ಶಿಯೋಮಿ 'ಮಿ ಸಿಸಿ 9'ಸ್ಮಾರ್ಟ್‌ಫೋನಿಗೆ ಮೊಬೈಲ್ ಜಗತ್ತು ಫಿದಾ!
ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, ಬದಿಗಳಲ್ಲಿ ಕನಿಷ್ಠ ಬೆಜೆಲ್, ಡಿಸ್‌ಪ್ಲೇ ಮೇಲ್ಭಾಗದಲ್ಲಿ ಡಾಟ್ ನಾಚ್ ಮತ್ತು ಮೆಟಲ್ ಮತ್ತು ಗ್ಲಾಸ್ ಸ್ಯಾಂಡ್‌ವಿಚ್ ವಿನ್ಯಾಸ ಸೇರಿದಂತೆ ಪ್ರೀಮಿಯಂ ಲುಕ್‌ನಲ್ಲಿ ಬಜೆಟ್ ಸ್ಮಾರ್ಟ್‌ಫೋನ್‌ಗಳು ಇದೀಗ ಲಭ್ಯ. ಏಕೆಂದರೆ, ಈ ಎಲ್ಲಾ ಸೌಲಭ್ಯಗಳನ್ನು ಹೊತ್ತು ಶಿಯೋಮಿಯ ಮಿ ಸಿಸಿ 9 ಮತ್ತು ಮಿ ಸಿಸಿ 9 ಇ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ.! ಈ ಮೂಲಕ ಮತ್ತೊಮ್ಮೆ ತಾನು ಬಜೆಟ್ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ದಿಗ್ಗಜ ಎಂಬುದನ್ನು ಶಿಯೋಮಿ ತೋರಿಸಿಕೊಟ್ಟಿದೆ.

ಹೌದು, ಶಿಯೋಮಿಯ ಹೊಸ 'ಮಿ ಸಿಸಿ' ಸ್ಮಾರ್ಟ್‌ಫೋನ್ ಸರಣಿಯು ಚೀನಾದಲ್ಲಿ ನೆನ್ನೆ ಲಾಂಚ್ ಆಗಿದ್ದು, ಈ ಎರಡೂ ಸಾಧನಗಳನ್ನು ಮಧ್ಯ ಶ್ರೇಣಿಯ ಮಾರುಕಟ್ಟೆ ವಿಭಾಗದಲ್ಲಿ ಇರಿಸಲಾಗಿದೆ ಮತ್ತು ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಅನೇಕ ಟ್ರೆಂಡಿಂಗ್ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಮಿ ಸಿಸಿ 9 ಇ ಇತ್ತೀಚಿನ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665 ಪ್ರೊಸೆಸರ್ ಅನ್ನು ಬಳಸಿದ ಮೊದಲ ಸ್ಮಾರ್ಟ್ಫೋನ್ ಎಂಬ ಹೆಗ್ಗಳಿಕೆಯನ್ನು ಪಡೆದರೆ, ಮಿ ಸಿಸಿ 9 ಸ್ನಾಪ್ಡ್ರಾಗನ್ 710 ಪ್ರೊಸೆಸರ್ ಹೊಂದಿದೆ.
ಅದರಲ್ಲಿ ಶಿಯೋಮಿ ಮಿ ಸಿಸಿ 9 ಸ್ಮಾರ್ಟ್‌ಫೋನ್ 6 ಜಿಬಿ RAM + 64 ಜಿಬಿ ಆಂತರಿಕ ಮೆಮೊರಿ ಮತ್ತು 6 ಜಿಬಿ RAM + 128 ಜಿಬಿ ಆಂತರಿಕ ಮೆಮೊರಿಯ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು, ಈ ರೂಪಾಂತರಗಳ ಬೆಲೆ ಕ್ರಮವಾಗಿ ಕೇವಲ 1799 ಯುವಾನ್ (ಅಂದಾಜು 18,000 ರೂ.) ಮತ್ತು 1999 ಯುವಾನ್ (ಅಂದಾಜು ರೂ. 20,000).ಗಳಾಗಿವೆ. ಹಾಗಾದರೆ, ಶಿಯೋಮಿ ಮಿ ಸಿಸಿ 9 ಸ್ಮಾರ್ಟ್‌ಫೋನ್ ಹೊಂದಿರುವ ವಿಶೇಷತೆಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಮಿ ಸಿಸಿ 9 ಫೋನಿನ ವಿನ್ಯಾಸ
ಮೊದಲೇ ಹೇಳಿದಂತೆ ಶಿಯೋಮಿ ಮಿ ಸಿಸಿ 9 ಸ್ಮಾರ್ಟ್‌ಫೋನ್ ಪ್ರೀಮಿಯಂ ಲುಕ್ ಹೊಂದಿರುವ ಬಜೆಟ್ ಸ್ಮಾರ್ಟ್‌ಫೋನ್ ಆಗಿದೆ. ಡಿಸ್‌ಪ್ಲೇ ಮೇಲ್ಭಾಗದಲ್ಲಿ ಡಾಟ್ ನಾಚ್ ಮತ್ತು ಮೆಟಲ್ ಮತ್ತು ಗ್ಲಾಸ್ ಸ್ಯಾಂಡ್‌ವಿಚ್ ವಿನ್ಯಾಸದಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವ ಫೋನಿನಲ್ಲಿ 5ನೇ ತಲೆಮಾರಿನ ಗೋರಿಲ್ಲಾ ಗ್ಲಾಸ್ 5 ಗ್ಲಾಸ್ ಅನ್ನು ಹಿಂಭಾಗದಲ್ಲಿ ನೀಡಲಾಗಿದೆ. ಫಿಂಗರ್ ಪ್ರಿಂಟ್ ಆಯ್ಕೆ ಇಲ್ಲದಿರುವುದರಿಂದ ಒಟ್ಟಾರೆಯಾಗಿ ಸ್ಮಾರ್ಟ್‌ಫೋನ್ ಪ್ರೀಮಿಯಂ ಲುಕ್ ಹೊಂದಿದೆ ಎಂದು ಹೇಳಬಹುದು.

ಮಿ ಸಿಸಿ 9 ಫೋನಿನ ಡಿಸ್‌ಪ್ಲೇ
ಮಿ ಸಿಸಿ 9 ಸ್ಮಾರ್ಟ್‌ಫೋನ್ 6.39-ಇಂಚಿನ ಪೂರ್ಣ-ಎಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. 1080x2340 ಪಿಕ್ಸೆಲ್‌ಗಳ ಸಾಮರ್ಥ್ಯದಲ್ಲಿ 403 ಪಿಪಿ ಪಿಕ್ಸೆಲ್ ಸಾಂದ್ರತೆ ಮತ್ತು 430 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿರುವ ಅಮೋಲೆಡ್ ಡಿಸ್‌ಪ್ಲೇ ಇದಾಗಿದೆ. ಎಫ್‌ಹೆಚ್‌ಡಿ + ರೆಸಲ್ಯೂಶನ್ ಮತ್ತು 91% ಸ್ಕ್ರೀನ್-ಟು-ಬಾಡಿ ಅನುಪಾತದಲ್ಲಿರುವ ಡಿಸ್‌ಪ್ಲೇಯು ಗೇಮಿಂಗ್ ಮತ್ತು ವಿಡಿಯೋ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಮಿ ಸಿಸಿ 9ಇ ಗಿಂತ ಸ್ಕ್ರೀನ್-ಟು-ಬಾಡಿ (88.8%) ಅನುಪಾತವನ್ನು ಮಿ ಸಿಸಿ 9 ಸ್ಮಾರ್ಟ್‌ಫೋನ್ ಹೊಂದಿರುವುದನ್ನು ನಾವು ನೋಡಬಹುದು.

ಮಿ ಸಿಸಿ 9 ಪ್ರೊಸೆಸರ್ ಮತ್ತು RAM
ಮಿ ಸಿಸಿ 9 ಸ್ಮಾರ್ಟ್‌ಫೋನಿನಲ್ಲಿ 6ಜಿಬಿ RAM ಮತ್ತು ಅಡ್ರಿನೊ 616 ಜಿಪಿಯು ಜೊತೆ ಜೋಡಿಯಾಗಿರುವ 2.2GHz ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 710 ಪ್ರೊಸೆಸರ್ ಅನ್ನು ನೀಡಲಾಗಿದೆ. ಆಂತರಿಕ ಶೇಖರಣಾ ಆಯ್ಕೆಗಳಲ್ಲಿ 64 ಜಿಬಿ ಮತ್ತು 128 ಜಿಬಿ ಸೇರಿವೆ, ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ (256 ಜಿಬಿ ವರೆಗೆ) ಬಳಸಿ ಮತ್ತಷ್ಟು ವಿಸ್ತರಿಸುವ ಆಯ್ಕೆಯನ್ನು ಹೊಂದಿದೆ. ಗೇಮ್ ಟರ್ಬೊ 2.0 ಜೊತೆಗೆ ಸ್ನಾಪ್‌ಡ್ರಾಗನ್ 710 SoC ಪ್ರೊಸೆಸರ್ ಮತ್ತು 256GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸ್ಥಳವು ಇದರ ಪ್ರಮುಖ ವಿಶೇಷತೆ ಎಂದು ನಾವು ಹೇಳಬಹುದು.

ಮಿ ಸಿಸಿ 9 ರಿಯರ್ ಕ್ಯಾಮೆರಾ
ಮಿ ಸಿಸಿ 9 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಎಫ್ / 1.9 ಅಪರ್ಚರ್ ಸಾಮರ್ಥ್ಯದ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸಂವೇದಕವನ್ನು ರಿಯರ್ ಕ್ಯಾಮೆರಾಗಳಲ್ಲಿ ನೋಡಬಹುದು. ಇನ್ನು ಹಿಂದಿನ ಕ್ಯಾಮೆರಾ ವೈಶಿಷ್ಟ್ಯಗಳಲ್ಲಿ ಸೂಪರ್ ನೈಟ್ ಮೋಡ್, ಪೋರ್ಟ್ರೇಟ್ ಮೋಡ್ ಬೊಕೆ, ಎಚ್‌ಡಿಆರ್, ಪನೋರಮಾ, 4 ಕೆ ವಿಡಿಯೋ ರೆಕಾರ್ಡಿಂಗ್, 960 ಎಫ್‌ಪಿಎಸ್‌ನಲ್ಲಿ ಸ್ಲೊ-ಮೋಷನ್ ವಿಡಿಯೋ ರೆಕಾರ್ಡಿಂಗ್ ಬೆಂಬಲವಿದೆ.

ಮಿ ಸಿಸಿ 9 ಸೆಲ್ಫೀ ಕ್ಯಾಮೆರಾ
ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುವ ಮಿ ಸಿಸಿ 9 ಸ್ಮಾರ್ಟ್‌ಫೋನಿನಲ್ಲಿ ಎಫ್ / 2.0 ಅಪರ್ಚರ್ ಸಾಮರ್ಥ್ಯದ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಫ್ರಂಟ್ ಕ್ಯಾಮೆರಾ ವೈಶಿಷ್ಟ್ಯಗಳಲ್ಲಿ ಮಿಮೋಜಿ ಶೂಟಿಂಗ್, ಎಐ ಪೋರ್ಟ್ರೇಟ್ ಮೋಡ್, 3 ಡಿ ಬ್ಯೂಟಿ, ಫ್ರಂಟ್ ಪನೋರಮಾ, ಗೆಸ್ಚರ್ ಫೋಟೋ, ಫ್ರಂಟ್ ಎಚ್‌ಡಿಆರ್, ಫ್ರಂಟ್ ಸ್ಕ್ರೀನ್ ಫಿಲ್, ಫೇಸ್ ರೆಕಗ್ನಿಷನ್, ಎಐ ಸ್ಮಾರ್ಟ್ ಬ್ಯೂಟಿ ಮತ್ತು ಹೆಚ್ಚಿನವು ಸೇರಿವೆ. ಫೇಸ್ ಅನ್ಲಾಕ್ ಫೀಚರ್‌ಗೆ ಈ ಕ್ಯಾಮೆರಾ ಸಪೋರ್ಟ್ ಮಾಡಲಿದೆ.

ಮಿ ಸಿಸಿ 9 ಇತರೆ ಫೀಚರ್ಸ್
ಮಿ ಸಿಸಿ 9 ಸ್ಮಾರ್ಟ್‌ಫೋನ್ 18W ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ 4,030 ಎಮ್‌ಎಹೆಚ್ ಬ್ಯಾಟರಿಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎನ್‌ಎಫ್‌ಸಿ, 3.5 ಎಂಎಂ ಆಡಿಯೊ ಜ್ಯಾಕ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ಬ್ಲೂಟೂತ್ ವಿ 5, ವೈ-ಫೈ 802.11 ಎ / ಬಿ / ಜಿ / ಎನ್ / ಎಸಿ, ಮತ್ತು ಹೆಚ್ಚಿನವು ಸೇರಿವೆ. ಇನ್-ಸ್ಕ್ರೀನ್ ಫಿಂಗರ್ಪ್ರಿಂಟ್ ಸೆನ್ಸರ್, ಫೇಸ್ ಅನ್ಲಾಕ್, ಗೇಮ್ ಟರ್ಬೊ 2.0 ಮೋಡ್ ಮತ್ತು ಹೈ-ರೆಸ್ ಆಡಿಯೊ ಪ್ರಮುಖ ವೈಶಿಷ್ಟ್ಯಗಳಾಗಿವೆ. ಫೋನ್ ತೂಕ 179 ಗ್ರಾಂ ಆಗಿದ್ದು, 156.8x74.5x8.67mm ತೆಳ್ಳಗಿದೆ.


Click it and Unblock the Notifications








