ಸೆಕೆಂಡ್ ಹ್ಯಾಂಡ್ ಶಯೋಮಿ ಖರೀದಿ ರೀಟೈಲ್ ತಾಣಗಳಲ್ಲಿ

Written By:

ಶಯೋಮಿಯನ್ನು ಭಾರತದಲ್ಲಿ ಲಾಂಚ್ ಮಾಡಿದ ಕ್ಷಣದಿಂದ ಪ್ರಚಾರದ ತುತ್ತ ತುದಿಯನ್ನು ಅತಿ ಕಡಿಮೆ ಸಮಯದಲ್ಲೇ ತಲುಪಿದೆ. ಶಯೋಮಿ Mi 3 ನಲ್ಲಿರುವ MIUI ಅನ್ನುವಂತಹ ಇಂಟರ್ಫೇಸ್ ಅತಿ ಹೆಚ್ಚು ಮತ್ತು ದೀರ್ಘಕಾಲದ ಪರಿಣಾಮವನ್ನು ಬಳಕರದಾರರಲ್ಲಿ ಉಂಟುಮಾಡಿದೆ. ನೀವು ಈ ಫೋನ್ ಅನ್ನು ಖರೀದಿಸುವ ನಿಟ್ಟಿನಲ್ಲಿದ್ದರೆ ಖಂಡಿತ ಇದು ನಿಮಗೆ ನಿರಾಶೆಯನ್ನುಂಟು ಮಾಡುವುದಿಲ್ಲ. ಇದು 5 ಇಂಚಿನ IPS ಡಿಸ್‌ಪ್ಲೇಯನ್ನು ಹೊಂದಿದ್ದು ಇದು ಪೂರ್ಣ ಎಚ್‌ಡಿ ರೆಸಲ್ಯೂಶನ್ ಅನ್ನು ನೀಡುತ್ತಿದೆ ಎಂಬುದು ಧನಾತ್ಮಕ ಅಂಶವಾಗಿದೆ. ಫೋನ್ ಗೋರಿಲ್ಲಾ ಗ್ಲಾಸ್ ಸುರಕ್ಷತೆಯೊಂದಿಗೆ ಬಂದಿದೆ ಎಂಬುದು ಮಾರುಕಟ್ಟೆಯಲ್ಲಿ ಇದರ ಮೌಲ್ಯವನ್ನು ಇನ್ನೂ ಹೆಚ್ಚುವಂತೆ ಮಾಡಿದೆ.

ಇದು 2.3 GHz ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್ ಅನ್ನು ಒಳಗೊಂಡಿದ್ದು 2GB DDR3 RAM ಫೋನ್‌ನ ಹೆಚ್ಚುಗಾರಿಕೆಯಾಗಿದೆ. ಆಂಡ್ರಾಯ್ಡ್‌ನಲ್ಲೇ ಅತಿ ವಿಶೇಷ ಎಂದೆನಿಸಿರುವ MIUI ಡಿವೈಸ್‌ನಲ್ಲಿದೆ. ಫೋನ್ 13MP ರಿಯರ್ ಕ್ಯಾಮೆರಾ ಮತ್ತು 2MP ಮುಂಭಾಗ ಕ್ಯಾಮೆರಾವನ್ನು ಒದಗಿಸುತ್ತಿದ್ದು ಇದರ ಆಂತರಿಕ ಮೆಮೊರಿ 16 GB ಜಿಬಿಯಾಗಿದೆ. ಫೋನ್ 3ಜಿ, ವೈಫೈ 802.11 a/b/g/n (2.4/5 GHz) ಅನ್ನು ಬೆಂಬಲಿಸುತ್ತಿದ್ದು ಇದು ಬ್ಲ್ಯೂಟೂತ್ GPS ಮತ್ತು NFC ಜತೆಗೆ ಬಂದಿದೆ. ಫೋನ್ 3050mAh ಬ್ಯಾಟರಿಯನ್ನು ಹೊಂದಿದೆ ಎಂಬುದೇ ಇದರ ವಿಶೇಷತೆಯಾಗಿದೆ.

ಈ ಫೋನ್ ಅನ್ನು ಖರೀದಿಸುವ ಸೆಕೆಂಡ್ ಹ್ಯಾಂಡ್ ಒಪ್ಪಂದ ಕೂಡ ಈಗ ನಡೆಯುತ್ತಿದ್ದು OLX, Quikr ಮತ್ತು Ebay ಮುಂಚೂಣಿಯಲ್ಲಿ ಈ ಹ್ಯಾಂಡ್‌ಸೆಟ್‌ಗಳ ಮಾರಾಟವನ್ನು ನಡೆಸುತ್ತಿದೆ. ಹಾಗಿದ್ದರೆ ಸೆಕೆಂಡ್ ಹ್ಯಾಂಡ್ ಶಯೋಮಿ ಸೆಟ್ ಅನ್ನು ನಿಮ್ಮದಾಗಿಸಿಕೊಳ್ಳಬೇಕೆಂಬ ಬಯಕೆ ನಿಮ್ಮದಾಗಿದ್ದಲ್ಲಿ ಕೆಳಗಿನ ಸ್ಲೈಡ್‌ಗಳತ್ತ ಗಮನಹರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about Xiaomi Mi 3 Second Hand Deals Now Available 5 Best Online Sites Including OLX, Quikr and Ebay to buy.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot