Subscribe to Gizbot

ಶಿಯೋಮಿ ಮಿ ಮಾಕ್ಸ್ 2 ಸೇಲ್ ಆರಂಭ: ಜಿಯೋ ದಿಂದ ಆಚ್ಚರಿ ಆಫರ್

Written By:

ಶಿಯೋಮಿ ಕಳೆದ ವಾರ ಲಾಂಚ್ ಮಾಡಿದ್ದಂತಹ ಮಿ ಮಾಕ್ಸ್ 2 ಸ್ಮಾರ್ಟ್‌ಫೋನ್ ಇಂದು ಮಾರುಕಟ್ಟೆಯಲ್ಲಿ ಲಭ್ಯವಿರಲಿದ್ದು, ಫ್ಲಿಪ್ ಕಾರ್ಟ್, ಶಿಯೋಮಿ ಅಧಿಕೃತ ವೆಬ್‌ಸೈಟ್, ಅಮೆಜಾನ್ ಸೇರಿದಂತೆ ವಿವಿಧ ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ ಈ ಫೋನ್ ಮಾರಾಟಕ್ಕೆ ಮುಕ್ತವಾಗಿದೆ. ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡಿದ್ದ ಈ ಫೋನ್ ಕೊಳ್ಳಲು ಗ್ರಾಹಕರು ತುದಿಗಾಲಿನಲ್ಲಿ ನಿಂತಿದ್ದಾರೆ.

ಶಿಯೋಮಿ ಮಿ ಮಾಕ್ಸ್ 2 ಸೇಲ್ ಆರಂಭ: ಜಿಯೋ ದಿಂದ ಆಚ್ಚರಿ ಆಫರ್

ಓದಿರಿ: ನಿತಾ ಅಂಬಾನಿ ಬಳಸುವ ಫೋನ್ ಬೆಲೆ ಕೇಳಿದ್ರೆ ಶಾಕ್ ಆಗ್ತಿರಾ!!

ದೊಡ್ಡ ಗಾತ್ರ ಸ್ಕ್ರಿನ್, ದೊಡ್ಡ ಬ್ಯಾಟರಿ ಸಾಮಾರ್ಥ್ಯವನ್ನು ಹೊಂದಿರುವ ಈ ಫೋನ್ ಬಿಗ್ ಫೋನ್ ಎಂದೆ ಬಿಂಬತವಾಗಿದೆ. ಈ ಹಿನ್ನಲೆಯಲ್ಲಿ ಮಿ ಮಾಕ್ಸ್ 2 ಸ್ಮಾರ್ಟ್‌ಫೋನಿ ವಿಶೇಷತೆ ಕುರಿತು ಸಂಫೂರ್ಣ ಮಾಹಿತಿಯೂ ಇಲ್ಲಿದೆ. ಇದರ ಬೆಲೆ ರೂ.16,999 ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ದಿಂದ ಬೊಂಬಾಟ್ ಆಫರ್:

ಜಿಯೋ ದಿಂದ ಬೊಂಬಾಟ್ ಆಫರ್:

ಮಿ ಮಾಕ್ಸ್ 2 ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಜಿಯೋದಿಂದ ಬೊಂಬಟ್ ಆಫರ್‌ವೊಂದು ನೀಡಲಾಗುತ್ತದೆ. ಈ ಫೋನಿನೊಂದಿಗೆ ಉಚಿತವಾಗಿ 30GB 4G ಡೇಟಾವನ್ನು ನೀಡಲು ಜಿಯೋ ಮುಂದಾಗಿದೆ.

Xiaomi Redmi 4 Features !! ರೆಡ್‌ಮಿ 4 ಫೀಚರ್ಸ್ ಏನೇನಿದೆ? ಇಲ್ಲಿದೆ ಡಿಟೇಲ್ಸ್!!
ಮಿ ಮಾಕ್ಸ್ 2 ಪ್ರೋಸೆಸರ್:

ಮಿ ಮಾಕ್ಸ್ 2 ಪ್ರೋಸೆಸರ್:

ಈ ಸ್ಮಾರ್ಟ್‌ಫೋನಿನಲ್ಲಿ ಸ್ನಾಪ್ ಡ್ರಾಗನ್ 625 ಚಿಪ್‌ಸೆಟ್ ಅಳವಡಿಸಲಾಗಿದ್ದು, ಇದರೊಂದಿಗೆ 4 GB RAM ಸಹ ಇದೆ. ಈ ಸ್ಮಾರ್ಟ್‌ಫೋನ್ 32GB ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಎರಡು ಆವೃತ್ತಿಯಲ್ಲಿ ದೊರೆಯಲಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128 GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಿದೆ.

 ಮಿ ಮಾಕ್ಸ್ 2 ಸಾಫ್ಟ್‌ವೇರ್‌:

ಮಿ ಮಾಕ್ಸ್ 2 ಸಾಫ್ಟ್‌ವೇರ್‌:

ಮಿ ಮಾಕ್ಸ್ 2 ಸ್ಮಾರ್ಟ್‌ಫೋನ್ ನೂತನವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ MIUI 8 ಅನ್ನು ಕಾಣಬಹುದಾಗಿದೆ.

ಮಿ ಮಾಕ್ಸ್ 2 ಡಿಸ್‌ಪ್ಲೇ:

ಮಿ ಮಾಕ್ಸ್ 2 ಡಿಸ್‌ಪ್ಲೇ:

ಮಿ ಮಾಕ್ಸ್ 2 ಸ್ಮಾರ್ಟ್‌ಫೋನ್ 6.44 ಇಂಚಿನ ದೊಡ್ಡ ಪರದೆಯನ್ನು ಹೊಂದಿದೆ ಎನ್ನಬಹುದಾಗಿದ್ದು, ಇದು FHD ಗುಣಮಟ್ಟದ್ದಾಗಿದ್ದು, ವಿಡಿಯೋ ನೋಡಲು, ಗೇಮ್ ಆಡಲು ಹೇಳಿ ಮಾಡಿಸಿದಂತಿದೆ.

ಮಿ ಮಾಕ್ಸ್ 2 ಕ್ಯಾಮೆರಾ:

ಮಿ ಮಾಕ್ಸ್ 2 ಕ್ಯಾಮೆರಾ:

ಮಿ ಮಾಕ್ಸ್ 2 ಸ್ಮಾರ್ಟ್‌ಫೋನಿನಲ್ಲಿ 12 MP ಹಿಂಭಾಗದ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಇದರೊಂದಿಗೆ ಡ್ಯುಯಲ್ LED ಫ್ಲಾಷ್ ಸಹ ನೀಡಲಾಗಿದೆ. ಮುಂಭಾಗದಲ್ಲಿ ಸೆಲ್ಪಿಗಾಗಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಮಿ ಮಾಕ್ಸ್ 2 ಬ್ಯಾಟರಿ:

ಮಿ ಮಾಕ್ಸ್ 2 ಬ್ಯಾಟರಿ:

ದೊಡ್ಡ ಫೋನಿಗೆ ಶಿಯೋಮಿ ದೊಡ್ಡ ಬ್ಯಾಟರಿಯನ್ನೇ ಅಳವಡಿಸಿದೆ. ಈ ಸ್ಮಾರ್ಟ್‌ಫೋನಿನಲ್ಲಿ 5,300 mAh ಬ್ಯಾಟರಿಯನ್ನು ಕಾಣಬಹುದಾಗಿದ್ದು, ಇದನ್ನು ವೇಗವಾಗಿ ಚಾರ್ಜ್ ಮಾಡಿಕೊಳ್ಳುವ ಸಲುವಾಗಿ ಕ್ವೀಕ್ ಚಾರ್ಜ್ 3.0ವನ್ನು ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Xiaomi‘s latest phablet, the Mi Max 2, will be available on sale today via e-commerce platforms. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot