ಜೂನ್ 12ಕ್ಕೆ ಲಾಂಚ್ ಆಗಲಿದೆ ಶಿಯೋಮಿ ರೆಡ್ ಮಿ 6..!
ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಶಿಯೋಮಿ ತನ್ನ ಪೋನ್ ಗಳ ಬಿಡುಗಡೆಯ ಮಹಾಪರ್ವದಲ್ಲಿ ಇದೆ ಅಂತ ಅನ್ನಿಸುತ್ತೆ. ಒಂದಾದ ಮೇಲೆ ಒಂದರಂತೆ ಫೋನ್ ಗಳನ್ನು ಬಿಡುಗಡೆಗೊಳಿಸುತ್ತಲೇ ಇದೆ. ಇತ್ತೀಚೆಗಷ್ಟೇ Mi 8 ಬಿಡುಗಡೆಗೊಳಿಸಿದ್ದ ಕಂಪೆನಿ ಈಗ ಮತ್ತೊಂದು ಸ್ಮಾರ್ಟ್ ಫೋನ್ ಬಿಡುಗಡೆಗೆ ಸಿದ್ಧಗೊಂಡಿದೆ. ಮಧ್ಯಮ ವರ್ಗದವರಿಗೂ ಕೈ ಗೆಟುಕುವ ಬೆಲೆಯಲ್ಲಿ ಶಿಯೋಮಿ ರೆಡ್ಮಿ 6 ಫೋನ್ ನ್ನು ಜೂನ್ 12 ಕ್ಕೆ ಚೀನಾದಲ್ಲಿ ಬಿಡುಗಡೆಗೊಳಿಸುತ್ತಿದೆ.

ರೆಡ್ ಮಿ 5 ನ ಗೆಲುವಿನ ನಂತರ ಬರುತ್ತಿರುವ ಫೋನ್ ರೆಡ್ಮಿ 6. bezel-less ಡಿಸ್ಪ್ಲೇಯನ್ನು ಒಳಗೊಂಡು ಈ ಫೋನ್ ಬರಲಿದೆ ಎಂದು ಇತ್ತೀಚೆಗೆ TENNA ಮಾಧ್ಯಮ ವರದಿ ಹೇಳಿದೆ. 5.45-ಇಂಚಿನ HD+ ಡಿಸ್ಪ್ಲೇಯು 720x1440 ಪಿಕ್ಸಲ್ ರೆಸಲ್ಯೂಷನ್ ನಲ್ಲಿ ಇರಲಿದೆ.ಸ್ಕ್ರ್ಯಾಷ್ ರೆಸಿಸ್ಟೆನ್ಸ್ ಮತ್ತು ಗೋರಿಲ್ಲಾ ಗ್ಲಾಸ್ ನ್ನು ಮೊಬೈಲ್ ಟಾಪ್ ಹೊಂದಿರುತ್ತದೆ.
ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ಮುಖಾಂತರ ಮೊಬೈಲ್ ರನ್ ಆಗಲಿದ್ದು, ಆಕ್ಟಾ ಕೋರ್ ಪ್ರೊಸೆಸರ್ ಇರಲಿದ್ಯಂತೆ. ಮೂರು ವೇರಿಯಂಟ್ ನಲ್ಲಿ ಮೊಬೈಲ್ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. 2ಜಿಬಿ RAM ಮಚ್ಚು 16 ಜಿಬಿ ಸ್ಟೋರೇಜ್ ಕೆಪಾಸಿಟಿ ಮತ್ತು 3ಜಿಬಿ RAM ಮತ್ತು 32 ಜಿಬಿ ಸ್ಟೋರೇಜ್ ಕೆಪಾಸಿಟಿ, 4ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಕೆಪಾಸಿಟಿಯನ್ನು ಅವು ಹೊಂದಿರಲಿದೆ.

ಹಿಂಭಾಗದಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಇರಲಿದ್ದು ಒಂದು 12MP ಮಾಡ್ಯೂಲ್ ಮತ್ತು ಇನ್ನೊಂದು ಹೈ ಎಂಡ್ ವರ್ಷನ್ ನ್ನೇ ಒಳಗೊಂಡಿರುತ್ತೆ ಎಂದು ಹೇಳಲಾಗಿದೆ. ಸೆಲ್ಫೀ ತೆಗೆಯಲು 5MP ಕ್ಯಾಮರಾವು ಮುಂಭಾಗದಲ್ಲಿ ಇರಲಿದೆ
ಹೆಚ್ಚಿನ ಶಿಯೋಮಿ ಸ್ಮಾರ್ಟ್ ಫೋನ್ ಗಳಂತೆ ಇದೂ ಕೂಡ ಫಿಂಗರ್ ಪ್ರಿಂಟ್ ಮತ್ತು ಇನ್ಫ್ರಾರೆಡ್ ಸೆನ್ಸರ್ ಗಳನ್ನು ಒಳಗೊಂಡಿರಲಿದೆ. 147.46×71.49×8.3mm ಸುತ್ತಳತೆಯಲ್ಲಿ ಸ್ಮಾರ್ಟ್ ಫೋನ್ ಮಾರ್ಕೆಟ್ ಗೆ ಬರಲಿದೆ ಮತ್ತು 3000 mAh ಬ್ಯಾಟರಿ ಸೌಲಭ್ಯವಿರಲಿದೆ ಎಂದು ಅಂದಾಜಿಸಲಾಗಿದೆ. ಕನೆಕ್ಟಿವಿಟಿ ವಿಚಾರಕ್ಕೆ ಬರುವುದಾದೆ 4G, VoLTE,3ಜಿಬಿ, ವೈ-ಫೈ, ಬ್ಲೂಟೂತ್ ಮತ್ತು ಜಿಪಿಎಸ್ ಇರಲಿದೆ.
ನೀಲಿ, ಕಪ್ಪು, ಬೆಳ್ಳಿ, ಬಿಳಿ, ಚಿನ್ನದ ಬಣ್ಣ, ನೇರಳೆ ಮತ್ತು ಕೆಂಪು ವರ್ಣಗಳಲ್ಲಿ ಮೊಬೈಲ್ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ,



Click it and Unblock the Notifications
