Home
ಮೊಬೈಲ್

ಶಿಯೋಮಿ ಹೆಡ್ ಕೊಟ್ಟ ಕ್ಲೂ: ಆಗಸ್ಟ್ 8ಕ್ಕೆ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸುನಾಮಿ..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿರುವ ಶಿಯೋಮಿ, ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಜಾದೂ ಮಾಡಲಿದೆ. ಈಗಾಗಲೇ ಒಮ್ಮೆ ಸ್ಟಾಕ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ವೊಂದನ್ನು ಲಾಂಚ್ ಮಾಡಿ ಬಳಕೆದಾರರಿಗೆ ಹುಚ್ಚು ಹಿಡಿಸಿದ್ದ ಮಾದರಿಯಲ್ಲಿಯೇ ಮತ್ತೊಂದು ಬೊಂಬಾಟ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ ಇದೇ ಆಗಸ್ಟ್ 8 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಹು ನಿರೀಕ್ಷಿತ ಶಿಯೋಮಿ Mi A2 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದ್ದು, ಬೇರೆಲ್ಲಾ ಫೋನ್‌ಗಳು ಈ ಅಲೆಯಲ್ಲಿ ಕೊಚ್ಚಿ ಹೋಗಲಿದೆ.

ಈ ಸ್ಮಾರ್ಟ್‌ಫೋನ್ ಸ್ಪೇನ್ ಜುಲೈ 24 ರಂದು ಜಾಗತಿಕವಾಗಿ ಲಾಂಚ್ ಆಗಿದ್ದು, ಆಗಸ್ಟ್ 8 ರಂದು ಭಾರತೀಯ ಮಾರುಕಟ್ಟೆಗೆ ಪರಿಚಯವಾಗಲಿದೆ. ಆಂಡ್ರಾಯ್ಡ್ ಓನ್ ನಲ್ಲಿ ಕಾರ್ಯನಿರ್ವಹಿಸುವ ಶಿಯೋಮಿ Mi A2 ಸ್ಮಾರ್ಟ್‌ಫೋನ್, AI ಪೋಟ್ರೆಟ್ ಸೇರಿದಂತೆ ಅನೇಕ ವಿಶೇಷತೆಗಳನ್ನು ಹೊಂದಿದ್ದು, ಬಳಕೆದಾರರಿಗೆ ಬೆಸ್ಟ್ ಫೋನ್ ನೀಡಲು ಬೇಕಾಗಿರುವ ಎಲ್ಲಾ ಆಯ್ಕೆಗಳನ್ನು ಈ ಫೋನಿನಲ್ಲಿ ಶಿಯೋಮಿ ಅಳವಡಿಸಿದೆ.

ಮೂರು ಮಾದರಿಯಲ್ಲಿ ಮಾರಾಟ:

ಮೂರು ಮಾದರಿಯಲ್ಲಿ ಮಾರಾಟ:

ಶಿಯೋಮಿ Mi A2 ಸ್ಮಾರ್ಟ್‌ಫೋನ್ ಜಾಗತಿಕವಾಗಿ ಮೂರು ಮಾದರಿಯಲ್ಲಿ ಲಾಂಚ್ ಆಗಿದೆ. ಆರಂಭಿಕ ಆವೃತ್ತಿಯಲ್ಲಿ 4GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಮಧ್ಯಮ ಆವೃತ್ತಿಯಲ್ಲಿ 4 GB RAM ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಿದೆ. ಇದಲ್ಲದೇ ಟಾಪ್ ಎಂಡ್ ಆವೃತ್ತಿಯೂ 6GB RAM ಮತ್ತು 128GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಎರಡು ಆವೃತ್ತಿ:

ಭಾರತೀಯ ಮಾರುಕಟ್ಟೆಯಲ್ಲಿ ಎರಡು ಆವೃತ್ತಿ:

ಭಾರತೀಯ ಮಾರುಕಟ್ಟೆಯಲ್ಲಿಯೂ ಎರಡು ಮಾದರಿಯಲ್ಲಿ ಮಾರಾಟವಾಗುವ ಸಾಧ್ಯತೆ ಹೆಚ್ಚಾಗಿದೆ. ಕಾರಣ ಈ ಸ್ಮಾರ್ಟ್‌ಫೋನಿನಲ್ಲಿ SD ಕಾರ್ಡ್ ಹಾಕುವ ಸಾಧ್ಯತೆ ಇಲ್ಲ. ಇದರಿಂದಾಗಿ 4 GB RAM ಮತ್ತು 64GB ಇಂಟರ್ನಲ್ ಮೆಮೊರಿಯ ಆವೃತ್ತಿ ಮತ್ತು 6GB RAM ಮತ್ತು 128GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ ಎನ್ನಲಾಗಿದೆ.

ಬೆಲೆಗಳು:

ಬೆಲೆಗಳು:

ಈಗಾಗಲೇ ಮಾರುಕಟ್ಟೆಯಲ್ಲಿ ನೋಟ್ 5 ಪ್ರೋ ಹೆಚ್ಚಿನ ಬೇಡಿಕೆಯಲ್ಲಿ ಇರುವ ಕಾರಣದಿಂದಾಗಿ 4 GB RAM ಮತ್ತು 64GB ಇಂಟರ್ನಲ್ ಮೆಮೊರಿಯ ಆವೃತ್ತಿ ರೂ.16,999ಕ್ಕೆ ಹಾಗೂ 6GB RAM ಮತ್ತು 128GB ಇಂಟರ್ನಲ್ ಮೆಮೊರಿ ಆವೃತ್ತಿ ರೂ.19,999ಕ್ಕೆ ಮಾರಾಟವಾಗಿದೆ.

ವಿಶೇಷತೆ:

ವಿಶೇಷತೆ:

ಮಾರುಕಟ್ಟೆಯಲ್ಲಿ ಈಗಾಗಲೇ ಭಾರೀ ಬೇಡಿಕೆಯನ್ನು ಶಿಯೋಮಿ Mi A2 ಸ್ಮಾರ್ಟ್ ಫೋನಿನಲ್ಲಿ 5.99 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 18:9 ಅನುಪಾತದ ಡಿಸ್ ಪ್ಲೇ ಯಲ್ಲಿ ವಿಡಿಯೋ ಮತ್ತು ಗೇಮ್ ಆಡುವ ಅನುಭವನ್ನು ಉತ್ತಮವಾಗಿರಲಿದೆ ಎನ್ನಲಾಗಿದೆ. ಅಲ್ಲದೇ ಇದು FHD+ ಗುಣಮಟ್ಟದಿಂದ ಕೂಡಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಇದರೊಂದಿಗೆ ವೇಗವಾಗಿ ಕಾರ್ಯನಿರ್ವಹಿಸುವ ಸಲುವಾಗಿ ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಇದರಿಂದಾಗಿ ಶಿಯೋಮಿ Mi A2 ಸ್ಮಾರ್ಟ್ ಫೋನ್ ವೇಗವಾಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದರೊಂದಿಗೆ 4GB ಇಲ್ಲವೇ 6GB RAM ಅನ್ನು ಕಾಣಬಹುದಾಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಶಿಯೋಮಿ Mi A2 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದ್ದು, 12 MP + 20 MP ಕ್ಯಾಮೆರಾವನ್ನು ಇದರಲ್ಲಿ ಕಾಣಬಹುದು. ಇದು ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡಲಿದೆ. ಟಾಪ್ ಎಂಡ್ ಸ್ಮಾರ್ಟ್ ಫೋನಿನಲ್ಲಿ ಕ್ಲಿಕ್ ಮಾಡಿದ ಕ್ವಾಲಿಟಿಯನ್ನು ಕಾಣಬಹುದಾಗಿದೆ. ಇದಲ್ಲದೇ ಸೆಲ್ಫಿಗಾಗಿ 20 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಪ್ರೋಟ್ರೆಟ್ ಗಳನ್ನು ತೆಗೆಯಲು ಕೃತಕ ಬುದ್ಧಿಮತ್ತೆಯನ್ನು ನೀಡಲಾಗಿದೆ.

ಹಲವು ವಿಶೇಷತೆಗಳಿಲ್ಲ:

ಹಲವು ವಿಶೇಷತೆಗಳಿಲ್ಲ:

ಶಿಯೋಮಿ Mi A2 ಸ್ಮಾರ್ಟ್ ಫೋನಿನಲ್ಲಿ ಮೊದಲನೆಯದಾಗಿ ಹೆಡ್‌ಫೋನ್ ಜಾಕ್ ಅನ್ನು ನೀಡಲಾಗಿಲ್ಲ, ಇದಲ್ಲದೇ ವೇಗವಾಗಿ ಚಾರ್ಜ್ ಮಾಡುವ ಸಲುವಾಗಿ ಕ್ವೀಕ್ ಚಾರ್ಜರ್ ಅನ್ನು ನೀಡಿಲ್ಲ. ಆಡಿಯೋಗಾಗಿ ಟೈಪ್ ಸಿ ಫೋರ್ಟ್ ಅನ್ನು ನೀಡಲಾಗಿದೆ.

Best Mobiles in India

English summary
Xiaomi Mi A2 to launch in India on August 8. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+