Just In
- 16 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 18 hrs ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 day ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
Don't Miss
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Movies
Ramachari Serial: ಒತ್ತಾಯ ಮಾಡಿದರೂ ವ್ರತ ಬಿಡಲೊಪ್ಪದ ರಾಮಾಚಾರಿ!
- News
ಅಮಿತ್ ಶಾ ಜಮ್ಮುವಿನಿಂದ ಲಾಲ್ ಚೌಕ್ವರೆಗೆ ನಡೆಯಲಿ: ರಾಹುಲ್ ಗಾಂಧಿ ಸವಾಲು
- Sports
ಭಾರತ ತಂಡಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ಆಸೆಯಿದ್ದರೆ ಹೀಗೆ ಮಾಡಲಿ ಎಂದ ಸೌರವ್ ಗಂಗೂಲಿ
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜಾಗತಿಕ ಆಂಡ್ರಾಯ್ಡ್ ಒನ್ ಫೋನ್ ಮಾರುಕಟ್ಟೆಯಲ್ಲಿ ಶಿಯೋಮಿಯೇ ಕಿಂಗ್!
ಭಾರತದ ನಂ.1 ಮೊಬೈಲ್ ಕಂಪೆನಿ ಶಿಯೋಮಿಯ ಮುಕುಟಕ್ಕೆ ಮತ್ತೊಂದು ಗರಿ ಸೇರಿದೆ. ಗೂಗಲ್‌ನ ಆಂಡ್ರಾಯ್ಡ್ ಒನ್ ಯೋಜನೆಯಡಿಯಲ್ಲಿ ಬಿಡುಗಡೆಯಾದ ಸ್ಮಾರ್ಟ್‌ಪೋನ್‌ಗಳ ಮಾರುಕಟ್ಟೆಯಲ್ಲಿ ಶಿಯೋಮಿ ಅತಿಹೆಚ್ಚು ಪೋನ್‌ಗಳು ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ. ಆನ್‌ಬೋರ್ಡ್ ಶುದ್ಧ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಫೋನ್‌ಗಳಲ್ಲಿ ಶಿಯೋಮಿಯ 'ಮಿ ಎ' ಸರಣಿ ಫೋನ್‌ಗಳು ಹೆಚ್ಚು ಮಾರಾಟವಾಗಿರುವುದನ್ನು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕ್ಯಾನಾಲಿಸ್ ತಿಳಿಸಿದೆ.

ಹೌದು, ಕ್ಯಾನಾಲಿಸ್ ತನ್ನ ವರದಿಯಲ್ಲಿ ತಿಳಿಸಿದಂತೆ 2017 ರಲ್ಲಿ ಮಿ ಎ1 ಮಾರಾಟದ ಪ್ರಮಾಣವು ಇತರ ಆಂಡ್ರಾಯ್ಡ್ ಒನ್ ಹ್ಯಾಂಡ್‌ಸೆಟ್‌ಗಳಿಗಿಂತ 2.4 ಪಟ್ಟು ಹೆಚ್ಚಾಗಿದೆ ಎಂದು ತೋರಿಸುತ್ತದೆ. ಅದೇ ಬೆಳಕಿನಲ್ಲಿ, ಮಿ ಎ 2 ಮಾರಾಟವು 2018 ರಲ್ಲಿ ಬಿಡುಗಡೆಯಾದಾಗ ಇತರ ಆಂಡ್ರಾಯ್ಡ್ ಒನ್ ಫೋನ್‌ಗಳಾದ ನೋಕಿಯಾ 3.1, ನೋಕಿಯಾ 6.2 ಮತ್ತು ಮೊಟೊರೊಲಾ ಒನ್ ಸರಣಿಗಳಿಗಿಂತ ಇನ್ನೂ ಮುಂದಿದೆ. ಒಟ್ಟಾರೆಯಾಗಿ, ಮಿ ಎ ಸರಣಿಯ 10 ಮಿಲಿಯನ್ ಯೂನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ಕಂಪನಿ ಹೇಳಿದೆ.

ಶಿಯೋಮಿ ಇತ್ತೀಚಿಗಷ್ಟೇ ಬಿಡುಗಡೆ ಮಾಡಿದ ಆಂಡ್ರಾಯ್ಡ್ ಒನ್ ಫೋನ್ ಮಿ ಎ3 ಯಶಸ್ವಿಯಾಗಿ ಮಾರಾಟವಾಗುತ್ತಿರುವ ಸಮಯದಲ್ಲೇ ಇಂತಹದೊಂದು ಸುದ್ದಿ ಹೊರಬಿದ್ದಿರುವುದು ಕಂಪೆನಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ. ಉಡಾವಣಾ ಸಮಾರಂಭದಲ್ಲಿ ಆಂಡ್ರಾಯ್ಡ್ ಕ್ಯೂ ಸಾಫ್ಟ್‌ವೇರ್ ನವೀಕರಣವನ್ನು ಸಹ ಮಿ ಎ 3 ಸ್ಮಾರ್ಟ್‌ಫೋನ್ ಪಡೆಯುತ್ತಿದ್ದು, ಮೊಬೈಲ್ ಪ್ರಿಯರನ್ನು ಆಕರ್ಷಿಸುತ್ತಿದೆ. ಹಾಗಾದರೆ, ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ ಹೇಗಿದೆ?, ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಡಿಸ್‌ಪ್ಲೇ ಹೇಗಿದೆ
ಶಿಯೋಮಿಮಿ ಎ3 ಸ್ಮಾರ್ಟ್‌ಫೋನ್ 1560x720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.1 ಇಂಚಿನ ಹೆಚ್‌ಡಿ ಪ್ಲಸ್ AMOLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇ ಅನುಪಾತವು 19.5:9 ಆಗಿದೆ. ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆ ಹೊಂದಿದ್ದು, ಸ್ಕ್ರೀನ್ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 5 ಅನ್ನು ಒಳಗೊಂಡಿದೆ. ಗ್ರೇಡಿಯಂಟ್ ಪ್ಯಾನೆಲ್ ರಚನೆ ಪಡೆದಿದ್ದು, ಸುತ್ತಳತೆಯು 153.48x71.85x8.5mm ಆಗಿದೆ.

ಪ್ರೊಸೆಸರ್ ಹಾಗೂ ಮೆಮೊರಿ
ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 665 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 9 ಓಎಸ್ ಬೆಂಬಲ ಪಡೆದಿದೆ. 4GB RAM + 64GB ಮತ್ತು 6GB RAM + 128GB ಸಾಮರ್ಥ್ಯದ ವೇರಿಯಂಟ್ ಮಾದರಿಗಳ ಆಯ್ಕೆ ಇದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯಮೆಮೊರಿಯನ್ನು 256GB ವರೆಗೂ ವಿಸ್ತರಿಸಬಹುದಾಗದ ಅವಕಾಶ ಇದೆ.

ಹೈ ಸೆನ್ಸಾರ್ ಕ್ಯಾಮೆರಾ
ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾವು ಎಫ್ / 1.78 ಅಪರ್ಚರ್ನೊಂದಿಗೆ 48ಎಂಪಿ ಸೆನ್ಸಾರ್ ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಹೊಂದಿದ್ದು, ಇನ್ನು ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಸೆಲ್ಫಿ ಕ್ಯಾಮೆರಾ ವಿಶೇಷ
ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನಿನಲ್ಲಿ ಸೆಲ್ಫಿ ಕ್ಯಾಮೆರಾ ಹೆಚ್ಚಿನ ಗಮನ ನೀಡಿದ್ದು, ಎಫ್ / 2.0 ಅಪರ್ಚರ್ನೊಂದಿಗೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾವನ್ನು ನೀಡಲಾಗಿದೆ. ಹಾಗೆಯೇ ಈ ಕ್ಯಾಮೆರಾವು ಎಐ ಪೋರ್ಟ್ರೇಟ್ ಮೋಡ್, 3 ಡಿ ಬ್ಯೂಟಿ, ಪನೋರಮಾ, ಗೆಸ್ಚರ್ ಫೋಟೋ, ಫ್ರಂಟ್ ಎಚ್‌ಡಿಆರ್ ಮತ್ತು ಫ್ರಂಟ್ ಸ್ಕ್ರೀನ್ ಫಿಲ್ ಸೇರಿದಂತೆ ಹಲವು ಅಗತ್ಯ ಕ್ಯಾಮೆರಾ ತಂತ್ರಜ್ಞಾನಗಳನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ 4,030mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಬೆಂಬಲವನ್ನು ಒಳಗೊಂಡಿದೆ. ಇದರೊಂದಿಗೆ 4ಜಿ ವೋಲ್ಟ್, ಸ್ಲೊ ಮೋಷನ್ ವಿಡಿಯೋ ರೆಕಾರ್ಡಿಂಗ್, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿದಂತೆ ಅಗತ್ಯ ಆಯ್ಕೆಗಳನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಅಮೆಜಾನ್, Mi.com, ಮಿ ಹೋಮ್ ತಾಣಗಳಲ್ಲಿ ಖರೀದಿಗೆ ಲಭ್ಯವಾಗಲಿದ್ದು, 4GB RAM + 64GB ವೇರಿಯಂಟ್ ಆರಂಭಿಕ ಬೆಲೆಯು 12,999ರೂ.ಗಳಾಗಿದೆ. ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ 750ರೂ.ಗಳ ಕ್ಯಾಶ್‌ಬ್ಯಾಕ್ ದೊರೆಯಲಿದ್ದು, ಹಾಗೂ ಇಎಮ್‌ಐಗಳ ಟ್ರಾನ್ಶಾಕ್ಷನ್ ಮೇಲೆ 250ರೂ ಕ್ಯಾಶ್‌ಬ್ಯಾಕ್ ಸಿಗಲಿದೆ. ಹಾಗೆಯೇ ಏರ್‌ಟೆಲ್‌ನಿಂದ (249ರೂ. ರೀಚಾರ್ಜ್) ಡಬಲ್ ಡೇಟಾ ಮತ್ತು ಅನಿಯಮಿತ ಕರೆಯ ಕೊಡುಗೆ ಲಭ್ಯವಾಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470