Home
ಮೊಬೈಲ್

ಶಿಯೋಮಿ-ಗೂಗಲ್ ಜೋಡಿಯ ಸ್ಮಾರ್ಟ್ ಫೋನ್: ಯಾವುದು..? ಮಾರುಕಟ್ಟೆಯಲ್ಲಿ ಇದೇ ಬೆಸ್ಟ್..?

By Srinidhi

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಸ್ಮಾರ್ಟ್ ಫೋನ್ ಗಳ ಹಾವಳಿಯೂ ಎಚ್ಚಾಗಿದೆ ಎಂದು ಹೇಳಬಹುದಾಗಿದೆ. ರೆಡ್ ಮಿ ನೋಟ್ 5 ಪ್ರೋ ಈಗಲೂ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿ ಇರುವುದು ಇದಕ್ಕೇ ಸಾಕ್ಷಿಯಾಗಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದ Mi A1 ಸ್ಮಾರ್ಟ್ ಫೋನ್ ಮುಂದುವರೆದ ಭಾಗವನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಶಿಯೋಮಿ ಮುಂದಾಗಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸುವ ಸಾಧ್ಯತೆ ಇದೆ.

ಈಗಾಗಲೇ ಆಂಡ್ರಾಯ್ಡ್ ಒನ್ ನಲ್ಲಿ ಕಾರ್ಯುನಿರ್ವಹಿಸುವ Mi A1 ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಬರೆದಿತ್ತು, ಈ ಸ್ಮಾರ್ಟ್ ಫೋನ್ ಯಶಸ್ಸಿನ ಹಿನ್ನಲೆಯಲ್ಲಿ ಶಿಯೋಮಿ ಗೂಗಲ್ ಜೊತೆಗೆ ಸೇರಿ Mi A2 ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಇದನ್ನು Mi 6X ಸ್ಮಾರ್ಟ್ ಫೋನ್ ಎಂದು ಪರಿಚಯಿಸುವ ಸಾಧ್ಯತೆ ಇದ್ದು, ಈ ಸ್ಮಾರ್ಟ್ ಫೋನ್ ಕುರಿತ ಸಂಪೂರ್ಣ ಮಾಹಿತಿಯೂ ಲೀಕ್ ಆಗಿದೆ. ಈ ಹಿನ್ನಲೆಯಲ್ಲಿ ಶಿಯೋಮಿ Mi A2 ಸ್ಮಾರ್ಟ್ ಫೋನ್ ಕುರಿತ ಮಾಹಿತಿಯೂ ಇಲ್ಲಿದೆ.

ಶಿಯೋಮಿ-ಗೂಗಲ್ ಜೋಡಿಯ ಸ್ಮಾರ್ಟ್ ಫೋನ್: ಮಾರುಕಟ್ಟೆಯಲ್ಲಿ ಇದೇ ಬೆಸ್ಟ್..?

ಎರಡು ಮಾದರಿಯಲ್ಲಿ ಲಭ್ಯ

ಎರಡು ಮಾದರಿಯಲ್ಲಿ ಲಭ್ಯ

ಶಿಯೋಮಿ Mi A2 ಸ್ಮಾರ್ಟ್ ಫೋನ್ ಎರಡು ಆವೃತ್ತಿಯಲ್ಲಿ ದೊರೆಯುವ ಸಾಧ್ಯತೆ ಇದೆ. 32 GB ಇಂಟರ್ನಲ್ ಮೆಮೊರಿಯ ಸ್ಮಾರ್ಟ್ ಫೋನ್ ರೂ.19000ದ ಅಸುಪಾಸಿನಲ್ಲಿ ದೊರೆಯಲಿದ್ದು, ಇದೇ ಮಾದರಿಯಲ್ಲಿ 128 GB ಇಂಟರ್ನಲ್ ಮೆಮೊರಿಯ ಸ್ಮಾರ್ಟ್ ಫೋನ್ ರೂ. 25,000ಕ್ಕೆ ಮಾರಾಟವಾಗಲಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ಓರಿಯೊ

ಆಂಡ್ರಾಯ್ಡ್ ಓರಿಯೊ

ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಶುರು ಮಾಡಿರುವ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಿಸಲು ಶಿಯೋಮಿ Mi A2 ಸ್ಮಾರ್ಟ್ ಫೋನ್ ಶಕ್ತವಾಗಿರಲಿದ್ದು, ಆಂಡ್ರಾಯ್ಡ್ ಓನ್ ಕಾರ್ಯಚರಣೆಯನ್ನು ಹೊಂದಿರಲಿದೆ. ಇದಲ್ಲದೇ ಆಂಡ್ರಾಯ್ಡ್ ಪಿ ಗೂ ಸಹ ಆಪ್ ಡೇಟ್ ಆಗಲಿದೆ.

ಫುಲ್ ಸ್ಕ್ರಿನ್ ಡಿಸ್ ಪ್ಲೇ

ಫುಲ್ ಸ್ಕ್ರಿನ್ ಡಿಸ್ ಪ್ಲೇ

ಇದಲ್ಲದೇ ಶಿಯೋಮಿ Mi A2 ಸ್ಮಾರ್ಟ್ ಫೋನಿನಲ್ಲಿ 5.99 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, 18:9 ಅನುಪಾತದ ಡಿಸ್ ಪ್ಲೇ ಯಲ್ಲಿ ವಿಡಿಯೋ ಮತ್ತು ಗೇಮ್ ಆಡುವ ಅನುಭವನ್ನು ಉತ್ತಮವಾಗಿರಲಿದೆ ಎನ್ನಲಾಗಿದೆ. ಅಲ್ಲದೇ ಇದು FHD+ ಗುಣಮಟ್ಟದಿಂದ ಕೂಡಿದೆ.

4GB  RAM

4GB RAM

ಶಿಯೋಮಿ Mi A2 ಸ್ಮಾರ್ಟ್ ಫೋನಿನಲ್ಲಿ 4GB RAM ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ ವೇಗವಾಗಿ ಕಾರ್ಯನಿರ್ವಹಿಸುವ ಸಲುವಾಗಿ ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಇದರಿಂದಾಗಿ ಶಿಯೋಮಿ Mi A2 ಸ್ಮಾರ್ಟ್ ಫೋನ್ ವೇಗವಾಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ಶಿಯೋಮಿ Mi A2 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದ್ದು, ಇದು ಉತ್ತಮ ಚಿತ್ರಗಳನ್ನು ಸೆರೆ ಹಿರಿಯಲು ಸಹಾಯ ಮಾಡಲಿದೆ. ಟಾಪ್ ಎಂಡ್ ಸ್ಮಾರ್ಟ್ ಫೋನಿನಲ್ಲಿ ಕ್ಲಿಕ್ ಮಾಡಿದ ಕ್ವಾಲಿಟಿಯನ್ನು ಕಾಣಬಹುದಾಗಿದೆ.

3100mAh ಬ್ಯಾಟರಿ

3100mAh ಬ್ಯಾಟರಿ

ಶಿಯೋಮಿ Mi A2 ಸ್ಮಾರ್ಟ್ ಫೋನಿನಲ್ಲಿ 3100mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದರೊಂದಿಗೆ ವೇಗವಾಗಿ ಚಾರ್ಜ್ ಮಾಡುವ ಸಲುವಾಗಿ ಕ್ವಿಕ್ ಚಾರ್ಜರ್ 3.0ವನ್ನು ನೀಡಲಾಗಿದೆ. ಇದರಿಂದಾಗಿ ವೇಗವಾಗಿ ಶಿಯೋಮಿ Mi A2 ಸ್ಮಾರ್ಟ್ ಫೋನ್ ಚಾರ್ಜ್ ಆಗಲಿದೆ.

Best Mobiles in India

English summary
Xiaomi Mi A2 android one smartphone. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+