Home
ಮೊಬೈಲ್

ಭಾರತದಲ್ಲಿ Redmi 15C 5G ಫೋನ್ ಲಾಂಚ್: ದೊಡ್ಡ ಬ್ಯಾಟರಿ, ಕಡಿಮೆ ಬೆಲೆ!

ಬಜೆಟ್ ಬೆಲೆಯ ಫೋನ್‌ಗಳಿಗೆ ಹೆಸರಾಂತ ಮೊಬೈಲ್ ಬ್ರ್ಯಾಂಡ್ Xiaomi ಇಂದು ತನ್ನ ಹೊಸ Redmi 15C 5G ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ದೇಶದಲ್ಲಿ Redmi 14C ಯಶಸ್ಸಿನ ನಂತರ, ಇದರ ಮುಂದಿನ ಪೀಳಿಗೆ ಸಾಧನವಾಗಿ Redmi 15C 5G ಫೋನ್ ಅನ್ನು ಪರಿಚಯಿಸಲಾಗಿದ್ದು, ಇದರಲ್ಲಿ ಬೃಹತ್ 6000mAh ಬ್ಯಾಟರಿ, ನಯವಾದ ವಿನ್ಯಾಸ ಮತ್ತು 50MP AI ಡ್ಯುಯಲ್ ಕ್ಯಾಮೆರಾ ವೈಶಿಷ್ಟ್ಯಗಳಿವೆ ಮತ್ತು ಬೆಲೆ ಕೂಡ 13 ಸಾವಿರಕ್ಕಿಂತ ಕಡಿಮೆ ಇದೆ. ಹಾಗಾದರೆ, ಹೊಸ Redmi 15C 5G ಫೋನ್ ಹೇಗಿದೆ? ಮತ್ತು ಸಂಪೂರ್ಣ ಫೀಚರ್ಸ್ ಯಾವುವು ಎಂಬುದನ್ನು ನೋಡೋಣ ಬನ್ನಿ.

Redmi 15C 5G: ಪ್ರಮುಖ ಫೀಚರ್ಸ್ ಹಾಗೂ ವೈಶಿಷ್ಟ್ಯಗಳು.
ಹೊಸ Redmi 15C 5G ಈ ಬಾರಿ ಅದರ ಬ್ರ್ಯಾಂಡಿಂಗ್ ಡಿಸೈನ್‌ನಿಂದಲೇ ಗಮನ ಸೆಳೆಯುತ್ತಿದೆ. ಬಿಳಿ ಬಾಕ್ಸ್‌ಗೆ ಕೆಂಪು ಬಣ್ಣದ ಬ್ರ್ಯಾಂಡಿಂಗ್ ನೀಡಲಾಗಿದ್ದು, ವಿಶೇಷವೆಂದರೆ ಬಾಕ್ಸ್ ಮೇಲ್ಭಾಗದಲ್ಲಿ ಫೋನ್‌unstyled ಚಿತ್ರವನ್ನು ಹಾಕಿಲ್ಲ. ಆದರೆ ಅದರಲ್ಲಿರುವ ಮುಖ್ಯ ವಿವರಗಳನ್ನು ಮಾತ್ರ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.ಪ್ಯಾಕೇಜ್‌ನಲ್ಲಿ 33W ಫಾಸ್ಟ್ ಚಾರ್ಜರ್ ಉಚಿತವಾಗಿ, ಜೊತೆಗೆ ಪಾರದರ್ಶಕ ಕೇಸ್, SIM ಈಜೆಕ್ಟರ್ ಟೂಲ್ ಮತ್ತು USB Type-A to Type-C ಕೇಬಲ್ ಕೂಡ ಸೇರಿಸಲಾಗಿದೆ.

Redmi 15C 5G ಗ್ಲಾಸಿ ಫಿನಿಷ್‌ನೊಂದಿಗೆ ಬರುತ್ತದೆ ಮತ್ತು ಬೆಳಕಿನಲ್ಲಿ ಇದು ಚೆನ್ನಾಗಿ ಮಿನುಗುತ್ತದೆ. ಪ್ಲಾಸ್ಟಿಕ್ ಬ್ಯಾಕ್ ಮತ್ತು ಪ್ಲಾಸ್ಟಿಕ್ ಫ್ರೇಮ್ ವಿನ್ಯಾಸವನ್ನು ಹೊಂದಿದ್ದು, ಹಗುರವಾದ ರೂಪದಲ್ಲಿ ಲಭ್ಯವಿದೆ. ಡಿಸ್‌ಪ್ಲೇ ವಿಭಾಗದಲ್ಲಿ, 120Hz ರಿಫ್ರೆಶ್ ರೇಟ್ 6.9-ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಅಡಾಪ್ಟಿವ್ ಸಿಂಕ್, ಕಡಿಮೆ ಕಣ್ಣಿನ ಒತ್ತಡಕ್ಕಾಗಿ TUV ರೈನ್‌ಲ್ಯಾಂಡ್ ಮತ್ತು ವೆಟ್ ಟಚ್ ತಂತ್ರಜ್ಞಾನ 2.0 ಅನ್ನು ಹೊಂದಿದೆ. ಇದು ನಿಮ್ಮ ಕೈಗಳು ಒದ್ದೆಯಾಗಿದ್ದರೂ ಪ್ರತಿಕ್ರಿಯಿಸಲು ಮಾಡಿಕೊಡುತ್ತದೆ.

ಭಾರತದಲ್ಲಿ Redmi 15C 5G ಫೋನ್ ಲಾಂಚ್: ದೊಡ್ಡ ಬ್ಯಾಟರಿ, ಕಡಿಮೆ ಬೆಲೆ!

ಕಾರ್ಯಕ್ಷಮೆತೆಗಾಗಿ, Redmi 15C 5G ಫೋನ್ 8GB RAM ಮತ್ತು 128GB ಆಂತರಿಕ ಮೆಮೊರಿಯೊಂದಿಗೆ ಜೋಡಿಯಾಗಿರುವ ಡೈಮೆನ್ಸಿಟಿ 6300 ಚಿಪ್‌ನಿಂದ ಚಾಲಿತವಾಗಿದೆ. ಬಳಕೆದಾರರು ಮೀಸಲಾದ ಮೈಕ್ರೊ SD ಕಾರ್ಡ್ ಬಳಸಿ 1TB ವರೆಗೆ ಹೆಚ್ಚುವರಿ ಮೆಮೊರಿ ವಿಸ್ತರಣೆ ಮಾಡಿಕೊಳ್ಳಲು ಅವಕಾಶವಿದೆ. ಸಾಫ್‌ವೇರ್ ವಿಭಾಗದಲ್ಲಿ, ಈ Redmi 15C 5G ಫೋನ್ ಎರಡು ವರ್ಷಗಳ OS ನವೀಕರಣಗಳು ಮತ್ತು ನಾಲ್ಕು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ ಎಂಬುದಾಗಿ Xiaomi ಕಂಪೆನಿ ಖಚಿತಪಡಿಸಿದೆ.

ಕ್ಯಾಮೆರಾ ವಿಭಾಗದಲ್ಲಿ, ಈ Redmi 15C 5G ಫೋನಿನಲ್ಲಿ 50MP ಡ್ಯುಯಲ್ ರಿಯರ್ ಕ್ಯಾಮೆರಾ ಸಿಸ್ಟಮ್ ಮತ್ತು 8MP ಸೆಲ್ಫಿ ಕ್ಯಾಮೆರಾ ಇದೆ. ಬ್ಯಾಟರಿ ವಿಭಾಗದಲ್ಲಿ, ಈ ಫೋನ್ ದೊಡ್ಡ 6,000mAh ಬ್ಯಾಟರಿ ಹೊಂದಿದ್ದು, 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಜೊತೆಗೆ 10W ರಿವರ್ಸ್ ಚಾರ್ಜಿಂಗ್ ಇದೆ. ಇನ್ನುಳಿದಂತೆ, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟಿಂಗ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು 3.5mm ಆಡಿಯೊ ಜ್ಯಾಕ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳು ಇವೆ.

Redmi 15C 5G: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Redmi 15C 5G ಫೋನ್ ಮೂಲ 4GB/128GB ಮಾದರಿಗೆ 12,499 ರೂ.ಗಳಿಂದ ಬೆಲೆ ಪ್ರಾರಂಭವಾಗುತ್ತದೆ. ಇದರ 6GB/128GB ಮಾದರಿಗೆ 13,999 ರೂ ಮತ್ತು ಟಾಪ್-ಎಂಡ್ 8GB/128GB ಮಾದರಿಗೆ 15,499 ರೂ. ಬೆಲೆ ನಿಗಧಿಪಡಿಸಲಾಗಿದೆ. ಇನ್ನು ಈ ಫೋನ್ ಡಸ್ಕ್ ಪರ್ಪಲ್, ಮೂನ್‌ಲೈಟ್ ಬ್ಲೂ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಬಣ್ಣಗಳಲ್ಲಿ ಬರುತ್ತದೆ. ಇದೇ ಡಿಸೆಂಬರ್ 11 ರಿಂದ Amazon.in, Mi.com ಮತ್ತು Xiaomi ರಿಟೇಲ್ ಪಾಲುದಾರರ ಮೂಲಕ ಖರೀದಿಗೆ ಲಭ್ಯವಿರುತ್ತದೆ.

Best Mobiles in India

English summary
Xiaomi today launched its new Redmi 15C 5G phone in India. After the success of Redmi 14C in the country, the next generation device is the Redmi 15C 5G phone, which features a massive 6000mAh battery, sleek design, and 50MP AI dual camera, and is priced under Rs 13,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+