Subscribe to Gizbot

ಇಂದು 12.30ಕ್ಕೆ ಶಿಯೋಮಿಯ ಮೊದಲ ಪೂರ್ಣ ಡಿಸ್‌ಪ್ಲೇ ಫೋನ್ ಲಾಂಚ್!!

Written By:

ಪೂರ್ಣ ಡಿಸ್‌ಪ್ಲೇ ಹೊಂದಿದೆ ಎನ್ನಲಾಗಿರುವ "ಶಿಯೋಮಿ ಮೈ ಮಿಕ್ಸ್ 2" ಸ್ಮಾರ್ಟ್‌ಫೋನ್ ಇಂದು ಬಿಡುಗಡೆಯಾಗುತ್ತಿದೆ.!! ಹೌದು, ಚೀನಾದಲ್ಲಿ ಇಂದು 12.30 ಕ್ಕೆ ಶಿಯೋಮಿಯ ಮೊದಲ ಪೂರ್ಣ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಮೈ ಮಿಕ್ಸ್ 2 ಮತ್ತು ಮೈ ನೋಟ್ 3 ಎರಡು ಸ್ಮಾರ್ಟ್‌ಪೋನ್‌ಗಳು ಲಾಂಚ್ ಆಗಲಿದ್ದು, ಎಲ್ಲರ ಕುತೋಹಲಕ್ಕೆ ಇಂದು ತೆರೆಬೀಳಲಿದೆ.!!

ಶಿಯೋಮಿ ಮೈ ಮಿಕ್ಸ್ 2 ಫೋನ್ 18:9ರ ಅನುಪಾತವನ್ನು ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದ್ದು, ಶಿಯೋಮಿ ಮೈ ಮಿಕ್ಸ್ 2 95% ನಷ್ಟು ಸ್ಕ್ರೀನ್ ಹೊಂದಿರಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.!! ಹಾಗಾದರೆ, ಶಿಯೋಮಿ ಮೈ ಮಿಕ್ಸ್ 2 ಫೋನ್ ಬೇರೆ ಏನೆಲ್ಲಾ ವಿಶೇಷತೆಗಳನ್ನು ಹೊಂದಿರಬಹುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ಪ್ರೊಸೆಸರ್!

ಡಿಸ್‌ಪ್ಲೇ ಮತ್ತು ಪ್ರೊಸೆಸರ್!

"ಶಿಯೋಮಿ ಮೈ ಮಿಕ್ಸ್ 2" 6.4 ಇಂಚ್ ಗಾತ್ರದ ಅತ್ಯದ್ಬುತ AMOLED 2K ಪೂರ್ಣ ಸ್ಕ್ರೀನ್ (ಬೆಜಲ್ ಲೆಸ್)ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದ್ದು, ಇಮದು 12 ಗಂಟೆಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದೆ.!! ಇನ್ನು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 835 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 7.1.1 ನ್ಯೂಗಾದಲ್ಲಿ ಸ್ಮಾರ್ಟ್‌ಫೋನ್ ರನ್ ಆಗಲಿದೆ.!!

RAM ಮತ್ತು ROM ಎಷ್ಟು?

RAM ಮತ್ತು ROM ಎಷ್ಟು?

6GB RAM ಮತ್ತು 128GB ಮೆಮೊರಿ ಮತ್ತು 8GB RAM ಮತ್ತು 256GB ಮೆಮೊರಿ ಎರಡು ವೆರಿಯಂಟ್‌ಗಳಲ್ಲಿ "ಶಿಯೋಮಿ ಮೈ ಮಿಕ್ಸ್ 2" ಫೋನ್ ಬಿಡುಗಡೆಯಾಗಲಿದೆ ಎನ್ನಲಾಗಿದೆ.!! ಆಂತರಿಕ ಮೆಮೊರಿಯನ್ನು ಮೈಕ್ರೊ SD ಕಾರ್ಡ್ಮೂಲಕ ವಿಸ್ತರಿಸಬಹುದು ಆಯ್ಕೆಯೂ ಇರಲಿದೆ ಎಂದು ವೆಬ್‌ಸೈಟ್ ವರದಿ ಮಾಡಿದೆ.!!

ಡ್ಯುಯಲ್ ಕ್ಯಾಮೆರಾ!?

ಡ್ಯುಯಲ್ ಕ್ಯಾಮೆರಾ!?

"ಶಿಯೋಮಿ ಮೈ ಮಿಕ್ಸ್ 2" ಡ್ಯುಯಲ್ ಕ್ಯಾಮೆರಾವನ್ನು ಹೊಂದಬಹುದು ಎಂಬ ರೂಮರ್ಸ್ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ಸಂಪೂರ್ಣವಾಗಿ ಹೊರಬಿದ್ದಿಲ್ಲ.!! 13-ಮೆಗಾಪಿಕ್ಸೆಲ್‌ನ ಎರಡು ರಿಯರ್ ಹಾಗೂ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ನಲ್ಲಿರಲಿದೆ.

ಬ್ಯಾಟರಿ ಹೇಗಿದೆ?

ಬ್ಯಾಟರಿ ಹೇಗಿದೆ?

ಮಲ್ಟಿಮೀಡಿಯಾಗೆ ರೂಪಿತವಾಗಿರುವ ಮೈ ಮಿಕ್ಸ್ 2 ಸ್ಮಾರ್ಟ್‌ಫೊನ್ 3,400mAh ಬ್ಯಾಟರಿ ಹೊಂದಿದಲಿದೆ ಎನ್ನಲಾಗಿದೆ.! ಆದರೆ, ಈಗಾಗಲೇ 5000mAh ಬ್ಯಾಟರಿ ಶಕ್ತಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಶಿಯೋಮಿ ಈ ಫೋನಿನಲ್ಲಿ ಕಡಿಮೆ ಬ್ಯಾಟರಿ ಶಕ್ತಿ ನೀಡುವ ವಿಷಯದಲ್ಲಿ ಸ್ವಲ್ಪ ಗೊಂದಲವಿದೆ.!!

ಇತರ ಫೀಚರ್ಸ್.!

ಇತರ ಫೀಚರ್ಸ್.!

ಶಿಯೋಮಿ ಮೈ ಮಿಕ್ಸ್ ಸ್ಮಾರ್ಟ್‌ಫೋನ್‌ನಂತೆಯೇ ಶಿಯೋಮಿ ಮೈ ಮಿಕ್ಸ್ 2 ಸಹ ಒಂದೇ ರೀತಿಯ ಡಿಸೈನ್ ಹೊಂದಿರಲಿದೆ ಎನ್ನಲಾಗಿದೆ.!! ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ರೀನ್, MIUI 9 ಸಾಫ್ಟ್‌ವೇರ್, ಹಾಗೂ ಮೂರ ವಿವಿಧ ಬಣ್ಣಗಳಲ್ಲಿ ಶಿಯೋಮಿ ಮೈ ಮಿಕ್ಸ್ 2 ಬಿಡುಗಡೆಯಾಗುತ್ತಿದೆ.!!

ಓದಿರಿ:ಮತ್ತೆ 'ಬಿಗ್ ಬಿಲಿಯನ್ ಡೇಸ್' ಘೋಷಿಸಿದ ಫ್ಲಿಪ್‌ಕಾರ್ಟ್!..ಡೆಬಿಟ್ ಕಾರ್ಡ್‌ಗೂ EMI ಆಫರ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The launch event is set to take place in China.to know mre visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot