ದೀಪಾವಳಿ ವಿಥ್ MI: ಆಟ ಆಡಿ ಪೊಕೊ F1 ಗೆಲ್ಲಿ..!
ಈ ಹಬ್ಬದ ಸೀಸನ್ ಗೆ ಶಿಯೋಮಿ ಎಂಐ ದೀಪಾವಳಿ ಸೇಲ್ ನ್ನು ಅಕ್ಟೋಬರ್ 23 ರಿಂದ ಅಕ್ಟೋಬರ್ 25 ರ ವರೆಗೆ ಆಯೋಜಿಸಿದೆ. ಈಗಾಗಲೇ ಹಲವು ಶಿಯೋಮಿ ವಸ್ತುಗಳು ರಿಯಾಯಿತಿ, ಫ್ಲ್ಯಾಶ್ ಸೇಲ್ ಮತ್ತು ರೂಪಾಯಿ 1 ರ ಸೇಲ್ ನಲ್ಲಿ ಇಂದಿನಿಂದ ಮೂರು ದಿನಗಳ ಅವಧಿಗೆ ಲಭ್ಯವಾಗುತ್ತದೆ.

ಇಂದಿನಿಂದ ಪ್ರಾರಂಭವಾಗುವ ಈ ಸೇಲ್ ನಲ್ಲಿ, ಎಂಐ ಅಭಿಮಾನಿಗಳಿಗೆ ಪೋಕೋ ಎಫ್1 ಮತ್ತು ಇತರೆ ಹಲವು ಶಿಯೋಮಿ ವಸ್ತುಗಳನ್ನು ಗೆಲ್ಲುವ ಅವಕಾಶವೂ ಇರುತ್ತದೆ.ಕಂಪೆನಿಯು ಬಳಕೆದಾರರಿಗೆ ಎಂಐ ಕ್ರ್ಯಾಕರ್ ನಿಂಜಾ ಗೇಮ್ ಆಡಲು ಅವಕಾಶ ನೀಡುತ್ತದೆ ಮತ್ತು ಆಶ್ಚರ್ಯಕರವಾಗಿರುವ ಬಹುಮಾನಗಳನ್ನು ನೀಡಲಿದೆಯಂತೆ.

ಎಂಐ ಕ್ರ್ಯಾಕರ್ ನಿಂಜಾ ಗೇಮ್
ಈ ಆಟವನ್ನು ಆಡಲು, ಶಿಯೋಮಿ ಸ್ಮಾರ್ಟ್ ಫೋನ್ ಮತ್ತು ಎಂಐ ಅಕೌಂಟ್ ಇರಬೇಕು.ಬಳಕೆದಾರರು ಎಂಐ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು ಮತ್ತು ರಿಜಿಸ್ಟರ್ ಮಾಡಿ ಅಕೌಂಟಿಗೆ ಲಾಗಿನ್ ಆಗಬೇಕು. ನಂತರ ದೀವಾಳಿ ಬ್ಯಾನರ್ ನ್ನು ಟ್ಯಾಪ್ ಮಾಡಿ ಮತ್ತು ಕ್ರ್ಯಾಕರ್ ನಿಂಜಾ ಗೇಮ್ ನ್ನು ಕ್ಲಿಕ್ಕಿಸಿ, ಪ್ಲೇ ನೌ ಆಯ್ಕೆಯನ್ನು ಟ್ಯಾಪ್ ಮಾಡಿ ಗೇಮ್ ನ್ನು ಆರಂಭಿಸಿ.

ಗೇಮ್ ಆಡುವುದು ಹೇಗೆ?
ಈ ಗೇಮ್ ನಲ್ಲಿ ಕ್ರ್ಯಾಕರ್ಸ್ ನ್ನು ಆಟಗಾರರು ಮುಟ್ಟಬೇಕು. ಬಾಂಬ್ಸ್ ಗಳನ್ನು ಟಚ್ ಮಾಡುವುದು ಮತ್ತು 3 ಕ್ರ್ಯಾಕರ್ಸ್ ನ್ನು ಮಿಸ್ ಮಾಡಿಕೊಂಡರೆ ಗೇಮ್ ಅಂತ್ಯಗೊಳ್ಳುತ್ತದೆ. ಶಿಯೋಮಿ ಬಳಕೆದಾರರಿಗೆ ಪ್ರತಿದಿನ ಮೂರು ಬಾರಿ ಆಟವನ್ನು ಆಡಲು ಅವಕಾಶ ನೀಡಲಾಗುತ್ತದೆ.ಗೇಮ್ ನ್ನು ಇತರ ಸ್ನೇಹಿತರೊಡನೆ ಹಂಚಿಕೊಳ್ಳುವ ಮೂಲಕ 2 ಹೆಚ್ಚುವರಿ ಅವಕಾಶಗಳು ಲಭ್ಯವಾಗುತ್ತದೆ. ಕಾರ್ಡ್ ನ ರಿವೈವಲ್ ನ್ನು ಹೆಚ್ಚಿಸಲು ಯಾವುದಾದರೂ ಸ್ನೇಹಿತರಿಗೆ ಆಟವನ್ನು ಆಡಲು ಬರುವಂತೆ ಆಮಂತ್ರಿಸಬೇಕು.

ಬಹುಮಾನ ಏನು..?
ಬಹುಮಾನದಲ್ಲಿ ಪೋಕೋ ಎಫ್ 1, ರೆಡ್ಮಿ ವೈ 2, ಎಂಐ ಕಾರ್ ಚಾರ್ಜರ್, ಎಂಐ ಬ್ಲೂಟೂತ್ ಸ್ಪೀಕರ್ ಬೇಸಿಕ್,10000mAh ಪವರ್ ಬ್ಯಾಂಕ್ 2ಐ, ಎಂಐ ಸ್ಟೋರ್ ವೋಚರ್ಸ್ 500 ರೂಪಾಯಿ ಮತ್ತು ಅಧಿಕ ಬೆಲೆಯದ್ದು ಲಭ್ಯವಾಗುತ್ತದೆ. ಪ್ರೈಸ್ ನ್ನು ಎಂಐ.ಕಾಮ್ ಅಕೌಂಟಿಗೆ ಸ್ವಯಂಚಾಲಿತವಾಗಿ ಸೇರಿಸಲಾಗುತ್ತದೆ. ಅಕೌಂಟ್ಸ್ → ಕೂಪನ್ಸ್ ವಿಭಾಗದಲ್ಲಿ ಇದು ಲಭ್ಯವಿರುತ್ತದೆ.ಪ್ರೈಸ್ ನ್ನು ಪಡೆದುಕೊಳ್ಳಲು ಬಳಕೆದಾರರು ಚೆಕ್ ಔಟ್ ಟೈಮ್ ನಲ್ಲಿ ಅದನ್ನು ತೋರಿಸಬೇಕು.ಅಕ್ಟೋಬರ್ 23 ರ ಮಧ್ಯರಾತ್ರಿಯಿಂದ ಅಕ್ಟೋಬರ್ 31 ರ ಮಧ್ಯರಾತ್ರಿವರೆಗೆ ಈ ಕೂಪನ್ ಗಳಿಗೆ ಕಾಲಾವಕಾಶವಿರುತ್ತದೆ. ನಂತರ ಈ ಕೂಪನ್ ಗಳಿಗೆ ಬೆಲೆ ಇರುವುದಿಲ್ಲ

ಶಿಯೋಮಿ ಎಂಐ ದೀಪಾವಳಿ ಮಾರಾಟದ ರಿಯಾಯಿತಿ:
ಈ ಸೇಲ್ ನಲ್ಲಿ ಖರೀದಿದಾರರು 750 ರೂ. ವರೆಗಿನ ಇನ್ಸೆಂಟ್ ರಿಯಾಯಿತಿಯನ್ನು ಎಸ್ ಬಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಸಿ ಪಡೆಯಬಹುದು. ಆದರೆ ಕನಿಷ್ಟ 75 ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಖರೀದಿಯನ್ನು ಮಾಡಬೇಕು.ಡಿಜಿಟಲ್ ವ್ಯಾಲೆಟ್ ಗಳಾದ ಮೊಬಿಕ್ ವಿಕ್, ಪೇಟಿಎಂ ಮತ್ತು ಅಮೇಜಾನ್ ಪೇ ಗಳಲ್ಲಿ ಕ್ಯಾಷ್ ಬ್ಯಾಕ್ ಮತ್ತು ರಿಯಾಯಿತಿಯನ್ನು ಪಡೆಯಬಹುದಾಗಿದೆ. ಅಕರ್ಷಕ ರಿಯಾಯಿತಿ ಬೆಲೆಗಳು, ಆಫರ್ ಗಳು, ಉಚಿತ ಕೂಪಲ್ ಗಳು, ವಿಐಪಿ ಸದಸ್ಯತ್ವ ಪಡೆದು ಬೇಗನೆ ಎಂಐ.ಕಾಮ್ ಗೆ ಆಕ್ಸಿಸ್ ಪಡೆಯುವ ಅವಕಾಶವನ್ನು ಇದರಲ್ಲಿ ನೀಡಲಾಗುತ್ತಿದೆ.


Click it and Unblock the Notifications








