ಶಿಯೋಮಿ 8ನೇ ವಾರ್ಷಿಕೋತ್ಸವದ ಆಚ್ಚರಿ: ಸ್ಮಾರ್ಟ್‌ಫೋನ್‌ ಮಾರುಕಟ್ಟೆಯೇ ಬೆಚ್ಚಿಬೀಳುವ ಫೋನ್ ಇದು..!

|

ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿರುವ ಚೀನಾ ಮೂಲಕದ ಶಿಯೋಮಿ ಕಂಪನಿಯೂ ತನ್ನ 8ನೇ ವರ್ಷದ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಶಿಯೋಮಿ mi 8 ಹೆಸರಿನಲ್ಲಿ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ವೊಂದನ್ನು ಲಾಂಚ್ ಮಾಡಲು ಮುಂದಾಗಿದೆ. ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಸ್ಮಾರ್ಟ್‌ಫೋನ್‌ ಕುರಿತ ಮಾಹಿತಿಯೂ ಲೀಕ್ ಆಗಿದೆ.

ಶಿಯೋಮಿ 8ನೇ ವಾರ್ಷಿಕೋತ್ಸವ: ಸ್ಮಾರ್ಟ್‌ಫೋನ್‌ ಮಾರುಕಟ್ಟೆಯೇ ಬೆಚ್ಚಿಬೀಳುವ ಫೋನ್

ಶಿಯೋಮಿ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಆಗಲಿರುವ ಶಿಯೋಮಿ mi 8 ಸ್ಮಾರ್ಟ್‌ಪೋನ್, ಟಾಪ್ ಐಫೋನ್ ಮತ್ತು ಟಾಪ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನಿಗೆ ಸೆಡ್ಡು ಹೊಡೆಯಲಿದ್ದು, ಎಲ್ಲಾ ಟಾಪ್‌ ಫೀಚರ್ ಗಳನ್ನು ಹೊಂದಿರುವುದಲ್ಲದೇ ಕಂಪನಿಯೂ ಯಾವುದೇ ಲಾಭವನ್ನು ಇಟ್ಟುಕೊಳ್ಳದೇ ಮಾರಾಟ ಮಾಡುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ಶಿಯೋಮಿ mi 8 ಕುರಿತ ಮಾಹಿತಿಯೂ ಇಲ್ಲಿದೆ ಎನ್ನಲಾಗಿದೆ.

3D ಫೇಸ್‌ ರೆಕಗ್ನೇಷನ್:

3D ಫೇಸ್‌ ರೆಕಗ್ನೇಷನ್:

ಶಿಯೋಮಿ 8 ಸ್ಮಾರ್ಟ್‌ಪೋನಿನಲ್ಲಿ 3D ಫೇಷಿಯಲ್ ರೆಕಗ್ನೇಷನ್ ಆಯ್ಕೆಯನ್ನು ನೀಡಲು ಯೋಜನೆಯನ್ನು ರೂಪಿಸಲಾಗಿದ್ದು, ಇದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಯೇ ಮೊದಲು ಎನ್ನಲಾಗಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್ ವಿನ್ಯಾಸವೂ ಅತ್ಯುತ್ತಮವಾಗಿರಲಿದೆ.

ಇನ್‌ ಡಿಸ್‌ಪ್ಲೇ ಫಿಂಗರ್ ಪ್ರಿಂಟ್:

ಇನ್‌ ಡಿಸ್‌ಪ್ಲೇ ಫಿಂಗರ್ ಪ್ರಿಂಟ್:

ಇದಲ್ಲದೇ ಶಿಯೋಮಿ 8 ಸ್ಮಾರ್ಟ್‌ಪೋನಿನಲ್ಲಿ ಇನ್‌ ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗುವುದು. ಇದು ಈ ಸ್ಮಾರ್ಟ್‌ಫೋನಿನ ವಿಶೇಷತೆಗಳಲ್ಲಿ ಒಂದಾಗಲಿದ್ದು, ಟಾಪ್ ಆಂಡ್ರಾಯ್ಡ್ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಸರಣಿಯಲ್ಲಿ ಈ ಆಯ್ಕೆ ಇಲ್ಲ ಎನ್ನಲಾಗಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಇದಲ್ಲದೇ ಶಿಯೋಮಿ 8 ಸ್ಮಾರ್ಟ್‌ಪೋನಿನಲ್ಲಿ ವೇಗ ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಟಾಪ್ ಪ್ರೋಸೆಸರ್ ಆದ ಸ್ನಾಪ್‌ಡ್ರಾಗನ್ 845 ಅನ್ನು ಅಳವಡಿಸುವುದಲ್ಲದೇ ಉತ್ತಮ ಗ್ರಾಫಿಕ್ಸ್ ಕಾರ್ಡ್ ಅನ್ನು ನೀಡಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಅಮೊಲೈಡ್ ಡಿಸ್‌ಪ್ಲೇ:

ಅಮೊಲೈಡ್ ಡಿಸ್‌ಪ್ಲೇ:

ಗುಣಮಟ್ಟದ ವಿಡಿಯೋವನ್ನು ಪ್ಲೇ ಮಾಡುವ ಸಲುವಾಗಿ ಈ ಸ್ಮಾರ್ಟ್‌ಫೋನಿನಲ್ಲಿ ಅಮೊಲೈಡ್ ಡಿಸ್‌ಪ್ಲೇಯನ್ನು ನೀಡಲಿದೆ ಎಲ್ಲದೇ ಮೂಲಗಳ ಪ್ರಕಾರ ಸ್ಟಾಕ್ ಆಂಡ್ರಾಯ್ಡ್ ನೀಡುವ ಯೋಜನೆಯೂ ಇದೆ ಎನ್ನಲಾಗಿದೆ.

8GB RAM:

8GB RAM:

ಶಿಯೋಮಿ 8 ಸ್ಮಾರ್ಟ್‌ಪೋನಿನಲ್ಲಿ 8GB RAM ಅನ್ನು ನೀಡಲಾಗಿದ್ದು, ಇದರೊಂದಿಗೆ 256 GB ಇಂಟರ್ನಲ್ ಮೆಮೊರಿಯನ್ನು ಹೊಂದಿರಲಿದೆ. ಇದರಿಂದಾಗಿ ಶಿಯೋಮಿ 8 ಸ್ಮಾರ್ಟ್‌ಪೋನ್ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ ಎನ್ನುವ ಖ್ಯಾತಿಯನ್ನು ಪಡೆದುಕೊಳ್ಳಲಿದೆ.

Best Mobiles in India

English summary
Xiaomi Mi 8 could feature in-display fingerprint scanner. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X