Home
ಮೊಬೈಲ್

ಸ್ಮಾರ್ಟ್‌ಫೋನ್ ಖರೀದಿಸಲು ಶಿಯೋಮಿ Mi A2 ಬರುವ ತನಕ ಕಾಯಬೇಕು ಏಕೆ..?

By Srinidhi

ಚೀನಾ ಮೂಲದ ಶಿಯೋಮಿ ಕಂಪನಿಯೂ ಮೊದಲ ಬಾರಿಗೆ ಗೂಗಲ್ ನೊಂದಿಗೆ ಸೇರಿ ಮಾರುಕಟ್ಟೆಗೆ ಲಾಂಚ್ ಮಾಡಿದ್ದ ಆಂಡ್ರಾಯ್ಡ್ ಒನ್ ಕಾರ್ಯಚರಣೆಯನ್ನು ಹೊಂದಿರುವ ಶಿಯೋಮಿ MI A1 ಸ್ಮಾರ್ಟ್‌ಫೋನ್ ಸಾಕಷ್ಟು ಪ್ರಮಾಣದಲ್ಲಿ ಬೇಡಿಕೆಯನ್ನು ಹೊಂದಿತ್ತು. ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದಲ್ಲದೇ ಬಳಕೆದಾರರು ಶಿಯೋಮಿಯಲ್ಲಿ ಸ್ಟಾಕ್ ಆಂಡ್ರಾಯ್ಡ್ ಅನುಭವನ್ನು ಮೆಚ್ಚಿಕೊಂಡಿದ್ದರು.

ಸ್ಮಾರ್ಟ್‌ಫೋನ್ ಖರೀದಿಸಲು ಶಿಯೋಮಿ Mi A2  ಬರುವ ತನಕ ಕಾಯಬೇಕು ಏಕೆ..?

ಈ ಹಿನ್ನಲೆಯಲ್ಲಿ ಶಿಯೋಮಿ Mi A2 ಸ್ಮಾರ್ಟ್‌ಫೋನ್ ಅನ್ನು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿಯೂ ಈ ಹಿಂದೆಯೇ ಕೇಳಿ ಬಂದಿತ್ತು. ಸದ್ಯ ಈ ಮಾಹಿತಿಯೂ ಖಚಿತವಾಗಿದ್ದು, ಶೀಘ್ರವೇ ಶಿಯೋಮಿ Mi A2 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಶಿಯೋಮಿ ಒಟ್ಟು ಮೂರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದ್ದು, ಇದರಲ್ಲಿ ಶಿಯೋಮಿ Mi A2 ಕೂಡ ಒಂದಾಗಿರಲಿದೆ.

ಶಿಯೋಮಿ Mi A2 ಸ್ಮಾರ್ಟ್‌ಫೋನ್‌ ಈ ಹಿಂದಿನಂತೆ ಆಂಡ್ರಾಯ್ಡ್ ಒನ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಡ್ಯುಯಲ್ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸೇರಿದಂತೆ ಎಲ್ಲಾ ಮಾದರಿಯ ಆಯ್ಕೆಗಳನ್ನು ಹೊಂದಿರಲಿದೆ ಎನ್ನಲಾಗಿದ್ದು, ಆಂಡ್ರಾಯ್ಡ್ ಆಪ್ ಗಳೊಂದಿಗೆ ಶಿಯೋಮಿಯ ಕೇಲವು ಆಪ್‌ಗಳನ್ನು ಕಾಣುವ ಸಾಧ್ಯತೆ ಇದೆ.

ಸ್ಮಾರ್ಟ್‌ಫೋನ್ ಖರೀದಿಸಲು ಶಿಯೋಮಿ Mi A2  ಬರುವ ತನಕ ಕಾಯಬೇಕು ಏಕೆ..?

ಶಿಯೋಮಿ Mi A2 ಸ್ಮಾರ್ಟ್‌ಫೋನಿಲ್ಲಿ ಈ ಬಾರಿ 18:9 ಅನುಪಾತದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಇದು FHD+ ಗುಣಮಟ್ಟವನ್ನು ಹೊಂದಿರಲಿದೆ. ಅಲ್ಲದೇ 2910mAh ಬ್ಯಾಟರಿಯನ್ನು ಶಿಯೋಮಿ ಅಳವಡಿಸಿದೆ ಎನ್ನಲಾಗಿದೆ. ಇದಲ್ಲದೇ ಸ್ನಾಪ್‌ಡ್ರಾಗನ್ 636 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, 4GB/6GB RAM ಮತ್ತು 64GB/128GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?

ಶಿಯೋಮಿ Mi A2 ಹಿಂಭಾಗದಲ್ಲಿ 20MP + 12MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಮುಂಭಾಗದಲ್ಲಿ 20MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದೇ ಈ ಸ್ಮಾರ್ಟ್‌ಫೋನಿನ ಆಕರ್ಷಣೆಗಳಲ್ಲಿ ಒಂದಾಗಲಿದೆ. ಈ ಸ್ಮಾರ್ಟ್‌ಫೋನ್ ಬಿಡುಗಡೆಯಾದಲ್ಲಿ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಕಾಣುವ ಸಾಧ್ಯತೆ ಇದೆ.

Best Mobiles in India

English summary
Xiaomi Mi A2 Expected to Launch in India Very Soon. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+