ಶಿಯೋಮಿ 'ಮಿ ಸಿಸಿ 9ಇ' ಫೋನ್ ಹೇಗಿದೆ?..ಬೆಲೆ ಎಷ್ಟು?..ಇಲ್ಲಿದೆ ಫುಲ್ ಡೀಟೇಲ್ಸ್!

|

ಶಿಯೋಮಿ 'ಮಿ ಸಿಸಿ 9 'ಮತ್ತು 'ಮಿ ಸಿಸಿ 9ಇ' ಎರಡು ಸ್ಮಾರ್ಟ್‌ಫೋನ್‌ಗಳು ಇಂದು ಚೀನಾದಲ್ಲಿ ಬಿಡುಗಡೆಯಾಗಿರುವುದು ಈಗಾಗಲೇ ನಿಮಗೆ ತಿಳಿದಿದೆ ಎಂದು ಹೇಳಬಹುದು. ಹಿಂಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವ ಈ ಎರಡೂ ಸ್ಮಾರ್ಟ್‌ಫೋನ್‌ಗಳು, ವಾಟರ್‌ಡ್ರಾಪ್ ಶೈಲಿಯ ನೋಚ್ ವಿನ್ಯಾಸದಲ್ಲಿ ನಯವಾದ ಗ್ರೇಡಿಯಂಟ್ ಪ್ಯಾನಲ್ ಫಿನಿಶ್‌ಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಜೊತೆಗೆ ಪ್ರಮುಖ ವಿಶೇಷತೆಗಳ ಜೊತೆಗೆ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿವೆ.

ಶಿಯೋಮಿ 'ಮಿ ಸಿಸಿ 9ಇ' ಫೋನ್ ಹೇಗಿದೆ?..ಬೆಲೆ ಎಷ್ಟು?..ಇಲ್ಲಿದೆ ಫುಲ್ ಡೀಟೇಲ್ಸ್!

4,030mAh ಬ್ಯಾಟರಿ, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 48 ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮೆರಾ ಮತ್ತು ಇನ್-ಸ್ಕ್ರೀನ್ ಫಿಂಗರ್ಪ್ರಿಂಟ್ ಫೀಚರ್‌ಗಳ ಮೂಲಕ ಶಿಯೋಮಿ 'ಮಿ ಸಿಸಿ 9' ಮತ್ತು 'ಮಿ ಸಿಸಿ 9ಇ' ಎರಡು ಸ್ಮಾರ್ಟ್‌ಫೋನ್‌ಗಳು ಮೊಬೈಲ್ ಮಾರುಕಟ್ಟೆಯ ಗಮನಸೆಳೆದಿವೆ. ಹಾರ್ಡ್‌ವೇರ್ ವಿಷಯದಲ್ಲಿ ಎರಡೂ ಸ್ಮಾರ್ಟ್‌ಫೋನ್‌ಗಳು ಬಹುತೇಕ ಒಂದೇ ರೀತಿಯಲ್ಲಿವೆ. ಆದರೆ, ಡಿಸ್‌ಪ್ಲೇ ಪ್ರೊಸೆಸರ್ ಮತ್ತು RAM ಸೇರಿದಂತೆ ಹಲವು ಫೀಚರ್‌ಗಳಲ್ಲಿ ನಾವು ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ

ಈ ಮೊದಲಿನ ಲೇಖನದಲ್ಲಿ 'ಮಿ ಸಿಸಿ 9' ಸ್ಮಾರ್ಟ್‌ಫೋನಿನ ಬಗ್ಗೆ ನಾವು ಈಗಾಗಲೇ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಹಾಗಾಗಿ, ಈ ಲೇಖನದಲ್ಲಿ 'ಮಿ ಸಿಸಿ 9' ಜೊತೆಯಲ್ಲೇ ಬಿಡುಗಡೆಯಾಗಿರುವ ಮತ್ತೊಂದು ಸ್ಮಾರ್ಟ್‌ಫೋನ್‌ 'ಮಿ ಸಿಸಿ 9ಇ' ಹೇಗಿದೆ ಎಂಬುದನ್ನು ತಿಳಿಯೋಣ. ಹಾಗಾದರೆ, ಶಿಯೋಮಿ 'ಮಿ ಸಿಸಿ 9ಇ' ಸ್ಮಾರ್ಟ್‌ಫೋನ್‌ ಹೇಗಿದೆ?, ಶಿಯೋಮಿ 'ಮಿ ಸಿಸಿ 9ಇ' ಸ್ಮಾರ್ಟ್‌ಫೋನಿನ ಫೀಚರ್ಸ್ ಮತ್ತು ವಿಶೇಷತೆಗಳು ಯಾವುವು? ಮತ್ತು ಬೆಲೆಗಳು ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಹೇಗಿದೆ 'ಮಿ ಸಿಸಿ 9ಇ' ಪೋನ್?

ಹೇಗಿದೆ 'ಮಿ ಸಿಸಿ 9ಇ' ಪೋನ್?

ಮೊದಲೇ ಹೇಳಿದಂತೆ ಶಿಯೋಮಿ 'ಮಿ ಸಿಸಿ 9 'ಸ್ಮಾರ್ಟ್‌ಫೋನಿಗೂ 'ಮಿ ಸಿಸಿ 9ಇ' ಸ್ಮಾರ್ಟ್‌ಫೋನಿನ ವಿನ್ಯಾಸದಲ್ಲಿ ವ್ಯತ್ಯಾಸವಿಲ್ಲ. 'ಮಿ ಸಿಸಿ 9ಇ' ಡಿಸ್‌ಪ್ಲೇ ಮೇಲ್ಭಾಗದಲ್ಲಿ ಡಾಟ್ ನಾಚ್ ಮೆಟಲ್ ಮತ್ತು ಗ್ಲಾಸ್ ಸ್ಯಾಂಡ್‌ವಿಚ್ ವಿನ್ಯಾಸವಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವ ಫೋನಿನಲ್ಲಿ 5ನೇ ತಲೆಮಾರಿನ ಗೋರಿಲ್ಲಾ ಗ್ಲಾಸ್ 5 ಗ್ಲಾಸ್ ಅನ್ನು ಹಿಂಭಾಗ‌ದಲ್ಲಿ ನೀಡಲಾಗಿದೆ. ಫಿಂಗರ್ ಪ್ರಿಂಟ್ ಆಯ್ಕೆ ಇಲ್ಲದಿರುವುದರಿಂದ ಒಟ್ಟಾರೆಯಾಗಿ ಸ್ಮಾರ್ಟ್‌ಫೋನ್ ಪ್ರೀಮಿಯಂ ಲುಕ್ ಹೊಂದಿದೆ.

ಮಿ ಸಿಸಿ 9ಇ ಡಿಸ್‌ಪ್ಲೇ ಹೇಗಿದೆ?

ಮಿ ಸಿಸಿ 9ಇ ಡಿಸ್‌ಪ್ಲೇ ಹೇಗಿದೆ?

'ಮಿ ಸಿಸಿ 9ಇ' ಸ್ಮಾರ್ಟ್‌ಫೋನಿನಲ್ಲಿ 6.088-ಇಂಚಿನ ಎಚ್‌ಡಿ + (720x1560 ಪಿಕ್ಸೆಲ್‌ಗಳು) ಅಮೋಲೆಡ್ ಡಿಸ್ಪ್ಲೇಯನ್ನು ನೀಡಲಾಗಿದೆ. 350 ನಿಟ್ಸ್ ಸ್ಕ್ರೀನ್ ಬ್ರೈಟ್‌ನೆಸ್ ಮತ್ತು ಟಿಯುವಿ ರೈನ್‌ಲ್ಯಾಂಡ್ ಪ್ರಮಾಣೀಕರಣದೊಂದಿಗೆ ಬಂದಿರುವ ಈ ಡಿಸ್‌ಪ್ಲೇಯ ಶೇ 88.8% ರಷ್ಟು ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿರುವುದನ್ನು ನೋಡಬಹುದು. 91% ಸ್ಕ್ರೀನ್-ಟು-ಬಾಡಿ ಅನುಪಾತದ ಡಿಸ್‌ಪ್ಲೇ ಹೊಂದಿರುವ 'ಮಿ ಸಿಸಿ 9' ಸ್ಮಾರ್ಟ್‌ಫೋನ್ ಈ ಫೋನಿಗಿಂತಲೂ ಹೆಚ್ಚು ಗುಣಮಟ್ಟದ ಡಿಸ್‌ಪ್ಲೇ ಹೊಂದಿದೆ.

ಮಿ ಸಿಸಿ 9ಇ ಪ್ರೊಸೆಸರ್ ಹೇಗಿದೆ?

ಮಿ ಸಿಸಿ 9ಇ ಪ್ರೊಸೆಸರ್ ಹೇಗಿದೆ?

4 ಜಿಬಿ ಮತ್ತು 6 ಜಿಬಿ RAM ಆಯ್ಕೆಗಳೊಂದಿಗೆ ಜೋಡಿಯಾಗಿರುವ 11 ಎನ್ಎಂ 2.0GHz ಸ್ನಾಪ್ಡ್ರಾಗನ್ 665 ಆಕ್ಟಾ-ಕೋರ್ ಪ್ರೊಸೆಸರ್ ಅನ್ನು 'ಮಿ ಸಿಸಿ 9ಇ' ಸ್ಮಾರ್ಟ್‌ಫೋನಿನಲ್ಲಿ ಇದೇ ಮೊದಲ ಬಾರಿಗೆ ಪರಿಚಯಿಸಲಾಗಿದೆ. 4 ಜಿಬಿ ಮತ್ತು 6 ಜಿಬಿ RAM ಆಯ್ಕೆಗಳೊಂದಿಗೆ ಆಂತರಿಕ ಸಂಗ್ರಹಣೆಯು 64 ಜಿಬಿ ಮತ್ತು 128 ಜಿಬಿಯ ಎರಡು ಆಯ್ಕೆಗಳಲ್ಲಿ ನೀಡಲಾಗುತ್ತದೆ ಮತ್ತು ಹೈಬ್ರಿಡ್ ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಸಹಾಯದಿಂದ 256 ಜಿಬಿವರೆಗೆ ಮೆಮೊರಿಯನ್ನು ವಿಸ್ತರಣೆ ಮಾಡಬಹುದಾದ ಸಾಮರ್ಥ್ಯವನ್ನು ಫೋನ್ ಹೊಂದಿದೆ.

ಮಿ ಸಿಸಿ 9ಇ ಕ್ಯಾಮೆರಾ ಹೇಗಿದೆ?

ಮಿ ಸಿಸಿ 9ಇ ಕ್ಯಾಮೆರಾ ಹೇಗಿದೆ?

'ಮಿ ಸಿಸಿ 9' ನಂತೆ 'ಮಿ ಸಿಸಿ 9ಇ' ಸ್ಮಾರ್ಟ್‌ಫೋನ್ ಕೂಡ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಎಫ್ / 1.9 ಅಪರ್ಚರ್ ಸಾಮರ್ಥ್ಯದ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸಂವೇದಕವನ್ನು ರಿಯರ್ ಕ್ಯಾಮೆರಾಗಳಲ್ಲಿ ನೋಡಬಹುದು. ಇನ್ನು ಹಿಂದಿನ ಕ್ಯಾಮೆರಾ ವೈಶಿಷ್ಟ್ಯಗಳಲ್ಲಿ ಸೂಪರ್ ನೈಟ್ ಮೋಡ್, ಪೋರ್ಟ್ರೇಟ್ ಮೋಡ್ ಬೊಕೆ, ಎಚ್‌ಡಿಆರ್, ಪನೋರಮಾ, 4 ಕೆ ವಿಡಿಯೋ ರೆಕಾರ್ಡಿಂಗ್, 960 ಎಫ್‌ಪಿಎಸ್‌ನಲ್ಲಿ ಸ್ಲೊ-ಮೋಷನ್ ವಿಡಿಯೋ ರೆಕಾರ್ಡಿಂಗ್ ಬೆಂಬಲವಿದೆ.

ಮಿ ಸಿಸಿ 9ಇ ಸೆಲ್ಫೀ ಕ್ಯಾಮೆರಾ

ಮಿ ಸಿಸಿ 9ಇ ಸೆಲ್ಫೀ ಕ್ಯಾಮೆರಾ

'ಮಿ ಸಿಸಿ 9' ನಂತೆ 'ಮಿ ಸಿಸಿ 9ಇ' ಸ್ಮಾರ್ಟ್‌ಫೋನಿನಲ್ಲೂ ಕೂಡ ಕೂಡ ಎಫ್ / 2.0 ಅಪರ್ಚರ್ ಸಾಮರ್ಥ್ಯದ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಫ್ರಂಟ್ ಕ್ಯಾಮೆರಾ ವೈಶಿಷ್ಟ್ಯಗಳಲ್ಲಿ ಮಿಮೋಜಿ ಶೂಟಿಂಗ್, ಎಐ ಪೋರ್ಟ್ರೇಟ್ ಮೋಡ್, 3 ಡಿ ಬ್ಯೂಟಿ, ಫ್ರಂಟ್ ಪನೋರಮಾ, ಗೆಸ್ಚರ್ ಫೋಟೋ, ಫ್ರಂಟ್ ಎಚ್‌ಡಿಆರ್, ಫ್ರಂಟ್ ಸ್ಕ್ರೀನ್ ಫಿಲ್, ಫೇಸ್ ರೆಕಗ್ನಿಷನ್, ಎಐ ಸ್ಮಾರ್ಟ್ ಬ್ಯೂಟಿ ಮತ್ತು ಹೆಚ್ಚಿನವು ಸೇರಿವೆ. ಫೇಸ್ ಅನ್ಲಾಕ್ ಫೀಚರ್‌ಗೆ ಈ ಕ್ಯಾಮೆರಾ ಸಪೋರ್ಟ್ ಮಾಡಲಿದೆ.

ಮಿ ಸಿಸಿ 9ಇ ಇತರೆ ಫೀಚರ್ಸ್

ಮಿ ಸಿಸಿ 9ಇ ಇತರೆ ಫೀಚರ್ಸ್

ಮಿ ಸಿಸಿ 9ನಂತೆ 'ಮಿ ಸಿಸಿ 9ಇ' ಸ್ಮಾರ್ಟ್‌ಫೋನಿಗೆ NFC ಬೆಂಬಲವಿಲ್ಲ. ಇನ್ನು ಅದೇ 4,030mAh ಬ್ಯಾಟರಿಯನ್ನು ಹೊಂದಿರುವ 10W ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎನ್‌ಎಫ್‌ಸಿ, 3.5 ಎಂಎಂ ಆಡಿಯೊ ಜ್ಯಾಕ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ಬ್ಲೂಟೂತ್ ವಿ 5, ವೈ-ಫೈ 802.11 ಎ / ಬಿ / ಜಿ / ಎನ್ / ಎಸಿ, ಮತ್ತು ಹೆಚ್ಚಿನವು ಸೇರಿವೆ. ಇನ್-ಸ್ಕ್ರೀನ್ ಫಿಂಗರ್ಪ್ರಿಂಟ್ ಸೆನ್ಸರ್, ಫೇಸ್ ಅನ್ಲಾಕ್, ಗೇಮ್ ಟರ್ಬೊ 2.0 ಮೋಡ್ ಮತ್ತು ಹೈ-ರೆಸ್ ಆಡಿಯೊ ಪ್ರಮುಖ ವೈಶಿಷ್ಟ್ಯಗಳಾಗಿವೆ. 173.8 ಗ್ರಾಂ ತೂಕವಿರುವ ಈ ಫೋನ್ ಮಿ ಸಿಸಿ 9 (179 ಗ್ರಾಂ) ಕಡಿಮೆ ತೂಕವನ್ನು ಹೊಂದಿರುವುದನ್ನು ನಾವು ನೋಡಬಹುದು.

 ಮಿ ಸಿಸಿ 9ಇ ಬೆಲೆಗಳು!

ಮಿ ಸಿಸಿ 9ಇ ಬೆಲೆಗಳು!

'ಮಿ ಸಿಸಿ 9ಇ' ಸ್ಮಾರ್ಟ್‌ಫೋನ್ ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. 4GB RAM + 64GB ROM ನೊಂದಿಗೆ ಬೇಸ್ ರೂಪಾಂತರವು 1299 ಯುವಾನ್ (ಅಂದಾಜು 13,000 ರೂ.), 6GB RAM + 64GB ROM ನೊಂದಿಗೆ ಮಿಡ್-ವೇರಿಯಂಟ್ ಫೋನ್ 1399 ಯುವಾನ್ (ಅಂದಾಜು ರೂ. 14,000) ಮತ್ತು 6 ಜಿಬಿ RAM + 128 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಹೈ-ಎಂಡ್ ರೂಪಾಂತರವು 1599 ಯುವಾನ್ (ಅಂದಾಜು ರೂ. 16,999) ಬೆಲೆಯನ್ನು ಹೊಂದಿವೆ.

Best Mobiles in India

English summary
Xiaomi Mi CC9e Android smartphone. Announced Jul 2019. Features 6.01″ Super AMOLED display, Snapdragon 665 chipset, 4030 mAh. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X