Home
ಮೊಬೈಲ್

ಭಾರತದಲ್ಲಿ 'ಶಿಯೋಮಿ ಮಿ8' ಬಿಡುಗಡೆ ದಿನಾಂಕ ಫಿಕ್ಸ್!..ಖರೀದಿಸಲು ಕ್ಯೂ ಗ್ಯಾರಂಟಿ!!

By Bhaskar N J

ಶಿಯೋಮಿ ಕಂಪೆನಿಯ 8ನೇ ವಾರ್ಷಿಕ ಸಮಾರಂಭದಲ್ಲಿ ವಿಶ್ವ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿದ್ದ ಶಿಯೋಮಿಯ ಫ್ಲಾಶ್‌ಶಿಪ್ ಸ್ಮಾರ್ಟ್‌ಫೋನ್ ಒಂದು ಭಾರತಕ್ಕೆ ಎಂಟ್ರಿ ನೀಡಲು ತಯಾರಾಗಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಹಾಟ್‌ಕೇಕ್‌ನಂತೆ ಮಾರಾಟವಾಗಿದ್ದ ಪ್ರೀಮಿಯಮ್ ಸ್ಮಾರ್ಟ್‌ಪೋನ್ 'ಶಿಯೋಮಿ ಮಿ8' ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿದೆ.

ಹೌದು, 'ಆಪಲ್ ಐಫೋನ್ ಎಕ್ಸ್' ನಾಚ್ ಡಿಸ್‌ಪ್ಲೇ ವಿನ್ಯಾಸದಲ್ಲಿ ಬಿಡುಗಡೆಯಾದ ಮೊದಲ ಶಿಯೋಮಿ ಬ್ರ್ಯಾಂಡ್ ಸ್ಮಾರ್ಟ್‌ಫೋನ್ ಇದಾಗಿದ್ದು, ಇನ್‌ಫ್ರಾರೆಡ್ ಫೇಸ್‌ಲಾಕ್‌ ಫೀಚರ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ.ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುವ ಸಲುವಾಗಿಯೇ ಶಿಯೋಮಿ ಕಂಪೆನಿ 'ಶಿಯೋಮಿ ಮಿ8' ಸ್ಮಾರ್ಟ್‌ಪೋನ್ ಅನ್ನು ಹೊರತಂದಿದೆ.

  ಭಾರತದಲ್ಲಿ 'ಶಿಯೋಮಿ ಮಿ8' ಬಿಡುಗಡೆ ದಿನಾಂಕ ಫಿಕ್ಸ್!.ಖರೀದಿಸಲು ಕ್ಯೂ ಗ್ಯಾರಂಟಿ

ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 845 Soc ಪ್ರೊಸೆಸರ್, 12 ಮೆಗಾಫಿಕ್ಸೆಲ್ ಸಾಮರ್ಥ್ಯದ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನಂತಹ ಫೀಚರ್ಸ್ ಹೊತ್ತು 'ಶಿಯೋಮಿ ಮಿ8' ಸ್ಮಾರ್ಟ್‌ಪೋನ್ ಭಾಋತದ ಮಾರುಕಟ್ಟೆಗೆ ಕಾಲಿಡುತ್ತಿದ್ದು, ಹಾಗಾದರೆ, 'ಶಿಯೋಮಿ ಮಿ8' ಸ್ಮಾರ್ಟ್‌ಪೋನ್ ಫೀಚರ್ಸ್ ಯಾವುವು?, ಭಾರತದಲ್ಲಿ ಬೆಲೆ ಎಷ್ಟು?ಎಂಬ ಮಾಹಿತಿಯನ್ನು ಮುಂದೆ ತಿಳಿಯಿರಿ.

ಶಿಯೋಮಿ ಮಿ8 ಡಿಸ್‌ಪ್ಲೇ ಮತ್ತು ವಿನ್ಯಾಸ!

ಶಿಯೋಮಿ ಮಿ8 ಡಿಸ್‌ಪ್ಲೇ ಮತ್ತು ವಿನ್ಯಾಸ!

18.7:9 ಆಕಾರ ಅನುಪಾತದ 6.21-ಇಂಚಿನ ಫುಲ್ ಹೆಚ್‌ಡಿ ಪ್ಲಸ್ (1080x2248 ಪಿಕ್ಸೆಲ್ಸ್) ಡಿಸ್‌ಪ್ಲೇಯನ್ನು 'ಶಿಯೋಮಿ ಮಿ8' ಸ್ಮಾರ್ಟ್‌ಪೋನಿನಲ್ಲಿ ನೀಡಲಾಗಿದೆ. ಹೈ ಎಂಡ್ ಸ್ಮಾರ್ಟ್‌ಫೋನ್ ಆಗಿರುವುದರಿಂದ ಸ್ಯಾಮ್ಸಂಗ್ AMOLED ಡಿಸ್‌ಪ್ಲೇಯನ್ನು 'ಶಿಯೋಮಿ ಮಿ8' ಫೋನಿನಲ್ಲಿ ತರಲಾಗಿದೆ. ಶೇ. 88.5 ಪ್ರತಿಶತ ಸ್ಕ್ರೀನ್ ಸ್ಮಾರ್ಟ್‌ಫೋನ್ ಬೆಜೆಲ್‌ಲೆಸ್ ಆಗುವಲ್ಲಿ ಸಹಾಯಕವಾಗಿದೆ. 'ಐಫೋನ್ ಎಕ್ಸ್' ನಾಚ್ ವಿನ್ಯಾಸದ ಡಿಸ್‌ಪ್ಲೇ ಹಾಗೂ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಫೀಚರ್, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ವಿನ್ಯಾಸವನ್ನು ಫೋನ್ ಹೊಂದಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

'ಶಿಯೋಮಿ ಮಿ8' ಸ್ಮಾರ್ಟ್‌ಪೋನ್ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 845 Soc ಪ್ರೊಸೆಸರ್ ಹೊಂದಿದೆ. ಅಂಟುಂಟು ಬೆಂಚ್ ಮಾರ್ಕ್‌ನಲ್ಲಿ 301,472 ಅಂಕ ಗಳಿಸಿದೆ. 6GB ಮತ್ತು 8GB LPDDR4X RAM ನೊಂದಿಗೆ 'ಶಿಯೋಮಿ ಮಿ8' ಸ್ಮಾರ್ಟ್‌ಪೋನ್ ಬಿಡುಗಡೆಯಾಗಿದ್ದು, 8GB RAM ಎಕ್ಸ್‌ಪ್ಲೋರರ್ ಆವೃತ್ತಿಯಲ್ಲಿ ಮಾತ್ರ ಒಳಗೊಂಡಿದೆ. 6GB ಮತ್ತು 128GB ಹಾಗೂ 8GB ಮತ್ತು 256GBಯ ಎರಡು ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್!

ಡ್ಯುಯಲ್ ಕ್ಯಾಮೆರಾ ಸೆಟಪ್!

12 ಮೆಗಾಪಿಕ್ಸೆಲ್ಸ್ ಸಾಮರ್ಥ್ಯದ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು 'ಶಿಯೋಮಿ ಮಿ8' ಸ್ಮಾರ್ಟ್‌ಪೋನಿನಲ್ಲಿ ಅಳವಡಿಸಲಾಗಿದೆ. ಈ ಬಾರಿ ಸೆಲ್ಫೀ ಕ್ಯಾಮೆರಾಗೆ ಹೆಚ್ಚು ಒತ್ತು ನೀಡಿರುವ ಶಿಯೋಮಿ ಕಂಪೆನಿ 1.8 ಮೈಕ್ರಾನ್ ಪಿಕ್ಸೆಲ್, 2.0 ಅಪಾರ್ಚರ್ ಹೊಂದಿರುವ 20 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಿದೆ. ಡ್ಯುಯಲ್ ಪಿಕ್ಸೆಲ್ ಆಟೋಫೋಕಸ್, ಎಐ ಭಾವಚಿತ್ರಗಳು, ಎಐ ದೃಶ್ಯ ಪತ್ತೆ ತಂತ್ರಜ್ಞಾನವನ್ನು ಹೊಂರುವ ಸ್ಮಾರ್ಟ್‌ಫೋನಿನ DxOMark ಫೋಟೋ ಸ್ಕೋರ್ 105 ಎಂದು ಶಿಯೋಮಿ ಹೇಳಿಕೊಂಡಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಶಿಯೋಮಿ ಮಿ8' ಸ್ಮಾರ್ಟ್‌ಪೋನಿನಲ್ಲಿ 3400mAh ಬ್ಯಾಟರಿಯನ್ನು ನೀಡಲಾಗಿದೆ. ಫಾಸ್ಟ್ ಚಾರ್ಜಿಂಗ್, ಇನ್‌ಫ್ರಾರೆಡ್ ಫೇಸ್‌ಲಾಕ್‌ ಫೀಚರ್, 4 ಜಿ ವೋಲ್ಟ್, ಬ್ಲೂಟೂತ್ 5.0, ಎನ್ಎಫ್‌ಸಿ, ಡ್ಯುಯಲ್ ಫ್ರಿಕ್ವೆನ್ಸಿ ಜಿಪಿಎಸ್, ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸೆನ್ಸಾರ್, ಮತ್ತು ಟೈಪ್-ಸಿ ಯುಎಸ್‌ಬಿಯಂತಹ ಹೈ ಎಂಡ್ ಫೀಚರ್ಸ್ ಸ್ಮಾರ್ಟ್‌ಫೋನ್ ಅನ್ನು ಅಲಂಕರಿಸಿವೆ. ಆಪಲ್ ಐಫೋನ್ ಎಕ್ಸ್‌ನಲ್ಲಿ ತಂದಿರುವ ಗುಣಮಟ್ಟದ ಇನ್‌ಫ್ರಾರೆಡ್ ಫೇಸ್‌ಲಾಕ್‌ ಫೀಚರ್ ತಂದಿರುವುದು ಈ ಸ್ಮಾರ್ಟ್‌ಫೋನಿನ ವಿಶೇಷತೆಯಾಗಿದೆ.

ಶಿಯೋಮಿ ಮಿ8 ಬೆಲೆ ಮತ್ತು ಲಭ್ಯತೆ

ಶಿಯೋಮಿ ಮಿ8 ಬೆಲೆ ಮತ್ತು ಲಭ್ಯತೆ

ವೈಟ್, ಗೋಲ್ಡ್, ಲೈಟ್ ಬ್ಲೂ ಮತ್ತು ಬ್ಲಾಕ್ ಬಣ್ಣ ಆಯ್ಕೆಗಳಲ್ಲಿ ಬಿಡುಗಡೆಯಾಗಿರುವ ಶಿಯೋಮಿ ಮಿ8 6ಜಿಬಿ RAM / 128 ಜಿಬಿ ಶೇಖರಣಾ ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆಯನ್ನು 2,999 ಸಿಎನ್‌ವೈಗಳಿಗೆ (ಸುಮಾರು 31,600 ರೂ.) ಶಿಯೋಮಿ ಕಂಪೆನಿ ನಿಗದಿಪಡಿಸಿದೆ. ಇನ್ನು 6ಜಿಬಿ RAM / 64 ಜಿಬಿ ಶೇಖರಣಾ ವೆರಿಯಂಟ್ ಸ್ಮಾರ್ಟ್‌ಫೋನ್ 2,699 ಸಿಎನ್‌ವೈ (ಸರಿಸುಮಾರು ರೂ. 28,600)ಗಳಾಗಿದ್ದು, ನವೆಂಬರ್ ತಿಂಗಳೀನ ಮೊದಲ ವಾರದಲ್ಲಿ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ.

'ಗೊರಿಲ್ಲಾ ಗ್ಲಾಸ್ 6'!...ಇನ್ಮುಂದೆ ನಿಮ್ಮ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಒಡೆಯುವುದಿಲ್ಲ!!

'ಗೊರಿಲ್ಲಾ ಗ್ಲಾಸ್ 6'!...ಇನ್ಮುಂದೆ ನಿಮ್ಮ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಒಡೆಯುವುದಿಲ್ಲ!!

ಇತ್ತೀಚಿನ ಒಂದು ಅಧ್ಯಯನದ ಪ್ರಕಾರ, ಮೊಬೈಲ್ ಬಳಕೆದಾರರು ವರ್ಷಕ್ಕೆ ಸರಾಸರಿ ಏಳು ಬಾರಿ ತಮ್ಮ ಫೋನ್‌ಗಳನ್ನು ಬೀಳಿಸುತ್ತಾರೆ ಎಂಬ ಮಾಹಿತಿ ನೀಡಿದೆ. ಈ ಅಧ್ಯಯನ ಹೇಳುವಂತೆ, ಓರ್ವ ವ್ಯಕ್ತಿ ಮೊಬೈಲ್ ಅನ್ನು ಕೆಳಗೆ ಬೀಳಿಸಿಕೊಳ್ಳುವವರಲ್ಲಿ ಶೇ 50% ಹೆಚ್ಚು ಬೀಳುವಿಕೆ 1 ಮೀಟರ್ ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ ಎಂಬ ಮಾಹಿತಿಯನ್ನು ನೀಡಿದೆ.
ಇದರಿಂದ ತಿಳಿಯುವುದು ಏನೆಂದರೆ, ಸರಾಸರಿ ಕೇವಲ 1 ಮೀಟರ್ ಗಿಂತ ಕಡಿಮೆ ಎತ್ತರದಿಂದ ಮೊಬೈಲ್ ಅನ್ನು ಬೀಳಿಸಿದರೂ ಸಹ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಒಡೆದುಹೋಗುತ್ತದೆ. ಬಹುತೇಕರ ಸ್ಮಾರ್ಟ್‌ಪೋನ್ ಡಿಸ್‌ಪ್ಲೇ ಒಡೆದುಹೋಗಿರುವುದನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಇದು ನಮಗೆ ಸ್ಪಷ್ಟವಾಗುತ್ತದೆ. ಆದರೆ, ಇದು ಇನ್ನು ಶಾಶ್ವತವಲ್ಲ.!

ಹೌದು, ಆಕಸ್ಮಿಕವಾಗಿ ಕೈ ಜಾರಿ ಬಿದ್ದ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಒಡೆಯದಿರುವಂತಹ ರಕ್ಷಣೆ ನೀಡಲು 'ಗೊರಿಲ್ಲಾ ಗ್ಲಾಸ್ 6' ಮಾರುಕಟ್ಟೆಗೆ ಬಂದಿದೆ. ಈ 'ಗೊರಿಲ್ಲಾ ಗ್ಲಾಸ್ 6' ಸ್ಮಾರ್ಟ್‌ಫೋನ್ ಬಳಕೆದಾರರ ಡಿಸ್‌ಪ್ಲೇ ಒಡೆಯುವ ಸಮಸ್ಯೆಗೆ ಬಹುತೇಕ ಪರಿಹಾರವನ್ನು ತರುವ ಶಕ್ತಿ ಹೊಂದಿದೆ. ಹಾಗಾದರೆ, 'ಗೊರಿಲ್ಲಾ ಗ್ಲಾಸ್ 6' ಹೇಗಿದೆ ಎಂಬುದನ್ನು ಮುಂದೆ ತಿಳಿಯೋಣವೇ.?

'ಗೊರಿಲ್ಲಾ ಗ್ಲಾಸ್ 6'!

'ಗೊರಿಲ್ಲಾ ಗ್ಲಾಸ್ 6'!

ಕಾರ್ನಿಂಗ್ ಇನ್‌ಕಾರ್ಪೊರೇಟೆಡ್ ಸಂಸ್ಥೆ ಗಾಜಿನ ತಂತ್ರಜ್ಞಾನದಲ್ಲಿ ತನ್ನ ಅತ್ಯಾಧುನಿಕ ಪ್ರಗತಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6 ಪರಿಚಯಿಸಿದೆ. ಮೊಬೈಲ್ ಡಿವೈಸ್‌ಗಳಲ್ಲಿ ಕಠಿಣ ಕವರ್ ಗ್ಲಾಸ್ ಪೂರೈಕೆಯಲ್ಲಿ ಒಂದು ದಶಕದ ಸುದೀರ್ಘ ಪರಂಪರೆ ಹೊಂದಿರುವ ಕಂಪೆನಿ ಗೊರಿಲ್ಲಾ ಗ್ಲಾಸ್ 6 ಕಾರ್ನಿಂಗ್ ಅನ್ನು ತಂತ್ರಜ್ಞಾನ ಕ್ಚೇತ್ರಕ್ಕೆ ಸಮರ್ಪಿಸಿದೆ.

ಇನ್ಮುಂದೆ ಡಿಸ್‌ಪ್ಲೇ ಒಡೆಯುವುದಿಲ್ಲ.!

ಇನ್ಮುಂದೆ ಡಿಸ್‌ಪ್ಲೇ ಒಡೆಯುವುದಿಲ್ಲ.!

ಕಾರ್ನಿಂಗ್ ಇನ್‌ಕಾರ್ಪೊರೇಟೆಡ್ ತಯಾರಿಸಿರುವ 'ಗೊರಿಲ್ಲಾ ಗ್ಲಾಸ್ 6' ಮೊಬೈಲ್‌ಗಳಲ್ಲಿ ಬಳಕೆಗೆ ಬಂದರೆ ಇನ್ಮುಂದೆ ಯಾವುದೇ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಒಡೆಯುವುದಿಲ್ಲ ಎನ್ನಬಹುದು. ಏಕೆಂದರೆ, ಸರಾಸರಿ ಪ್ರಯೋಗಾಲಯಗಳ ಪರೀಕ್ಷೆಗಳಲ್ಲಿ ಗೊರಿಲ್ಲಾ ಗ್ಲಾಸ್ 6 ಒರಟಾದ ಮೇಲ್ಮೈನಲ್ಲಿ 1 ಮೀಟರ್ ಎತ್ತರದಿಂದ 15 ಬೀಳುವಿಕೆಯನ್ನು ತಡೆದುಕೊಂಡಿದೆ.

ಗೊರಿಲ್ಲಾ ಗ್ಲಾಸ್ 5 + ಗೊರಿಲ್ಲಾ ಗ್ಲಾಸ್ 5!

ಗೊರಿಲ್ಲಾ ಗ್ಲಾಸ್ 5 + ಗೊರಿಲ್ಲಾ ಗ್ಲಾಸ್ 5!

ನೂತನವಾಗಿ ಬಿಡುಗಡೆಯಾಗಿರುವ 'ಗೊರಿಲ್ಲಾ ಗ್ಲಾಸ್ 6' ಸಾಮರ್ಥ್ಯ ಗೊರಿಲ್ಲಾ ಗ್ಲಾಸ್ 5ಕ್ಕಿಂತ ಎರಡು ಪಟ್ಟು ಉತ್ತಮವಾಗಿದೆ.ಗೊರಿಲ್ಲಾ ಗ್ಲಾಸ್ 6 ಸಂಪೂರ್ಣ ಹೊಸ ಗಾಜಿನ ಸಂಯೋಜನೆ ಅದನ್ನು ಗೊರಿಲ್ಲಾ ಗ್ಲಾಸ್ 5ರೊಂದಿಗೆ ಸಾಧ್ಯವಿದ್ದ ಕಂಪ್ರೆಷನ್‌ಗಿಂತ ಹೆಚ್ಚಿನ ಪ್ರಮಾಣ ನೀಡಿ ಸದೃಢಗೊಳಿಸಲಾಗಿದೆ.

ಹಾನಿಗೆ ಹೆಚ್ಚು ನಿರೋಧಕ!

ಹಾನಿಗೆ ಹೆಚ್ಚು ನಿರೋಧಕ!

ಗೊರಿಲ್ಲಾ ಗ್ಲಾಸ್ 6' ಪರೀಕ್ಷೆಯ ಪರಿಸ್ಥಿತಿಗಳಲ್ಲಿ ಸ್ಪರ್ಧಿಯಾಗಿರುವ ಗಾಜಿನ ಸಂಯೋಜನೆಗಳಲ್ಲಿ ಸೋಡಾ ಲೈಮ್ ಮತ್ತು ಅಲ್ಯುಮಿನೊಸಿಲಿಕೇಟ್ ಸೇರಿಸಿದ್ದು ಮೊದಲ ಸಲ ಬೀಳುವಿಕೆಯನ್ನೇ ತಡೆಯುವುದಿಲ್ಲ. ಆದರೆ, ಗೊರಿಲ್ಲಾ ಗ್ಲಾಸ್ 6 ಕಾರ್ನಿಂಗ್‌ನ ಅತ್ಯಂತ ದೀರ್ಘ ಬಾಳಿಕೆಯ ಮತ್ತು ಹೆಚ್ಚು ಸಾಮರ್ಥ್ಯದ ಕವರ್ ಗ್ಲಾಸ್ ಆಗಿದೆ.

ಗೊರಿಲ್ಲಾ ಗ್ಲಾಸ್ 6' ಬಳಕೆ ಯಾವಾಗ?

ಗೊರಿಲ್ಲಾ ಗ್ಲಾಸ್ 6' ಬಳಕೆ ಯಾವಾಗ?

ಇಷ್ಟೆಲ್ಲಾ ಸಾಮರ್ಥ್ಯವನ್ನು ಹೊಂದಿರುವ 'ಗೊರಿಲ್ಲಾ ಗ್ಲಾಸ್ 6' ಅನ್ನು ನಾವು ಇನ್ಮುಂದೆ ಮಾರುಕಟ್ಟೆಗೆ ಕಾಲಿಡುವ ಸ್ಮಾರ್ಟ್‌ಪೋನ್‌ಗಳಲ್ಲಿ ನಿರೀಕ್ಷಿಸಬಹುದಾಗಿದೆ. ಚಿಕ್ಕಪುಟ್ಟ ಏಟುಗಳನ್ನೆಲ್ಲಾ ಸುಲಭವಾಗಿ ತಡೆದುಕೊಳ್ಳುವ ಈ ಗ್ಲಾಸ್ ತಂತ್ರಜ್ಞಾನದ ಸಹಾಯದಿಂದಾಗಿ ಇನ್ಮುಂದೆ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಒಡೆಯುವುದು ಒಂದು ಸಮಸ್ಯೆಯಾಗಿರುವುದಿಲ್ಲ.

Best Mobiles in India

English summary
Xiaomi Mi 8 price in India likely to be less than Rs 30,000: Check expected launch date and specifications. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+