ಶಿಯೋಮಿ ಎಂಐ ಮ್ಯಾಕ್ಸ್ 3 ಪೋಟೋಗಳು ಬಹಿರಂಗ..ಗಾಸಿಪ್‌ಗಳಿಗಿಲ್ಲ ಅಂತ್ಯ..!
ಒಂದು ಹೊಸ ಫೋನ್ ಬಿಡುಗಡೆಗೊಳ್ಳುತ್ತದೆ ಎಂಬ ಸುದ್ದಿ ಹರಿದಾಡಿದರೆ ಅದು ಬಿಡುಗಡೆಗೂ ಮುನ್ನವೇ ಹೇಗಿರುತ್ತದೆ. ಅದರ ವೈಶಿಷ್ಟ್ಯತೆಗಳೇನು ಎಂಬ ಬಗೆಗಿನ ಕುತೂಹಲಗಳಿಗೆ ಫುಲ್ ಸ್ಟಾಪೇ ಇರೋದಿಲ್ಲ. ಆ ಬಗೆಗಿನ ಒಂದೇ ಒಂದು ಸುಳಿವು ಕೂಡ ಮೊಬೈಲ್ ಪ್ರಿಯರನ್ನು ಆಕರ್ಷಿಸಿ ಬಿಡುತ್ತದೆ. ಈಗಲೂ ಹಾಗೆಯೇ ಆಗುತ್ತಿದೆ. ಶಿಯೋಮಿ ಎಂಐ ಮ್ಯಾಕ್ಸ್ 3 ಫೋನ್ ಬಿಡುಗಡೆಗೊಳ್ಳುವ ಬಗ್ಗೆ ಈಗಾಗಲೇ ಹಲವಾರು ರೂಮರ್ ಗಳು ಹರಿದಾಡಿವೆ.
ಇದೀಗ ಅದರ ದೊಡ್ಡ ಬ್ಯಾಟರಿ ಮತ್ತು ಡುಯಲ್ ಹಿಂಭಾಗದ ಕ್ಯಾಮರಾವನ್ನು ಹೈಲೆಟ್ ಮಾಡಿ ಸೋರಿಸುವಂತ ಫೋಟೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ಫಿಂಗರ್ ಪ್ರಿಂಟ್ ಸೆನ್ಸಾರ್ ಕೂಡ ಕಾಣಿಸುತ್ತದೆ. ಆದರೆ ಇದರಲ್ಲಿ ಬ್ಯಾಟರಿ ಎಷ್ಟು ಕೆಪಾಸಿಟಿಯುಳ್ಳದ್ದು ಎಂಬುದನ್ನು ಸಾಕ್ಷೀಕರಿಸಲು ಸಾಧ್ಯವಿಲ್ಲ. ಯಾಕೆಂದರೆ ಈಗಾಗಲೇ 5400mAh ಸಾಮರ್ಥ್ಯದ ಬ್ಯಾಟರಿಯನ್ನು ಶಿಯೋಮಿ ಎಂಐ ಮ್ಯಾಕ್ಸ್ 3 ಫೋನ್ ಹೊಂದಿರುತ್ತದೆ ಎಂಬ ಗಾಸಿಪ್ ಸುದ್ದಿಯೊಂದಿತ್ತು.

ಇನ್ನು ಕಳೆದ ಬಾರಿ ಟೀನಾ ಸೈಟ್ ನಲ್ಲಿ ಮೆಟಾಲಿಕ್ ಫಿನಿಶ್ ಬಿಲ್ಡ್ ಮತ್ತು ಬೆಝಲ್ ಡಿಸ್ಪ್ಲೇ ಇರುವುದನ್ನು ಖಾತ್ರಿಪಡಿಸುವ ಚಿತ್ರವೊಂದು ಬಿಡುಗೊಂಡೆಗೊಂಡಿತ್ತು. ಎಂಐ ಮ್ಯಾಕ್ಸ್ 2 ಕಳೆದ ವರ್ಷ ಜುಲೈ ನಲ್ಲಿ ಬಿಡುಗಡೆಗೊಂಡಿತ್ತು ಮತ್ತು ಅದರ ಯಶಸ್ಸಿನ ವರ್ಷನ್ ಆಗಿರುವ ಎಂಐ ಮ್ಯಾಕ್ಸ್ 3 ಈ ತಿಂಗಳಾಂತ್ಯಕ್ಕೆ ಬಿಡುಗಡೆಗೊಳ್ಳುವ ಬಗ್ಗೆ ಕಂಪೆನಿಯು ಮಾಹಿತಿ ನೀಡಿದೆ.
ಸ್ಲ್ಯಾಶ್ ಲೀಕ್ಸ್ ನ ಚಿತ್ರದ ಅನ್ವಯ ಎಂಐ ನ ಹಿಂಭಾಗದ ಚಿತ್ರಣ ದೊರೆತಿದೆ.ಇದು ಎಂಐ ಮ್ಯಾಕ್ಸ್ 2 ನಂತೆಯೇ ಇದೆ. ಹಿಂಭಾಗದಲ್ಲಿ ಮ್ಯಾಟ್ ಫಿನಿಶ್ ಇರುವ ಬ್ಯಾಕ್ ಪೆನಲ್ ಇದೆ. ಹಿಂಭಾಗಕ್ಕೆ ಮುಖ ಮಾಡಿರುವ ಫಿಂಗರ್ ಪ್ರಿಂಟ್ ಸೆನ್ಸರ್ ಇದೆ. ಹಿಂಭಾಗದಲ್ಲಿ ಎರಡು ಕ್ಯಾಮರಾ ಇದ್ದು, ಎಲ್ ಇಡಿ ಫ್ಲ್ಯಾಶ್ ಇದೆ. ಎರಡು ಕ್ಯಾಮರಾಗಳನ್ನು ಲಂಬವಾಗಿ ಜೋಡಿಸಲಾಗಿದೆ. ಈಗಾಗಲೇ ಗಾಸಿಪ್ ಇರುವಂತೆ ಇದರಲ್ಲಿ 12 ಮೆಗಾಪಿಕ್ಸಲ್ ಪ್ರೈಮರಿ ಸೆನ್ಸರ್ ಇರಲಿದೆಯಂತೆ.
ಕ್ಯಾಮರಾ ಸೆಟ್ ಅಪ್ ನ ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಕೂಡ ಇದು ಪ್ರದರ್ಶಿಸುತ್ತಿದೆ. ಜೊತೆಗೆ ಕಳೆದ ಬಾರಿ ಸ್ಲ್ಯಾಶ್ ಲೀಕ್ಸ್ ನಲ್ಲಿ ಬಿಡುಗಡೆಗೊಂಡ ಫೋಟೋದಲ್ಲಿ ದೊಡ್ಡ ಬ್ಯಾಟರಿ ಪ್ಯಾಕ್ ಇರುವುದರ ಬಗ್ಗೆ ಸೂಚನೆ ದೊರೆತಿದೆ. ಈಗ ಬಿಡುಗಡೆಗೊಂಡಿರುವ ಫೋಟೋ ಬ್ಯಾಟರಿ ಕೆಪಾಸಿಟಿಯನ್ನು ತೋರಿಸುತ್ತಿಲ್ಲ. ಆದರೆ ಹಿಂದಿನ ವರದಿಯನ್ನೇ ಆಧರಿಸಿ ಹೇಳುವುದಾದರೆ ಇದು 5400mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರಲಿದೆ.

ವೈಶಿಷ್ಟ್ಯತೆಗಳ ವಿಚಾರಕ್ಕೆ ಬಂದರೆ, ಈಗಾಗಲೇ ಬಂದಿರುವ ಕೆಲವು ಪ್ರಾಥಮಿಕ ಮಾಹಿತಿಯ ಅನುಸಾರ ಎಂಐ ಮ್ಯಾಕ್ಸ್ 3 6.9- ಇಂಚಿನ ಫುಡ್ -HD+ (1080x2160 ಪಿಕ್ಸಲ್ಸ್) ಡಿಸ್ಪ್ಲೇಯನ್ನು 18:9 ಅನಾಪಾತದಲ್ಲಿ ಹೊಂದಿರಲಿದೆ. ಟೀನಾ ಮಾಹಿತಿಯ ಅನುಸಾರ 3 ಮಾಡೆಲ್ ಗಳು ಬರುವ ನಿರೀಕ್ಷೆ ಇದೆ. 3ಜಿಬಿ, 4ಜಿಬಿ, ಮತ್ತು 6ಜಿಬಿ RAM ಜೊತೆಗೆ 32ಜಿಬಿ, 64ಜಿಬಿ, ಮತ್ತು 128ಜಿಬಿ ಆನ್ ಬೋರ್ಡ್ ಸ್ಟೋರೇಜ್ ಅವಕಾಶಗಳು ಇರಬಹುದು.
ಆಕ್ಟಾ-ಕೋರ್ ಕ್ವಾಲ್ಕಮ್ ಸ್ನ್ಯಾಪ್ ಡ್ರ್ಯಾಗನ್ 636 ಸಾಕೆಟ್ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ ಆದರೆ ಅದಕ್ಕೂ ಹಿಂದೊಮ್ಮೆ ಬಂದ ವರದಿಯ ಅನುಸಾರ ಸ್ನ್ಯಾಪ್ ಡ್ರ್ಯಾಗನ್ 710 ಸಾಕೆಟ್ ಇರಲಿದೆ ಎಂದು ಹೇಳಲಾಗುತ್ತಿದೆ. ಯಾವುದು ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. 5 ಮೆಗಾ ಪಿಕ್ಸಲ್ ನ ಸೆಲ್ಫೀ ಕ್ಯಾಮರಾ ಕೂಡ ಎಂಐ ಮ್ಯಾಕ್ಸ್ 3 ಒಳಗೊಂಡಿರುತ್ತದೆ ಮತ್ತು ಅದರಲ್ಲಿ ಕೆಲವು ಕೃತಕ ಬದ್ಧಿಮತ್ತೆಯ ವೈಶಿಷ್ಟ್ಯತೆಗಳು ಇರಲಿವೆ ಎಂಬ ಬಗ್ಗೆ ರೂಮರ್ ಹಬ್ಬಿದೆ.
ಶಿಯೋಮಿ ಖಚಿತ ಪಡಿಸಿರುವಂತೆ ಎಂಐ ಮ್ಯಾಕ್ಸ್ 3 ಜುಲೈ ನಲ್ಲಿ ಬಿಡುಗಡೆಗೊಳ್ಳಲಿದೆ, ಇದನ್ನೇ ಖಾತ್ರಿ ಪಡಿಸುವ ನಿಟ್ಟಿನಲ್ಲಿ ಈ ವಾರದ ಆರಂಭವದಲ್ಲಿ ಶಿಯೋಮಿ ಸಿಇಓ ಲಿ ಜುನ್ ಎಂಐ ಮ್ಯಾಕ್ಸ್ 3 ಯ ರೀಟೈಲ್ ಬಾಕ್ಸ್ ನ ಚಿತ್ರವನ್ನು ಹಂಚಿಕೊಂಡಿದ್ದರು ಮತ್ತು ಬೇಗನೆ ಬಿಡುಗಡೆಗೊಳ್ಳಲಿದೆ ಎಂಬ ಮುನ್ಸೂಚನೆ ನೀಡಿದ್ದರು. ಆದರೆ ಎಲ್ಲಾ ಅನುಮಾನ, ಸುಳಿವು, ಗಾಸಿಪ್ ಗಳಿಗೆ ಅಂತಿಮ ತೆರೆ ಬೀಳಬೇಕು ಅಂದರೆ ಅಧಿಕೃತ ಮಾಹಿತಿ ಹೊರಬೀಳಬೇಕಾಗಿದೆ. ಅಲ್ಲಿವರೆಗೂ ಕಾಯೋಣ ಅಲ್ಲವೇ?

ಕ್ಸಿಯೋಮಿ Mi MIX: 6GB RAM ಮತ್ತು 256GB ಮೆಮೊರಿ
ಸದಾ ಒಂದಲ್ಲ ಒಂದು ಹೊಸ ಪೋನನನ್ನು ಲಾಂಚ್ ಮಾಡುವ ಕ್ಸಿಯೋಮಿ, ಸದ್ಯ ವೇಗಸ್‌ನಲ್ಲಿ ನಡೆಯುತ್ತಿರುವ ಕನ್ಸಸ್ಯೂಮರ್ ಎಲೆಕ್ಟ್ರಾನಿಕ್ ಶೋನಲ್ಲಿ ಟಾಪ್ ಎಂಡ್ ಸ್ಮಾರ್ಟ್‌ಪೋನ್ Mi MIX ಅನ್ನು ಬಿಡುಗಡೆ ಮಾಡಿದೆ. ಈ ವರ್ಷದ ಮಧ್ಯಭಾಗದಲ್ಲಿ ಈ ಪೋನ್ ಗ್ರಾಹಕರ ಕೈ ಸೇರಲಿದ್ದು, ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿರುವ ಪೋನಿ ಬೆಲೆ ಮಾತ್ರ ಬಹಿರಂಗವಾಗಿಲ್ಲ.
Mi MIX ಸ್ಮಾರ್ಟ್‌ಪೋನಿನ ಪ್ರಮುಖ ಗುಣವಿಶೇಷತೆ ಎಂದರೆ, 91.3% ಸ್ಕ್ರಿನ್ ಪೋನಿನಲ್ಲಿದ್ದು, ಮಿಕ್ಕ ಸ್ವಲ್ಪ ಭಾಗದಲ್ಲಿ ಮಾತ್ರ ಹೋಮ್ ಬಟನ್ ಮುಂತಾದವಿದೆ. ನೋಡಲು ಹೊಸ ಲುಕ್ ಹೊಂದಿದ್ದು, ಪೋನಿನ ತುಂಬ ಪರದೆಯೇ ಆಕ್ರಮಿಸಿಕೊಂಡತೆ ಕಾಣಲಿದೆ. ಬೇರೆ ಪೋನುಗಳಂತೆ ಮಧ್ಯಭಾಗದಲ್ಲಿ ಮಾತ್ರ ಸ್ಕ್ರಿನ್ ಇರುವ ಲುಕ್ ಈ ಪೋನ್ ಹೊಂದಿಲ್ಲ.

ಹೊಸ ಮಾದರಿಯ ಡಿಸ್‌ಪ್ಲೇ
Mi MIX ಸ್ಮಾರ್ಟ್‌ಪೋನಿನ ಆಕರ್ಷಣೆ ಎಂದರೆ ಡಿಸ್‌ಪ್ಲೇ. 6.4 ಇಂಚಿನ ಸ್ಕ್ರಿನ್ ಈ ಪೋನಿನಲ್ಲಿದ್ದು, 17:9 ಅನುಪಾತ 1080x2040p ರೆಸಲ್ಯೂಷನ್ ಹೊಂದಿದೆ. ಉತ್ತಮ ಗುಣಮಟ್ಟದ ಪಿಚ್ಚರ್ ಕ್ಯಾಲಿಟಿ ಇರುವುದರಿಂದ ಈ ಪೋನಿನಲ್ಲಿ ಸಿನಿಮಾ ವೀಕ್ಷಣೆಯೂ ಹೆಚ್ಚು ಆರಾಮದಾಯಕ ಮತ್ತು ಕಲರ್ ಪುಲ್ ಆಗಿ ಮೂಡಿಬರಲಿದೆ. ಪೋನಿನ ತುಂಬ ಪರದೆಯೇ ಆಕ್ರಮಿಸಿರುವುದು ಇದಕ್ಕೆ ಕಾರಣವಾಗಿದೆ.

ಅತ್ಯಂತ ವೇಗದ ಪ್ರೋಸೆಸರ್:
2.35GHz ವೇಗದ ಕ್ವಾಡ್‌ಕೋರ್ ಸ್ನಾಪ್‌ಡ್ರಾಗನ್ 821 ಪ್ರೋಸೆಸರ್ ಈ ಪೋನಿನಲ್ಲಿದ್ದು, ಯಾವುದೇ ತಡೆ ಇಲ್ಲದೇ ವೇಗವಾಗಿ ಕಾರ್ಯನಿರ್ವಹಿಸಲಿದೆ. ಈ ಪೋನು ಎರಡು ಮಾದರಿಯಲ್ಲಿ ಲಭ್ಯವಿದ್ದು, 4GB RAM ಮತ್ತು 128GB ಇಂಟರ್‌ನಲ್ ಮೆಮೊರಿ ಒಂದು ಮಾದರಿಯದ್ದು, ಹಾಗೂ 6GB RAM ಮತ್ತು 256GB ಇಂಟರ್ನಲ್ ಮೆಮೊರಿಯ ಇನ್ನೊಂದು ಮಾದರಿ ಸಹ ಲಭ್ಯವಿರಲಿದೆ.

ಉತ್ತಮ ಕ್ಯಾಮೆರಾ:
Mi MIX ಪೋನಿನ ಹಿಂಭಾಗದಲ್ಲಿ 16MP ಕ್ಯಾಮೆರಾ ಇದೆ, ಇದರಲ್ಲಿ f/2.0 ಅಪರ್ಚರ್ ಸಹ ಇದೆ. ಅಲ್ಲದೇ ಡುಯಲ್ ಟೋನ್ LED ಫ್ಲಾಷ್ ಹೊಂದಿದೆ. ಮುಂಭಾಗದಲ್ಲಿ 5MP ಕ್ಯಾಮೆರಾ ಇದ್ದು, ಸೆಲ್ಫಿ ತೆಗೆಯಲು ಹಲವರು ಆಯ್ಕೆಗಳನ್ನು ನೀಡಿದೆ.

4400mAh ಬ್ಯಾಟರಿ;
ಇಷ್ಟೆಲ್ಲ ಆಯ್ಕೆಗಳನ್ನು ಹೊಂದಿರುವ Mi MIX ಸ್ಮಾರ್ಟ್‌ಪೊನಿನಲ್ಲಿ ದೀರ್ಘಕಾಲದ ಬ್ಯಾಟರಿ ಬಾಳಿಕೆಗಾಗಿ 4400mAh ಬ್ಯಾಟರಿ ಅಳವಡಿಸಲಾಗಿದ್ದು, ಜೊತೆಗೆ ವೇಗವಾಗಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡುವ ಸಲುವಾಗಿ Quick Charge 3.0 ಸಹ ಈ ಪೋನಿನಲ್ಲಿದೆ.

"ಮೈ ಮಿಕ್ಸ್ 2ಎಸ್'' ಸ್ಮಾರ್ಟ್‌ಪೋನಿನಲ್ಲಿ ಇರಲಿದೆ ಫೇಸ್ ಅನ್‌ಲಾಕ್ ಫೀಚರ್!!
ಬಾರ್ಸಿಲೋನಾದಲ್ಲಿ ನಡೆಯುತ್ತಿರುವ 2018ನೇ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದ ಸಂದರ್ಭದಲ್ಲಿಯೇ ಶೀಯೋಮಿ "ಮೈ ಮಿಕ್ಸ್ 2ಎಸ್'' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಬಗ್ಗೆ ಟ್ವಿಟ್ ಮಾಡಿ ತಿಳಿಸಿದ್ದ ಶಿಯೋಮಿ ಇದೀಗ ಮತ್ತೊಂದು ವಿಡಿಯೋ ಮೂಲಕ ವಿಶ್ವದ ದಿಗ್ಗಜ ಸ್ಮಾರ್ಟ್‌ಫೋನ್ ಕಂಪೆನಿಗಳಿಗೆ ಬೆಚ್ಚಿಬೀಳಿಸಿದೆ.!
ಆಪಲ್ ಎಕ್ಸ್ ಸ್ಮಾರ್ಟ್‌ಫೋನಿಗೆ ಟಾಂಗ್ ನೀಡಲು ಶಿಯೋಮಿ ಇದೇ ತಿಂಗಳು ಮಾರ್ಚ್ 27 ನೇ ತಾರೀಖು 'ಶಿಯೋಮಿ ಮೈ ಮಿಕ್ಸ್ 2ಎಸ್' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಆ ಸಲುವಾಗಿಯೇ ಶಿಯೋಮಿ ಬಿಡುಗಡೆ ಮಾಡಿರುವ ನೂತನ ವಿಡಿಯೋದಲ್ಲಿ ಮೈ ಮಿಕ್ಸ್ 2ಎಸ್ ಸ್ಮಾರ್ಟ್‌ಫೋನ್ ಫೇಸ್ ಅನ್‌ಲಾಕ್ ಹೊಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.!!
ಈಗಾಗಲೇ ಭಾರೀ ಕುತೋಹಲ ಹುಟ್ಟಿಸಿರುವ 'ಶಿಯೋಮಿ ಮೈ ಮಿಕ್ಸ್ 2ಎಸ್' ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ದಿನಾಂಕ ಪ್ರಕಟವಾದ ನಂತರ ಇತರೆ ಕಂಪೆನಿಗಳಿಗೆ ಭಯ ಶುರುವಾಗಿದ್ದು, ಹಾಗಾದರೆ, ಆಪಲ್ ಎಕ್ಸ್ ವಿನ್ಯಾಸ, ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 845 SOC ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಫೀಚರ್ಸ್‌ಗಳಯ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!!

403PPi ಡೆನ್‌ಸಿಟಿ ಡಿಸ್‌ಪ್ಲೇ !!
5.99-ಇಂಚಿನ ಬೆಜೆಲ್ ಡಿಸ್‌ಪ್ಲೇ 1080x2160 ಪಿಕ್ಸೆಲ್ ಮೂಲಕ ಶಿಯೋಮಿ ಮೈ ಮಿಕ್ಸ್ 2 ಹೊರಬಂದಿದ್ದು, 403PPi ಡೆನ್‌ಸಿಟಿ ವೈಶಿಷ್ಟ್ಯ ಹೊಂದಿದೆ.!! 151.8x75.5x7.7 ಮಿಮೀ ಅಳತೆ, ಮತ್ತು 185 ಗ್ರಾಂ ತೂಕವಿರುವ ಮೈ ಮಿಕ್ಸ್ 2 ಆಪಲ್ ಮತ್ತು ಸ್ಯಾಮ್‌ಸಂಗ್‌ಗೆ ನೇರ ಸೆಡ್ಡು ಹೊಡೆದಿದೆ.!!

ಕ್ಯಾಮೆರಾ ಹೇಗಿದೆ?
ಸೋನಿ IMX386 ಸೆನ್ಸಾರ್, 1.25-ಮೈಕ್ರಾನ್ ಪಿಕ್ಸೆಲ್ ಹಾಗೂ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್, 5-ಪೀಸ್ ಲೆನ್ಸ್ ಮತ್ತು ಎಫ್ / 2.0 ಅಪರ್ಚರ್‌ನೊಂದಿದಗೆ 18k ಚಿನ್ನ ಲೇಪಿತ ಕ್ಯಾಮೆರಾ ರಿಂಗ್ ಮೂಲಕ ಶಿಯೋಮಿ ಮೈ ಮಿಕ್ಸ್ 2 ರಿಯರ್ ಕ್ಯಾಮೆರಾ ಹೊರಬಂದಿದೆ.! ರಿಯರ್ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿದ್ದರೆ, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಫೋನ್‌ನಲ್ಲಿದೆ.!!

ಪ್ರೊಸೆಸರ್ ಮತ್ತು ಕನೆಕ್ಟಿವಿಟಿ!!
ಶಿಯೋಮಿ ಮೈ ಮಿಕ್ಸ್ 2 ಸ್ಮಾರ್ಟ್‌ಫೋನ್ ಕ್ವಾಲ್ಕಮ್‌ನ ಸ್ನ್ಯಾಪ್‌ಡ್ರಾಗನ್ 835 SoC ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸಲಿದೆ. ಜೊತೆಗೆ 4ಜಿ ಎಲ್‌ಟಿಇ, ಡ್ಯೂಯಲ್-ಬ್ಯಾಂಡ್ (2.4GHz ಮತ್ತು 5GHz), Wi-Fi, ಜಿಪಿಎಸ್ / ಎ-ಜಿಪಿಎಸ್, ಬ್ಲೂಟೂತ್ ವಿ 5.0, ಮತ್ತು ಟೈಪ್ ಸಿ ಯುಎಸ್‌ಬಿ ಕನೆಕ್ಟಿವಿಟಿ ಹೊಂದಿದೆ.!!

ಇತರೆ ಏನೆಲ್ಲಾ ಫೀಚರ್ಸ್?
ವಿಶ್ವದ ಟಾಪ್ ಕಂಪೆನಿಗಳಿಗೂ ಸೆಡ್ಡು ಹೊಡೆಯುವಂತಹ ಸಂವೇದಕಗಳಿಂದ ಮೈ ಮಿಕ್ಸ್ 2 ಹೊರಬಂದಿದೆ.! ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬಾರೋಮೀಟರ್, ಡಿಜಿಟಲ್ ದಿಕ್ಸೂಚಿ, ಜ್ಯೋರೋಸ್ಕೋಪ್ ಮತ್ತು ಅಲ್ಟ್ರಾಸಾನಿಕ್ ಪೀಚರ್ಸ್‌ಗಳ ಜೊತೆಗೆ ಫೇಸ್ ಅನ್‌ಲಾಕ್ ಫೀಚರ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ತರಲಾಗಿದೆ.!!


Click it and Unblock the Notifications








