ಶಿಯೋಮಿ 'ಮಿ ಸಿಸಿ9' ಮತ್ತು 'ಮಿ ಸಿಸಿ 9ಇ' ಸ್ಮಾರ್ಟ್‌ಫೋನ್‌ಗಳು ಲಾಂಚ್!
ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಶಿಯೋಮಿಯ ಹೊಸ 'ಮಿ ಸಿಸಿ' ಸ್ಮಾರ್ಟ್‌ಫೋನ್ ಸರಣಿಯು ಚೀನಾದಲ್ಲಿ ನೆನ್ನೆ ಲಾಂಚ್ ಆಗಿದೆ. ವದಂತಿಗಳು ಮತ್ತು ಸೋರಿಕೆಗಳ ಮೂಲಕ ಈ ಮೊದಲೇ ತಿಳಿದುಬಂದತೆ ಮಿ ಸಿಸಿ 9 ಮತ್ತು ಮಿ ಸಿಸಿ 9 ಇ ಎರಡು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿದ್ದು, ಈ ಎರಡೂ ಸಾಧನಗಳನ್ನು ಮಧ್ಯ ಶ್ರೇಣಿಯ ಮಾರುಕಟ್ಟೆ ವಿಭಾಗದಲ್ಲಿ ಇರಿಸಲಾಗಿದೆ ಮತ್ತು ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಅನೇಕ ಟ್ರೆಂಡಿಂಗ್ ವೈಶಿಷ್ಟ್ಯಗಳನ್ನು ನೀಡಲಾಗಿದೆ.

ಶಿಯೋಮಿ ಮಿ ಸಿಸಿ 9 ಮತ್ತು ಮಿ ಸಿಸಿ 9 ಇ ಸ್ಮಾರ್ಟ್‌ಫೋನ್‌ಗಳು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ಗಳು, ಬದಿಗಳಲ್ಲಿ ಕನಿಷ್ಠ ಬೆಜೆಲ್‌ಗಳು, ಪ್ರದರ್ಶನದ ಮೇಲ್ಭಾಗದಲ್ಲಿ ಡಾಟ್ ನಾಚ್ ಮತ್ತು ಮೆಟಲ್ ಮತ್ತು ಗ್ಲಾಸ್ ಸ್ಯಾಂಡ್‌ವಿಚ್ ವಿನ್ಯಾಸದೊಂದಿಗೆ ಪ್ರೀಮಿಯಂ ನೋಟವನ್ನು ಹೊಂದಿವೆ. ಮಿ ಸಿಸಿ 9 ಇ ಇತ್ತೀಚಿನ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665 ಪ್ರೊಸೆಸರ್ ಅನ್ನು ಬಳಸಿದ ಮೊದಲ ಸ್ಮಾರ್ಟ್ಫೋನ್ ಎಂಬ ಹೆಗ್ಗಳಿಕೆಯನ್ನು ಪಡೆದರೆ, ಮಿ ಸಿಸಿ 9 ಸ್ನಾಪ್ಡ್ರಾಗನ್ 710 ಪ್ರೊಸೆಸರ್ ಹೊಂದಿದೆ.
ಈ ಸ್ಮಾರ್ಟ್‌ಫೋನ್‌ಗಳನ್ನು ಬ್ಲೂ ಪ್ಲಾನೆಟ್, ಡಾರ್ಕ್ ಪ್ರಿನ್ಸ್ ಮತ್ತು ವೈಟ್ ಲವರ್ ಕಲರ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಬೆಲೆಗಳ ವಿಷಯಕ್ಕೆ ಬಂದರೆ, ಶಿಯೋಮಿ ಮಿ ಸಿಸಿ 9 ಅನ್ನು 6 ಜಿಬಿ RAM + 64 ಜಿಬಿ ಆಂತರಿಕ ಮೆಮೊರಿ ಮತ್ತು 6 ಜಿಬಿ RAM + 128 ಜಿಬಿ ಆಂತರಿಕ ಮೆಮೊರಿಯ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ರೂಪಾಂತರಗಳ ಬೆಲೆ ಕ್ರಮವಾಗಿ 1799 ಯುವಾನ್ (ಅಂದಾಜು 18,000 ರೂ.) ಮತ್ತು 1999 ಯುವಾನ್ (ಅಂದಾಜು ರೂ. 20,000).ಗಳಾಗಿವೆ.

ಮತ್ತೊಂದೆಡೆ, ಮಿ ಸಿಸಿ 9 ಇ ಸ್ಮಾರ್ಟ್‌ಫೋನ್ ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. 4GB RAM + 64GB ROM ನೊಂದಿಗೆ ಬೇಸ್ ರೂಪಾಂತರವು 1299 ಯುವಾನ್ (ಅಂದಾಜು 13,000 ರೂ.), 6GB RAM + 64GB ROM ನೊಂದಿಗೆ ಮಿಡ್-ವೇರಿಯಂಟ್ ಫೋನ್ 1399 ಯುವಾನ್ (ಅಂದಾಜು ರೂ. . 14,000) ಮತ್ತು 6 ಜಿಬಿ RAM + 128 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಹೈ-ಎಂಡ್ ರೂಪಾಂತರವು 1599 ಯುವಾನ್ (ಅಂದಾಜು ರೂ. 16,999). ಬೆಲೆಯನ್ನು ಹೊಂದಿವೆ.
ಎರಡೂ ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳ ಬಗ್ಗೆ ತಿಳಿಯಬೇಕೆಂದರೆ, ಶಿಯೋಮಿ ಮಿ ಸಿಸಿ 9 6.39-ಇಂಚಿನ ಎಫ್‌ಹೆಚ್‌ಡಿ + ರೆಸಲ್ಯೂಶನ್ ಅಮೋಲೆಡ್ ಪ್ರದರ್ಶನವನ್ನು ಹೊಂದಿದ್ದರೆ, ಮಿ ಸಿಸಿ 9 ಇ 6.08-ಇಂಚಿನ ಎಚ್‌ಡಿ + ಅಮೋಲೆಡ್ ಡಿಸ್ಪ್ಲೇ ಮತ್ತು 88.8% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. Mi CC9 ನಂತೆಯೇ ಕ್ಯಾಮೆರಾ, ಬ್ಯಾಟರಿ ಮತ್ತು ವಿನ್ಯಾಸವನ್ನು ಹೊಂದಿದೆ ಆದರೆ ಇದು ಸ್ನಾಪ್‌ಡ್ರಾಗನ್ 665 SoC ಅನ್ನು ಬಳಸುತ್ತದೆ. ಈ ಬಗ್ಗೆ ಪೂರ್ಣ ಮಾಹಿತಿಯನ್ನು ನಾವು ಮುಂದಿನ ಲೇಖನದಲ್ಲಿ ತಿಳಿಯೋಣ.


Click it and Unblock the Notifications








