Subscribe to Gizbot

ಶಯೋಮಿ Mi3 ಕಡಿಮೆ ಬೆಲೆಯಲ್ಲಿನ ಅತ್ಯಾಧುನಿಕತೆ

Posted By:

ಸ್ವಲ್ಪ ವಾರಗಳ ಹಿಂದೆಯಷ್ಟೇ, ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಶಯೋಮಿ ಭಾರತದಲ್ಲಿ ತನ್ನ ಉತ್ಪನ್ನಗಳ ಸುಗ್ಗಿಯನ್ನೇ ಹರಿಸಿದೆ. ಇದರಲ್ಲೂ Mi3 ಹೆಚ್ಚು ಪ್ರಸಿದ್ಧಿ ಮತ್ತು ಗ್ರಾಹಕರ ಅಚ್ಚುಮೆಚ್ಚಿನ ಫೋನ್ ಎಂದೆನಿಸಿದೆ. ಶಯೋಮಿ Mi3 ಸ್ಮಾರ್ಟ್‌ಫೋನ್ ಆಕರ್ಷಕ ಬೆಲೆ ಮತ್ತು ಸುಧಾರಿತ ಮನಸೆಳೆಯುವ ಹಾರ್ಡ್‌ವೇರ್ ಮೂಲಕ ಬಂದಿದ್ದು ಫೋನ್‌ನ ಮೌಲ್ಯವನ್ನು ಹೆಚ್ಚಿಸಿದೆ.

ದುಬಾರಿ ಫೋನ್‌ಗಳಲ್ಲಿ ಕಂಡುಬರುವ ಮನಸೆಳೆಯುವ ತಂತ್ರಜ್ಞಾನವನ್ನು ನೀವು ಈ ಫೋನ್‌ನಲ್ಲಿ ಕಾಣಬಹುದಾಗಿದ್ದು, ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಅನ್ನು ಈ ಫೋನ್ ಹೊಂದಿದೆ ಎಂಬುದೇ ಇದಕ್ಕಿರುವ ಧನಾತ್ಮಕ ಅಂಶವಾಗಿದೆ. ಇಂದಿನ ನಮ್ಮ ಲೇಖನದಲ್ಲಿ ಶಯೋಮಿ Mi3 ನ ವಿಸ್ತ್ರತ ವೀಡಿಯೋ ನೋಟವನ್ನು ನೀಡುತ್ತಿದ್ದು ಫೋನ್‌ನ ಕುರಿತ ಮತ್ತಷ್ಟು ವಿವರಗಳನ್ನು ತಿಳಿಸಲಿದೆ.

ಶಯೋಮಿ Mi3 ಕುರಿತ ವೀಡಿಯೊ ನೋಟ

ಶಯೋಮಿ Mi3 ವಿಶೇಷತೆಗಳು
5 ಇಂಚಿನ ಪೂರ್ಣ ಎಚ್‌ಡಿ ರೆಸಲ್ಯೂಶನ್ (1920 x 1080 pixels) ಹಾಗೂ 441ppi ಡೆನ್ಸಿಟಿಯೊಂದಿಗೆ ಗೋರಿಲ್ಲಾ ಗ್ಲಾಸ್ ಸುರಕ್ಷತೆಯೊಂದಿಗೆ ಈ ಫೋನ್ ಹೊರಹೊಮ್ಮಿದೆ. 2.3 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 800 (MSM 8974AB) ಪ್ರೊಸೆಸರ್ ಇದರಲ್ಲಿದ್ದು 2GB DDR3 RAM ಅನ್ನು ಫೋನ್ ಹೊಂದಿದೆ. MiUI ಕಸ್ಟಮ್ ಇಂಟರ್ಫೇಸ್ ಇದರಲ್ಲಿ ಚಾಲನೆಯಾಗುತ್ತಿದೆ.

13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಫೋನ್‌ನಲ್ಲಿದ್ದು LED ಫ್ಲ್ಯಾಶ್ ಅನ್ನು ಒಳಗೊಂಡಿದೆ. 2 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾ ಕೂಡ ಇದರಲ್ಲಿದ್ದು 114mm×72mm×8.1mm ಮತ್ತು ತೂಕ 145g ಆಗಿದೆ. 16 ಜಿಬಿ ಆಂತರಿಕ ಮೆಮೊರಿ ಫೋನ್‌ನಲ್ಲಿದೆ. ಸಂಪರ್ಕ ವೈಶಿಷ್ಟ್ಯಗಳೆಂದರೆ ವೈಫೈ Direct, ಬ್ಲ್ಯೂಟೂತ್ 4.0, GPS, ಮತ್ತು NFC ಹಾಗೂ ಬ್ಯಾಟರಿ 3050mAh ಆಗಿದೆ.

ಕಣ್ಸೆಳೆಯುವ ವೀಡಿಯೊ ನೋಟ ನಿಮಗಾಗಿ ಇದೋ ಇಲ್ಲಿ

<center><iframe width="100%" height="510" src="//www.youtube.com/embed/lph7zRTr1Y0" frameborder="0" allowfullscreen></iframe></center>

English summary
This article tells about Xiaomi Mi 3 Smartphone video review and specs. And it is a low price phone providing very affordable kind of service.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot