Home
ಮೊಬೈಲ್

ಶಿಯೋಮಿ ಎಂಐ ಎ2 ಸ್ಮಾರ್ಟ್‌ಫೋನ್ ಜುಲೈ 24ಕ್ಕೆ ಅಧಿಕೃತ ಬಿಡುಗಡೆ

By Gizbot Bureau

ಶಿಯೋಮಿ ಫೋನ್ ಪ್ರಿಯರಿಗೆ ಈ ತಿಂಗಳ ಅಂತ್ಯದಲ್ಲಿ ಒಂದು ಸಿಹಿ ಸುದ್ದಿ ಸಿಗಲಿದೆ. ಚೈನೀಸ್ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಶಿಯೋಮಿ ತನ್ನ ಹೊಸ ಸ್ಮಾರ್ಟ್ ಫೋನ್ ಬಿಡುಗಡೆಗೆ ಸನ್ನದ್ಧವಾಗಿದೆ. ಶಿಯೋಮಿ ಎಂಐ ಎ2 ಸ್ಮಾರ್ಟ್ ಫೋನ್ ಬಿಡುಗಡೆಯ ಸಮಾರಂಭವನ್ನು ಕಂಪೆನಿಯು ಸ್ಪೇನ್ ನಲ್ಲಿ ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ಮಾಧ್ಯಮ ಆಮಂತ್ರಣವನ್ನು ಕಳುಹಿಸುತ್ತಿದೆ. ಜುಲೈ 24 ನೇ ತಾರೀಕಿನಂದು ಸ್ಪೇನ್ ನಲ್ಲಿ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜನೆ ಮಾಡಲಾಗಿದೆ.

ಕಂಪೆನಿ ಆಗಾಗಲೇ ಹ್ಯಾಷ್ ಟ್ಯಾಗ್ ನೊಂದಿಗೆ #2isbetterthan1 ಎಂದು ತನ್ನ ಪ್ರೊಡಕ್ಟ್ ನ ಟೀಸರ್ ಬಿಡುಗಡೆ ಪ್ರಾರಂಭಿಸಿದೆ. ಶಿಯೋಮಿ ಎಂಐ ಎ2 ಹಲವಾರು ಬಣ್ಣಗಳ ಆಯ್ಕೆಯಲ್ಲಿ ಬರುತ್ತದೆ ಎಂದು ಹೇಳಲಾಗಿದೆ ಮತ್ತು ಇದರ ಬೆಲೆ 4ಜಿಬಿ ಮೆಮೊರಿ ಮತ್ತು 32 ಜಿಬಿ ಇಂಟರ್ನಲ್ ಸ್ಟೋರೇಜ್ ಇರುವ ಫೋನಿನ ಬೆಲೆ PLN 1,299. ಭಾರತವೂ ಸೇರಿದಂತೆ ಏಷ್ಯಾದ ಮಾರುಕಟ್ಟೆಗಳಲ್ಲಿ ಇದರ ಬೆಲೆ ಬಹಳಷ್ಟು ಇಳಿಕೆಯಾಗಿ ಇರಲಿದೆ ಎಂದು ಅಂದಾಜಿಸಲಾಗುತ್ತಿದೆ.

ಶಿಯೋಮಿ ಎಂಐ ಎ2 ಸ್ಮಾರ್ಟ್‌ಫೋನ್ ಜುಲೈ 24ಕ್ಕೆ ಅಧಿಕೃತ ಬಿಡುಗಡೆ

ಈಗಾಗಲೇ ಹರಡುತ್ತಿರ ಗಾಸಿಪ್ ಗಳ ಪ್ರಕಾರವೇ ಹೇಳುವುದಾದರೆ ಶಿಯೋಮಿಯ ವೈಶಿಷ್ಟ್ಯತೆಗಳು ಈ ಕೆಳಗಿನಂತಿದೆ.

ಶಿಯೋಮಿ ಎಂಐ ಎ2 5.99-ಇಂಚಿನ ಫುಲ್ HD+ ಡಿಸ್ಪ್ಲೇ ಜೊತೆಗೆ 1080x2160 ಪಿಕ್ಸಲ್ ರೆಸಲ್ಯೂಷನ್ ಹೊಂದಿರಲಿದೆ. ಈ ಡಿವೈಸ್ ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ಮುಖಾಂತರ ರನ್ ಆಗುತ್ತದೆ ಮತ್ತು ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಪ್ರೊಸೆಸರ್ ನ್ನು ಹೊಂದಿರುತ್ತದೆ.

ಡುಯಲ್ ಸಿಮ್ ಗಳ ಬಳಕೆಗೆ ಈ ಸ್ಮಾರ್ಟ್ ಫೋನ್ ಯೋಗ್ಯವಾಗಿರುತ್ತದೆ ಮತ್ತು 6ಜಿಬಿ/4ಜಿಬಿ ಮೆಮೊರಿ ಮತ್ತು 128ಜಿಬಿ/64ಜಿಬಿ/32ಜಿಬಿ ಇಂಟರ್ನಲ್ ಸ್ಟೋರೇಜ್ ನ್ನು ಇದು ಒಳಗೊಂಡಿರುತ್ತದೆ. ಮೈಕ್ರೋ ಎಸ್ ಡಿ ಕಾರ್ಡ್ ಮುಖಾಂತರ ಸ್ಟೋರೇಜ್ ನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಅವಕಾಶವನ್ನು ಫೋನ್ ಗ್ರಾಹಕರಿಗೆ ಒದಗಿಸುತ್ತದೆ. ಈಗಾಗಲೇ ಬಿಡುಗಡೆಗೊಂಡಿರುವ ಟೀಸರ್ ಚಿತ್ರದ ಅನುಸಾರವೇ ಹೇಳುವುದಾದರೆ ಶಿಯೋಮಿ ಎಂಐ ಎ2 ನಲ್ಲಿ ಹಿಂಭಾಗದಲ್ಲಿ ಎರಡು ಕ್ಯಾಮರಾ ಸೆಟ್ ಅಪ್ ಇರಲಿದೆ.

ಶಿಯೋಮಿ ಎಂಐ ಎ2 ಸ್ಮಾರ್ಟ್‌ಫೋನ್ ಜುಲೈ 24ಕ್ಕೆ ಅಧಿಕೃತ ಬಿಡುಗಡೆ

ಪ್ರೈಮರಿ ಕ್ಯಾಮರಾವು 12ಎಂಪಿ ಮತ್ತು f/1.75 ದ್ಯುತಿರಂಧ್ರ ಹೊಂದಿರಲಿದೆ.ಸೋನಿ IMX486 ಸೆನ್ಸರ್, LED ಫ್ಲ್ಯಾಶ್ ಮತ್ತು ಸೆಕೆಂಡರಿ ಕ್ಯಾಮರಾವು 20ಎಂಪಿ ಸಾಮರ್ಥ್ಯದಾಗಿದ್ದು ಇದರಲ್ಲಿ ಸೋನಿ IMX376 ಸೆನ್ಸರ್ ಮತ್ತು f/1.75 ದ್ಯುತಿರಂಧ್ರ ಹೊಂದಿರುತ್ತದೆ.ಅಷ್ಟೇ ಅಲ್ಲ ಮುಂಭಾಗದ ಕ್ಯಾಮರಾವು 20ಎಂಪಿ ಸಾಮರ್ಥ್ಯ ಹೊಂದಿದ್ದು, ಸಾಫ್ಟ್ LED ಫ್ಲ್ಯಾಶ್ ನ್ನು ಹೊಂದಿರುತ್ತದೆ.

ಇದಿಷ್ಟೇ ಅಲ್ಲದೆ ಬೆರಳಚ್ಚು ತಂತ್ರಜ್ಞಾನವನ್ನು ಇದು ಒಳಗೊಂಡಿರುತ್ತದೆ.ಒಟ್ಟಾರೆ ಫೋನಿನ ಸುತ್ತಳತೆಯು 158.7×75.4×7.3ಎಂಎಂ ಆಗಿರಲಿದ್ದು 3010 mAh ನ ಬ್ಯಾಟರಿಯನ್ನು ಇದು ಒಳಗೊಂಡಿರುತ್ತದೆ. ಕನೆಕ್ಟಿವಿಟಿ ವಿಚಾರದಲ್ಲಿ 4ಜಿ, VoLTE, 3ಜಿ ವೈ-ಫೈ, ಬ್ಲೂಟೂತ್, ಜಿಪಿಎಸ್ ಮತ್ತು ಯುಎಸ್ ಬಿ ಟೈಪ್ ಸಿ ಯನ್ನು ಹೊಂದಿರುತ್ತದೆ.

Best Mobiles in India

English summary
Xiaomi Mi A2 officially teased ahead of July 24 launch. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+