ಲಾಂಚ್ ಆಯ್ತು ಶಿಯೋಮಿ ಸ್ಟಾಕ್ ಆಂಡ್ರಾಯ್ಡ್ ಫೋನ್: ಬೆಲೆ ಕೇಳಿ ಶಾಕ್ ಆಗ್ಬೇಡಿ..!
ಬಹು ನಿರೀಕ್ಷಿತ ಶಿಯೋಮಿ ಸ್ಟಾಕ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಈಗಾಗಲೇ ಜಾಗತಿಕವಾಗಿ ಸದ್ದು ಮಾಡುತ್ತಿರುವ ಶಿಯೋಮಿ Mi A2 ಸ್ಮಾರ್ಟ್‌ಫೋನ್ ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿದ್ದು, ಬಹು ದಿನಗಳಿಂದ ಈ ಫೋನ್‌ಗೆ ಕಾಯುತ್ತಿದ್ದ ಅಭಿಮಾನಿಗಳಲ್ಲಿ ಸಂಭ್ರಮವು ಮನೆ ಮಾಡಿದೆ. ಈಗಾಗಲೇ Mi A1 ಸ್ಮಾರ್ಟ್‌ಫೋನ್ ಬಳಕೆಯಿಂದ ಸಂತುಷ್ಠರಾಗಿರುವ ಶಿಯೋಮಿ ಬಳಕೆದಾರರು Mi A2 ಸ್ಮಾರ್ಟ್‌ಫೋನ್ ಖರೀದಿಸಲು ಉತ್ಸುಕರಾಗಿದ್ದಾರೆ.

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಟಾಪ್ ಎಂಡ್ ಪ್ರೀಮಿಯಮ್ ಫೋನ್‌ಗಳಿಗೂ ಸೆಡ್ಡು ಹೊಡೆಯುವಂತೆ Mi A2 ಸ್ಮಾರ್ಟ್‌ಫೋನ್ ನಲ್ಲಿ ಹೊಸ ಹೊಸ ಆಯ್ಕೆಗಳನ್ನು ನೀಡಲಾಗಿದೆ. ಆಂಡ್ರಾಯ್ಡ್ ಒನ್ OS ಜೊತೆಗೆ ಡ್ಯುಯಲ್ ಕ್ಯಾಮೆರಾ, ಸೆಲ್ಫಿ ಪೋಟ್ರೆಟ್, ಕ್ವೀಕ್ ಚಾರ್ಜರ್ ಸೇರಿದಂತೆ ಹಲವು ವಿಶೇಷತೆಗಳು ಈ ಫೋನಿನಲ್ಲಿ ತುಂಬಿಕೊಂಡಿದೆ. ಈ ಹಿನ್ನಲೆಯಲ್ಲಿ ಶಿಯೋಮಿ ಮತ್ತೊಮ್ಮೆ Mi A2 ಸ್ಮಾರ್ಟ್‌ಫೋನ್ ಮೂಲಕ ಜಾದೂ ಮಾಡುವುದು ಖಂಡಿತ.

Mi A2 ಸ್ಮಾರ್ಟ್‌ಫೋನ್ ಸೇಲ್ ಫಸ್ಟ್ ಎಲ್ಲಿ, ಯಾವಾಗ..?
ಭಾರತದಲ್ಲಿಯೇ ನಿರ್ಮಾಣವಾಗುವ Mi A2 ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಲಿದೆ ಎನ್ನಲಾಗಿದೆ. ಒಟ್ಟು ನಾಲ್ಕು ಬಣ್ಣಗಳಲ್ಲಿ ಇದು ಲಭ್ಯವಿದೆ. ಗೊಲ್ಡ್, ಲೇಕ್ ಬ್ಲೂ, ರೋಸ್ ಗೋಲ್ಡ್ ಮತ್ತು ಬ್ಲಾಕ್ ಬಣ್ಣದಲ್ಲಿ ಮಾರಾಟವಾಗಲಿದೆ. ಆಗಸ್ಟ್ 9 ರಿಂದ ಫ್ರಿ ಬುಕ್ ಆರಂಭವಾಗಲಿದ್ದು, ಆಗಸ್ಟ್ 16 ರಿಂದ ದೊರೆಯಲಿದೆ.

Mi A2 ಸ್ಮಾರ್ಟ್‌ಫೋನ್ ಬೆಲೆಗಳು:
Mi A2 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಮಾರಾಟವಾಗುವ ಸಾಧ್ಯತೆ ಇದ್ದು, 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುವ ಫೋನ್ ರೂ.16,999ಕ್ಕೆ ಮಾರಾಟ ಮಾಡುತ್ತಿದೆ. ಶೀಘ್ರವೇ 6GB RAM / 128 GB ಆವೃತ್ತಿಯೂ ಲಾಂಚ್ ಆಗಲಿದೆ ಎನ್ನಲಾಗಿದೆ.

ಬೆಸ್ಟ್ ಡಿಸ್‌ಪ್ಲೇ:
ಯೂನಿಬಾಡಿ ಮೆಟಲ್ ಡಿಸೈನ್‌ನೊಂದಿಗೆ ಸದ್ಯದ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ 18:9 ಅನುಪಾತ 5.99 ಇಂಚಿನ ಡಿಸ್‌ಪ್ಲೇಯನ್ನು Mi A2 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದ್ದು, ಉತ್ತಮ ಗುಣಮಟ್ಟದ ವಿಡಿಯೋ ಮತ್ತು ಗೇಮ್‌ಗಳನ್ನು ಆಡುವ ಸಲುವಾಗಿ FHD+ ಗುಣಮಟ್ಟ ಡಿಸ್‌ಪ್ಲೇಯನ್ನು Mi A2 ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಗೊರಿಲ್ಲಾ ಗ್ಲಾಸ್ 5 ಸುರಕ್ಷತೆಯನ್ನು ಹೊಂದಿದ್ದು, ಶಿಯೋಮಿ ಬಿಡುಗಡೆ ಮಾಡುತ್ತಿರುವ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆ ಹೊಂದಿರುವ ಮೊದಲ ಫೋನ್ ಇದಾಗಿದೆ.

ವೇಗದ ಪ್ರೋಸೆಸರ್:
ಇದಲ್ಲದೇ Mi A2 ಸ್ಮಾರ್ಟ್‌ಫೋನಿನಲ್ಲಿ 2.2GHz ವೇಗ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 660 ಚಿಪ್ ಸೆಟ್ ಅನ್ನು ನೀಡಲಾಗಿದೆ. ಇದರೊಂದಿಗೆ 4 GB / 6 GB RAM ಅನ್ನು ನೀಡಲಾಗಿದೆ, ಇದರೊಂದಿಗೆ ಈ ಫೋನ್ ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.

ಆಂಡ್ರಾಯ್ಡ್ ಒನ್ ಸ್ಮಾರ್ಟ್‌ಫೋನ್:
Mi A2 ಸ್ಮಾರ್ಟ್‌ಫೋನ್ ಗೂಗಲ್ ಸ್ಟಾಕ್ ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದಕ್ಕಾಗಿಯೇ ಆಂಡ್ರಾಯ್ಡ್ ಒನ್ OS ಅನ್ನು ಇದರಲ್ಲಿ ಅಳವಡಿಸಲಾಗಿದೆ. ಆದರೆ ಇದರೊಂದಿಗೆ ಶಿಯೋಮಿಯ ಕೇಲವು ಆಪ್‌ಗಳನ್ನು ನೀಡಲಾಗಿದೆ. ಇದನ್ನು ಬಿಟ್ಟರೆ ಉಳಿದವು ಆಂಡ್ರಾಯ್ಡ್‌ನಿಂದಲೇ ನೇರವಾಗಿ ಬಂದ ಆಪ್‌ಗಳಾಗಲಿದೆ. ಇದಲ್ಲದೇ ಆಂಡ್ರಾಯ್ಡ್ ಪಿ ಅನ್ನು ಪಡೆದುಕೊಳ್ಳುವ ಮೊದಲ ಭಾರತೀಯ ಫೋನ್ ಇದಾಗಲಿದೆ.

ಬೆಸ್ಟ್ ಕ್ಯಾಮೆರಾ:
ಶಿಯೋಮಿ Mi A2 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಅಳವಡಿಲಾಗಿದ್ದು, ಬೆಸ್ಟ್ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ. ಇದಕ್ಕಾಗಿ 12 MP + 20 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಜೊತೆಗೆ LED ಫ್ಲಾಷ್ ಲೈಟ್ ಅನ್ನು ಸಹ ಕಾಣಬಹುದಾಗಿದೆ. ಅಲ್ಲದೇ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಕೃತಕ ಬುದ್ದಿಮತ್ತೆಯನ್ನು ಅಳವಡಿಸಲಾಗಿದೆ. ಇದಲ್ಲದೇ ವಿಡಿಯೋ ಕ್ವಾಲಿಟಿಯು ಹಿಂದಿನ ಫೋನಿಗಿಂತಲೂ ಉತ್ತಮವಾಗಿದೆ.

ಉತ್ತಮ ಸೆಲ್ಫಿ ಪೋಟ್ರೆಟ್:
ಮುಂಭಾಗದಲ್ಲಿ ಉತ್ತಮ ಸೆಲ್ಫಿಗಳನ್ನು ಕ್ಲಿಕಿಸುವ ಸಲುವಾಗಿಯೇ 20 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಪ್ರೋಟ್ರೆಟ್ ಗಳನ್ನು ತೆಗೆಯಲು ಕೃತಕ ಬುದ್ಧಿಮತ್ತೆಯನ್ನು ನೀಡಲಾಗಿದೆ. ಇದಲ್ಲದೇ ಬ್ಯೂಟಿಫಿಕೇಷನ್ ಮೋಡ್ ಅನ್ನು ನೀಡಲಾಗಿದ್ದು, ಇದರಿಂದಾಗಿ ನಿಮ್ಮ ಸೆಲ್ಪೀಗಳು ಉತ್ತಮ ಗುಣಮಟ್ಟದಲ್ಲಿ ಕಾಣಿಸಿಕೊಳ್ಳಲಿದೆ. ಇದಲ್ಲದೇ ನೈಟ್ ಟೈಮಿನಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲಿದೆ. ಇದಲ್ಲದೇ ಎರಡು ಕಡೆಗಳಲ್ಲಿಯೂ ಆಟೋ HDR ಆಯ್ಕೆಯನ್ನು ಕಾಣಬಹುದಾಗಿದೆ. ಬೋಕೆ ಮೋಡ್ ಅನ್ನು ಕಾಣಬಹುದಾಗಿದೆ.

ಕ್ವಿಕ್ ಚಾರ್ಜ್
ಇದಲ್ಲದೇ Mi A2 ಸ್ಮಾರ್ಟ್‌ಫೋನಿನಲ್ಲಿ 3000mAh ಬ್ಯಾಟರಿಯನ್ನು ನೀಡಲಾಗಿದ್ದು, ವೇಗದ ಚಾರ್ಜಿಂಗ್‌ಗಾಗಿ ಕ್ವಿಕ್ ಚಾರ್ಜರ್ ಅನ್ನು ನೀಡಲಾಗಿದೆ. ಹೆಚ್ಚುವರಿ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಆಯ್ಜೆಯೂ ಇದರಲ್ಲಿ ಇಲ್ಲ. ಬದಲಿಗೆ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಹೊಂದಿದೆ. USB ಟೈಪ್ C ಪೋರ್ಟ್ ಅನ್ನು ನೀಡಲಾಗಿದ್ದು, ಸಾಮಾನ್ಯ ಇಯರ್ ಫೋನ್ ಜಾಕ್ ಹಾಕಿಕೊಳ್ಳುವ ಅವಕಾಶವೂ ಇದರಲ್ಲಿ ಇಲ್ಲ.

ಇದಲ್ಲದೇ ಜಿಯೋ ಆಫರ್:
Mi A2 ಸ್ಮಾರ್ಟ್‌ಫೋನ್ ಕೊಳ್ಳೂವವರಿಗೆ ಜಿಯೋ ಬೊಂಬಾಟ್ ಆಫರ್ ನೀಡುತ್ತಿದೆ. ರೂ.2200 ಕ್ಯಾಷ್ ಬ್ಯಾಕ್ ನೀಡಲಿದ್ದು, ಇದರೊಂದಿಗೆ 4.5 TB ಡೇಟಾವನ್ನು ಬಳಕೆದಾರರಿಗೆ ನೀಡಲಿದೆ. ಇದರಿಂದಾಗಿ ಬಳಕೆದಾರರಿಗೆ ದೊಡ್ಡ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಡಲಿದೆ.


Click it and Unblock the Notifications



