ಸ್ವಲ್ಪ ಕಾಯಿರಿ..ಭಾರತದಲ್ಲಿ ಶಿಯೋಮಿ 'ಮಿ ಎ3' ಬಿಡುಗಡೆ ದಿನಾಂಕ ಫಿಕ್ಸ್!

|

ಶಿಯೋಮಿ 'ಮಿ ಎ2' ಸ್ಮಾರ್ಟ್‌ಪೋನಿನ ಉತ್ತರಾಧಿಕಾರಿ ಸ್ಮಾರ್ಟ್‌ಪೋನ್ 'ಮಿ ಎ3' ಭಾರತಕ್ಕೆ ಬರುವ ದಿನಾಂಕ ಖಚಿತವಾಗಿದೆ. ಇತ್ತಿಚಿಗಷ್ಟೇ ಸ್ಪೇನ್‌ನಲ್ಲಿ ಬಿಡುಗಡೆಯಾಗಿದ್ದ ಬಹುನಿರೀಕ್ಷಿತ 'ಮಿ ಎ3' ಸ್ಮಾರ್ಟ್‌ಫೋನನ್ನು ದೇಶದಲ್ಲಿ ಬಿಡುಗಡೆ ಮಾಡಲು ಶಿಯೋಮಿ ಕಂಪೆನಿ ಒಲವು ತೋರಿದ್ದು, ಇದೇ ಆಗಸ್ಟ್ 23 ರಂದು ಭಾರತದಲ್ಲಿ ಮಿ ಎ 3 ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಸ್ವಲ್ಪ ಕಾಯಿರಿ..ಭಾರತದಲ್ಲಿ ಶಿಯೋಮಿ 'ಮಿ ಎ3' ಬಿಡುಗಡೆ ದಿನಾಂಕ ಫಿಕ್ಸ್!

ಹೌದು, ಶಿಯೋಮಿ ಮಿ ಎ3 ಇಂಡಿಯಾ ಲಾಂಚ್ ದಿನಾಂಕ ಉದ್ಯಮದ ಮೂಲವನ್ನು ಉಲ್ಲೇಖಿಸಿ ಸ್ಮಾರ್ಟ್‌ಪ್ರಿಕ್ಸ್ ಈ ಬಗ್ಗೆ ವರಿದಿ ಮಾಡಿದ್ದು, ಸ್ನಾಪ್ಡ್ರಾಗನ್ 665 SoC ಪ್ರೊಸೆಸರ್, ಟ್ರಿಪಲ್ ಕ್ಯಾಮೆರಾ ಸೆಟಪ್ ಹಾಗೂ 6.1 ಇಂಚಿನ ಡಿಸ್‌ಪ್ಲೇಯಂತಹ ಫೀಚರ್ಸ್ ಹೊಂದಿರುವ ಶಿಯೋಮಿ 'ಮಿ ಎ3' ಸ್ಮಾರ್ಟ್‌ಪೋನ್ ಭಾರತದಲ್ಲಿ ಬಿಡುಗಡೆಯಾಗುತ್ತಿರುವುದು ಖಚಿತ ಎಂದು ತಿಳಿಸಿದೆ.

64 ಜಿಬಿ ಮತ್ತು 128 ಜಿಬಿ ಶೇಖರಣಾ ಸಾಮರ್ಥ್ಯದ ಎರಡು ರೂಪಾಂತದಲ್ಲಿ ಈ ಸ್ಮಾರ್ಟ್‌ಫೋನ್ ವಿಶ್ವ ಮಾರುಕಟ್ಟೆಯಲ್ಲಿ ಕ್ರಮವಾಗಿ € 250 (19,300 ರೂ.) ಹಾಗೂ € 280 (21,600 ರೂ.) ಬೆಲೆಗಳನ್ನು ಹೊಂದಿದೆ. ಹಾಗಾದರೆ, ಈಗಾಗಲೇ ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಲಭ್ಯವಿರುವ 'ಮಿ ಎ3' ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಪ್ರೊಸೆಸರ್ ಮತ್ತು RAM

ಪ್ರೊಸೆಸರ್ ಮತ್ತು RAM

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ 'ಸ್ನಾಪ್‌ಡ್ರಾಗನ್ 665 SoC ಪ್ರೊಸೆಸರ್' ಮೂಲಕ ರನ್ ಆಗಲಿದೆ. 4 ಜಿಬಿ RAM ಮತ್ತು 128 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಈ ಸ್ಮಾರ್ಟ್‌ಫೋನ್ ಹೈಬ್ರಿಡ್ ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಸಹಾಯದಿಂದ 256 ಜಿಬಿವರೆಗೆ ಮೆಮೊರಿಯನ್ನು ವಿಸ್ತರಣೆ ಮಾಡಬಹುದಾದ ಸಾಮರ್ಥ್ಯವನ್ನು ಹೊಂದಿದೆ.

ರಿಯರ್ ಕ್ಯಾಮೆರಾ

ರಿಯರ್ ಕ್ಯಾಮೆರಾ

ಶಿಯೋಮಿ ಮಿ ಎ3 ಫೋನಿನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ತರಲಾಗಿದ್ದು, ಎಫ್ / 1.78 ಅಪರ್ಚರ್ ಸಾಮರ್ಥ್ಯದ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸಂವೇದಕಗಳನ್ನು ನೋಡಬಹುದು. ಇವುಗಳಿಂದ 2160 ಪಿ ವೀಡಿಯೊಗಳನ್ನು ಪಡೆಯಬಹುದು ಎಂದು ಕಂಪೆನಿ ಹೇಳಿದೆ.

ಸೆಲ್ಫಿ ಕ್ಯಾಮೆರಾ

ಸೆಲ್ಫಿ ಕ್ಯಾಮೆರಾ

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನಿನಲ್ಲಿ ಎಫ್ / 2.0 ಅಪರ್ಚರ್ ಸಾಮರ್ಥ್ಯದ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಫ್ರಂಟ್ ಕ್ಯಾಮೆರಾವು ಎಐ ಪೋರ್ಟ್ರೇಟ್ ಮೋಡ್, 3 ಡಿ ಬ್ಯೂಟಿ, ಫ್ರಂಟ್ ಪನೋರಮಾ, ಗೆಸ್ಚರ್ ಫೋಟೋ, ಫ್ರಂಟ್ ಎಚ್‌ಡಿಆರ್ ಮತ್ತು ಫ್ರಂಟ್ ಸ್ಕ್ರೀನ್ ಫಿಲ್ ಸೇರಿದಂತೆ ಹಲವು ಕ್ಯಾಮೆರಾ ತಂತ್ರಜ್ಞಾನಗಳನ್ನು ಹೊಂದಿದೆ.

ಕ್ಯಾಮೆರಾ ತಂತ್ರಜ್ಞಾನ

ಕ್ಯಾಮೆರಾ ತಂತ್ರಜ್ಞಾನ

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನಿನಲ್ಲಿ 30 ಎಫ್‌ಪಿಎಸ್‌ನಲ್ಲಿ 2160 ಪಿ ವೀಡಿಯೊ ಅಥವಾ 120 ಎಫ್‌ಪಿಎಸ್ ವರೆಗೆ 1080 ಪಿ ವರೆಗೆ ರೆಕಾರ್ಡ್ ಮಾಡಬಹುದು. 32 ಎಂಪಿ ಸೆಲ್ಫಿ ಕ್ಯಾಮೆರಾದಲ್ಲಿ 30 ಎಫ್‌ಪಿಎಸ್‌ನಲ್ಲಿ 1080p ವರೆಗೆ ಶೂಟ್ ಮಾಡಬಹುದು. ಪನೋರಮಾ, 4 ಕೆ ವಿಡಿಯೋ ರೆಕಾರ್ಡಿಂಗ್ ಮತ್ತು ಸ್ಲೊಮೋಷನ್ ವಿಡಿಯೋ ರೆಕಾರ್ಡಿಂಗ್ ಬೆಂಬಲವಿದೆ.

 ಬ್ಯಾಟರಿ ಮತ್ತು ಇತರೆ ಫೀಚರ್ಸ್

ಬ್ಯಾಟರಿ ಮತ್ತು ಇತರೆ ಫೀಚರ್ಸ್

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ 4,030 ಎಮ್ಎಹೆಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.ಇದು 18W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆಯಾದರೂ, ಫೋನ್ ಜೊತೆಗೆ 10 W ಚಾರ್ಜರ್ ಮಾತ್ರ ನೀಡಲಾಗಿದೆ. ಇನ್ನು 4ಜಿ ವೋಲ್ಟ್ ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ.

Best Mobiles in India

English summary
Xiaomi Mi A3, the third -generation Android One smartphone was unveiled back in July. Now, it looks like the company is in plans to launch the device in India this month. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X