ಮತ್ತೆ ಅರ್ಭಟಿಸಲಿದೆ ಶಿಯೋಮಿ: ಇಂದು ಗೂಗಲ್-ಶಿಯೋಮಿ ಸ್ಮಾರ್ಟ್‌ಫೋನ್ ಲಾಂಚ್..!
ದೇಶಿಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಹುಟ್ಟಿಸಲಿದೆ ಎನ್ನಲಾಗಿರುವ ಶಿಯೋಮಿ ಆಂಡ್ರಾಯ್ಡ್ ಒನ್ ಸ್ಮಾರ್ಟ್‌ಫೋನ್ Mi A2 ಸ್ಮಾರ್ಟ್‌ಫೋನ್ ಇಂದು ಲಾಂಚ್ ಆಗಲಿದೆ. ಈ ಕ್ಷಣಕ್ಕಾಗಿ ಶಿಯೋಮಿ ಅಭಿಮಾನಿಗಳು ಕಾಯುವುದಕ್ಕಿಂತ ಹೆಚ್ಚಾಗಿ ಇತರೆ ಸ್ಮಾರ್ಟ್‌ಫೋನ್ ಕಂಪನಿಗಳೇ ಹೆಚ್ಚಾಗಿ ಕಾಯುತ್ತಿವೆ. ಕಾರಣ ಎಲ್ಲಿ ಈ ಸ್ಮಾರ್ಟ್‌ಫೋನ್ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಕಿಲ್ ಮಾಡಲಿವೆ ಎಂಬ ಭಯ ಅವುಗಳನ್ನು ಕಾಡುತ್ತಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಶಿಯೋಮಿ ಬಿಡುಗಡೆ ಮಾಡಿದ್ದ ಆಂಡ್ರಾಯ್ಡ್ ಒನ್ ಸ್ಮಾರ್ಟ್‌ಫೋನ್ Mi A1 ಸ್ಮಾರ್ಟ್‌ಫೋನ್ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಹಿನ್ನಲೆಯಲ್ಲಿ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ಸಲುವಾಗಿ Mi A2 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುತ್ತಿದೆ. ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯಲಿರುವ Mi A2 ಸ್ಮಾರ್ಟ್‌ಫೋನ್ ಈಗಾಗಲೇ ಜಾಗತಿಕವಾಗಿ ಲಾಂಚ್ ಆಗಿದೆ.
ಲಾಂಚ್ ಇವೆಂಟ್
ಇಂದು Mi A2 ಸ್ಮಾರ್ಟ್‌ಫೋನ್ ಲಾಂಚ್ ಇವೆಂಟ್ ಇಂದು ದೆಹಲಿಯಲ್ಲಿ ನಡೆಯಲಿದ್ದು, ಸಂಜೆ ನಾಲ್ಕು ಗಂಟೆಗೆ ಆರಂಭವಾಗಲಿದೆ. ಇದಲ್ಲದೇ ಶಿಯೋಮಿ ಅಫಿಷಿಯಲ್ ಫೇಸ್‌ಬುಕ್ ಪೇಜ್ ಹಾಗೂ ವೆಬ್‌ಸೈಟಿನಲ್ಲಿ ಲೈವ್ ಇವೆಂಟ್ ಅನ್ನು ನೋಡುವ ಅವಕಾಶವನ್ನು ಮಾಡಿಕೊಡಲಾಗಿದೆ.

Mi A2 ಸ್ಮಾರ್ಟ್‌ಫೋನ್ ಬೆಲೆಗಳು:
Mi A2 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಮಾರಾಟವಾಗುವ ಸಾಧ್ಯತೆ ಇದ್ದು, 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುವ ಫೋನ್ ರೂ.17,499ಕ್ಕೆ ಮಾರಾಟವಾಗುವ ಸಾಧ್ಯತೆ ಇದ್ದು, ಇದರೊಂದಿಗೆ 6GB RAM ಆವೃತ್ತಿಯೂ ರೂ.21,999ಕ್ಕೆ ದೊರೆಯಲಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ಒನ್ ಸ್ಮಾರ್ಟ್‌ಫೋನ್:
Mi A2 ಸ್ಮಾರ್ಟ್‌ಫೋನ್ ಸ್ಟಾಕ್ ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ ಒನ್ ಆವೃತ್ತಿಯನ್ನು ಕಾಣಬಹುದಾಗಿದೆ ಇದರಲ್ಲಿ ಶಿಯೋಮಿಯ ಕೆಲವು ಆಪ್‌ಗಳನ್ನು ನೀಡಲಾಗಿದ್ದು, ಬಳಕೆದಾರರಿಗೆ ಉತ್ತಮ ಬಳಕೆಯ ಅನುಭವನ್ನು ನೀಡಲಿದೆ.

5.99 ಇಂಚಿನ ಡಿಸ್‌ಪ್ಲೇ:
ಆಂಡ್ರಾಯ್ಡ್ ಒನ್ ನಲ್ಲಿ ಕಾರ್ಯನಿರ್ವಹಿಸುವ ಶಿಯೋಮಿ Mi A2 ಸ್ಮಾರ್ಟ್‌ಫೋನ್ 5.99 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 18:9 ಅನುಪಾತದಿಂದ ಕೂಡಿದ್ದು, FHD+ ಗುಣಮಟ್ಟದ್ದಾಗಿದೆ.. ಇದಲ್ಲದೇ ಈ ಸ್ಮಾರ್ಟ್ ಫೋನ್ ಸ್ನಾಪ್ ಡ್ರಾಗನ್ 660 ದಲ್ಲಿ ಕಾರ್ಯನಿರ್ವಹಿಸಲಿದೆ. ಇದು 2.2GHz ವೇಗವನ್ನು ಹೊಂದಿದೆ. ಎರಡು ಆವೃತ್ತಿಯಲ್ಲಿ Mi A2 ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ.

ಡ್ಯುಯಲ್ ಕ್ಯಾಮೆರಾ:
ಶಿಯೋಮಿ Mi A2 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು, 12 MP + 20 MP ಕ್ಯಾಮೆರಾವನ್ನು ಇದರಲ್ಲಿ ಕಾಣಬಹುದು. ಸೆಲ್ಫಿಗಾಗಿ 20 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಪ್ರೋಟ್ರೆಟ್ ಗಳನ್ನು ತೆಗೆಯಲು ಕೃತಕ ಬುದ್ಧಿಮತ್ತೆಯನ್ನು ನೀಡಲಾಗಿದೆ.

ಇತರೆ:
ಇದಲ್ಲದೇ Mi A2 ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಹೊಂದಿದ್ದು, USB ಟೈಪ್ C ಪೋರ್ಟ್ ಅನ್ನು ಹೊಂದಿದೆ. ಇದಕ್ಕಾಗಿಯೇ ಆಡಿಯೋ ಜಾಕ್ ನೀಡಲಾಗಿಲ್ಲ ಮತ್ತು ಈ ಸ್ಮಾರ್ಟ್ ಫೋನಿನಲ್ಲಿ 3000mAh ಬ್ಯಾಟರಿಯನ್ನು ಸಹ ಕಾಣಬಹುದಾಗಿದೆ. ಅಲ್ಲದೇ ವೇಗವ ಚಾರ್ಜಿಂಗಾಗಿ ಕ್ವಿಕ್ ಚಾರ್ಜರ್ ಅನ್ನು ನೀಡಲಾಗಿದೆ.


Click it and Unblock the Notifications



