ಭಾರತದಲ್ಲಿ ಶಿಯೋಮಿ Mi A2 ಆಗಸ್ಟ್ 8ರಂದು ಲಾಂಚ್...!
ಶಿಯೋಮಿ ಹೊಸದಾಗಿ ಆಂಡ್ರಾಯ್ಡ್ ಒನ್ ನಲ್ಲಿ ಕಾರ್ಯನಿರ್ವಹಿಸುವ ಶಿಯೋಮಿ Mi A2 ಮತ್ತು Mi A2 ಲೈಟ್ ಸ್ಮಾರ್ಟ್‌ಫೋನ್ ಗಳನ್ನು ಸ್ಪೇನ್ ನಲ್ಲಿ ಜುಲೈ 24 ರಂದು ಲಾಂಚ್ ಮಾಡಿತ್ತು. ಇದಾದ ನಂತರಲ್ಲಿ ಭಾರತದಲ್ಲಿಯೂ ಈ ಬೊಂಬಾಟ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಈ ಕುರಿತು ಟ್ವಿಟರ್ ನಲ್ಲಿ ಭಾರತದ ಶಿಯೋಮಿ ಮ್ಯಾನೆಜಿಂಗ್ ಡೈರೆಕ್ಟರ್ ಮನುಕುಮಾರ್ ಜೈನ್ ಮಾಹಿತಿಯನ್ನು ನೀಡಿದ್ದು, ಆಗಸ್ಟ್ 8 ರಂದು ಭಾರತೀಯ ಮಾರುಕಟ್ಟೆಗೆ ಶಿಯೋಮಿ Mi A2 ಪರಿಚಯವಾಗಲಿದೆ ಎಂದಿದ್ದಾರೆ.
ಆದರೆ ನಮ್ಮ ಮಾರುಕಟ್ಟೆಯಲ್ಲಿ Mi A2 ಲೈಟ್ ಸ್ಮಾರ್ಟ್‌ಫೋನ್ ಲಾಂಚ್ ಆಗುವುದಿಲ್ಲ. ಇದಲ್ಲದೇ ಶಿಯೋಮಿ Mi A2 ಸ್ಮಾರ್ಟ್‌ಫೋನ್ ಲಾಂಚ್ ಕಾರ್ಯಕ್ರಮಕ್ಕೆ ಆಹ್ವಾನವನ್ನು ಕಳುಹಿಸಿದ್ದು, ಆಗಸ್ಟ್ 8 ರಂದು ದೆಹಲಿಯಲ್ಲಿ ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಫೋನ್ ಲಾಂಚ್ ಮಾಡುವುದಾಗಿ ತಿಳಿಸಿದ್ದಾರೆ. ಇದರಲ್ಲಿ Mi A2 ಲೈಟ್ ಸ್ಮಾರ್ಟ್‌ಫೋನ್ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಆಂಡ್ರಾಯ್ಡ್ ಒನ್ ನಲ್ಲಿ ಕಾರ್ಯನಿರ್ವಹಿಸುವ ಶಿಯೋಮಿ Mi A2 ಸ್ಮಾರ್ಟ್‌ಫೋನ್ 5.99 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 18:9 ಅನುಪಾತದ ಡಿಸ್ ಪ್ಲೇಯೂ FHD+ ಗುಣಮಟ್ಟದಿಂದ ಕೂಡಿದೆ. ಇದಲ್ಲದೇ ಈ ಸ್ಮಾರ್ಟ್ ಫೋನ್ ಸ್ನಾಪ್ ಡ್ರಾಗನ್ 660 ದಲ್ಲಿ ಕಾರ್ಯನಿರ್ವಹಿಸಲಿದೆ. ಇದು 2.2GHz ವೇಗವನ್ನು ಹೊಂದಿದೆ. ಎರಡು ಆವೃತ್ತಿಯಲ್ಲಿ Mi A2 ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ.
Mi A2 ಸ್ಮಾರ್ಟ್‌ಫೋನ್ 4 GB RAM ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ಹಾಗೂ 6GB RAM ಮತ್ತು 128GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಆದರೆ ಮೊಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ನೀಡಿಲ್ಲ.
ಶಿಯೋಮಿ Mi A2 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು, 12 MP + 20 MP ಕ್ಯಾಮೆರಾವನ್ನು ಇದರಲ್ಲಿ ಕಾಣಬಹುದು. ಸೆಲ್ಫಿಗಾಗಿ 20 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಪ್ರೋಟ್ರೆಟ್ ಗಳನ್ನು ತೆಗೆಯಲು ಕೃತಕ ಬುದ್ಧಿಮತ್ತೆಯನ್ನು ನೀಡಲಾಗಿದೆ.
ಇದಲ್ಲದೇ Mi A2 ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಹೊಂದಿದ್ದು, USB ಟೈಪ್ C ಪೋರ್ಟ್ ಅನ್ನು ಹೊಂದಿದೆ. ಇದಕ್ಕಾಗಿಯೇ ಆಡಿಯೋ ಜಾಕ್ ನೀಡಲಾಗಿಲ್ಲ ಮತ್ತು ಈ ಸ್ಮಾರ್ಟ್ ಫೋನಿನಲ್ಲಿ 3000mAh ಬ್ಯಾಟರಿಯನ್ನು ಸಹ ಕಾಣಬಹುದಾಗಿದೆ. ಅಲ್ಲದೇ ವೇಗವ ಚಾರ್ಜಿಂಗಾಗಿ ಕ್ವಿಕ್ ಚಾರ್ಜರ್ 4.0ವನ್ನು ಇದರಲ್ಲಿ ಕಾಣಬಹುದಾಗಿದೆ.


Click it and Unblock the Notifications




