ಮತ್ತೊಂದು ಬೊಂಬಾಟ್ ಸ್ಮಾರ್ಟ್ ಫೋನ್ ಲಾಂಚ್ ಗೆ ಶಿಯೋಮಿ ರೆಡಿ..!

|

ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಶಿಯೋಮಿ ತನ್ನ ಜನಪ್ರಿಯತೆಯನ್ನು ಹೆಚ್ಚು ಮಾಡಿಕೊಳ್ಳುವ ತವಕದಲ್ಲಿದ್ದು, ಈ ಹಿನ್ನಲೆಯಲ್ಲಿ ದಿನಕ್ಕೊಂದು ಹೊಸ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡುವ ಸನಿಹದಲ್ಲಿದೆ. ದಿದೇ ಮಾದರಿಯಲ್ಲಿ Mi ಮ್ಯಾಕ್ಸ್ 3 ಸ್ಮಾರ್ಟ್ ಫೋನ್ ನಿರ್ಮಾಣಕ್ಕೆ ಕೈ ಹಾಕಿದ್ದು, ಮುಂದಿನ ತಿಂಗಳಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ.

ಮತ್ತೊಂದು ಬೊಂಬಾಟ್ ಸ್ಮಾರ್ಟ್ ಫೋನ್ ಲಾಂಚ್ ಗೆ ಶಿಯೋಮಿ ರೆಡಿ..!

ಈಗಾಗಲೇ ಹಲವು ಸ್ಮಾರ್ಟ್ ಫೋನ್ ಗಳನ್ನು ಒಂದರ ಹಿಂದೆ ಒಂದರಂತೆ ಲಾಂಚ್ ಮಾಡುತ್ತಿರುವ ಶಿಯೋಮಿ, ಚೀನಾ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ Mi ಮ್ಯಾಕ್ಸ್ 3 ಸ್ಮಾರ್ಟ್ ಫೋನ್ ಮೂಲಕ ಮತ್ತೊಂದು ಸುತ್ತಿನಲ್ಲಿ ಸ್ಪರ್ಧೆಯನ್ನು ಹುಟ್ಟಿ ಹಾಕಲು ಯೋಜನೆಯನ್ನು ರೂಪಿಸಲು ಮುಂದಾಗಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:

ಎರಡು ಆವೃತ್ತಿಯಲ್ಲಿ ಲಭ್ಯ:

Mi ಮ್ಯಾಕ್ಸ್ 3 ಸ್ಮಾರ್ಟ್ ಫೋನ್ ಅನ್ನು ಎರಡು ಆವೃತ್ತಿಯಲ್ಲಿ ಲಾಂಚ್ ಮಾಡಲು ಶಿಯೋಮಿ ಯೋಜನೆ ರೂಪಿಸಿದ್ದು, Mi ಮ್ಯಾಕ್ಸ್ 3 ಮತ್ತು Mi ಮ್ಯಾಕ್ಸ್ 3 ಪ್ರೋ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಬಳಕೆದಾರರಿಗೆ ಹೆಚ್ಚಿನ ಆಯ್ಕೆಯನ್ನು ಖರೀದಿಗೆ ನೀಡುತ್ತಿದೆ. ಈ ಹಿನ್ನಲೆಯಲ್ಲಿ ಬಜೆಟ್ ಅನುಸಾರ ಸ್ಮಾರ್ಟ್ ಫೋನ್ ಗಳನ್ನು ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ.

ಡಿಸ್ ಪ್ಲೇ

ಡಿಸ್ ಪ್ಲೇ

Mi ಮ್ಯಾಕ್ಸ್ 3 ಸ್ಮಾರ್ಟ್ ಫೋನ್ ಗಳಲ್ಲಿ ಒಂದೇ ಮಾದರಿಯ ಡಿಸ್ ಪ್ಲೇ ಇರಲಿದ್ದು, 6.9 ಇಂಚಿನ ಡಿಸ್ ಪ್ಲೇ ಇರಲಿದೆ. ಅಲ್ಲದೇ ಇದು 18:9 ಅನುಪಾತದಿಂದ ಕೂಡಿರಲಿದೆ. ಆದರೆ ಇದರಲ್ಲಿ ನೋಚ್ ಕಾಣಲು ಸಾಧ್ಯವಿಲ್ಲ. ಆದರಿಂದಾಗಿ ಈ ಸ್ಮಾರ್ಟ ಫೋನಿನಲ್ಲಿ ವಿಡಿಯೋ ನೋಡುವ ಅನುಭವ ಉತ್ತಮವಾಗಿರಲಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

Mi ಮ್ಯಾಕ್ಸ್ 3 ಪ್ರೋ ಮತ್ತು Mi ಮ್ಯಾಕ್ಸ್ 3 ಸ್ಮಾರ್ಟ್ ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಹಿಂಭಾಗದಲ್ಲಿಯೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. ನೋಡಲು ನೋಟ್ 5 ಪ್ರೋ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ.

Mi ಮ್ಯಾಕ್ಸ್ 3 ಪ್ರೋ ಸ್ಮಾರ್ಟ್ ಫೋನಿನಲ್ಲಿ ಸ್ನಾಪ್ ಡ್ರಾಗನ್ 710 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. 6GB RAM ಮತ್ತು 128 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಅಲ್ಲದೇ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಈ ಸ್ಮಾರ್ಟ್ ಫೋನಿನಲ್ಲಿ ನೀಡಲಾಗಿದೆ.

WhatsApp users will now be able to hide received media from gallery - KANNADA GIZBOT
Mi ಮ್ಯಾಕ್ಸ್ 3 ಸ್ಮಾರ್ಟ್ ಫೋನ್:

Mi ಮ್ಯಾಕ್ಸ್ 3 ಸ್ಮಾರ್ಟ್ ಫೋನ್:

Mi ಮ್ಯಾಕ್ಸ್ 3 ಸ್ಮಾರ್ಟ್ ಫೋನಿನಲ್ಲಿ ಸ್ನಾಪ್ ಡ್ರಾಗನ್ 636 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. 6GB / 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ Mi ಮ್ಯಾಕ್ಸ್ 3 ಸ್ಮಾರ್ಟ್ ಫೋನಿನಲ್ಲಿ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವು ಇದೆ.

Best Mobiles in India

English summary
Xiaomi Mi Max 3 Pro spotted with Snapdragon 710 SoC, 6GB RAM. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X