ಫಸ್ಟ್‌ಸೇಲ್‌ಗೂ ಮುನ್ನವೇ ಶಿಯೋಮಿ Mi A2 ಖರೀದಿಸಿ, ಉಚಿತ 4500 GB ಡೇಟಾ ಪಡೆಯಿರಿ..!

ಭಾರತೀಯ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಶಿಯೋಮಿ Mi A2 ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಅಮೆಜಾನ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಸೇಲ್ ಆಗಲಿದೆ. ಈ ಹಿನ್ನಲೆಯಲ್ಲಿ ಆಗಸ್ಟ್ 9 ರಿಂದಲೇ ಫ್ರೀ ಬುಕಿಂಗ್ ಆರಂಭವಾಗಲಿದ್ದು, ಆಗಸ್ಟ್ 16 ರಂದು ಫ್ಲಾಷ್ ಸೇಲ್ ಶುರುವಾಗಲಿದೆ. ಫ್ರೀ ಬುಕಿಂಗ್ ಮಾಡಿದವರಿಗೆ ಬೇಗನೇ ಸ್ಮಾರ್ಟ್‌ಫೋನ್ ದೊರೆಯಲಿದೆ. ಈ ಹಿನ್ನಲೆಯಲ್ಲಿ ನೀವೇ ಮೊದಲು ಶಿಯೋಮಿ Mi A2 ಬುಕ್ ಮಾಡಲು ಸಿದ್ಧರಾಗಿ.

ಇಂದು 12 ಗಂಟೆಯಿಂದ ಶಿಯೋಮಿ Mi A2 ಸ್ಮಾರ್ಟ್‌ಫೋನ್ ಫ್ರೀ ಆರ್ಡರ್ ಶುರುವಾಗಲಿದೆ. ಅಮೆಜಾನ್ ನಲ್ಲಿ ಮತ್ತು Mi.COMನಲ್ಲಿ ನೀವು ಫ್ರೀ ಬುಕ್ ಮಾಡಬಹುದಾಗಿದೆ. ಈಲ್ಲಿ ಬುಕ್ ಮಾಡುವುದರಿಂದ ಯಾವುದೇ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಪಾವತಿ ಮಾಡಬೇಕಾಗಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಫ್ರೀ ಆರ್ಡರ್ ಕುರಿತ ಮಾಹಿತಿಯೂ ಮುಂದಿದೆ.

ಶಿಯೋಮಿ Mi A2 ಸ್ಮಾರ್ಟ್‌ಫೋನ್ ಫ್ರೀ-ಆರ್ಡರ್ ಸೇಲ್:
ಶಿಯೋಮಿ ತನ್ನ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಡುವ ಸಲುವಾಗಿ ಫ್ರೀ ಬುಕಿಂಗ್ ಮಾಡಲು ಯಾವುದೇ ಕೊನೆಯ ದಿನಾಂಕವನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ನೀವು ಮೊದಲ ಸೇಲ್ ಶುರುವಾಗುವ ಮುನ್ನವೇ ಶಿಯೋಮಿ Mi A2 ಸ್ಮಾರ್ಟ್‌ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಆಗಸ್ಟ್ 16 ರ ಒಳಗೆ ನಿಮ್ಮ ಶಿಯೋಮಿ Mi A2 ಸ್ಮಾರ್ಟ್‌ಫೋನ್ ದೊರೆಯಲಿದೆ.

ಫುಲ್ ಪೇಮೆಂಟ್ ಮಾಡಬೇಕು:
ಶಿಯೋಮಿ Mi A2 ಸ್ಮಾರ್ಟ್‌ಫೋನ್ ಅನ್ನು ಫ್ರೀ ಆರ್ಡರ್ ಮಾಡಬೇಕಾದರೆ ನೀವು ಪೂರ್ಣ ಪ್ರಮಾಣದಲ್ಲಿ ಹಣವನ್ನು ಪಾವತಿ ಮಾಡಬೇಕಾಗಿದೆ. ಇದರಲ್ಲಿ ಕ್ಯಾಷ್ ಆನ್ ಡಿಲಿವರಿ ಆಯ್ಕೆಯನ್ನು ನೀಡಿಲ್ಲ. ಅಲ್ಲದೇ ನೀವು ಅಮೆಜಾನ್ ನಲ್ಲಿ ಮತ್ತು Mi.COMನಲ್ಲಿ ಎರಡರಲ್ಲೂ ನೀವು ಫ್ರೀ ಬುಕ್ ಮಾಡುವ ಅವಕಾಶವನ್ನು ನೀಡಲಾಗಿದೆ.

ಜಿಯೋ ಬೆಸ್ಟ್ ಆಫರ್:
ಇದೇ ಮೊದಲ ಬಾರಿಗೆ Mi A2 ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಜಿಯೋ ಬೆಸ್ಟ್ ಆಫರ್ ನೀಡುತ್ತಿದೆ. ರೂ.2200 ಕ್ಯಾಷ್ ಬ್ಯಾಕ್ ನೀಡಲಿದ್ದು, ಇದರೊಂದಿಗೆ 4.5 TB ಡೇಟಾವನ್ನು ಬಳಕೆದಾರರಿಗೆ ನೀಡಲಿದೆ. ಇದರಿಂದಾಗಿ ಹೆಚ್ಚಿನ ಲಾಭವಾಗಲಿದೆ.

ಬೆಲೆ:
Mi A2 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿದೆ. ಸದ್ಯ ಒಂದು ಆವೃತ್ತಿಯಲ್ಲಿ ಮಾತ್ರ ಮಾರಾಟವಾಗುತ್ತಿದೆ. 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುವ ಫೋನ್ ರೂ.16,999ಕ್ಕೆ ಲಭ್ಯವಿದೆ.

ಬೆಸ್ಟ್ ಎನ್ನಬಹುದು:
ಮಾರುಕಟ್ಟೆಯಲ್ಲಿ ಲಭ್ಯವಿರುವ ಮಟಾಪ್ ಎಂಡ್ ಪ್ರೀಮಿಯಮ್ ಫೋನ್‌ಗಳಿಗೂ ಸೆಡ್ಡು ಹೊಡೆಯುವಂತೆ Mi A2 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಒನ್ OS ಜೊತೆಗೆ ಡ್ಯುಯಲ್ ಕ್ಯಾಮೆರಾ, ಸೆಲ್ಫಿ ಪೋಟ್ರೆಟ್, ಕ್ವೀಕ್ ಚಾರ್ಜರ್ ಸೇರಿದಂತೆ ಹಲವು ವಿಶೇಷತೆಗಳೊಂಡಿಗೆ ಕಾಣಿಸಿಕೊಂಡಿದೆ.

ಬೆಸ್ಟ್ ಪ್ರೋಸೆಸರ್:
ಇದಲ್ಲದೇ Mi A2 ಸ್ಮಾರ್ಟ್‌ಫೋನಿನಲ್ಲಿ ಮಧ್ಯಮ ಸರಣಿಯಲ್ಲಿ ಬೆಸ್ಟ್ ಎನ್ನಬಹುದಾದ 2.2GHz ವೇಗ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ನೀಡಲಾಗಿದೆ. ಇದರೊಂದಿಗೆ 4 GB RAM ಅನ್ನು ನೀಡಲಾಗಿದೆ, Mi A2 ಸ್ಮಾರ್ಟ್‌ಫೋನ್ ಗೂಗಲ್ ಸ್ಟಾಕ್ ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದಕ್ಕಾಗಿಯೇ ಆಂಡ್ರಾಯ್ಡ್ ಒನ್ OS ಅನ್ನು ಇದರಲ್ಲಿ ಅಳವಡಿಸಲಾಗಿದೆ.

ಬೆಸ್ಟ್ ಡಿಸೈನ್:
ಯೂನಿಬಾಡಿ ಮೆಟಲ್ ಡಿಸೈನ್‌ನೊಂದಿಗೆ 18:9 ಅನುಪಾತ 5.99 ಇಂಚಿನ ಡಿಸ್‌ಪ್ಲೇಯನ್ನು Mi A2 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದ್ದು, FHD+ ಗುಣಮಟ್ಟ ಡಿಸ್‌ಪ್ಲೇಗೆ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆಯನ್ನು ನೀಡಲಾಗಿದೆ.

ಬೆಸ್ಟ್ ಕ್ಯಾಮೆರಾ:
ಶಿಯೋಮಿ Mi A2 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಅಳವಡಿಲಾಗಿದ್ದು, 12 MP + 20 MP ಕ್ಯಾಮೆರಾವನ್ನು ಕಾಣಬಹುದು. ಕೃತಕ ಬುದ್ದಿಮತ್ತೆಯನ್ನು ಅಳವಡಿಸಲಾಗಿದ್ದು, ವಿಡಿಯೋ ಕ್ವಾಲಿಟಿಯು ಉತ್ತಮವಾಗಿದೆ. ಮುಂಭಾಗದಲ್ಲಿ ಉತ್ತಮ ಸೆಲ್ಫಿಗಳನ್ನು ಕ್ಲಿಕಿಸುವ ಸಲುವಾಗಿಯೇ 20 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಪ್ರೋಟ್ರೆಟ್ ಗಳನ್ನು ತೆಗೆಯಲು ಕೃತಕ ಬುದ್ಧಿಮತ್ತೆಯನ್ನು ನೀಡಲಾಗಿದೆ.

ಬೆಸ್ಟ್ ಚಾರ್ಜರ್:
ಇದಲ್ಲದೇ Mi A2 ಸ್ಮಾರ್ಟ್‌ಫೋನಿನಲ್ಲಿ 3010mAh ಬ್ಯಾಟರಿಯನ್ನು ನೀಡಲಾಗಿದ್ದು, ವೇಗದ ಚಾರ್ಜಿಂಗ್‌ಗಾಗಿ ಕ್ವಿಕ್ ಚಾರ್ಜರ್ ಅನ್ನು ನೀಡಲಾಗಿದೆ. ಹೆಚ್ಚುವರಿ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಆಯ್ಜೆಯೂ ಇದರಲ್ಲಿ ಇಲ್ಲ. ಬದಲಿಗೆ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಹೊಂದಿದೆ. USB ಟೈಪ್ C ಪೋರ್ಟ್ ಅನ್ನು ನೀಡಲಾಗಿದ್ದು, ಸಾಮಾನ್ಯ ಇಯರ್ ಫೋನ್ ಜಾಕ್ ಹಾಕಿಕೊಳ್ಳುವ ಅವಕಾಶವೂ ಇದರಲ್ಲಿ ಇಲ್ಲ.


Click it and Unblock the Notifications








