Subscribe to Gizbot

ಫುಲ್ ಡಿಸ್‌ಪ್ಲೇ ಹೊಂದಿರಲಿದೆ "ಶಿಯೋಮಿ ಮೈ ಮಿಕ್ಸ್ 2"!!?

Written By:

ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ "ಶಿಯೋಮಿ ಮೈ ಮಿಕ್ಸ್ 2" ಸ್ಮಾರ್ಟ್‌ಫೋನ್ ಬಗ್ಗೆ ಹಲವು ಮಾಹಿತಿಗಳು ಲೀಕ್ ಆಗಿವೆ.! ಮಲ್ಟಿಮೀಡಿಯಾಗೆಂದೆ ವಿಶೇಷವಾಗಿ ರೂಪಿತವಾಗಿ ಬರುವ ಮೈ ಮಿಕ್ಸ್ ಸೀರಿಸ್‌ನ ಹೊಸ ಅವತರಣಿಕೆಯಾಗಿದ್ದು, ಸ್ಮಾರ್ಟ್‌ಫೋನ್ ಅದ್ಬುತ ಫೀಚರ್‌ ಅನ್ನು ಹೊಂದಿದೆ ಎನ್ನಲಾಗಿದೆ.!!

ಬಾಕ್ಸಟೆಕ್ ಎಂಬ ವೆಬ್‌ಸೈಟ್ ಮೈ ಮಿಕ್ಸ್ 2 ಫೋಟೊ ಪ್ರಕಟಿಸಿದ್ದು, ಲೀಕ್ ಆಗಿರುವ ಚಿತ್ರಗಳ ಪ್ರಕಾರ "ಶಿಯೋಮಿ ಮೈ ಮಿಕ್ಸ್ 2" ಸ್ಮಾರ್ಟ್‌ಫೋನ್ ಪೂರ್ಣ ಡಿಸ್‌ಪ್ಲೇ ಹೊಂದಿದೆ.! ಇದೇ ಮೊದಲ ಬಾರಿಗೆ ಪೂರ್ಣ ಡಿಸ್‌ಪ್ಲೇ ಹೊಂದಿರುವ ಶಿಯೋಮಿ ಫೋನ್ ಬಿಡುಗಡೆಯಾಗುತ್ತಿದೆ ಎನ್ನಬಹುದು.!!

"ಶಿಯೋಮಿ ಮೈ ಮಿಕ್ಸ್ 2" ಫೋನ್ 18:9ರ ಅನುಪಾತವನ್ನು ಡಿಸ್‌ಪ್ಲೇ ಹೊಂದಿದ್ದು, 95% ನಷ್ಟು ಸ್ಕ್ರೀನ್ ಮೊಬೈಲ್‌ನಲ್ಲಿ ಲಭ್ಯವಿದೆ.!! ಹಾಗಾದರೆ, ಮೈ ಮಿಕ್ಸ್ 2 ಫೋನ್ ಬೇರೆ ಏನೆಲ್ಲಾ ವಿಶೇಷತೆಗಳನ್ನು ಹೊಂದಿರಬಹುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ಪ್ರೊಸೆಸರ್!

ಡಿಸ್‌ಪ್ಲೇ ಮತ್ತು ಪ್ರೊಸೆಸರ್!

"ಶಿಯೋಮಿ ಮೈ ಮಿಕ್ಸ್ 2" 6.4 ಇಂಚ್ ಗಾತ್ರದ ಅತ್ಯದ್ಬುತ AMOLED 2K ಪೂರ್ಣ ಸ್ಕ್ರೀನ್ ಡಿಸ್‌ಪ್ಲೇ ಹೊಂದಿದ್ದು, ಮಲ್ಟಿಮೀಡಿಯಾಗೆ ಹೆಚ್ಚು ಸಪೋರ್ಟ್ ಆಗುವಹಾಗೆ ರೂಪಿಸಲಾಗಿದೆ.! ಇನ್ನು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 835 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 7.1.1 ನ್ಯೂಗಾದಲ್ಲಿ ಸ್ಮಾರ್ಟ್‌ಫೋನ್ ರನ್ ಆಗಲಿದೆ.!!

RAM ಮತ್ತು ROM ಎಷ್ಟು?

RAM ಮತ್ತು ROM ಎಷ್ಟು?

6GB RAM ಮತ್ತು 128GB ಮೆಮೊರಿ ಮತ್ತು 8GB RAM ಮತ್ತು 256GB ಮೆಮೊರಿ ಎರಡು ವೆರಿಯಂಟ್‌ಗಳಲ್ಲಿ "ಶಿಯೋಮಿ ಮೈ ಮಿಕ್ಸ್ 2" ಫೋನ್ ಬಿಡುಗಡೆಯಾಗಲಿದೆ ಎನ್ನಲಾಗಿದೆ.!! ಆಂತರಿಕ ಮೆಮೊರಿಯನ್ನು ಮೈಕ್ರೊ SD ಕಾರ್ಡ್ಮೂಲಕ ವಿಸ್ತರಿಸಬಹುದು ಆಯ್ಕೆಯೂ ಇರಲಿದೆ ಎಂದು ವೆಬ್‌ಸೈಟ್ ವರದಿ ಮಾಡಿದೆ.!!

 ಡ್ಯುಯಲ್ ಕ್ಯಾಮೆರಾ!?

ಡ್ಯುಯಲ್ ಕ್ಯಾಮೆರಾ!?

"ಶಿಯೋಮಿ ಮೈ ಮಿಕ್ಸ್ 2" ಡ್ಯುಯಲ್ ಕ್ಯಾಮೆರಾವನ್ನು ಹೊಂದಬಹುದು ಎಂಬ ರೂಮರ್ಸ್ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ಸಂಪೂರ್ಣವಾಗಿ ಹೊರಬಿದ್ದಿಲ್ಲ.!! 13-ಮೆಗಾಪಿಕ್ಸೆಲ್‌ನ ಎರಡು ರಿಯರ್ ಹಾಗೂ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ನಲ್ಲಿರಲಿದೆ

ಬ್ಯಾಟರಿ ಮತ್ತು ಇತರ ಫೀಚರ್ಸ್.!

ಬ್ಯಾಟರಿ ಮತ್ತು ಇತರ ಫೀಚರ್ಸ್.!

ಮಲ್ಟಿಮೀಡಿಯಾಗೆ ರೂಪಿತವಾಗಿರುವ ಮೈ ಮಿಕ್ಸ್ 2 ಸ್ಮಾರ್ಟ್‌ಫೊನ್ 3,400mAh ಬ್ಯಾಟರಿ ಹೊಂದಿದಲಿದೆ ಎನ್ನಲಾಗಿದೆ.! ಆದರೆ, ಈಗಾಗಲೇ 5000mAh ಬ್ಯಾಟರಿ ಶಕ್ತಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಶಿಯೋಮಿ ಈ ಫೋನಿನಲ್ಲಿ ಕಡಿಮೆ ಬ್ಯಾಟರಿ ಶಕ್ತಿ ನೀಡುವ ವಿಷಯದಲ್ಲಿ ಸ್ವಲ್ಪ ಗೊಂದಲವಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Xiaomi devices are always highly anticipated and the upcoming Mi Mix 2 is no exception. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot