ಶಯೋಮಿ Mi 3 ಕುರಿತು ಬಳಕೆದಾರರು ಏನು ಹೇಳುತ್ತಾರೆ?

By Shwetha
|

ಶಯೋಮಿ ಭಾರತದಲ್ಲಿ ಇನ್ನೂ ಹಳತಾಗಿಲ್ಲ. ಆದರೆ ಅದು ಭಾರತೀಯ ಬಳಕೆದಾರರಲ್ಲಿ ಉಂಟುಮಾಡಿರುವ ಮೋಡಿ ಮಾತ್ರ ಅತ್ಯದ್ಭುತವಾಗಿದ್ದು ಮಾರುಕಟ್ಟೆಯಲ್ಲಿ ಅದರ ಮೌಲ್ಯವನ್ನು ಹೆಚ್ಚಿಸಿದೆ. ನಂಬರ್ ಒಂದು ಸ್ಥಾನವನ್ನು ತನ್ನ ಬಗಲಿಗೇರಿಸಿಕೊಂಡಿರುವ ಈ ಶಯೋಮಿ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ಇನ್ನೂ ತನ್ನ ಜಾದೂವನ್ನು ಉಂಟುಮಾಡುತ್ತಲೇ ಇದೆ.

ಶಯೋಮಿ Mi 3 ನಲ್ಲಿರುವ MIUI ಅನ್ನುವಂತಹ ಇಂಟರ್ಫೇಸ್ ಅತಿ ಹೆಚ್ಚು ಮತ್ತು ದೀರ್ಘಕಾಲದ ಪರಿಣಾಮವನ್ನು ಬಳಕರದಾರರಲ್ಲಿ ಉಂಟುಮಾಡಿದೆ. ನೀವು ಈ ಫೋನ್ ಅನ್ನು ಖರೀದಿಸುವ ನಿಟ್ಟಿನಲ್ಲಿದ್ದರೆ ಖಂಡಿತ ಇದು ನಿಮಗೆ ನಿರಾಶೆಯನ್ನುಂಟು ಮಾಡುವುದಿಲ್ಲ. ಇದು 5 ಇಂಚಿನ IPS ಡಿಸ್‌ಪ್ಲೇಯನ್ನು ಹೊಂದಿದ್ದು ಇದು ಪೂರ್ಣ ಎಚ್‌ಡಿ ರೆಸಲ್ಯೂಶನ್ ಅನ್ನು ನೀಡುತ್ತಿದೆ ಎಂಬುದು ಧನಾತ್ಮಕ ಅಂಶವಾಗಿದೆ. ಫೋನ್ ಗೋರಿಲ್ಲಾ ಗ್ಲಾಸ್ ಸುರಕ್ಷತೆಯೊಂದಿಗೆ ಬಂದಿದೆ ಎಂಬುದು ಮಾರುಕಟ್ಟೆಯಲ್ಲಿ ಇದರ ಮೌಲ್ಯವನ್ನು ಇನ್ನೂ ಹೆಚ್ಚುವಂತೆ ಮಾಡಿದೆ.

ಇದು 2.3 GHz ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್ ಅನ್ನು ಒಳಗೊಂಡಿದ್ದು 2GB DDR3 RAM ಫೋನ್‌ನ ಹೆಚ್ಚುಗಾರಿಕೆಯಾಗಿದೆ. ಆಂಡ್ರಾಯ್ಡ್‌ನಲ್ಲೇ ಅತಿ ವಿಶೇಷ ಎಂದೆನಿಸಿರುವ MIUI ಡಿವೈಸ್‌ನಲ್ಲಿದೆ. ಫೋನ್ 13MP ರಿಯರ್ ಕ್ಯಾಮೆರಾ ಮತ್ತು 2MP ಮುಂಭಾಗ ಕ್ಯಾಮೆರಾವನ್ನು ಒದಗಿಸುತ್ತಿದ್ದು ಇದರ ಆಂತರಿಕ ಮೆಮೊರಿ 16 GB ಜಿಬಿಯಾಗಿದೆ. ಫೋನ್ 3ಜಿ, ವೈಫೈ 802.11 a/b/g/n (2.4/5 GHz) ಅನ್ನು ಬೆಂಬಲಿಸುತ್ತಿದ್ದು ಇದು ಬ್ಲ್ಯೂಟೂತ್ GPS ಮತ್ತು NFC ಜತೆಗೆ ಬಂದಿದೆ. ಫೋನ್ 3050mAh ಬ್ಯಾಟರಿಯನ್ನು ಹೊಂದಿದೆ ಎಂಬುದೇ ಇದರ ವಿಶೇಷತೆಯಾಗಿದೆ.

ಇಂದಿನ ಲೇಖನದಲ್ಲಿ ಈ ಹ್ಯಾಂಡ್‌ಸೆಟ್ ಅನ್ನು ಖರೀದಿಸಿರುವ ಬಳಕೆದಾರರ ಅಭಿಪ್ರಾಯಗಳನ್ನು ನಾವು ಸಂಗ್ರಹಿಸಿದ್ದು ಅದನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಪಟ್ಟಿಮಾಡಿದ್ದೇವೆ. ಇದರತ್ತ ಕೂಡ ನೋಟ ಹರಿಸಿ. ಇದರಲ್ಲಿ ಫೋನ್ ಕುರಿತ ಧನಾತ್ಮಕ ಅಂಶಗಳು ಮತ್ತು ಋಣಾತ್ಮಕ ಅಂಶಗಳು ಎರಡೂ ಇವೆ.

#1

#1

ಕಳೆದ ವಾರವಷ್ಟೇ ಈ ಫೋನ್ ಅನ್ನು ನಾನು ಖರೀದಿಸಿದ್ದು ಇದು ನನಗೆ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ.

#2

#2

ಇದು ಕೆಟ್ಟ ಚಿತ್ರ ಗುಣಮಟ್ಟವನ್ನು ಹೊಂದಿದ್ದು ಈ ಫೋನ್ ಅನ್ನು ಖರೀದಿಸಿ ನನ್ನ ಜೀವನದಲ್ಲಿ ಬಹುದೊಡ್ಡ ತಪ್ಪನ್ನು ನಾನು ಮಾಡಿರುವೆ. ನನ್ನ ಹಣವನ್ನು ಹಿಂತಿರುಗಿಸಿ.

#3

#3

ನಾನು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ ದಯವಿಟ್ಟು ಪರಿಹರಿಸಿ ನನಗೆ ಒಳಬರುವ ಕರೆಗಳನ್ನು ಎರಡು - ಮೂರು ಸೆಕೆಂಡುಗಳ ನಂತರ ನಾನು ಸ್ವೀಕರಿಸುತ್ತಿರುವೆ.

#4

#4

ನನ್ನ Mi 3 ನಲ್ಲಿ ಅಧಿಸೂಚನೆ ಲೈಟ್ಸ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

#5

#5

ನನಗೆ ಪಾಪ್ ಅಪ್ ಎಚ್ಚರಿಕೆ ಸಂದೇಶಗಳು ಬರುತ್ತಿದ್ದು ವಾಟ್ಸಾಪ್ ನಿಮ್ಮ ಸಂಪರ್ಕಗಳನ್ನು/ಅನುಮತಿಸಿ/ನಿರಾಕರಿಸಿ ಓದಲು ಪ್ರಯತ್ನಿಸುತ್ತಿದೆ ಹೀಗೆ ಇದೇ ರೀತಿಯ ಸಂದೇಶಗಳು ವಿವಿಧ ಅಪ್ಲಿಕೇಶನ್‌ಗಳಿಂದ ಬರುತ್ತಿವೆ.

#6

#6

ಕಳೆದ ಮೂರು ದಿನಗಳಿಂದ ನಾನು Mi 3 ಅನ್ನು ಬಳಸುತ್ತಿರುವೆ ಟಚ್ ತುಂಬಾ ಉತ್ತಮವಾಗಿದೆ ಬ್ಯಾಟರಿ ಕೂಡ ಅತ್ಯುತ್ತಮ.

#7

#7

ಎತ್ತರದ ಮೇಜಿನ ಮೇಲಿಂದ ಬಿದ್ದಾಗ ಕೂಡ ನನ್ನ ಫೋನ್‌ಗೆ ಏನೂ ಹಾನಿಯಾಗಿಲ್ಲ

#8

#8

ಇದು ತುಂಬಾ ಹರಿತವಾಗಿರುವ ಮೂಲೆಗಳನ್ನು ಒಳಗೊಂಡಿದೆ ಇದರಿಂದ ಹಿಡಿದುಕೊಳ್ಳಲು ತುಸು ಕಷ್ಟವೆನಿಸಿದೆ.

#9

#9

ಮೊಬೈಲ್ ಡೇಟಾವನ್ನು ಬಳಸುತ್ತಿರುವಾಗ ನನ್ನ Mi 3 ಬಿಸಿಯ ಅನುಭವವನ್ನು ಉಂಟುಮಾಡುತ್ತಿದೆ. ಗಂಟೆಗಳವರೆಗೆ ಈ ಬಿಸಿಯ ಅನುಭವ ನನ್ನ ಕೈಗೆ ಉಂಟಾಗುತ್ತದೆ. ಫೋನ್ ಎಂದಿಗೂ ಇಷ್ಟು ಬಿಸಿಯಾಗಕೂಡದು.

#10

#10

ಇದು ನಿಜಕ್ಕೂ ಅದ್ಭುತವಾಗಿದೆ. ಫೋನ್‌ನಲ್ಲಿ ಪ್ರತಿಯೊಂದೂ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಈ ಫೋನ್ ಅನ್ನು ಬಳಸಲು ನನಗೆ ತುಂಬಾ ಖುಷಿಯಾಗುತ್ತಿದೆ.

#11

#11

ರೋಮ್ ಅನ್ನು ನವೀಕರಿಸಿದ ನಂತರ ಕ್ಯಾಮೆರಾದಲ್ಲಿರುವ "ಸ್ಕಿನ್ ಟೋನ್" ಫೀಚರ್ ಮಾಯವಾಗಿದೆ.

#12

#12

ಹೊರಹೋಗುವ (ಔಟ್‌ಗೋಯಿಂಗ್) ಕರೆಗಳನ್ನು ಮಾಡುತ್ತಿರುವಾಗ ಸ್ಕ್ರೀನ್ ಕಪ್ಪಾಗುತ್ತದೆ. ಯಾವ ಸಂಖ್ಯೆಯನ್ನು ನಾನು ಡಯೆಲ್ ಮಾಡುತ್ತಿದ್ದೇನೆ ಎಂಬುದನ್ನು ನೋಡಲು ಸಾಧ್ಯವಾಗುತ್ತಿಲ್ಲ.

#13

#13

ನನ್ನ ಸಹನಿವಾಸಿ ಮೋಟೋ ಜಿ ಯನ್ನು ಆರ್ಡರ್ ಮಾಡಿದರೆ ನಾನು Mi 3 ಅನ್ನು ಆರ್ಡರ್ ಮಾಡಿರುವೆ ನನ್ನ ಆಯ್ಕೆಯನ್ನು ಕುರಿತು ನನಗೆ ತೃಪ್ತಿ ಇದೆ.

#14

#14

ನಾನು ಕಳೆದ ಮೂರು ದಿನಗಳಿಂದ ಈ ಫೋನ್ ಅನ್ನು ಬಳಸುತ್ತಿರುವೆ ಎಲ್ಲವೂ ಉತ್ತಮವಾಗಿದೆ ಆದರೆ ನನ್ನ ಸಂಪರ್ಕ ಪಟ್ಟಿಗೆ ನನ್ನ ವಾಟ್ಸಾಪ್ ಪಟ್ಟಿಯನ್ನು ಸಂಪರ್ಕ ಪಡಿಸಲು ಸಾಧ್ಯವಾಗುತ್ತಿಲ್ಲ.

#15

#15

ಚಾರ್ಜಿಂಗ್‌ನೊಂದಿಗೆ ಬಳಸುತ್ತಿರುವಾಗ ಫೋನ್ ತುಂಬಾ ಬಿಸಿಯಾಗುತ್ತಿದೆ

#16

#16

ಚಾರ್ಜಿಂಗ್‌ನೊಂದಿಗೆ ಬಳಸುತ್ತಿರುವಾಗ ಫೋನ್ ತುಂಬಾ ಬಿಸಿಯಾಗುತ್ತಿದೆ

#17

#17

ನಿಮ್ಮ ಅಗತ್ಯಗಳಿಗೆ ತಕ್ಕಂತೆ ನಿರ್ಧರಿಸಿ. ಸ್ನ್ಯಾಪ್‌ಡ್ರಾಗನ್ 800 ನೊಂದಿಗೆ Mi 3 ಉತ್ತಮವಾಗಿದೆ ಆದರೆ ಇಂಟೆಲ್ ಪ್ರೊಸೆಸರ್ ಜೊತೆಗೆ ಜೆನ್‌ಫೋನ್ 5 ಕೂಡ ಉತ್ತಮವಾಗಿದೆ

#18

#18

ಇದೀಗ ಜೆನ್‌ಫೋನ್ 5 ಜೆಲ್ಲಿಬೀನ್ ಆವೃತ್ತಿಯೊಂದಿಗೆ ಬಂದಿದೆ ಇದನ್ನು ಕಿಟ್‌ಕ್ಯಾಟ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದಾಗಿದೆ ಆದರೆ Mi 3 ಕಿಟ್‌ಕ್ಯಾಟ್ ಜೊತೆಗೆ ಬಂದಿದೆ.

#19

#19

ಕಡಿಮೆ ಬೆಳಕಿನಲ್ಲಿ ಕ್ಯಾಮೆರಾ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ.

#20

#20

ಇನ್ನೀಗ ಜನರು ಅದನ್ನು ಕೂಡಲೇ ಮರುಮಾಡಲಿದ್ದಾರೆ ಏಕೆಂದರೆ ಫೋನ್ ಬಳಸಲು ಅಷ್ಟೊಂದು ಚೆನ್ನಾಗಿಲ್ಲ.

<center><iframe width="100%" height="360" src="//www.youtube.com/embed/tk4K8BNx3r8?feature=player_embedded" frameborder="0" allowfullscreen></iframe></center>

Best Mobiles in India

English summary
This article tells about Xiaomi Mi 3 a Big Hit in India 20 Best User Comments Following Up the Action.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X