ಶಯೋಮಿ ಫೋನ್‌ನ ಹತ್ತು ಮನಸೆಳೆಯುವ ಅಂಶಗಳು

Written By:

ಶಯೋಮಿ ದಾಖಲೆಯತ್ತ ಮುನ್ನುಗ್ಗುತ್ತಿದೆ. ಕಂಪೆನಿ ಈಗಾಗಲೇ ಮನಸೆಳೆಯುವ Mi3 ಅನ್ನು ಪ್ರಸ್ತುತಪಡಿಸಿದ್ದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ವರವಾಗಿ ಪರಿಣಮಿಸಿದೆ ಎಂದು ಹೇಳಬಹುದು.

ಹೊಸ Mi3 ಜೊತೆಗೆ ಶಯೋಮಿ ಕಂಪೆನಿ ರೆಡ್ಮೀ 1S ಮತ್ತು ರೆಡ್ಮೀ ನೋಟ್ ಅನ್ನು ಬಿಡುಗಡೆ ಮಾಡಿದ್ದು ಆಂಡ್ರಾಯ್ಡ್ ಜಗತ್ತಿನಲ್ಲಿ ಹೊಸ ಇತಿಹಾಸವನ್ನು ಈ ಫೋನ್‌ಗಳು ಸೃಷ್ಟಿಸಿವೆ ಎಂದೇ ಹೇಳಬಹುದು.

Mi3 ಸ್ಮಾರ್ಟ್‌ಫೋನ್ 4.4.2 ಕಿಟ್‌ಕ್ಯಾಟ್ ಚಾಲನೆಯಲ್ಲಿದೆ ಎಂಬುದೇ ಫೋನ್‌ನ ವಿಶೇಷತೆಯಾಗಿದ್ದು ಭಾರತೀಯ ಬಳಕೆದಾರರು ತಮ್ಮ ಜೀವನದಲ್ಲಿ ಒಮ್ಮೆ ಪ್ರಯತ್ನಿಸಬೇಕೆಂದು ಕಾತರಿಸುವ ಹಲವಾರು ವೈಶಿಷ್ಟ್ಯಗಳನ್ನು ಫೋನ್ ಹೊಂದಿದೆ. ರೂ 13,999 ರಲ್ಲಿ ಬಂದಿರುವ ಈ ಸ್ಮಾರ್ಟ್‌ಫೋನ್ 2.5GHz ಕ್ವಾಡ್ - ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್ ಅನ್ನು ಒಳಗೊಂಡಿದ್ದು 2 ಜಿಬಿ RAM ಡಿವೈಸ್‌ನಲ್ಲಿದೆ. ಫೋನ್‌ನ ಸಂಗ್ರಹಣಾ ಸಾಮರ್ಥ್ಯ 16 ಜಿಬಿಯಾಗಿದ್ದು ಇದರ ಆಂತರಿಕ ಮೆಮೊರಿಯನ್ನು ನಿಮಗೆ ವಿಸ್ತರಿಸಲು ಸಾಧ್ಯವಿಲ್ಲ.

ಇದು ವೇಗವಾಗಿರುವ 3 ಜಿಗೆ ಬೆಂಬಲ ಒದಗಿಸುತ್ತಿದ್ದು 2 ಜಿ, ಬ್ಲ್ಯೂಟೂತ್ ಆವೃತ್ತಿ 4.0, ಎಫ್‌ಎಮ್ ರೇಡಿಯೋ ಮತ್ತು ಇನ್ನಷ್ಟು ವಿಶೇತೆ ಫೋನ್‌ಗಿದೆ. ಶಯೋಮಿ Mi3 ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದ್ದು 2 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಶೂಟರ್ ಡಿವೈಸ್‌ನಲ್ಲಿದೆ. ಈ ಎರಡೂ ಕ್ಯಾಮೆರಾಗಳು ವೀಡಿಯೋ ರೆಕಾರ್ಡಿಂಗ್ ಅನ್ನು ಪೂರ್ಣ HD 1080 ಪಿಕ್ಸೆಲ್‌ನಲ್ಲಿ ಮಾಡುತ್ತವೆ. ಡ್ಯುಯೆಲ್ LED ಫ್ಲ್ಯಾಶ್ f/2.2 APERTURE ಮತ್ತು 28mm ವೈಡ್ ಏಂಗಲ್ ಲೆನ್ಸ್ ಡಿವೈಸ್‌ನಲ್ಲಿದೆ.

ಈ ಫೋನ್‌ನಲ್ಲಿರುವ ಇನ್ನಷ್ಟು ತಾಂತ್ರಿ ಮಾಹಿತಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ವಿವರವಾಗಿ ನೀಡಿದ್ದು ಅದರತ್ತ ಕಣ್ಣು ಹಾಯಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಯೋಮಿ Mi3 ವಿಶೇಷತೆ

ಶಯೋಮಿ Mi3 ವಿಶೇಷತೆ

#1

ಪವರ್ ಬಟನ್ ಅನ್ನು ಒತ್ತಿ ವಾಲ್ಯೂಮ್ ರಾಕರ್ ಅನ್ನು ಕೆಳಕ್ಕೆ ಮಾಡಿ ನಿಮಗೆ ಈ ಫೋನ್‌ನಲ್ಲಿ ಸ್ಕ್ರೀನ್ ಶಾಟ್ ಅನ್ನು ತೆಗೆಯಬಹುದಾಗಿದೆ. ಪರದೆಯ ಮೇಲ್ಭಾಗದಲ್ಲಿ ತೆರೆಯುವಂತಹ ಅಧಿಸೂಚನೆ ಪ್ಯಾನೆಲ್ ಅನ್ನು ನಿಮಗೆ ನೋಡಬಹುದು. ನೀವು ತೆಗೆಯುವ ಚಿತ್ರಗಳು ಪಿಎನ್‌ಜಿ ಫೈಲ್ ಆಗಿ DCIM/Screenshots ಫೋಲ್ಡರ್‌ನಲ್ಲಿ ಉಳಿಯುತ್ತದೆ.

ನಿರ್ಭಂಧನೆ

ನಿರ್ಭಂಧನೆ

#2

MIUI ನ ಡೇಟಾ ಯೋಜನೆಯೊಂದಿಗೆ ನಿಮ್ಮ ಡೇಟಾ ಮಿತಿಯನ್ನು ನೀವು ದಾಟಿದಾಗ ಓಎಸ್ ನಿಮಗೆ ಎಚ್ಚರಿಕೆಯನ್ನು ನೀಡುತ್ತದೆ. ಹೆಚ್ಚಿನ ಡೇಟಾವನ್ನು ತಿನ್ನುತ್ತಿರುವ ನಿಮ್ಮ ಅಪ್ಲಿಕೇಶನ್‌ಗಳ ಪಟ್ಟಿಯನ್ನು ನಿಮಗೆ ತೋರಿಸುತ್ತದೆ. ನೀವು ಆ ವೈಶಿಷ್ಟ್ಯವನ್ನು ಇಲ್ಲಿ ಕಾಣಬಹುದು.

ಫಾಂಟ್ ಬದಲಾವಣೆ

ಫಾಂಟ್ ಬದಲಾವಣೆ

#3

ನಿಮ್ಮ Mi3 ನಲ್ಲಿರುವ ಡೀಫಾಲ್ಟ್ ಫಾಂಟ್‌ನೊಂದಿಗೆ ನೀವು ಬೋರ್ ಆಗಿದ್ದರೆ, ನಿಮ್ಮ ಫೋನ್‌ನಲ್ಲಿ ಥೀಮ್ ಅನ್ನು ಬದಲಾಯಿಸಿದಂತೆ ಇದನ್ನು ಬದಲಾಯಿಸಬಹುದು.

ಡಯಲ್ ಪ್ಯಾಡ್ ಆಧಾರಿತ ಟಿಪ್ಪಣಿಗಳು

ಡಯಲ್ ಪ್ಯಾಡ್ ಆಧಾರಿತ ಟಿಪ್ಪಣಿಗಳು

#4

Mi3 ನಲ್ಲಿರುವ ಡಯಲ್ ಪ್ಯಾಡ್ ಆಧಾರಿತ ನೋಟ್ ಟೇಕಿಂಗ್ ಸಾಮರ್ಥ್ಯ ನಿಮ್ಮೆಲ್ಲಾ ಟಿಪ್ಪಣಿಗಳನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಲು ಅನುಮತಿಸುತ್ತದೆ.

ಗ್ಲೋವ್ ಮೋಡ್

ಗ್ಲೋವ್ ಮೋಡ್

#5

ನಿಮ್ಮ ಸೆಟ್ಟಿಂಗ್‌ಗಳ ಮೋಡ್‌ನಲ್ಲಿ ಗ್ಲೋವ್ ಮೋಡ್ ಅನ್ನು ಆನ್ ಮಾಡಿ ಈ ವೈಶಿಷ್ಟ್ಯವನ್ನು ನಿಮಗೆ ಪಡೆದುಕೊಳ್ಳಬಹುದು. ಸೆಟ್ಟಿಂಗ್‌ಗಳಿಗೆ ಹೋಗಿ, ಸಾಮಾನ್ಯ ಸೆಟ್ಟಿಂಗ್‌ಗಳು, ಇಲ್ಲಿ ಡಿಸ್‌ಪ್ಲೇನಲ್ಲಿ ಈ ಆಯ್ಕೆ ನಿಮಗೆ ದೊರೆಯುತ್ತದೆ. ನಂತರ ಗ್ಲೋವ್ ಮೋಡ್ ಅನ್ನು ಆನ್ ಮಾಡಿಕೊಳ್ಳಿ.

ಶಯೋಮಿ Mi3 ಸಲಹೆಗಳು ಮತ್ತು ತಂತ್ರಗಳು

ಶಯೋಮಿ Mi3 ಸಲಹೆಗಳು ಮತ್ತು ತಂತ್ರಗಳು

#6

ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳು ನಿಮಗೆ ಈ ಫೋನ್‌ನಲ್ಲಿ ಉತ್ತಮ ಮನರಂಜನೆಯನ್ನು ನೀಡುವುದು ಖಂಡಿತ.

ಭಾಷಾ ಬದಲಾವಣೆ

ಭಾಷಾ ಬದಲಾವಣೆ

#7

ಪೋನ್‌ನ ಎಲ್ಲಾ ವಿವರಗಳು ಚೀನಾ ಭಾಷೆಯಲ್ಲಿದೆಯೇ? ಇದನ್ನು ಇಂಗ್ಲೀಷ್‌ಗೆ ಬದಲಾಯಿಸಲು ಸೆಟ್ಟಿಂಗ್ಸ್ ಮೆನು>ಜನರಲ್ ಸೆಟ್ಟಿಂಗ್ಸ್>ಭಾಷೆ>ಇನ್‌ಪುಟ್. ಇಲ್ಲಿ ಭಾಷೆ ಆಯ್ಕೆಯ ಮೇಲೆ ತಟ್ಟಿ ಮತ್ತು ಇಂಗ್ಲೀಷ್ ಅನ್ನು ಆಯ್ಕೆ ಮಾಡಿ.

ಹೆಚ್ಚಿನ ಥೀಮ್‌ಗಳನ್ನು ಪಡೆದುಕೊಳ್ಳುವುದು

ಹೆಚ್ಚಿನ ಥೀಮ್‌ಗಳನ್ನು ಪಡೆದುಕೊಳ್ಳುವುದು

#8

ನಿಮ್ಮ Mi3 ಫೋನ್‌ನಲ್ಲಿ ಹೆಚ್ಚುವರಿ ಥೀಮ್‌ಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಇದು ದಿನದಿಂದ ಹೆಚ್ಚಾಗುತ್ತಿರುತ್ತದೆ. ಹೀಗೆ ಥೀಮ್‌ಗಳ ಆಟವನ್ನು ನಿಮಗೆ ಪಡೆದುಕೊಳ್ಳಬಹುದು.

ಫ್ಲ್ಯಾಶ್‌ಲೈಟ್ ಆನ್ ಮಾಡುವುದು

ಫ್ಲ್ಯಾಶ್‌ಲೈಟ್ ಆನ್ ಮಾಡುವುದು

#9

ನೀವು ರಾತ್ರಿ ಸಮಯದಲ್ಲಿ ಅಥವಾ ಕತ್ತಲೆ ಪ್ರದೇಶದಲ್ಲಿದ್ದಾಗ ಇದರ ಫ್ಲ್ಯಾಶ್‌ಲೈಟ್ ಅನ್ನು ತ್ವರಿತವಾಗಿ ನಿಮಗೆ ಆನ್ ಮಾಡಬಹುದು. ಇದಕ್ಕೆ ನೀವು ಟಾರ್ಚ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವುದು

ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವುದು

#10

ಈ ಒಂದೇ ಉಪಕರಣದ ಮೂಲಕ ಫೋನ್‌ನಲ್ಲಿರುವ ಅನಗತ್ಯ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ. ನೀವು ಅನಗತ್ಯ ಎಂದು ಭಾವಿಸುವ ಅಪ್ಲಿಕೇಶನ್‌ಗಳನ್ನು ಎಳೆಯಿರಿ ಮತ್ತು ಡಿಲೀಟ್ ಮಾಡಿ. ಬೇರೆ ಉಪಯುಕ್ತ ಅಪ್ಲಿಕೇಶನ್‌ಗಳಿಗೆ ಹಾನಿ ಮಾಡದೇ ಕೂಡ ನೀವು ಈ ಕೆಲಸವನ್ನು ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Xiaomi Mi 3: 10 Hidden Tips and Tricks You Can't Afford to Miss and its techniques which is providing within the phone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot