ಸ್ಟೋರ್‌ನಲ್ಲಿ ಕಾಣಿಸಿಕೊಂಡ ಬಹು ನಿರೀಕ್ಷಿತ ಶಿಯೋಮಿ Mi A2: ಬೆಲೆ ಕೇಳಲೇ ಬೇಡಿ, ಬುಕ್ ಮಾಡಲು ರೆಡಿಯಾಗಿ..!
ಜಾಗತಿಕವಾಗಿ ಭಾರೀ ನಿರೀಕ್ಷೆಯನ್ನು ಹುಟ್ಟಿಹಾಕಿರುವ ಶಿಯೋಮಿ ಕಂಪನಿಯ ಶಿಯೋಮಿ Mi A2 ಮತ್ತು ಶಿಯೋಮಿ Mi A2 ಲೈಟ್ ಸ್ಮಾರ್ಟ್‌ಫೋನ್ ಇದೇ ಜುಲೈ 24 ರಂದು ಜಾಗತಿಕವಾಗಿ ಸ್ಪೇನ್‌ನಲ್ಲಿ ಬಿಡಗಡೆಯಾಗಲಿದೆ. ಆದರೆ ಇದಕ್ಕೂ ಮುನ್ನವೇ ಆಫಿಷಿಯಲ್ ಆಗಿ ಸ್ಟೋರ್‌ವೊಂದರಲ್ಲಿ ಕಾಣಿಸಿಕೊಂಡಿದೆ. ಸ್ಮಾರ್ಟ್‌ಫೋನ್ ಬೆಲೆಯ ಕುರಿತು ಸಾಕಷ್ಟು ಮಾಹಿತಿಯೂ ಲೀಕ್ ಆಗಿದೆ. ಇದರಿಂದಾಗಿ ಈ ಸ್ಮಾರ್ಟ್‌ಫೋನ್ ಇನ್ನಷ್ಟು ಬೇಡಿಕೆ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲಿದೆ.

ಈಗಾಗಲೇ ಆಂಡ್ರಾಯ್ಡ್ ಒನ್ ನಲ್ಲಿ ಕಾರ್ಯನಿರ್ವಹಿಸುವ ಶಿಯೋಮಿ Mi A1 ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸಖತ್ ಹಿಟ್ ಆಗಿತ್ತು. ಈ ಹಿನ್ನಲೆಯಲ್ಲಿ ಶಿಯೋಮಿ ಗೂಗಲ್ ಜೊತೆಗೆ ಸೇರಿ ಶಿಯೋಮಿ Mi A2 ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಇದರೊಂದಿಗೆ ಶಿಯೋಮಿ Mi A2 ಲೈಟ್ ಸ್ಮಾರ್ಟ್‌ಫೋನ್ ಸಹ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಎನ್ನಲಾಗಿದೆ.

ಶಿಯೋಮಿ Mi A2 ಸ್ಮಾರ್ಟ್‌ಫೋನ್:
ಶಿಯೋಮಿ Mi A2 ಸ್ಮಾರ್ಟ್‌ಫೋನ್ ಎರಡು ಆವೃತ್ತಿಯಲ್ಲಿ ಮಾರಾಟವಾಗಲಿದೆ ಎನ್ನಲಾಗಿದೆ. ಶಿಯೋಮಿ Mi A2 ಸ್ಮಾರ್ಟ್‌ಫೋನ್ 4 GB RAM ನೊಂದಿಗೆ ಕಾರ್ಯನಿರ್ವಹಿಸಲಿದೆ. 32 GB ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ. ಇದಲ್ಲದೇ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವು ಇದರಲ್ಲಿದೆ.

ಶಿಯೋಮಿ Mi A2 ಲೈಟ್ ಸ್ಮಾರ್ಟ್‌ಫೋನ್:
ಶಿಯೋಮಿ Mi A2 ಲೈಟ್ ಸ್ಮಾರ್ಟ್‌ಫೋನ್ ಸಹ ಎರಡು ಆವೃತ್ತಿಯಲ್ಲಿ ಮಾರಾಟವಾಗಲಿದೆ. 3GB ಮತ್ತು 32GB ಇಂಟರ್ನಲ್ ಮೆಮೊರಿಯೊಂದಿಗೆ ಹಾಗೂ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ಸೇಲ್ ಆಗಲಿದೆ. ಇದಲ್ಲದೇ ಇದರಲ್ಲಿ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವು ಇದರಲ್ಲಿದೆ.

ಬೆಲೆ:
32 GB ಇಂಟರ್ನಲ್ ಮೆಮೊರಿಯ ಶಿಯೋಮಿ Mi A2 ಸ್ಮಾರ್ಟ್‌ಫೋನ್ ರೂ.22,131ಕ್ಕೆ ಮತ್ತು 64 GB ಇಂಟರ್ನಲ್ ಮೆಮೊರಿಯ ಫೋನ್ ರೂ.24143ಕ್ಕೆ ಮಾರಾಟವಾಗುತ್ತಿದೆ. ಶಿಯೋಮಿ Mi A2 ಲೈಟ್ ಸ್ಮಾರ್ಟ್‌ಫೋನ್ 3 GB ಮತ್ತು 32 GB ಇಂಟರ್ನಲ್ ಮೆಮೊರಿಯ ಆವೃತ್ತಿ ರೂ.16,095 ಹಾಗೂ 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯ ಫೋನ್ ರೂ.19,717ಕ್ಕೆ ದೊರೆಯಲಿದೆ. ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗುವ ಸಂದರ್ಭದಲ್ಲಿ ಬೆಲೆಯಲ್ಲಿ ಇನ್ನು ಕಡಿಮೆಯಾಗುವ ಲಕ್ಷಣ ಇದೆ.

ಶಿಯೋಮಿ Mi A2 ಸ್ಮಾರ್ಟ್‌ಫೋನ್:
ಶಿಯೋಮಿ Mi A2 ಸ್ಮಾರ್ಟ್ ಫೋನಿನಲ್ಲಿ 6 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, 18:9 ಅನುಪಾತದ ಡಿಸ್ ಪ್ಲೇ ಯಲ್ಲಿ ವಿಡಿಯೋ ಮತ್ತು ಗೇಮ್ ಆಡುವ ಅನುಭವನ್ನು ಉತ್ತಮವಾಗಿರಲಿದೆ ಎನ್ನಲಾಗಿದೆ. ಅಲ್ಲದೇ ಇದು FHD+ ಗುಣಮಟ್ಟದಿಂದ ಕೂಡಿದೆ. ಇದರೊಂದಿಗೆ ವೇಗವಾಗಿ ಕಾರ್ಯನಿರ್ವಹಿಸುವ ಸಲುವಾಗಿ ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಇದರಿಂದಾಗಿ ಶಿಯೋಮಿ Mi A2 ಸ್ಮಾರ್ಟ್ ಫೋನ್ ವೇಗವಾಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಡ್ಯುಯಲ್ ಕ್ಯಾಮೆರಾ;
ಶಿಯೋಮಿ Mi A2 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದ್ದು, 12 MP + 20 MP ಕ್ಯಾಮೆರಾವನ್ನು ಇದರಲ್ಲಿ ಕಾಣಬಹುದು. ಇದು ಉತ್ತಮ ಚಿತ್ರಗಳನ್ನು ಸೆರೆ ಹಿರಿಯಲು ಸಹಾಯ ಮಾಡಲಿದೆ. ಟಾಪ್ ಎಂಡ್ ಸ್ಮಾರ್ಟ್ ಫೋನಿನಲ್ಲಿ ಕ್ಲಿಕ್ ಮಾಡಿದ ಕ್ವಾಲಿಟಿಯನ್ನು ಕಾಣಬಹುದಾಗಿದೆ.

ಶಿಯೋಮಿ Mi A2 ಲೈಟ್ ಸ್ಮಾರ್ಟ್ ಫೋನ್:
ಶಿಯೋಮಿ Mi A2 ಸ್ಮಾರ್ಟ್ ಫೋನ್ ಡಿಸ್‌ಪ್ಲೇ ಸೈಜ್ ಅನ್ನೇ ಶಿಯೋಮಿ Mi A2 ಲೈಟ್ ಸ್ಮಾರ್ಟ್ ಫೋನಿನಲ್ಲಿಯೂ ಕಾಣಬಹುದಾಗಿದೆ. ಆದರೆ ಇದರಲ್ಲಿ 19:9 ಅನುಪಾತದ ನೋಚ್ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಅಲ್ಲದೇ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಮತ್ತು ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದೆ.


Click it and Unblock the Notifications



