Home
ಮೊಬೈಲ್

ಶಿಯೋಮಿ "ಎಂಐ ಮ್ಯಾಕ್ಸ್ 2" ಫೋನ್ ಬೆಲೆ ದಿಢೀರ್ ಇಳಿಕೆ!!

ಭಾರತದ ಶಿಯೋಮಿ ಕಂಪೆನಿಯ ಉಪಾಧ್ಯಕ್ಷ ಮನು ಕುಮಾರ್ ಜೈನ್ ಈ ಬಗ್ಗೆ ಟ್ವಿಟ್ ಮಾಡಿದ್ದು, ಎಂಐ ಮ್ಯಾಕ್ಸ್ ಬೆಲೆ 1 ಸಾವಿರ ರೂ. ಕಡಿತ ಮಾಡಿರುವ ಬಗ್ಗೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.!!

By Bhaskar N J

ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ಶಿಯೋಮಿ ಮಧ್ಯಮ ವರ್ಗದ ಬಜೆಟ್ ಫೋನ್ ಎಂಐ ಮ್ಯಾಕ್ಸ್ 2 ಬೆಲೆ ದಿಢೀರ್ ಎಂಬಂತೆ 1 ಸಾವಿರ ರೂ. ಇಳಿಕೆಯಾಗಿದೆ.! ಭಾರತದ ಶಿಯೋಮಿ ಕಂಪೆನಿಯ ಉಪಾಧ್ಯಕ್ಷ ಮನು ಕುಮಾರ್ ಜೈನ್ ಈ ಬಗ್ಗೆ ಟ್ವಿಟ್ ಮಾಡಿದ್ದು, ಎಂಐ ಮ್ಯಾಕ್ಸ್ ಬೆಲೆ 1 ಸಾವಿರ ರೂ. ಕಡಿತ ಮಾಡಿರುವ ಬಗ್ಗೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.!!

ಮಾರುಕಟ್ಟೆಯಲ್ಲಿ ಹೆಚ್ಚು ಸೇಲ್ ಆಗುತ್ತಿರುವ, ಜುಲೈನಲ್ಲಿ 14,999 ರೂ.ಗೆ ಬಿಡುಗಡೆಯಾಗಿದ್ದ 32 ಜಿಬಿ ಆಂತರಿಕ ಮೆಮೊರಿಯ ಎಂಐ ಮ್ಯಾಕ್ಸ್ 2 ಫೋನ್ ಈಗ ಕೇವಲ 13,999 ರೂ.ಗೆ ಲಭ್ಯವಿದ್ದರೆ, 16,999 ರೂ.ಗೆ ಬಿಡುಗಡೆಯಾಗಿದ್ದ 64 ಜಿಬಿ ಆಂತರಿಕ ಮೆಮೊರಿ ಫೋನ್ 15,999 ರೂ.ಗೆ ಲಭ್ಯವಿದೆ.!! ಹಾಗಾದರೆ, ಎಂಐ ಮ್ಯಾಕ್ಸ್ 2 ಫೋನ್ ಫೀಚರ್ಸ್‌ಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್ಪ್ಲೇ ಮತ್ತು ವಿನ್ಯಾಸ!!

ಡಿಸ್ಪ್ಲೇ ಮತ್ತು ವಿನ್ಯಾಸ!!

211 ಗ್ರಾಂ ತೂಕವಿರುವ 6.4 ಇಂಚಿನ ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3ಡಿ ಹೊಂದಿರುವ ಐಪಿಎಸ್ ಎಲ್‌ಸಿಡಿ ಸ್ಕ್ರೀನ್(1080*1920 ಪಿಕ್ಸೆಲ್, 342 ಪಿಪಿಐ, 74.0% ಬಾಡಿ ಅನುಪಾತ) ಅನ್ನು ಎಂಐ ಮ್ಯಾಕ್ಸ್ 2 ಫೋನ್ ಹೊಂದಿದ್ದು, ಮಲ್ಟಿಮೀಡಿಯಾಗೆ ವಿಶೇಷವಾಗಿ ರೂಪಿತವಾಗಿರುವ ಫೋನ್ ಇದಾಗಿದೆ.!!

ಪ್ರೊಸೆಸರ್ ಮತ್ತು ಓಎಸ್!!

ಪ್ರೊಸೆಸರ್ ಮತ್ತು ಓಎಸ್!!

ಎಂಐ ಮ್ಯಾಕ್ಸ್ 2 ಫೋನ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 2.0 GHz ಅಕ್ಟಾ ಕೋರ್ ಕಾರ್ಟೆಕ್ಸ್ ಎ53 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 7.1.1 ನ್ಯೂಗಾ ಮೂಲಕ ಕಾರ್ಯನಿರ್ವಹಿಸಲಿದೆ.!! ಜೊತೆಗೆ ಆಡ್ರಿನೊ 506 ಗ್ರಾಫಿಕ್ಸ್ ಪ್ರೊಸೆಸರ್ ಫೋನ್‌ನ ಮಲ್ಟಿಮೀಡಿಯಾ ಅನುಭವವನ್ನು ವಿಶೇಷವಾಗಿ ಹೆಚ್ಚಿಸಲಿದೆ.!!

RAM ಮತ್ತು ಮೆಮೊರಿ?

RAM ಮತ್ತು ಮೆಮೊರಿ?

4GB RAM ಮತ್ತು 32 ಜಿಬಿ ಆಂತರಿಕ ಮೆಮೊರಿ ಹಾಗೂ 4GB RAM ಮತ್ತು 64 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಎರಡು ವೆರಿಯಂಟ್‌ಗಳಲ್ಲಿ ಶಿಯೋಮಿ ಎಂಐ ಮ್ಯಾಕ್ಸ್ 2 ಫೋನ್ ಬಿಡುಗಡೆಯಾಗಿದೆ. ಎಸ್‌ಡಿ ಕಾರ್ಡ್ ಮೂಲಕ 256 ಜಿಬಿ ವರೆಗೆ ಮೆಮೊರಿ ವಿಸ್ತರಿಸಬಹುದಾದ ಆಯ್ಕೆ ಸ್ಮಾರ್ಟ್‌ಫೋನ್‌ನಲ್ಲಿದೆ.!!

Xiaomi Redmi 4 Features !! ರೆಡ್‌ಮಿ 4 ಫೀಚರ್ಸ್ ಏನೇನಿದೆ? ಇಲ್ಲಿದೆ ಡಿಟೇಲ್ಸ್!!
ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಶಿಯೋಮಿ ಎಂಐ ಮ್ಯಾಕ್ಸ್ 2 ಫೋನ್‌ನಲ್ಲಿ 12 ಎಂಪಿ ರಿಯರ್ ಕ್ಯಾಮೆರಾ ಮತ್ತು 5 ಎಂಪಿ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.! ಸಾಮಾನ್ಯವಾಗಿ ಕ್ಯಾಮೆರಾಗೆ ಹೆಚ್ಚು ಒತ್ತು ನೀಡಿದ ಶಿಯೋಮಿ ಈ ಮಧ್ಯಮ ವರ್ಗದ ಫೋನ್‌ನಲ್ಲಿಯೂ ಕೂಡ ಸಾಮಾನ್ಯ ಕ್ಯಾಮೆರಾವನ್ನು ಬಳಸಿಕೊಂಡಿದೆ.!!

ಇತರೇ ಫೀಚರ್ಸ್ ಏನು?

ಇತರೇ ಫೀಚರ್ಸ್ ಏನು?

ಫಿಂಗರ್ ಪ್ರಿಂಟ್ ಸ್ಕ್ಯಾನರ್, 5300 ಎಂಎಎಚ್ ಬಿಗ್ ಬ್ಯಾಟರಿ, ಫಾಸ್ಟ್ ಬ್ಯಾಟರಿ ಚಾರ್ಜಿಂಗ್ (ಕ್ವಿಕ್ ಚಾರ್ಜ್ 3.0) ಮತ್ತು ಹೈ ಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ ಸಿಮ್, ಮೈಕ್ರೋ ಸಿಮ್)ನಂತಹ ಪ್ರಮುಖ ವಿಶೇಷ ಫೀಚರ್ಸ್‌ಗಳು ಸ್ಮಾರ್ಟ್‌ಫೋನ್ ಅಲಂಕಾರವನ್ನು ಹೆಚ್ಚಿಸಿವೆ.!!

Best Mobiles in India

English summary
The price drop is applicable on both variants of Mi Max 2.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+