ಶಿಯೋಮಿಯಿಂದ ಮತ್ತೊಂದು ಸ್ಮಾರ್ಟ್‌ಪೋನ್ ಲಾಂಚ್‌..ಹ್ಯಾಟ್‌ಸ್ಯುನ್ ಮಿಕು ವಿಶೇಷ ಆವೃತ್ತಿ ಬಿಡುಗಡೆ..!

By Avinash
|

ಚೀನಾದ ಪ್ರಖ್ಯಾತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಸ್ಮಾರ್ಟ್‌ಪೋನ್ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಹ್ಯಾಟ್‌ಸ್ಯುನ್ ಮಿಕು ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಇದರೊಂದಿಗೆ ಗೇಮ್ ಡೆವಲಪರ್‌ ಆಗಿರುವ ವೋಕಾಲಾಯ್ಡ್‌ ಜೊತೆಗೆ ಬಿಡುಗಡೆಗೊಳಿಸಿದ ಎರಡನೇ ಸ್ಮಾರ್ಟ್‌ಫೋನ್ ಆಗಿದೆ. ಕಳೆದ ವರ್ಷ ರೆಡ್ ಮಿ ನೋಟ್ 4X ಸ್ಮಾರ್ಟ್‌ಫೋನ್‌ನ್ನು ವೋಕಾಲಾಯ್ಡ್‌ ಜೊತೆಗೆ ಬಿಡುಗಡೆಗೊಳಿಸಿತ್ತು. ಈ ಸಲ ಮಿ 6X ಹ್ಯಾಟ್‌ಸ್ಯುನ್ ಮಿಕು ಆವೃತ್ತಿಯನ್ನು ಎಕ್ಸ್‌ಕ್ಲೂಸಿವ್ ಥೀಮ್ಸ್‌ ಜೊತೆ ಬಿಡುಗಡೆಗೊಳಿಸಿದೆ.

ಶಿಯೋಮಿಯಿಂದ ಮತ್ತೊಂದು ಸ್ಮಾರ್ಟ್‌ಪೋನ್ ಲಾಂಚ್‌..!

ಚೀನಾದಲ್ಲಿ ಬಿಡುಗಡೆಯಾದ ಹೊಸ ಸ್ಮಾರ್ಟ್‌ಫೋನ್ ಬಗ್ಗೆ ಸ್ಮಾರ್ಟ್‌ಫೋನ್ ಪ್ರಿಯರಿಗೆ ಕುತೂಹಲ ಹೆಚ್ಚಿದ್ದು, ಏನೇನು ಫೀಚರ್ಸ್‌ ಹೊಂದಿದೆ ಎಂಬುದನ್ನು ಮುಂದೆ ನೋಡಿ.

ಫುಲ್ ಹೆಚ್‌ಡಿ ಡಿಸ್‌ಪ್ಲೇ

ಫುಲ್ ಹೆಚ್‌ಡಿ ಡಿಸ್‌ಪ್ಲೇ

ಹೊಸ Mi 6X 5.99 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 18:9 ಆಸ್ಪೆಕ್ಟ್‌ ರೇಟಿಯೋ ಹೊಂದಿರಲಿದ್ದು, ಎಕ್ಸ್‌ಕ್ಲೂಸಿವ್‌ ಥೀಮ್ಸ್‌ ಹೊಂದಿರಲಿದೆ. ಇದರಿಂದ ಸ್ಮಾರ್ಟ್‌ಫೋನ್ ಬಳಕೆದಾರರು ಉತ್ತಮ ಕಾರ್ಯನಿರ್ವಹಣೆಯನ್ನು ನಿರೀಕ್ಷಿಸಬಹುದು.

ಪ್ರೊಸೆಸರ್

ಪ್ರೊಸೆಸರ್

ಶಿಯೋಮಿ ಬಿಡುಗಡೆಗೊಳಿಸಿರುವ ಹೊಸ ಸ್ಮಾರ್ಟ್‌ಫೋನ್ Mi 6X ಸ್ನಾಪ್‌ಡ್ರಾಗನ್ 660 ಪ್ರೊಸೆಸರ್ ಹೊಂದಿರಲಿದೆ. ಆಂಡ್ರಾಯ್ಡ್‌ ಓರಿಯೋ 8.0 ಒಎಸ್ ಬೆಂಬಲಿತ MIUI 9.5‌ನಿಂದ ಕಾರ್ಯನಿರ್ವಹಿಸಲಿದೆ.

ಮೆಮೊರಿ

ಮೆಮೊರಿ

ಹೊಸ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಮೆಮೊರಿ ಅಥವಾ 6GB RAM ಮತ್ತು 128 GB ಮೆಮೊರ ವಿಧಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಅಗ್ಗದ ದರದಲ್ಲಿಉತ್ತಮ ಸ್ಟೋರೆಜ್ ಆಯ್ಕೆಯನ್ನು ನೀಡಿದೆ.

20MP ಸೆಲ್ಫಿ ಕ್ಯಾಮೆರಾ

20MP ಸೆಲ್ಫಿ ಕ್ಯಾಮೆರಾ

ಶಿಯೋಮಿಯ Mi 6X ಸ್ಮಾರ್ಟ್‌ಫೋನ್ 20MP ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಕೃತಕ ಬುದ್ಧಿಮತ್ತೆಯ ಅನೇಕ ಫೀಚರ್ಸ್ ಒಳಗೊಂಡಿದೆ. ಇದರಿಂದ ಸೆಲ್ಫಿ ಪ್ರಿಯರಿಗೆ ಉತ್ತಮ ಆಯ್ಕೆಯೊಂದು ಲಭಿಸಿದಂತಾಗಿದೆ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

Mi 6X ಸ್ಮಾರ್ಟ್‌ಫೋನ್ ಡ್ಯುಯಲ್ ರೇರ್ ಕ್ಯಾಮೆರಾ ಹೊಂದಿದ್ದು, 12MP ಮತ್ತು 20MP ಲೆನ್ಸ್‌ ಹೊಂದಿದೆ. f/1.75 ಮತ್ತು f/1.8 ಅಪಾರ್ಚರ್ ಹೊಂದಿರಲಿದ್ದು, ಪೋಟೋಗ್ರಾಫಿ ಆಸಕ್ತಿ ಇರುವವರಿಗೆ ಹೇಳಿ ಮಾಡಿಸಿದ ಸ್ಮಾರ್ಟ್‌ಫೋನ್ ಆಗಿರಲಿದೆ.

ಉತ್ತಮ ಬ್ಯಾಟರಿ

ಉತ್ತಮ ಬ್ಯಾಟರಿ

ಹೊಸ ಸ್ಮಾರ್ಟ್‌ಫೋನ್ 3010mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಬ್ಯಾಟರಿ ಬಾಳಿಕೆಯು ಉತ್ತಮವಾಗಿರಲಿದೆ. ಅದಲ್ಲದೇ ಟಿಟ್ಯೂಲರ್ ಕ್ಯಾರೆಕ್ಟರ್ ಇರುವ ಟರ್‌ಕ್ವೈಸ್ 10,000 mAh ಪವರ್ ಬ್ಯಾಂಕ್‌ನ್ನು ಸ್ಮಾರ್ಟ್‌ಫೋನ್‌ನೊಂದಿಗೆ ಮಾರಾಟ ಮಾಡಲಾಗುತ್ತಿದೆ.

ಡಿಸೈನ್ ಔಟ್‌ಲುಕ್

ಡಿಸೈನ್ ಔಟ್‌ಲುಕ್

ಶಿಯೋಮಿಯ Mi 6X ಸ್ಮಾರ್ಟ್‌ಫೋನ್ ನೀಲಿ ಬಣ್ಣದಲ್ಲಿ ಲಭ್ಯವಿದ್ದು, ಮಿಕು ಆವೃತ್ತಿಯ ಮುಖ್ಯ ಪಾತ್ರವನ್ನು ಹಿಂಭಾಗದಲ್ಲಿ ಹೊಂದಿದೆ. ಇದರ ಜೊತೆ ಬಣ್ಣ್ ಹ್ಯಾಟ್‌ಸ್ಯುನ್ ಮಿಕು ಪಾರರ್ಶಕ ಬ್ಯಾಕ್‌ಕೇಸ್‌ನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ.

ಬೆಲೆ

ಬೆಲೆ

Mi 6X ಸ್ಮಾರ್ಟ್‌ಫೋನ್ 2099 ಯನ್ ಮೌಲ್ಯ ಹೊಂದಿದ್ದು, ಭಾರತೀಯ ರೂಪಾಯಿಯಲ್ಲಿ 21 ಸಾವಿರ ರೂ. ಬೆಲೆ ಬಾಳುತ್ತದೆ. ಚೀನಾ ಮಾರುಕಟ್ಟಯಲ್ಲಿ ಜುಲೈ 14 ರಿಂದ ಸೇಲ್ ಪ್ರಾರಂಭವಾಗಲಿದ್ದು, ಹೀಗಾಗಲೇ ಬುಕ್ಕಿಂಗ್ ನಡೆಯುತ್ತಿದೆ.

Best Mobiles in India

English summary
Xiaomi Mi 6X Hatsune Miku edition launched in China Price and specifications. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X