ಶಿಯೋಮಿ 4ನೇ ವಾರ್ಷಿಕೋತ್ಸವ ಸೇಲ್: ಕೇವಲ ರೂ.4 ಕ್ಕೆ ರೆಡ್ ಮಿ ನೋಟ್ 5 ಮಾರಾಟ....!
ದೇಶಿಯ ಸ್ಮಾರ್ಟ್ ಪೋನ್ ಮಾರುಕಟ್ಟೆಯಲ್ಲಿ ನಂಬರ್ 1 ಸ್ಮಾರ್ಟ್ ಫೋನ್ ಮಾರಾಟ ಮಾಡುವ ಕಂಪನಿ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಚೀನಾ ಮೂಲದ ಶಿಯೋಮಿ, ತನ್ನ 4ನೇ ವಾರ್ಷಿಕೋತ್ಸವದ ಅಂಗವಾಗಿ 4ನೇ ಮಿ ಅನಿವರ್ಸರಿ ಸೇಲ್ ಅನ್ನು ಆಯೋಜಿಸಿದ್ದು, ಶಿಯೋಮಿ ತನ್ನ ಬಳಕೆದಾರರಿಗೆ ಸಾಕಷ್ಟು ದೊಡ್ಡ ಪ್ರಮಾಣದ ಆಫರ್ ಗಳ ನೀಡಲು ಮುಂದಾಗಿದೆ. ಅಲ್ಲದೇ ಅತೀ ಕಡಿಮೆ ಬೆಲೆ ತನ್ನ ವಸ್ತುಗಳನ್ನು ಮಾರಾಟ ಮಾಡುತ್ತಿದೆ ಎನ್ನಲಾಗಿದೆ.

ಇದಲ್ಲದೇ ನಾಲ್ಕನೇ ವಾರ್ಷಿಕೋತ್ಸದ ಅಂಗವಾಗಿ ಕೇವಲ ರೂ.4ಕ್ಕೇ ಶಿಯೋಮಿ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಇದಲ್ಲದೇ ಶಿಯೋಮಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಎಲ್ಲಾ ವಸ್ತುಗಳ ಮೇಲೆಯೂ ರಿಯಾಯಿತಿಯನ್ನು ಘೋಷಣೆ ಮಾಡಿದೆ ಎನ್ನಲಾಗಿದೆ. ಶಿಯೋಮಿ ವಸ್ತುಗಳನ್ನು ಖರೀದಿಸಬೇಕು ಎಂದು ಪ್ಲಾನ್ ಮಾಡುತ್ತಿರುವವರಿಗೆ ಇದೊಂದು ಸುಸಂದರ್ಭವಾಗಿದ್ದು, ಆಫರ್ ದೊಡ್ಡದಾಗಿದೆ.

ಜುಲೈ 10 ರಿಂದ 12ರ ವರೆಗೆ:
ಶಿಯೋಮಿ ನಾಲ್ಕನೇ ವಾರ್ಷಿಕೋತ್ಸದ ಸೇಲ್ ನಲ್ಲಿ ಬಳಕೆದಾರರಿಗೆ ಸಾಕಷ್ಟು ಹೊಸ ಆಫರ್ ಗಳನ್ನು ನೀಡಲಾಗುತ್ತಿದೆ. ಇದಲ್ಲದೇ ಬಳಕೆದಾರರಿಗೆ ಸಾಕಷ್ಟು ಕೂಪನ್ ಗಳನ್ನು ನೀಡುತ್ತಿದೆ. ಇದಲ್ಲದೇ ಬಳಕೆದಾರರಿಗೆ ರೂ.500ರ ವರಗೆ ಕೂಪಲನ್ ಗಳನ್ನು ಪಡೆದುಕೊಂಡು ಶಿಯೋಮಿ ವಸ್ತುಗಳನ್ನು ಖರೀದಿಸುವ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಫೈಂಡ್ ದ 4 ಗೇಮ್:
ಇದಲ್ಲದೇ ಮತ್ತೊಂದು ಗೇಮ್ ವೊಂದನ್ನು ಆಯೋಜಿಸಿರುವ ಶಿಯೋಮಿ ಜುಲೈ 7 ರಿಂದ 12ರ ವರೆಗೆ ಫೈಂಡ್ ದ 4 ಗೇಮ್ ಆಯೋಜಿಸಿದ್ದು, ಇದರಲ್ಲಿ ಭಾಗವಹಿಸಿ ಶಿಯೀಮಿ ವಸ್ತುಗಳನ್ನು ಕೇವಲ ರೂ.4ಕ್ಕೆ ಖರೀದಿ ಮಾಡಬಹುದಾಗಿದೆ. ಇದಲ್ಲದೇ ರೂ.500ವರೆಗೆ ಕೂಪನ್ ಗಳನ್ನು ಇದರಲ್ಲಿ ಇಡಲಿದೆ. ಇದು ಶಿಯೋಮಿ ನೀಡುತ್ತಿರುವ ಬೆಸ್ಟ್ ಆಫರ್ ಗಳಲ್ಲಿ ಒಂದಾಗಿದೆ.

5000mAh ಬ್ಯಾಟರಿ:
ಶಿಯೋಮಿ ತನ್ನ ನಾಲ್ಕನೇ ವಾರ್ಷಿಕೋತ್ಸದ ಸೇಲ್ ನಲ್ಲಿ ಗೇಮ್ ಆಡಿ ಗೆದ್ದವರಿಗೆ ರೂ.4ಕ್ಕೆ ರೆಡ್ ಮಿ Y1, 55 ಇಂಚಿನ Mi LED ಸ್ಮಾರ್ಟ್ TV 4, ರೆಡ್ ಮಿ ನೋಟ್ 5, ರೆಡ್ ಮಿ ನೋಟ್ 5 ಪ್ರೋ ಸೇರಿದಂತೆ ಅನೇಕ ವಸ್ತುಗಳನ್ನು ರೂ.4ಕ್ಕೆ ಖರೀದಿ ಮಾಡಬಹುದಾಗಿದೆ. ಇದರಿಂದಾಗಿ ಬಳಕೆದಾರರೂ ಕೇವಲ 4ಕ್ಕೆ ಹಲವು ವಸ್ತುಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಕ್ಯಾಷ್ ಬ್ಯಾಕ್ ಸಹ ಇದೆ:
ಇದಲ್ಲದೇ ಶಿಯೋಮಿ ನಾಲ್ಕನೇ ವಾರ್ಷಿಕೋತ್ಸದ ಸೇಲ್ ಭರ್ಜರಿ ಕ್ಯಾಷ್ ಬ್ಯಾಕ್ ಆಫರ್ ಅನ್ನು ಕಾಣಬಹುದಾಗಿದ್ದು, SBI ಕಾರ್ಡುದಾರರಿಗೆ ರೂ.7500 ಖರೀದಿಯ ಮೇಲೆ ರೂ.500 ಡಿಸ್ಕೌಂಟ್ ದೊರೆಯಲಿದೆ. ಇದೇ ಮಾದರಿಯಲ್ಲಿ ಪೇಟಿಎಂ ಮೂಲಕ ಖರೀದಿ ಮಾಡಿದರೂ ಸಹ ರೂ.500ವರೆಗೆ ಕ್ಯಾಷ್ ಬ್ಯಾಕ್ ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ ಮೊಬಿಕ್ವೀಕ್ ಬಳಕೆದಾರರಿಗೂ ಇದೇ ಮಾದರಿಯ ಆಫರ್ ಬಳಕೆಗೆ ದೊರೆಯಲಿದೆ.

ಕಾಬೋ ಆಫರ್:
ಇದರೊಂದಿಗೆ ಬಳಕೆದಾರರಿಗೆ ಶಿಯೋಮಿಯಲ್ಲಿ ಸಾಕಷ್ಟು ಹೊಸ ಮಾದರಿಯ ಆಫರ್ ವೊಂದನ್ನು ನೀಡಲಿದ್ದು, ಕಾಂಬೋ ಶಿಯೀಮಿ ವಸ್ತುಗಳನ್ನು ಖರೀದಿ ಮಾಡಿದರೆ ಭಾರೀ ಪ್ರಮಾಣದ ಡಿಸ್ಕೌಂಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಒಂದು ವಸ್ತುವಿನ ಜೊತೆಯಲ್ಲಿ ಮತ್ತೊಂದು ಸಂಪೂರ್ಣವಾಗಿ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications