Home
ಮೊಬೈಲ್

'ಶಿಯೋಮಿ ಮಿ ಎ2' ಬೆಲೆ ಮತ್ತೆ ಇಳಿಕೆ!..ಆಫರ್ ಇನ್ನೆರಡು ದಿನಗಳು ಮಾತ್ರ!

ಶಿಯೋಮಿಯ ಮೊಟ್ಟ ಮೊದಲ ಆಂಡ್ರಾಯ್ಡ್ ಓನ್ ಸ್ಮಾರ್ಟ್‌ಫೋನ್ 'ಶಿಯೋಮಿ ಮಿ ಎ2' ಸೀಮಿತ ಅವಧಿಯ ಆಫರ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಹೊಸ ಆನ್‌ಲೈನ್ ರಿಯಾಯಿತಿ ಮಿ ಸೂಪರ್ ಸೇಲ್ ಸಮಯದಲ್ಲಿ ಮುಂದಿನ ಎರಡು ದಿನಗಳ ಕಾಲ 'ಶಿಯೋಮಿ ಮಿ ಎ2' ಸ್ಮಾರ್ಟ್‌ಫೋನನ್ನು ಕೇವಲ 10,999 ರೂ.ಗಳಿಗೆ ಖರೀದಿಸಬಹುದಾಗಿದ್ದು, 4 ಜಿಬಿ RAM ಮತ್ತು 64 ಜಿಬಿ ಶೇಖರಣಾ ಮಾದರಿಯಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಪೋನ್ ಮೊಬೈಲ್ ಪ್ರಿಯರ ಗಮನಸೆಳೆಯುತ್ತಿದೆ.

'ಶಿಯೋಮಿ ಮಿ ಎ2' ಬೆಲೆ ಮತ್ತೆ ಇಳಿಕೆ!..ಆಫರ್ ಇನ್ನೆರಡು ದಿನಗಳು ಮಾತ್ರ!

ಹೌದು, ಜುಲೈ 9, 2019ಕ್ಕೆ ಕೊನೆಗೊಳ್ಳುವ ಮಿ ಸೂಪರ್ ಸೇಲ್‌ನಲ್ಲಿ 'ಶಿಯೋಮಿ ಮಿ ಎ2' ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿದ್ದು, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ ಎರಡೂ ಇ ಕಾಮರ್ಸ್ ತಾಣದಲ್ಲೂ ಸಹ ಸ್ಮಾರ್ಟ್‌ಪೋನನ್ನು ಖರೀದಿಸಬಹುದಾಗಿದೆ. ಇನ್ನು 4 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಮಾದರಿಯ ಈ ಫೋನ್ 10,999 ರೂಪಾಯಿಗಳಿಗೆ ದೊರೆಯುತ್ತಿರುವುದಲ್ಲದೇ, ಇದರ ಜೊತೆಗೆ ಹೆಚ್ಚುವರಿ 2000 ರೂಪಾಯಿಗಳ ವಿನಿಮಯ ಪ್ರಸ್ತಾಪದೊಂದಿಗೆ ಸ್ಮಾರ್ಟ್‌ಫೋನ್ ಸಿಗಲಿದೆ.

ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ ಬಿಡುಗಡೆಯಾದಾಗ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿತ್ತು. 18:9 ಆಕಾರ ಅನುಪಾತದೊಂದಿಗೆ 5.99-ಇಂಚಿನ ಪೂರ್ಣ-ಎಚ್‌ಡಿ + ಪ್ರದರ್ಶನವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 660 ಪ್ರೊಸೆಸರ್ ಮೂಲಕ ರನ್ ಆಗಲಿದೆ. ಹಾಗಾದರೆ, ಇದೀಗ ಬೆಲೆ ಕಳೆದುಕೊಂಡಿರುವ ಜನಪ್ರಿಯ 'ಮಿ ಎ2' ಸ್ಮಾರ್ಟ್‌ಫೋನ್ ಫೀಚರ್ಸ್ ಹೇಗಿವೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ?

ಡಿಸ್‌ಪ್ಲೇ ಮತ್ತು ವಿನ್ಯಾಸ?

'ಮಿ ಎ2'" ಸ್ಮಾರ್ಟ್‌ಪೋನ್ 19:9 ಅನುಪಾತದ 5,99 ಇಂಚು ಡಿಸ್‌ಪ್ಲೆಯನ್ನು ಹೊಂದಿದ್ದು, 2.5 ಡಿ ಬಾಗಿದ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ,ಹಿಂಬಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆ ನೀಡಲಾಗಿದೆ. ರೋಸ್ ಗೋಲ್ಡ್, ಕೆಂಪು, ಕಪ್ಪು ಮತ್ತು ಚಿನ್ನದ ಬಣ್ಣಗಳಲ್ಲಿ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿರುವ ಸ್ಮಾರ್ಟ್‌ಫೋನಿನ ವಿನ್ಯಾಸ ಈಗಲೂ ಸಹ ಪ್ರಸ್ತುತ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 660 soc ಪ್ರೊಸೆಸರ್ (ನಾಲ್ಕು 2.2GHz ಕಿರೋ 260 ಕೋರ್ಗಳು + ನಾಲ್ಕು 1.8GHz ಕಿರೋ 260 ಕೋರ್ಗಳು) ಮತ್ತು ಅಡ್ರಿನೊ 512 ಜಿಪಿಯು ಅನ್ನು 'ಶಿಯೋಮಿ ಮಿ ಎ2' ಸ್ಮಾರ್ಟ್‌ಪೋನ್ ಹೊಂದಿದೆ. 4/6GB LPDDR4x ಡ್ಯುಯಲ್ ಚಾನೆಲ್ RAM ಮತ್ತು 128GB ಆಂತರಿಕ ಸ್ಟೋರೇಜ್ ಆಯ್ಕೆಗಳೊಂದಿಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

ಡ್ಯುಯಲ್ ರಿಯರ್ ಕ್ಯಾಮೆರಾ!

ಡ್ಯುಯಲ್ ರಿಯರ್ ಕ್ಯಾಮೆರಾ!

f / 1.75 ಅಪಾರ್ಚರ್ ಮತ್ತು ಸ್ಥಿರ ಫೋಕಲ್ ಇರುವ 20-ಮೆಗಾಪಿಕ್ಸೆಲ್ ಸೋನಿ IMX376 ಸೆಲ್ಫಿ ಕ್ಯಾಮೆರಾ ಹಾಗೂ 20 ಮತ್ತು 12 ಮೆಗಾಪಿಕ್ಸೆಲ್‌ನ ಎರಡು ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. 20-ಮೆಗಾಪಿಕ್ಸೆಲ್‌ನ ಎರಡೂ ಕ್ಯಾಮೆರಾಗಳು 1-ಮೈಕ್ರಾನ್ ಪಿಕ್ಸೆಲ್ ಅಪಾರ್ಚರ್ ಗಾತ್ರ ಹೊಂದಿದ್ದು, ಸಾಫ್ಟ್-ಎಲ್ಇಡಿ ಫ್ಲಾಶ್, ಆಟೋಫೋಕಸ್ ಮತ್ತು ದ್ವಿ-ಟೋನ್ ಹೊಂದಿದೆ.

ಕೃತಕ ಬುದ್ದಿಮತ್ತೆ AI ತಂತ್ರಜ್ಞಾನ!

ಕೃತಕ ಬುದ್ದಿಮತ್ತೆ AI ತಂತ್ರಜ್ಞಾನ!

'ಶಿಯೋಮಿ ಮಿ ಎ2'ನಲ್ಲಿ ಹಲವು ತಂತ್ರಜ್ಞಾನಗಳು ಕೃತಕ ಬುದ್ದಿಮತ್ತೆಯಿಂದ ಕಾರ್ಯನಿರ್ವಹಿಸಲಿವೆ. ಫೋಟೋಗಳಲ್ಲಿ ಉತ್ತಮ ಬಣ್ಣಗಳಿಗಾಗಿ AI ದೃಶ್ಯ ಗುರುತಿಸುವಿಕೆ, ಕೃತಕ ಬುದ್ದಿಮತ್ತೆ ಸ್ಮಾರ್ಟ್ ಬ್ಯೂಟಿ 4.0, ಕೃತಕ ಬುದ್ದಿಮತ್ತೆ ಕರೆನ್ಸಿ ಪರಿವರ್ತನೆ ಹಾಗೂ ಕೃತಕ ಬುದ್ದಿಮತ್ತೆ ಭಾಷಾಂತ ಸೇವೆಗಳನ್ನು ಸ್ಮಾರ್ಟ್‌ಫೋನ್ ಮೂಲಕ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

ಚಾರ್ಜಿಂಗ್ ತಂತ್ರಜ್ಞಾನ

ಚಾರ್ಜಿಂಗ್ ತಂತ್ರಜ್ಞಾನ

'ಶಿಯೋಮಿ ಮಿ ಎ2' ಸ್ಮಾರ್ಟ್‌ಪೋನಿನಲ್ಲಿ 3010mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್‌ಪೋನಿನ ಬ್ಯಾಟರಿ ಚಾರ್ಜಿಂಗ್ ತಂತ್ರಜ್ಞಾನದಲ್ಲಿ ಶಿಯೋಮಿ ಸ್ವಲ್ಪ ಅಪ್‌ಡೇಟ್ ಆಗಿದ್ದು, ಕ್ವಿಕ್ಚಾರ್ಜ್ 3.0 ಗೆ ಬೆಂಬಲವನ್ನು ತಂದಿದೆ. ಇದರಿಂದ ಶಿಯೋಮಿ ಮಿ ಎ2 ಸ್ಮಾರ್ಟ್‌ಪೋನ್ ಕೇವಲ 30 ನಿಮಿಷಗಳಲ್ಲಿ 50% ಚಾರ್ಜ್ ಆಗಲಿದೆ.

 ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

4G LTE, ಡ್ಯುಯಲ್-ಬ್ಯಾಂಡ್ Wi-Fi ಎ / ಬೌ / ಗ್ರಾಂ / ಎನ್ / ಎಸಿ, ವೈ-ಫೈ ಡೈರೆಕ್ಟ್, ಮಿರಾಕಾಸ್ಟ್, ಬ್ಲೂಟೂತ್ 5.0, ಐಆರ್ ಎಮಿಟರ್, ಯುಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಫೇಸ್‌ ಅನ್‌ಲಾಕ್ ಫೀಚರ್ಸ್‌ಗಳನ್ನು'ಶಿಯೋಮಿ ಮಿ ಎ2' ಸ್ಮಾರ್ಟ್‌ಪೋನಿನಲ್ಲಿ ನೀಡಲಾಗಿದೆ. ಆದರೆ, ಇದೇ ಮೊದಲ ಬಾರಿಗೆ ಈ ಸ್ಮಾರ್ಟ್‌ಫೋನಿನಲ್ಲಿ 3.5 ಮಿಮೀ ಇಯರ್ಫೋನ್ ಜಾಕ್ ನೀಡಿಲ್ಲ.

Best Mobiles in India

English summary
Xiaomi Mi A2 is available at its lowest price during Mi Days and Mi Super Sale. It is available with up to Rs. 6,500 discount and is retailing currently at as low as Rs. 10,999. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+