ಭಾರತದಲ್ಲಿ ಶಿಯೋಮಿಯ ಬೆಸ್ಟ್ ಸ್ಮಾರ್ಟ್‌ಫೋನ್‌ 'ಎಂಐ A2' ಬಿಡುಗಡೆ ಫಿಕ್ಸ್!!..

|

ಕಳೆದ ತಿಂಗಳು ಚೀನಾದಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದ್ದ ಶಿಯೋಮಿ "ಎಂಐ 6ಎಕ್ಸ್" ಸ್ಮಾರ್ಟ್‌ಪೋನ್ ಭಾರತದಲ್ಲಿ ಶೀಘ್ರವೇ ಬಿಡುಗಡೆಗೆ ಸಜ್ಜಾಗಿದೆ. ಶಿಯೋಮಿ "ಎಂಐ 6ಎಕ್ಸ್" ಸ್ಮಾರ್ಟ್‌ಪೋನ್ ಅನ್ನು ಭಾರತದಲ್ಲಿ ಎಂಐ ಎ2 ಹೆಸರಿನಲ್ಲಿ ಲಾಂಚ್ ಮಾಡಲಾಗುತ್ತದೆ ಎನ್ನಲಾಗುತ್ತಿದ್ದ ಸುದ್ದಿ ಇದೀಗ ನಿಜವಾಗಿದೆ.

ಮೊಬೈಲ್ ಜಗತ್ತಿನ ನಿರೀಕ್ಷೆಯಂತೆಯೇ, ಸ್ಟಾಕ್ ಆಂಡ್ರಾಯ್ಡ್ , ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ ಸೆಲ್ಫಿ ಆಧಾರಿತ ಕ್ಯಾಮೆರಾ ಹಾಗೂ ಆಂಡ್ರಾಯ್ಡ್ ಓರಿಯೋದಂತಹ ಹಲವು ಅತ್ಯುತ್ತಮ ಫೀಚರ್ಸ್‌ಗಳೆಲ್ಲವನ್ನು ಒಳಗೊಂಡು ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಶಿಯೋಮಿ "ಎಂಐ ಎ2" ಸ್ಮಾರ್ಟ್‌ಪೋನ್ ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಎಂಟ್ರಿ ನೀಡಿತ್ತು.

ಭಾರತದಲ್ಲಿ ಶಿಯೋಮಿಯ ಬೆಸ್ಟ್ ಸ್ಮಾರ್ಟ್‌ಫೋನ್‌ 'ಎಂಐ A2' ಬಿಡುಗಡೆ ಫಿಕ್ಸ್!!..

4GB ಮತ್ತ 64GB RAM ಹಾಗೂ 6GB ಮತ್ತ 64GB RAM ಹೊಂದಿರುವ ಎರಡು ವೆರಿಯಂಟ್‌ಗಳಲ್ಲಿ 16 ಮತ್ತು 19 ಸಾವಿರ ರೂ.ಗಳಿಗೆ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿತ್ತು. ಹಾಗಾದರೆ, ಶಿಯೋಮಿ ಕಂಪೆನಿನ ನೂತನ ಶಿಯೋಮಿ "ಎಂಐ ಎ2" ಸ್ಮಾರ್ಟ್‌ಪೋನ್ ಫೀಚರ್ಸ್ ಯಾವುವು? ವಿಶೇಷತೆಗಳೇನು ಎಂಬುದನ್ನು ಮುಂದೆ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ

ಡಿಸ್‌ಪ್ಲೇ ಮತ್ತು ವಿನ್ಯಾಸ

ಶಿಯೋಮಿ "ಎಂಐ 6ಎಕ್ಸ್" ಸ್ಮಾರ್ಟ್‌ಪೋನ್, 19:9 ಅನುಪಾತದ 5,99 ಇಂಚು ಡಿಸ್‌ಪ್ಲೆಯನ್ನು ಹೊಂದಿದೆ. ಎರಡೂ ಬದಿಯಲ್ಲಿ ಬೆಜೆಲ್ ಲೆಸ್ ಡಿಸ್‌ಪ್ಲೆ ಹೊಂದುವ ಮೂಲಕ ಶಿಯೋಮಿ ಕಂಪೆನಿ ರೆಡ್‌ ಮಿ ನೋಟ್ 5 ಫೋನಿನ ವಿನ್ಯಾಸದಲ್ಲಿಯೇ ಇದೆ ಎನ್ನಬಹುದಾಗಿದ್ದು, ಹಿಂಬಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆ ಲಭ್ಯವಿದೆ.

ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 660 soc ಪ್ರೊಸೆಸರ್ (ನಾಲ್ಕು 2.2GHz ಕಿರೋ 260 ಕೋರ್ಗಳು + ನಾಲ್ಕು 1.8GHz ಕಿರೋ 260 ಕೋರ್ಗಳು) ಮತ್ತು ಅಡ್ರಿನೊ 512 ಜಿಪಿಯು ಅನ್ನು "ಎಂಐ 6ಎಕ್ಸ್" ಸ್ಮಾರ್ಟ್‌ಪೋನ್ ಹೊಂದಿದೆ. 4/6GB LPDDR4x ಡ್ಯುಯಲ್ ಚಾನೆಲ್ RAM ಮತ್ತು 128GB ಆಂತರಿಕ ಸ್ಟೋರೇಜ್ ಆಯ್ಕೆಗಳೊಂದಿಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

ಡ್ಯುಯಲ್ ರಿಯರ್ ಕ್ಯಾಮೆರಾ!

ಡ್ಯುಯಲ್ ರಿಯರ್ ಕ್ಯಾಮೆರಾ!

ಶಿಯೋಮಿ "ಎಂಐ 6ಎಕ್ಸ್" ಸ್ಮಾರ್ಟ್‌ಪೋನ್ ಅದ್ಬುತ ಎನ್ನುವಂತೆ f / 1.75 ಅಪಾರ್ಚರ್ ಮತ್ತು ಸ್ಥಿರ ಫೋಕಲ್ ಇರುವ 20-ಮೆಗಾಪಿಕ್ಸೆಲ್ ಸೋನಿ IMX376 ಸೆಲ್ಫಿ ಕ್ಯಾಮೆರಾ ಹಾಗೂ 20 ಮತ್ತು 12 ಮೆಗಾಪಿಕ್ಸೆಲ್‌ನ ಎರಡು ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. 20-ಮೆಗಾಪಿಕ್ಸೆಲ್‌ನ ಎರಡೂ ಕ್ಯಾಮೆರಾಗಳು 1-ಮೈಕ್ರಾನ್ ಪಿಕ್ಸೆಲ್ ಅಪಾರ್ಚರ್ ಗಾತ್ರ ಹೊಂದಿದ್ದು, ಸಾಫ್ಟ್-ಎಲ್ಇಡಿ ಫ್ಲಾಶ್, ಆಟೋಫೋಕಸ್ ಮತ್ತು ದ್ವಿ-ಟೋನ್ ಎಲ್ಇಡಿ ಫ್ಲಾಶ್‌ಗಳನ್ನು ಸ್ಮಾರ್ಟ್‌ಫೋನ್ ಕ್ಯಾಮೆರಾಗಳಲ್ಲಿ ನೀಡಲಾಗಿದೆ.

ಕೃತಕ ಬುದ್ದಿಮತ್ತೆ AI ತಂತ್ರಜ್ಞಾನ!!

ಕೃತಕ ಬುದ್ದಿಮತ್ತೆ AI ತಂತ್ರಜ್ಞಾನ!!

ಶಿಯೋಮಿ "ಎಂಐ 6ಎಕ್ಸ್" ಸ್ಮಾರ್ಟ್‌ಪೋನಿನಲ್ಲಿ ಹಲವು ತಂತ್ರಜ್ಞಾನಗಳು ಕೃತಕ ಬುದ್ದಿಮತ್ತೆಯಿಂದ ಕಾರ್ಯನಿರ್ವಹಿಸಲಿವೆ. ಫೋಟೋಗಳಲ್ಲಿ ಉತ್ತಮ ಬಣ್ಣಗಳಿಗಾಗಿ AI ದೃಶ್ಯ ಗುರುತಿಸುವಿಕೆ, ಕೃತಕ ಬುದ್ದಿಮತ್ತೆ ಬೊಕೆ ಚಿತ್ರಗಳು, ಕೃತಕ ಬುದ್ದಿಮತ್ತೆ ಸ್ಮಾರ್ಟ್ ಬ್ಯೂಟಿ 4.0, ಕೃತಕ ಬುದ್ದಿಮತ್ತೆ ಕರೆನ್ಸಿ ಪರಿವರ್ತನೆ ಹಾಗೂ ಕೃತಕ ಬುದ್ದಿಮತ್ತೆ ಭಾಷಾಂತ ಸೇವೆಗಳನ್ನು ಸ್ಮಾರ್ಟ್‌ಫೋನ್ ಮೂಲಕ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

30 ನಿಮಿಷಗಳಲ್ಲಿ 50% ಚಾರ್ಜ್!!

30 ನಿಮಿಷಗಳಲ್ಲಿ 50% ಚಾರ್ಜ್!!

ಶಿಯೋಮಿ "ಎಂಐ 6ಎಕ್ಸ್" ಸ್ಮಾರ್ಟ್‌ಪೋನಿನಲ್ಲಿ 3010mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಬ್ಯಾಟರಿ ಚಾರ್ಜಿಂಗ್ ತಂತ್ರಜ್ಞಾನದಲ್ಲಿ ಶಿಯೋಮಿ ಸ್ವಲ್ಪ ಅಪ್‌ಡಡೇಟ್ ಆಗಿದ್ದು, ಕ್ವಿಕ್ಚಾರ್ಜ್ 3.0 ಗೆ ಬೆಂಬಲವನ್ನು ಸ್ಮಾರ್ಟ್‌ಫೋನಿನಲ್ಲಿ ತಂದಿದೆ. ಇದರಿಂದ "ಎಂಐ 6ಎಕ್ಸ್" ಸ್ಮಾರ್ಟ್‌ಪೋನ್ ಕೇವಲ 30 ನಿಮಿಷಗಳಲ್ಲಿ 50% ಚಾರ್ಜ್ ಆಗಲಿದೆ.!

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?
ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

4G LTE, ಡ್ಯುಯಲ್-ಬ್ಯಾಂಡ್ Wi-Fi ಎ / ಬೌ / ಗ್ರಾಂ / ಎನ್ / ಎಸಿ, ವೈ-ಫೈ ಡೈರೆಕ್ಟ್, ಮಿರಾಕಾಸ್ಟ್, ಬ್ಲೂಟೂತ್ 5.0, ಐಆರ್ ಎಮಿಟರ್, ಯುಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಫೇಸ್‌ ಅನ್‌ಲಾಕ್ ಫೀಚರ್ಸ್‌ಗಳನ್ನು "ಎಂಐ 6ಎಕ್ಸ್" ಸ್ಮಾರ್ಟ್‌ಪೋನಿನಲ್ಲಿ ನೀಡಲಾಗಿದೆ. ಆದರೆ, ಇದೇ ಮೊದಲ ಬಾರಿಗೆ ಶಿಯೋಮಿ ಸ್ಮಾರ್ಟ್‌ಫೋನಿನಲ್ಲಿ 3.5 ಮಿಮೀ ಇಯರ್ಫೋನ್ ಜಾಕ್ ತರದೇ ಇರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.!

Best Mobiles in India

English summary
Xiaomi is reportedly working on a successor model for the Mi A2 phone that was introduced in. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X