ್ಲಿ:

ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆ ತೋರಿಸಿಕೊಡಲಿದರುವ ಪೊಕೊಫೋನ್ F1 ಸ್ಮಾರ್ಟ್‌ಫೋನ್‌ ಒನ್‌ಪ್ಲಸ್ 6 ಗೆ ಸೆಡ್ಡು ಹೊಡೆಯುವ ಗುರಿ ಇಟ್ಟುಕೊಂಡಿದೆ. ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಪ್ರೀಮಿಯಮ್ ಗೇಮಿಂಗ್ ಸ್ಮಾರ್ಟ್‌ಫೋನ್‌ವೊಂದನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಈ ಬಾರಿ ಹೊಸದೊಂದು ಯೋಜನೆ ರೂಪಿಸಿದೆ.

ರೂಮರ್ ಇಲ್ಲಿದೆ:

ರೂಮರ್ ಇಲ್ಲಿದೆ:

ಪೊಕೊ ಫೋನ್ F1 ಕುರಿತಂತೆ ಸಾಕಷ್ಟು ರೂಮರ್‌ಗಳು ಹರಿದಾಡುತ್ತಿದೆ. 18:9 ಅನುಪಾತದ 6.3 ಇಂಚಿನ ಡಿಸ್‌ಪ್ಲೇಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಗೇಮಿಂಗ್‌ ಗಾಗಿ ದೊಡ್ಡ ಡಿಸ್‌ಪ್ಲೇಯನ್ನು ನೀಡಿದೆ. ಇದಲ್ಲದೇ ವಿಡಿಯೋ ನೋಡವ ಅನುಭವನ್ನು ಉತ್ತಮಪಡಿಸಲಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಪೊಕೊ ಫೋನ್ F1 ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನೀಡಲಾಗಿದ್ದು, 12MP ಮತ್ತು 5MP ಡ್ಯುಯಲ್ ಕ್ಯಾಮೆರಾಗಳನ್ನು ಕಾಣಬಹುದಾಗಿದೆ. ಇದರ ವಿನ್ಯಾಸ ಉತ್ತಮವಾಗಿದ್ದು, ಪ್ರೀಮಿಯಮ್ ಫೋನ್‌ ಮಾದರಿಯಲ್ಲಿ ಇದೆ. ಅಲ್ಲದೇ ಇದಕ್ಕಾಗಿ ಬಳಕೆ ಮಾಡಿರುವ ವಸ್ತುಗಳು ಸಹ ಪ್ರೀಮಿಯಮ್ ಆಗಿವೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಪೊಕೊ ಫೋನ್ F1 ಗೇಮರ್ ಗಳಿಗಾಗಿಯೇ ಲಾಂಚ್ ಮಾಡುತ್ತಿರುವ ಫೋನ್‌ ಆಗಿರುವುದರಿಂದಾಗಿ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಪ್ರೊಸೆಸರ್ ಆಗಿರುವ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 SOC ಪ್ರೊಸೆಸರ್ ಅಳವಡಿಸಿದೆ. ಇದರೊಂದಿಗೆ 6 GB RAM ಮತ್ತು 64 GB / 128 GB ಇಂಟರ್ನಲ್ ಮೆಮೊರಿಯೊಂದಿಗೆ ಈ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ.

ಬೆಸ್ಟ್ ಸೆಲ್ಫಿ:

ಬೆಸ್ಟ್ ಸೆಲ್ಫಿ:

ಪೋಕೊ ಫೋನ್ F1 ಸ್ಮಾರ್ಟ್‌ಫೋನಿನಲ್ಲಿ ಸೆಲ್ಫಿ ಕ್ಯಾಮೆರಾಗೆ ಹೆಚ್ಚು ಒತ್ತನ್ನು ನೀಡಲಾಗಿದ್ದು 20MP ಕ್ಯಾಮೆರಾ ನೀಡಲಾಗಿದೆ. ಕ್ಯಾಮರಾ ತಂತ್ರಜ್ಞಾನವೆ ಹೆಚ್ಚು ವಿಶೇಷ ಎಂದು ಶಿಯೋಮಿ ಮೂಲಗಳು ತಿಳಿಸಿವೆ. ಇದಕ್ಕಾಗಿಯೇ ಹೆಚ್ಚುವರಿ ಸೆನ್ಸಾರ್ ಅನ್ನು ಇದರಲ್ಲಿ ಅಳವಡಿಸಿದೆ.

Best Mobiles in India

English summary
XIAOMI TO LAUNCH POCO F1 ON 22 AUG. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+