Subscribe to Gizbot

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಶಿಯೋಮಿ 'ಮಿಕ್ಸ್ 2ಎಸ್'!!..ಒನ್‌ಪ್ಲಸ್ 5T, ಆಪಲ್ 10 ಕಥೆ?

Written By:

ವಿಶ್ವದ ದಿಗ್ಗಜ ಮೊಬೈಲ್ ಕಂಪೆನಿಗಳಿಗೆಲ್ಲಾ ಸೆಡ್ಡುಹೊಡೆಯುತ್ತಿರುವ ಶಿಯೋಮಿ ಇದೀಗ ಮತ್ತೊಂದು ಹೈ ಎಂಡ್ ಸ್ಮಾರ್ಟ್‌ಫೋನ್‌ ಮೂಲಕ  ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ.! ಐಫೋನ್ 10 ವಿನ್ಯಾಸದ ಶಿಯೋಮಿಯ ಅತ್ಯಂತ ಹೈ ಎಂಡ್ ಸ್ಮಾರ್ಟ್‌ಫೋನ್ ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಎಂದು ಮಾಧ್ಯಗಳು ವರದಿ ಮಾಡಿವೆ.!!

ಮೈ 7 ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ಶಿಯೋಮಿ ನಿರತವಾಗಿದೆ ಎಂದು ತಿಳಿದಿದ್ದ ಟೆಕ್ ಪ್ರಪಂಚದ ನಿರೀಕ್ಷೆಯನ್ನು ಶಿಯೋಮಿ ತಲೆಕೆಳಗಾಗಿಸಿದ್ದು, ಶಿಯೋಮಿ ಮೈ 7 ಬದಲಾಗಿ ಅದಕ್ಕಿಂತಲೂ ಹೆಚ್ಚು ಪೀಚರ್ಸ್ ಹೊಂದಿರುವ ಶಿಯೋಮಿ ಮೈ ಮಿಕ್ಸ್ 2ಎಸ್ ಅನ್ನು ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಮುಂದಿನ ತಿಂಗಳು ಪರಿಚಯಿಸುತ್ತಿದೆ ಎಂದು ಹೇಳಲಾಗಿದೆ.!!

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಶಿಯೋಮಿ 'ಮಿಕ್ಸ್ 2ಎಸ್'!!

ಐಫೋನ್ 10 ವಿನ್ಯಾಸ, 6GB RAM ಮತ್ತು ಸ್ನ್ಯಾಪ್‌ಡ್ರಾಗನ್ 835 ಪ್ರೊಸೆಸರ್‌ನಂತಹ ಹೈ ಎಂಡ್ ಫೀಚರ್‌ಗಳನ್ನು ಶಿಯೋಮಿ ಮೈ ಮಿಕ್ಸ್ 2ಎಸ್ ಫೋನ್ ಒನ್‌ಪ್ಲಸ್ 5T ಮತ್ತು ಐಫೋನ್ 10 ಫೀಚರ್ಸ್‌ಗಳಿಗೂ ಸೆಡ್ಡು ಹೊಡೆಯುತ್ತದೆ ಎನ್ನಲಾಗಿದೆ. ಹಾಗಾದರೆ, ಈ ಫೋನಿನ ಇತರೆ ಫೀಚರ್‌ಗಳು ಯಾವುವು? ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿನ್ಯಾಸ ಮತ್ತು ಡಿಸ್‌ಪ್ಲೇ!!

ವಿನ್ಯಾಸ ಮತ್ತು ಡಿಸ್‌ಪ್ಲೇ!!

ಶಿಯೋಮಿ ಮೈ ಮಿಕ್ಸ್ 2ಎಸ್ ಸ್ಮಾರ್ಟ್‌ಫೋನಿನ ಚಿತ್ರಗಳು ಮತ್ತು ಫೀಚರ್ಸ್ ಮಾಹಿತಿ ಲೀಕ್ ಆಗಿದ್ದು 'ಮೈ ಮಿಕ್ಸ್ 2ಎಸ್' ಫೋನ್ ಐಫೋನ್ 10 ವಿನ್ಯಾಸ ಹೊಂದಿರುವುದು ಸ್ಪಷ್ಟವಾಗಿದೆ.! 19:5:9 ರೆಷ್ಯೂವಿನ 5.99 ಇಂಚ್ ಎಡ್ಜ್ ಟು ಎಡ್ಜ್ ಡಿಸ್‌ಪ್ಲೇ ಹಾಗೂ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಫೀಚರ್ ಅನ್ನು ಮೈ ಮಿಕ್ಸ್ 2ಎಸ್ ಫೋನ್ ಹೊಂದಿರಲಿದೆ ಎನ್ನಲಾಗಿದೆ.!!

ಪ್ರೊಸೆಸರ್ ಕಾರ್ಯನಿರ್ವಹಣೆ ಹೇಗಿರಲಿದೆ!!

ಪ್ರೊಸೆಸರ್ ಕಾರ್ಯನಿರ್ವಹಣೆ ಹೇಗಿರಲಿದೆ!!

ಮೊದಲೇ ತಿಳಿಸಿದಂತೆ ಮೈ ಮಿಕ್ಸ್ 2ಎಸ್ ಫೋನಿನಲ್ಲಿ ಸ್ನ್ಯಾಪ್‌ಡ್ರಾಗನ್ 835 ಪ್ರೊಸೆಸರ್ ಅಳವಡಿಸಿರುವ ಮಾಹಿತಿ ದೊರೆತಿದೆ.! ಪ್ರಸ್ತುತ ನಂಬರ್ ಒನ್ ಚಿಪ್‌ಸೆಟ್ ಎಂಬ ಹೆಸರು ಗಳಿಸಿರುವ ಈ ಚಿಪ್‌ಸೆಟ್ ಸ್ಮಾರ್ಟ್‌ಫೋನಲ್ಲಿನ ಪ್ರಮುಖ ಫೀಚರ್ ಆಗಿದ್ದು ಸ್ಮಾರ್ಟ್ಫೋನ್ ಕಾರ್ಯನಿರ್ವಹಣೆ ಅತ್ಯುತ್ತಮವಾಗಿರಲಿದೆ ಎನ್ನಬಹುದು!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ಶಿಯೋಮಿ ಯಾವಾಗಲೂ ಸ್ಮಾರ್ಟ್‌ಫೋನ್ RAM ಆಯ್ಕೆಯಲ್ಲಿ ಮುಂದಿದೆ. ಹಾಗೆಯೇ, ಮೈ ಮಿಕ್ಸ್ 2ಎಸ್ ಫೋನಿನಲ್ಲಿಯೂ ಸಹ 6GB RAM ಮತ್ತು 256GB ಆಂತರಿಕ ಮೆಮೊರಿಯನ್ನು ಅಳವಡಿಸಿದೆ.! ಆದರೆ, ಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಬಬಹುದಾದ ಆಯ್ಕೆಯನ್ನು ನೀಡಿಲ್ಲ ಎಂದು ಟೆಕ್ ಸೈಟ್‌ಗಳು ಹೇಳಿವೆ.!!

ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!
ಮೈ ಮಿಕ್ಸ್ 2ಎಸ್ ಕ್ಯಾಮೆರಾ?

ಮೈ ಮಿಕ್ಸ್ 2ಎಸ್ ಕ್ಯಾಮೆರಾ?

ಶಿಯೋಮಿ ಮೈ ಮಿಕ್ಸ್ 2ಎಸ್ ಸ್ಮಾರ್ಟ್‌ಫೋನ್ ಕ್ಯಾಮೆರಾ ಫೀಚರ್ ಬಗ್ಗೆ ಈವರೆಗೂ ಸ್ಪಷ್ಟ ಮಾಹಿತಿ ಮಾಧ್ಯಮಗಳಿಗೆ ಸಿಕ್ಕಿಲ್ಲ.! ಆದರೆ, ಮಾಧ್ಯಮಗಳು ಪ್ರಕಟಿಸಿರುವಂತೆ ಮೈ ಮಿಕ್ಸ್ 2ಎಸ್ ಡ್ಯುಯಲ್ ಕ್ಯಾಮೆರಾ ಹೊಂದಿದ್ದು, 12MP ಮತ್ತು 12MP ರಿಯರ್ ಕ್ಯಾಮೆರಾಗಳು ಸ್ಮಾರ್ಟ್‌ಫೋನಿನಲ್ಲಿವೆ. ಇನ್ನು 16MP ಸೆಲ್ಫಿ ಕ್ಯಾಮೆರಾ ಇರಬಹುದು ಎಂದು ಅಂದಾಜಿಸಲಾಗಿದೆ.!!

ಇತರೆ ಫೀಚರ್ಸ್ ಮತ್ತು ಬೆಲೆ?

ಇತರೆ ಫೀಚರ್ಸ್ ಮತ್ತು ಬೆಲೆ?

ಶಿಯೋಮಿ ಮೈ ಮಿಕ್ಸ್ 2ಎಸ್ ಹೈ ಎಂಡ್ ಸ್ಮಾರ್ಟ್‌ಫೋನ್‌ ಆಗಿರುವುದರಿಂದ 4000mAh ಬ್ಯಾಟರಿ, ಕ್ವಿಕ್ ಚಾರ್ಜ್ ತಂತ್ರಜ್ಞಾನ, ಸೋನಿ ಕ್ಯಾಮೆರಾ ಸೆನ್ಸಾರ್, 4Gಯಂತಹ ಎಲ್ಲಾ ಹೈ ಎಂಡ್ ಫೀಚರ್ಸ್‌ಗಳನ್ನೇ ಹೊಂದಿದೆ. ಇಷ್ಟೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಬಹುದಾದ ಈ ಫೋನ್ ಬೆಲೆ ಕೇವಲ 29,789( 3000 Yuan) ರೂಪಾಯಿಗಳಾಗಿರಬಹುದು ಎಂದು ಮಾಧ್ಯಮಗಳು ಹೇಳಿವೆ.!!

ಓದಿರಿ:ಅಂತೂ ಇಂತೂ ಬಂತು 'ವಾಟ್ಸ್ಆಪ್' ಪೇಮೆಂಟ್ ಆಪ್!..ಅದ್ಬುತವಾಗಿದೆ ಹೊಸ ಸೇವೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Mi Mix 2S and it may be unveiled at the mega tech show- MWC 2018 next month. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot