ಮತ್ತೊಂದು ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ ಶಿಯೋಮಿ..!
ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುವಲ್ಲಿ ಮುಂಚುಣಿಯಲ್ಲಿರುವ ಶಿಯೋಮಿ ಕಂಪನಿಯೂ ನೂತನವಾಗಿ ಸ್ನಾಪ್ ಡ್ರಾಗನ್ 710 ಪ್ರೋಸೆಸರ್ ಹೊಂದಿರುವ ಶಿಯೋಮಿ Mi 8 ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿತ್ತು. ಈಗ ಇದರ ಮುಂದುವರೆದ ಭಾಗವಾಗಿ ಶಿಯೋಮಿ Mi 8 SE ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿ ಈ ಮೂಲಕ ಮಾರುಕಟ್ಟೆಯಲ್ಲಿ ಮತ್ತೊಂದು ಸುತ್ತಿನ ಸ್ಪರ್ಧೆಯನ್ನು ಸೃಷ್ಠಿಸಲಿದೆ ಎನ್ನಲಾಗಿದೆ.
ಎರಡು ಆವೃತ್ತಿಯಲ್ಲಿ ಶಿಯೋಮಿ Mi 8 SE ಸ್ಮಾರ್ಟ್ ಫೋನ್ ಕಾಣಿಸಿಕೊಳ್ಳಲಿದ್ದು, 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ಹಾಗೂ 6 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ಮತ್ತೊಂದು ಆವೃತ್ತಿಯಲ್ಲಿ ಶಿಯೋಮಿ Mi 8 SE ಸ್ಮಾರ್ಟ್ ಫೋನ್ ಮಾರಾಟವಾಗಲಿದೆ. ಇದಕ್ಕೇ ಮತ್ತೊಂದು ಹೊಸ ಆವೃತ್ತಿಯೂ ಆಪ್ಡೇಟ್ ಆಗುತ್ತಿದೆ. ಇದೇ 6 GB RAM ಮತ್ತು 128 GB ಇಂಟರ್ನಲ್ ಮೆಮೊರಿಯ ಮತ್ತೊಂದು ಆವೃತ್ತಿ.

ಶಿಯೋಮಿ Mi 8 SE ಸ್ಮಾರ್ಟ್ ಫೋನ್ ಮೈಕ್ರೋ SD ಕಾರ್ಡ್ ಸಫೋರ್ಟ್ ಮಾಡುವುದಿಲ್ಲ ಎನ್ನಲಾಗಿದೆ. 6 GB RAM ಮತ್ತು 128 GB ಇಂಟರ್ನಲ್ ಮೆಮೊರಿಯ ಶಿಯೋಮಿ Mi 8 SE ಸ್ಮಾರ್ಟ್ ಫೋನ್ ಚೀನಾ ಮಾರುಕಟ್ಟೆಯಲ್ಲಿ ಮೊದಲಿಗೆ ಕಾಣಿಸಿಕೊಳ್ಳಲಿದ್ದು, ಭಾರತೀಯ ರೂಪಾಯಿಗಳಲ್ಲಿ ರೂ.23100ಕ್ಕೆ ಮಾರಾಟವಾಗಲಿದೆ ಎನ್ನಲಾಗಿದೆ. ಅಲ್ಲಿನ ಮಿ ಸ್ಟೋರ್ ಗಳಲ್ಲಿ ಇನ್ನು ಬೆಲೆಯ ಬಗ್ಗೆ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ.
ಈಗಾಗಲೆ ಲಭ್ಯವಿರುವ 6 GB RAM ಮತ್ತು 64 GB ಇಂಟರ್ನಲ್ ಮೆಮೊರಿಯ ಶಿಯೋಮಿ Mi 8 SE ಸ್ಮಾರ್ಟ್ ಫೋನ್ ರೂ.21,100ಕ್ಕೆ ಮತ್ತು 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯ ಆಚೃತ್ತಿ ರೂ.18,900ಕ್ಕೆ ಲಭ್ಯವಿದೆ.
ಇದನ್ನು ಬಿಟ್ಟು ಶಿಯೋಮಿ Mi 8 SE ಸ್ಮಾರ್ಟ್ ಫೋನ್ MIUI 10 ನಲ್ಲಿ ಕಾರ್ಯನಿರ್ವಹಿಸಲಿದ್ದು, 5.88 ಇಂಚಿನ ಅಮೊಲೈಡ್ ಫುಲ್ ಸ್ಕ್ರಿನ್ HD+ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. 2.5D ಕರ್ವಡ್ ಗ್ಲಾಸ್ ವಿನ್ಯಾಸವನ್ನು ನೀಡಲಾಗಿದೆ. ಇದರಲ್ಲಿ 2.2GHz ವೇಗದ ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 710 ಪ್ರೋಸೆಸರ್ ನೊಂದಿಗೆ ಆಡ್ರಿನೋ 616 GPU ವನ್ನು ನೀಡಲಾಗಿದೆ.
ಶಿಯೋಮಿ Mi 8 SE ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮರಾವನ್ನು ನೋಡಬಹುದಾಗಿದ್ದು, 12 MP + 5 MP ಲೆನ್ಸ್ ಅನ್ನು ನೋಡಬಹುದಾಗಿದೆ. ಇದಲ್ಲದೇ ಮುಂಭಾಗದಲ್ಲಿ 20 MP ಕ್ಯಾಮೆರಾವನ್ನು ಸೆಲ್ಫಿಗಾಗಿ ನೀಡಲಾಗಿದೆ.


Click it and Unblock the Notifications








