Subscribe to Gizbot

ಮಾರುಕಟ್ಟೆಯನ್ನು ಆಳಲು ಶೀಘ್ರವೇ ಎಂಟ್ರಿ ನೀಡಲಿದೆ 'ಶಿಯೋಮಿ ಮಿ ಎ2'!!

Written By:

ಶಿಯೋಮಿ ಕಂಪೆನಿಯ ಮೊದಲ ಆಂಡ್ರಾಯ್ಡ್ ಒನ್ ಸ್ಮಾರ್ಟ್‌ಪೋನ್ ಎಂಬ ಹೆಗ್ಗಳಿಕೆ ಪಡೆದಿರುವ 'ಶಿಯೋಮಿ ಮಿ ಎ1' ಸ್ಮಾರ್ಟ್‌ಫೋನಿನ ಉತ್ತರಾಧಿಕಾರಿ ಪೋನ್ 'ಶಿಯೋಮಿ ಮಿ ಎ2' ಸ್ಮಾರ್ಟ್‌ಪೋನ್ ಆನ್‌ಲೈನಿನಲ್ಲಿ ಕಾಣಿಸಿಕೊಂಡಿದೆ. ಚೀನಾದ ಹೆಸರಾಂತ ಆನ್‌ಲೈನ್ ಜಾಲತಾಣ ಟಿನಾದಲ್ಲಿ ಶಿಯೋಮಿ ಮಿ ಎ2 ಮಾಹಿತಿಯನ್ನು ನೀಡಲಾಗಿದೆ.!!

ಶಿಯೋಮಿ ಮಿ ಎ1' ಸ್ಮಾರ್ಟ್‌ಫೋನ್ ಯಶಸ್ಸಿನ ನಂತರ ಶಿಯೋಮಿ ಕಂಪೆನಿ ಇದೀಗ ಶಿಯೋಮಿ ಮಿ ಎ2 ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಹಾಗಾಗಿ, ನೂತನ ಶಿಯೋಮಿ ಮಿ ಎ2 ಸ್ಮಾರ್ಟ್‌ಪೋನ್ ಶಿಯೋಮಿ ಮಿ ಎ1 ಸ್ಮಾರ್ಟ್‌ಫೋನ್‌ಗಿಂತ ಭಿನ್ನ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬರುವುದು ಖಚಿತವಾಗಿದೆ.!!

ಮಾರುಕಟ್ಟೆಯನ್ನು ಆಳಲು ಶೀಘ್ರವೇ ಎಂಟ್ರಿ ನೀಡಲಿದೆ 'ಶಿಯೋಮಿ ಮಿ ಎ2'!!

ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟ ಕಂಡಿರುವ ಶಿಯೋಮಿಯ ಮೊದಲ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ 'ಶಿಯೋಮಿ ಮಿ ಎ2' ಇದೀಗ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ. ಹಾಗಾದರೆ, 'ಶಿಯೋಮಿ ಮಿ ಎ1' ಸ್ಮಾರ್ಟ್‌ಫೋನಿನ ಉತ್ತರಾಧಿಕಾರಿ ಪೋನ್ 'ಶಿಯೋಮಿ ಮಿ ಎ2' ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಂಬವಾಗಿ ರಿಯರ್ ಕ್ಯಾಮೆರಾ!!

ಲಂಬವಾಗಿ ರಿಯರ್ ಕ್ಯಾಮೆರಾ!!

ಶಿಯೋಮಿ ಮಿ ಎ2 ಸ್ಮಾರ್ಟ್‌ಪೋನ್ ಶಿಯೋಮಿ ಮಿ ಎ1 ಸ್ಮಾರ್ಟ್‌ಫೋನ್‌ಗಿಂತ ಭಿನ್ನ ವಿನ್ಯಾಸದಲ್ಲಿ ಬರಲಿದೆ. ಶಿಯೋಮಿ ಮಿ ಎ1 ಸ್ಮಾರ್ಟ್‌ಫೋನ್ ಅಡ್ಡವಾಗಿ ಎರಡು ರಿಯರ್ ಕ್ಯಾಮೆರಾಗಳನ್ನು ಹೊಂದಿದ್ದರೆ, ಶಿಯೋಮಿ ಮಿ ಎ2 ಸ್ಮಾರ್ಟ್‌ಫೋನ್ ಲಂಬವಾಗಿ ಎರಡು ರಿಯರ್ ಕ್ಯಾಮೆರಾಗಳನ್ನು ಹೊಂದಿರಲಿದೆ.!!

5.99 ಇಂಚ್ FHD+ ಡಿಸ್‌ಪ್ಲೇ!!

5.99 ಇಂಚ್ FHD+ ಡಿಸ್‌ಪ್ಲೇ!!

ಶಿಯೋಮಿ ಮಿ ಎ2 ಸ್ಮಾರ್ಟ್‌ಫೋನ್ 18: 9 ಆಕಾರ ಅನುಪಾತದ 5.99-ಇಂಚಿನ FHD+ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. 7.3 ಮಿ.ಮೀ. ತೆಳುವಾದ ದೇಹದಲ್ಲಿ ( ಮಿ ಎ1 ಕೂಡ 7.3 ಮಿಮೀ ತೆಳ್ಳಗಿತ್ತು) ಶಿಯೋಮಿ ಮಿ ಎ2 ಫೋನಿನ ಡಿಸ್‌ಪ್ಲೇ ಸ್ವಲ್ಪ ಬಾಗಿದಂತಿದೆ ಎಂದು ಫೋನ್‌ರೀಡರ್ ವೆಬ್‌ಸೈಟ್ ತಿಳಿಸಿದೆ.!!

ಫೇಸ್‌ ಅನ್‌ಲಾಕ್ ಫೀಚರ್!!

ಫೇಸ್‌ ಅನ್‌ಲಾಕ್ ಫೀಚರ್!!

ಆಪಲ್, ಸ್ಯಾಮ್‌ಸಂಗ್ ಮೊಬೈಲ್‌ ಕಂಪೆನಿಗಳೆಲ್ಲವೂ ಫೇಸ್‌ ಅನ್‌ಲಾಕ್ ಫೀಚರ್ ಅಳವಡಿಸಿಕೊಳ್ಳುತ್ತಿರುವುದರಿಂದ ಶಿಯೋಮಿ ಕೂಡ ಶಿಯೋಮಿ ಮಿ ಎ2 ಸ್ಮಾರ್ಟ್‌ಪೋನಿನಲ್ಲಿ ಫೇಸ್‌ ಅನ್‌ಲಾಕ್ ಫೀಚರ್ ತರುತ್ತಿದೆ. ಹಾಗಾಗಿ, ಶಿಯೋಮಿ ಮಿ ಎ2 ಸ್ಮಾರ್ಟ್‌ಫೋನಿನಲ್ಲಿ ಗ್ರಾಹಕರು ಹೊಸದೊಂದು ಫೀಚರ್ ಪಡೆಯುವುದು ಪಕ್ಕಾ ಆಗಿದೆ.!!

2910mAh ಬ್ಯಾಟರಿ!!

2910mAh ಬ್ಯಾಟರಿ!!

ಶಿಯೋಮಿ ಕಂಪೆನಿ ಯೋಮಿ ಮಿ ಎ2 ಸ್ಮಾರ್ಟ್‌ಪೋನಿನ ಬ್ಯಾಟರಿ ವಿಷಯದಲ್ಲಿ ಸ್ವಲ್ಪ ಹಿಂದೆ ಸರಿದಿದೆ. ಶಿಯೋಮಿ ಕಂಪೆನಿ ತನ್ನ ನೂತನ ಶಿಯೋಮಿ ಮಿ ಎ2 ಸ್ಮಾರ್ಟ್‌ಪೋನಿನಲ್ಲಿ ಕೇವಲ 2910mAh ಬ್ಯಾಟರಿಯನ್ನು ಅಳವಡಿಸುವ ಬಗ್ಗೆ ಮಾಹಿತಿ ನೀಡಿದೆ. ಆದರೆ, ಇಷ್ಟು ಕಡಿಮೆ ಶಕ್ತಿಯ ಬ್ಯಾಟರಿ ಏಕೆ ಎಂಬುದು ತಿಳಿದುಬಂದಿಲ್ಲ!!

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?
ಕುತೋಹಲ ಮೂಡಿಸಿದೆ.!!

ಕುತೋಹಲ ಮೂಡಿಸಿದೆ.!!

ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಕ್ಯಾಮರಾ ಸ್ಮಾರ್ಟ್‌ಫೋನ್ ಎಂದು ಹೆಸರಾಗಿರುವ 'ಶಿಯೋಮಿ ಮಿ ಎ1' ಸ್ಮಾರ್ಟ್‌ಫೋನಿನ ಅಪ್‌ಡೆಟ್ ಮಾದರಿಯಾಗಿ ಹೊರಬರುತ್ತಿರುವ ಶಿಯೋಮಿ ಮಿ ಎ2' ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಮತ್ತು ಬೆಲೆ ಎಷ್ಟು ಎಂಬುದರ ಬಗ್ಗೆ ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಕುತೋಹಲ ಮೂಡಿಸಿದೆ.!!

ಓದಿರಿ:'ಒಪ್ಪೊ ಎಫ್ 7' ಫ್ಲಾಶ್‌ಸೇಲ್‌ಗೆ ದಿನಗಣನೆ!..25MP ಸೆಲ್ಫಿ ಕ್ಯಾಮೆರಾ ಫೋನ್ ಖರೀದಿಸಲು ರೆಡಿಯಾಗಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The successor to the Mi A1 is said to be dubbed as the Mi A2 (Mi 6X) and is expected to make its entry into the Chinese market soon. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot